
JANANUDI.COM NETWORK ಇಂಟಕ್ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ರೋಶನ್ ಶೆಟ್ಟಿ ನೇಮಕ ಬಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ಇಂಟಕ್ ಇದರ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕುಂದಾಪುರ ತಾಲೂಕು ಆರ್ಡಿ ಗ್ರಾಮದ ರೋಶನ್ ಶೆಟ್ಟಿ ಇವರನ್ನು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

JANANUDI.COM NETWORK ಕುಂದಾಪುರದಲ್ಲಿ ಸೆಪ್ಟೆಂಬರ್ 5 ರಂದು ಗೌರಿ ಬಳಗ ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಗೌರಿ ನೆನಪು ಕುಂದಾಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವರ್ಷ ತುಂಬುವ ಹಿನ್ನೆಲೆಯಲ್ಲಿ ನಾಳೆ ಸೆಪ್ಟೆಂಬರ್ 5 ಗುರುವಾರ ಸಂಜೆ ಕುಂದಾಪುರದ ಗೌರಿ ಬಳಗ ಮತ್ತು ಇತರ ಸಮಾನ ಮಮಸ್ಕ ಸಂಘಟನೆಗಳು ‘ಗೌರಿ ನೆನಪು’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಮೊಂಬತ್ತಿಗಳ ಬೆಳಕಿನಲ್ಲಿ ಗುರುವಾರ ಸಂಜೆ 6.30ಕ್ಕೆ ಶಾಸ್ತ್ರಿ ಸರ್ಕಲ್ನಲ್ಲಿ ನಡೆಯಲಿದೆ. ಖ್ಯಾತ ಚಿಂತಕ ಮತ್ತು ಲೇಖಕ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ – ಬ್ಯಾಂಕ್ನ ಹಿಂದಿನ ದುಸ್ಥಿತಿ ನೆನಪಿಸಿಕೊಳ್ಳಿ, ಅದೇ ಸ್ಥಿತಿಗೆ ಮತ್ತೆ ಹೋದರೆ ಅದಕ್ಕೆ ಅಧಿಕಾರಿ,ಸಿಬ್ಬಂದಿಯೇ ಜವಾಬ್ದಾರರಾಗುತ್ತೀರಿ, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧಿಕಾರಿ,ಸಿಬ್ಬಂದಿಗೆ ತಾಕೀತು ಮಾಡಿದರು. ಭಾನುವಾರ ನಗರದ ಡಿಸಿಸಿ ಸಭಾಗಂಣದಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎರಡೂ ಜಿಲ್ಲೆಯ ಬ್ಯಾಂಕ್ನ ಶಾಖೆಗಳ ವ್ಯವಸ್ಥಾಪಕರು, ಸಾಲವಸೂಲಾತಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಹಿಂದೆ ಬ್ಯಾಂಕ್ ಯಾವ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಮಿನಿ ಉದ್ಯೋಗಮೇಳ 127 ಮಂದಿಗೆ ಉದ್ಯೋಗ – 139 ಮಂದಿ ತರಬೇತಿಗೆ ಆಯ್ಕೆ-ಮುನಿಕೃಷ್ಣ ಕೋಲಾರ:- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶನಿವಾರ ನಡೆದ ಮಿನಿ ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಪಾಲ್ಗೊಂಡಿದ್ದು, 137 ಮಂದಿಗೆ ಉದ್ಯೋಗ ಲಭಿಸಿದ್ದು, 139 ಮಂದಿ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದು ಇಲಾಖೆಯ ಪ್ರಭಾರ ಅಧಿಕಾರಿ ಮುನಿಕೃಷ್ಣ ತಿಳಿಸಿದ್ದಾರೆ. ಉದ್ಯೋಗ ಅಭಿವೃದ್ದ ಕಾರ್ಯನಿರ್ವಾಹಕಿ ಸುನಿತಾ, ಈ ಸಂಬಂಧ ಮಾಹಿತಿ ನೀಡಿದ್ದು, ಬೆಂಗಳೂರಿನ ಚೋಳ ಜನರಲ್ ವಿಮಾ ಕಂಪನಿ, 10 ಅಭ್ಯರ್ಥಿಗಳನ್ನು […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಸೂಪರ್ಸ್ಟಾರ್ ರಜಿನಿಕಾಂತ್ ಸಹೋದರನಿಗೆ ಬೆಂಗಳೂರಿನ ಅಪೊಲೊ ಹಾಸ್ಪಿಟಲ್ನಲ್ಲಿ ಯಶಸ್ವಿ ಜೋಡಿ ಕೀಲು ಜೋಡಣೆ ಕಸಿ ಶಸ್ತ್ರಚಿಕಿತ್ಸೆ – ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ ಕೋಲಾರ:- ಬೆಂಗಳೂರಿನ ಶೇಷಾದ್ರಿಪುರಂನ ಅಪೊಲೊ ಹಾಸ್ಪಿಟಲ್ನಲ್ಲಿ ಬೈಲೇಟರಲ್ ನೀ ರೀಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಮ್ಮ ಸಹೋದರ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರನ್ನು ಸೂಪರ್ಸ್ಟಾರ್ ರಜಿನಿಕಾಂತ್ ಬುಧವಾರ ಭೇಟಿ ಮಾಡಿದರು. 77 ವರ್ಷದ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರು ತಮ್ಮ ಮಂಡಿಯಲ್ಲಿ ಗಂಭೀರವಾದ ಅಸ್ಥಿ ಸಂಧಿವಾತ (ಓಸ್ಟಿಯೊಆರ್ಥರೈಟೀಸ್-ಓಎಸ್) ಸಮಸ್ಯೆಯಿಂದ ಬಳಲುತ್ತಿದ್ದು, ಬಹಳ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ರಸ್ತೆಯಲ್ಲಿ ಪುರಸಭೆ ವತಿಯಿಂದ ಶನಿವಾರ ಪಾದಚಾರಿ ರಸ್ತೆ ತೆರವುಗೊಳಿಸಲಾಯಿತು ಶ್ರೀನಿವಾಸಪುರ: ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದ ಪಾದಚಾರಿ ರಸ್ತೆ ಹಾಗೂ ಅಂಗಡಿಗಳ ಮುಂದೆ ಚಾಚಿದ್ದ ತಗಡಿನ ಚಪ್ಪರಗಳನ್ನು ಪುರಸಭೆ ವತಿಯಿಂದ ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಪಟ್ಟಣದ ಎಂಜಿ ರಸ್ತೆ ಹಾಗೂ ಪೋಸ್ಪ್ ಆಫೀಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವಾಗ ಅಂಗಡಿ ಮಾಲೀಕರು ತಾವೇ ತೆರವುಗೊಳಿಸುವುದಾಗಿ ತಿಳಿಸಿದರು. ಸೆ.3 ರೊಳಗೆ ತೆರವುಗೊಳಿಸುವಂತೆ ಅಧಿಕಾರಿಗಳು ತಾಕೀತು ಮಾಡಿದರು. ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಆರೋಗ್ಯ ನಿರೀಕ್ಷಕರಾದ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಭಾರತ ದೇಶವನ್ನು 2025 ರೊಳಗಾಗಿ ಕುಷ್ಠರೋಗ ಮುಕ್ತವಾಗಲು ಪಣ ಜಿಲ್ಲೆಯಲ್ಲಿ ಸೆ.5 ರಿಂದ 23 ರವರೆಗೆ ಕುಷ್ಠರೋಗ ಪತ್ತೆ ಆಂದೋಲನ : ಡಾ.ವಿಜಯ ಕುಮಾರ್ ಕೋಲಾರ: ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 2025 ರೊಳಗಾಗಿ ಭಾರತವನ್ನು ಕುಷ್ಠ ರೋಗ ಮುಕ್ತ ದೇಶವಾಗಿಸಲು ಪಣತೊಟ್ಟಿದ್ದು, ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಅಭಿಯಾನವನ್ನು ಸೆ.5 ರಿಂದ 23 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ವಿಜಯಕುಮಾರ್ ಅವರು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ ಸಭೆಯಲ್ಲಿ ಸಂಪನ್ನೂಲ ವ್ಯಕ್ತಿ ಜಿ.ಕೆ.ನಾರಾಯಣಸ್ವಾಮಿ ಮಾತನಾಡಿದರು. ಶ್ರೀನಿವಾಸಪುರ: ಮತದಾರರ ಪಟ್ಟಿ ಪರಿಷ್ಕರಣೆೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಮತದಾರರ ಪಟ್ಟಿಗೆ ಸೇರಿಸಿಕೊಳ್ಳುವ ಹಾಗೂ ಪಟ್ಟಿಯಿಂದ ತೆಗೆಯಲು ನೀಡಲಾಗಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಜಿ.ಕೆ.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜನವರಿ 1, 2020 ಅರ್ಹತಾ ದಿನಾಂಕಕ್ಕೆ ಒಳಪಟ್ಟಂತೆ ಭಾವ ಚಿತ್ರ ಇರುವ ಮತಾದರರ ಪಟ್ಟಿಯ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರದ ತರಕಾರಿ ಮಾರುಕಟ್ಟೆಗೆ ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಭೇಟಿ ನೀಡಿ ಮಾರುಕಟ್ಟೆ ಸ್ಥಳಾಂತರ ಕುರಿತು ವರ್ತಕರೊಂದಿಗೆ ಚರ್ಚಿಸಿದರು. ಶ್ರೀನಿವಾಸಪುರ: ಪಟ್ಟಣದಲ್ಲಿ ತರಕಾರಿ ಸಗಟು ವಹಿವಾಟನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಹೇಳಿದರು. ಪಟ್ಟಣದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರವಾನಗಿ ಪಡೆದ ವರ್ತಕರೊಂದಿಗೆ ಮಾತನಾಡಿ, ಮಾರುಕಟ್ಟೆ ಪ್ರಾಂಗಣದಲ್ಲಿ ರೂ.97 ಲಕ್ಷ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗಿದೆ. ಹಲವು […]