
ಮಂಡ್ಯ: 2008-09 ಮತ್ತು 2011-12ರ ಅವಧಿಯಲ್ಲಿ ಮೈಷುಗರ್ ಅಧ್ಯಕ್ಷರಾಗಿದ್ದ ಮಂಡ್ಯದ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ ಅವರ ಅತ್ಯಾಪ್ತನಾಗಿರುವ ನಾಗರಾಜಪ್ಪನ ವಿರುದ್ಧ ಕೇಳಿ ಬಂದಿದ್ದ ನೂರಾರು ಕೋಟಿ ಅಕ್ರಮ ಮತ್ತು ಭ್ರಷ್ಟಾಚಾರ ಆರೋಪತನಿಖೆಯಿಂದ ಸಾಬೀತಾಗಿದೆ. ತನ್ನ ಅಧ್ಯಕ್ಷತೆಯ ಅಧಿಕಾರವಧಿಯಲ್ಲಿ ಮೈಷುಗರ್ ಕಾರ್ಖಾನೆ ಬರೋಬ್ಬರಿ ₹121 ಕೋಟಿಗಳಷ್ಟು ನಷ್ಟವನ್ನು ಉಂಟು ಮಾಡಿರುವುದು ಉಪ ಲೋಕಾಯುಕ್ತರ ತನಿಖೆಯಿಂದ ಸಾಬೀತಾಗಿದ್ದು ಇದೀಗ ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಪಾನೆ ಮೈಶುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪನಿಂದ ನಷ್ಟದ ಹಣ ವಸೂಲಿ […]

ಬೆಂಗಳೂರು: ಬಿಎ ಪದವಿ ಪಡೆದ ಅಂಧ ಪದವಿಧರೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜನಸ್ಪಂದನಾ ಕಾರ್ಯಕ್ರಮದ ಸ್ಥಳದಲ್ಲೇ ನೀಡಿದರರು ಸುಂಕದಕಟ್ಟೆ ಶಾಂತಿಧಾಮ ಸಂಸ್ಥೆಯ ಅಂಧ ವಿದ್ಯಾರ್ಥಿನಿಯಾಗಿರುವ ದಿವ್ಯಾಂಜಲಿ ಎಂಬುವವರಿಗೆ ಸ್ಥಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಕೆಲಸವೊಂದನ್ನು ಕೊಡಿಸುವ ಮೂಲಕ ಅಂಧ ವಿದ್ಯಾರ್ಥಿನಿ ಬಾಳಿಗೆ ಬೆಳಕಾಗಿದ್ದಾರೆ. ಯಲಹಂಕದ ಅಂಬೇಡ್ಕರ್ ಭವನದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ದಿವ್ಯಾಂಜಲಿ ಅವರು,“ನನಗೆ ಕಣ್ಣು ಕಾಣಲ್ಲ ಹಾಗಾಗಿ ಎಲ್ಲೂ ಕೆಲಸ ಸಿಗುತ್ತಿಲ್ಲ ಹೀಗಾಗಿ ಕೆಲಸ ಕೊಡಿಸುವಂತೆ ಡಿಕೆ ಶಿವಕುಮಾರ್ ಅವರಿಗೆ […]

ಕೋಲಾರ,ಜ.05: 3 ನೇ ಅಂತರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ 9 ಚಾಂಪಿಯನ್ ಶಿಫ್ ಹೈದರಾಬಾದ್ ತೆಲಂಗಾಣ ರಾಜ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆಗಳ ಪ್ರಶಸ್ತಿ 2024ನ್ನು ಹಾಗೂ ಮೆರಿಟ್ ಸರ್ಟಿಫಿಕೇಟನ್ನು ಅಂತರಾಷ್ಟ್ರೀಯ ಕರಾಟೆಪಟು ನಗರದ ಮಹಾಲಕ್ಷ್ಮೀ ಲೇಔಟ್ನ ನಿವಾಸಿ ರುಮಾನಾ ಕೌಸರ್ ಬೇಗ್ ಪಡೆದುಕೊಂಡಿದ್ದಾರೆ.ಕರಾಟೆ ಕ್ರೀಡೆಯಲ್ಲಿ ವಸತಿ ಶಾಲೆಗಳಲ್ಲಿ 3000 ಬಾಲಕಿಯರಿಗೆ ಆತ್ಮ ರಕ್ಷಣೆ ಕಲೆಯನ್ನು ಕರಾಟೆ ತರಬೇತಿ ನೀಡುತ್ತಿರುವ ಕೋಲಾರ ಜಿಲ್ಲೆಯ ಕರ್ನಾಟಕ ರಾಜ್ಯದ ರುಮಾನಾ ಕೌಸರ್ ಬೇಗ್ ರಾಜ್ಯ ಮಟ್ಟದಲ್ಲಿ […]
ಶ್ರೀನಿವಾಸಪುರ ಜ-4, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದು ಎಂ.ಜಿ.ರಸ್ತೆಯಲ್ಲಿ ಅವರೇಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರ ವಿರುದ್ದ ಕ್ರಮಕೈಗೊಂಡು ಅವರೆ ಕಾಯಿ ವಹಿವಾಟನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಇಲ್ಲವೆ ಸೂಕ್ತವಾದ ಜಾಗ ಗುರುತಿಸಿ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಇಂದ್ರಾ ಭವನ ಸರ್ಕಲ್ನಲ್ಲಿ ಅವರೆಕಾಯಿ ಸಮೇತ ಹೋರಾಟ ಮಾಡಿ ತಾಲ್ಲೂಕು ದಂಡಾಧಿಕಾರಿಗಳು ಎ.ಪಿ.ಎಂ.ಸಿ. ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತ ಮೂರು ತಿಂಗಳು ಭೂಮಿ […]

ಶ್ರೀನಿವಾಸಪುರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಲೋಕೋಪಯೋಗಿ ಇಲಾಖೆಯಿಂದ ಎಸ್ಎಫ್ಸಿ ವಿಶೇಷ ಅನುದಾನದಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಹೊಸದಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿರುವ ಎಚ್.ನಲ್ಲಪ್ಪಲ್ಲಿ, ಉನಿಕಿಲಿ, ಕೊಳ್ಳೂರು ಹಾಗೂ ಬೈರಪ್ಪಲ್ಲಿ ಹೊಸ ಬಡಾವಣೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.ಈಗಾಗಲೆ ಪುರಸಭೆ ಹೊಸ ಬಡಾವಣೆಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಸರ್ಕಾರದಿಂದ ರೂ.15 ಕೋಟಿ ಬಿಡುಗಡೆಯಾಗಿದೆ. ಒಟ್ಟು ರೂ.25 ಕೋಟಿ […]

ಕುಂದಾಪುರ, ಜ.2: ಸ್ಥಳೀಯ ಸಂತ ಜೋಸೆಫ್ ವಸತಿ ಶಾಲಾ ಮಕ್ಕಳೊಂದಿಗೆ ಹೊಸವರ್ಷಾಚರಣೆಯನ್ನು ಕುಂದಾಪುರದ ಐವನ್ ಆಲ್ಮೇಡ ಕುಟುಂಬದ ವತಿಯಿಂದ 2024, ಜನವರಿ 1 ರಂದು ಸಂಜೆ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿದ್ದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನಮಗೆ ನಿಮ್ಮ ಜೊತೆ ಹೊಸವರ್ಷಾಚರಣೆಯನ್ನು ಆಚರಿಸಲು ತುಂಬಾ ಸಂತೋಷವಾಗುತ್ತದೆ. ನೀವು ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ಇಲ್ಲಿ ನೆಲಸಿ ಎಲ್ಲರೂ ಒಟ್ಟಾಗಿ ಪ್ರೀತಿ ಪ್ರೇಮದಿಂದ ಬಾಳುತಿದ್ದಿರಿ. ಇಲ್ಲಿ ನಿಮಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಈ ವಸತಿಶಾಲೆಯಲ್ಲಿ ಎಲ್ಲಾ […]

ಕುಂದಾಪುರ,ಜ.24: ಚಾರಿತ್ರಿಕ ಹಿನ್ನೆಲೆಯುಳ್ಳ ಉಡುಪಿ ಜಿಲ್ಲೆಯ ಅತೀ ಹಿರಿಯ ಚರ್ಚ್ ರೋಜರಿ ಮಾತಾ ಚರ್ಚಿಗೆ ಹೊಸ ವರ್ಷದ ಪ್ರಯುಕ್ತ 2023 ರ ಡಿಸೆಂಬರ್ 31 ರ ಸಂಜೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮಿ ಆಗಮಿಸಿ ಚರ್ಚ್ ಜನತೆಗೆ ಶುಭ ಕೋರಿದರು.“ದೇವರು ಮನುಷ್ಯರ ಮೆಲೆ ಓದಾರ್ಯೆತೆಯುಳ್ಳವನಾಗಿದ್ದಾರೆ. ಆತ ನಮಗೆ ಈ ಲೋಕದಲ್ಲಿ ಜೀವಿಸಲಿಕ್ಕಾಗಿ ನಮಗೆ ಎಲ್ಲವನ್ನು ಒದಗಿಸಿದ್ದಾನೆ. ದೇವರು ಈ ಭೂಮಿ ಮೇಲೆ ಬೇಕಾದಷ್ಟು ವಿಸ್ಮಯಗಳನ್ನು ನಿರ್ಮಿಸಿದ್ದಾನೆ, ಎಂದು ತಿಳಿಸುತ್ತಾ, ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಅವರು ಹಾಸನದ […]

ಶ್ರೀನಿವಾಸಪುರ 1 : ಇತ್ತೀಚೆಗೆ ನನ್ನನ್ನು ಎರಡನೇ ಮದುವೆ ಆಗಿ ನಂಬಿಸಿ ಮದುವೆ ಸಮಯದಲ್ಲಿ ವರೋಪಚಾರವನ್ನು ಪಡೆದುಕೊಂಡು, ನನ್ನ ಪತಿಯಲ್ಲೇ ಲೋಪವಿದ್ದರೂ ಇದನ್ನು ಬಚ್ಚಿಟ್ಟು, ಮೂರನೆ ಮದುವೆಗೆ ಪ್ರಯತ್ನ ಮಾಡುತ್ತಿರುವುದು ನನಗೆ ಮಾಹಿತಿ ಬಂದಿದ್ದು ನನಗಾಗಿರುವ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದೆಂದು ನನ್ನ ಆಶಯ ಎಂದು ತನಗಾಗಿರುವ ನೋವನ್ನು ಬೆಂಗಳೂರಿನ ವಿಜಯನಗರದ ವಾಸಿಯಾದ ಕೆ.ಎಲ್. ಭಾವನ ವ್ಯಕ್ತಪಡಿಸಿದ್ದಾರೆ.ಕೆ.ಎಲ್. ಭಾವನತನಗಾಗಿರುವ ನೋವನ್ನು ಶುಕ್ರವಾರ ಮಾಧ್ಯಗಳ ಮುಖೇನ ವ್ಯಕ್ತಪಡಿಸಿ ಕಳೆದ 40 ದಿನಗಳ ಹಿಂದೆ ಪಟ್ಟಣದಎಂ.ಜಿ.ರಸ್ತೆಯಲ್ಲಿರುವ ನಿವೃತ್ತಇಂಜಿನಿಯರ್ಎಂ.ಆರ್. ರಮೇಶ್ಅವರ ಮಗನಾದ […]

ಶ್ರೀನಿವಾಸಪುರ: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಜಾಗ್ರಾತ ಕ್ರಮಗಳ ಬಗ್ಗೆ ಡಿಎಚ್ಒ, ಟಿಎಚ್ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳೊಂದಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ಪಡೆದು ಮಾತನಾಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಬೇಟಿ ನೀಡಿ ಕುಂದುಕೊರತೆ ಹಾಗು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.ಆಸ್ಪತ್ರೆಗೆ ಸಮರ್ಪಕವಿದ್ಯುತ್ ಒದಗಿಸಲು 250 ಕೆವಿ ವಿದ್ಯುತ್ ಟ್ರಾನ್ಸ್ಫಾರಂ ಅಳವಡಿಕೆ ಮಾಡಲು ಹಾಗು ಆಸ್ಪತ್ರೆಗೆ 24 ಗಂಟೆ ವಿದ್ಯುತ್ ಸೌಲಭ್ಯ ಒದಗಿಸಲು ಪ್ರತ್ಯೇಕ ಎಕ್ಸ್ ಪ್ರೆಸ್ಸ ಲೈನ್ ಆಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ಮಾಡಿದರು.ಆಸ್ಪತ್ರೆಗೆ ಲಾಂಡ್ರಿ […]