
ಕುಂದಾಪುರ, ಡಿ.12; ಹಿರಿಯ ಶಿಕ್ಷಕಿ ಮಾಗ್ಗಿ ಟೀಚರ್ ಎಂದೇ ಖ್ಯಾತ ನಾಮರಾದ ಪ್ರಾರ್ಥಮಿಕ ಶಾಲೆಯ ಶಿಕ್ಷಕಿ ಮರಿಯ ಕ್ರಾಸ್ತ ಅಲ್ಪ ಕಾಲದ ಅಸೌಖ್ಯದಿಂದ ಡಿಸೆಂಬರ್ 11 ರಂದು ನಿಧನ ಹೊಂದಿದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಅವರು ಹೇರಿಕುದ್ರುವಿನ ಭಾಗವಾದ ಕಮಾಸ್ತಾನ ಕುದ್ರುವಿನ ದಿವಂಗತ ಎಡ್ವಿನ್ ಡಿಆಲ್ಮೇಡಾ ಅವರ ಪತ್ನಿಯಾಗಿದ್ದರು. ಅವರು ಹೊಸಾಡು, ತಲ್ಲೂರು, ಹೆಮ್ಮಾಡಿ, ಹಟ್ಟಿಯಂಗಡಿ ಮತ್ತು ಉಪ್ಪಿನಕುದ್ರುವಿನಲ್ಲಿ ಸುಧೀರ್ಘ ೨೪ ವರ್ಷ ಸೇವೆ ಮಾಡಿದ್ದರು, ಅವರು ಇನ್ನಿತರ ಕಡೆ ಶಿಕ್ಷಕಿಯಾಗಿ , 36 ವರ್ಷಕಿಂತಲು ಹೆಚ್ಚು […]

ಕೋಲಾರ: ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಕಡಲ ತೀರದಲ್ಲಿ ನಡೆದ ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ. ಡಿಸೆಂಬರ್ 10 ರಂದು ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಪೈಕಿ ನಾಲ್ಕು ಬಾಲಕರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಓರ್ವ ವಿದ್ಯಾರ್ಥಿ ಶವ ಪತ್ತೆಯಾಗಿದೆ.ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು […]

ಕುಂದಾಪುರ, ಡಿ.೧೦ಃ ಇಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಚೇರಿಯಲ್ಲಿ ಅಗಲಿದ ಮಾಜಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಸಮಿತಿಗಳ ಉಪಾಧ್ಯಕ್ಷರಾದ ದಿನೇಶ್ ಹೆಗ್ಡೆಯವರು ‘ ಎಸ್ಎಂ ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ತೆಗೆದುಕೊಂಡ ದೂರದೃಷ್ಟಿಯ ನಿರ್ಧಾರಗಳು ಇಂದು ರಾಜ್ಯ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ನಿರ್ಮಾಣ ವಾಗಲು ಸಾಧ್ಯವಾಯಿತು’ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು […]

ಕುಂದಾಪುರ: ಮಂಗಳೂರಿನಿಂದ ನಾಗಪುರಕ್ಕೆ ಎಂ ಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಕೋಟೇಶ್ವರ ಸಮೀಪ ಅಂಕದ ಕಟ್ಟೆಯಲ್ಲಿ ಡಿವೈಡರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ.ಮಂಗಳೂರಿನ ಎಂಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ 17 ಚಕ್ರದ ಲಾರಿ ಇಂದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚೀಲಗಳೆಲ್ಲ ಸರ್ವಿಸ್ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.ಅಪಘಾತದಲ್ಲಿ ಚಾಲಕ ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ಜಾವ ರಸ್ತೆ ಸಂಚಾರ […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3ರಿಂದ 7ನೇ ತರಗತಿ ವಿದ್ಯಾರ್ಥಿಗಳು ದಿನಾಂಕ 08/12/2024 ರಂದು ಈಡಿಗರ ಸಭಾಭವನ ಹೊಸನಗರ, ಶಿಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಐಕೀ ಸ್ಕೂಲ್ ಆಫ್ ಮಾರ್ಟಿಯಲ್ ಆರ್ಟ್ಸ್ ಶೊಟೋಕಾನ್ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನಶಿಪ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸರ್ವಾoಗೀಣ ಪ್ರಗತಿಗೆ ಸಂಸ್ಥೆಯ ಆಡಳಿತಾಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು […]

ಕುಂದಾಪುರ; ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ- 66 ಅರಾಟೆ ಸೇತುವೆ ಬಳಿ ಗ್ಯಾಸ್ ಸಾಗಿ ಸುತ್ತಿದ್ದ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್(59) ಎಂದು ಗುರುತಿಸಲಾಗಿದೆ.ಇಂದು ಸಂಜೆ ಸುಮಾರು 4;00 ಗಂಟೆಗೆ ಅಪಘಾತ ನಡೆದಿದ್ದು, ಬೈಕ್ ಸವಾರ ರಂಜಿತ್ ಬಲ್ಲಾಳ್ ತನ್ನಬಿಎಂಡಬ್ಲ್ಯೂ ಬೈಕ್ ನಲ್ಲಿ ಗೋವಾ ಕಡೆಯಿಂದ ಮಂಗಳೂರು […]

ಕಲ್ಯಾಣಪುರ; ಮಿಲಾಗ್ರೆಸ್ ಕಾಲೇಜ್ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ದ ಮಿಲಾಗ್ರೆಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯು ಶನಿವಾರ, ಡಿಸೆಂಬರ್ 7, 2024 ರಂದು ನಡೆಯಿತು. ಕಾರ್ಯಕ್ರಮವು ಜೊವಿಟಾ ಫೆರ್ನಾಂಡಿಸ್ ಮತ್ತು ಲವಿನಾ ಡೆ’ಸಾ ಅವರ ನೇತೃತ್ವದ ಪ್ರಾರ್ಥನಾ ಗೀತೆಗಳೊಂದಿಗೆ ಪ್ರಾರಂಭವಾಯಿತು, ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಗುಜ್ಜರಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಸೋಫಿಯಾ ಡಯಾಸ್ ಅವರು ಮಂಡಿಸಿದ ವಾರ್ಷಿಕ ವರದಿ ಮತ್ತು ಖಜಾಂಚಿ ಶ್ರೀಮತಿ ಅಮೃತಾ ಲೂಯಿಸ್ ಅವರು ವಾರ್ಷಿಕ ಲೆಕ್ಕಪರಿಶೋಧನೆಯ […]

ಕೋಲಾರ : ನೌಕರರು ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಬೇಕು. ನಿಗಧಿತ ಅವಧಿಯಲ್ಲಿ ಕೊಟ್ಟಿರುವ ಗುರಿ ಸಾಧಿಸಬೇಕು. ಸಾರ್ವಜನಿಕರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫೂಟ್ಟ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ ಹಾಗೂ ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ರೈತರ ಪ್ರತಿಯೊಂದು ಜಮೀನನ್ನು ಫೂಟ್ ತಂತ್ರಾಂಶದ ವ್ಯಾಪ್ತಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸೂಚಿಸಿದರು. ಇಂದು ಜಿಲ್ಲಾಳಿತ […]

ಮೂಡ್ಲಕಟ್ಟೆ ಸೆರೆಬ್ರೊಕ್ಸ್ ಉದ್ಘಾಟನೆ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದ ವತಿಯಿಂದ ಆಯೋಜಿಸಲಾದ ಫೋರಂ ಸೆರೆಬ್ರೊಕ್ಸ್ (CEREBROX) ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಶ್ರೀಕಾಂತ್ ಪ್ರಭು ( ಪ್ರೊ. ಎಂ.ಐ.ಟಿ, ಮಣಿಪಾಲ ) ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎ ಐ ಎಂ ಎಲ್ ವಿಭಾಗದಲ್ಲಿ ಈಗ ಇರುವ ಅವಕಾಶಗಳ ಬಗ್ಗೆ ತಿಳಿಸಿದರು ಪ್ರಾಂಶುಪಾರಾದ ಡಾ. ಅಬ್ದುಲ್ ಕರೀಂ ರವರು ಮಾತನಾಡಿ ಪೋರಂ ವತಿಯಿಂದ ಹಲವಾರು […]