
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀ ಕ್ಷೇತ್ರ ಧವರ್iಸ್ಥಳ ಗ್ರಾಮಾಭಿವೃದ್ಧಿಯೋಜನೆಯ“ ಜನಮಂಗಲ” ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗ ವೀಲ್‍ಚೇರ್ ವಿತರಣೆ- ಚಂದ್ರಶೇಖರ್‍ಜೆ, ಜಿಲ್ಲಾ ನಿರ್ದೇಶಕರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಶ್ರೀನಿವಾಸಪುರತಾಲೂಕಿನರಾಯಲ್ಪಾಡುವಲಯದಲ್ಲಿ ವಿಶೇಷ ಚೇತನರಿಗೆ ವೀಲ್‍ಚೇರ್, ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ ವಿತರಣಾಕಾರ್ಯಕ್ರಮವನ್ನುಉದ್ಗಾಟನೆ ಮಾಡಿದಜಿಲ್ಲಾ ನಿರ್ದೇಶಕರಾದಚಂದ್ರಶೇಖರ್‍ಜೆರವರು ಸಲಕರಣಿಗಳನ್ನು ವಿತರಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯುಎಲ್ಲಾ ರಂಗಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈ ವರ್ಷ ಬಾಹುಬಲಿಯ ಮಹಾಮಸ್ತಾಭಿಷೇಕದ ಸವಿನೆನಪಿಗಾಗಿ ಆರಂಭಿಸಿದ ಕಾರ್ಯಕ್ರಮವೇ “ಜನಮಂಗಲ” ಎಂಬ ಕಾರ್ಯಕ್ರಮವನ್ನು ಹೊಸದಾಗಿ ರೂಪಿಸಿದೆ. ವಿಶೇಷ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರಲ್ಲಿ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ನೂತನ ಕಚೇರಿಯನ್ನು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಉದ್ಘಾಟಿಸಿದರು. ಶ್ರೀನಿವಾಸಪುರ: ಹಂತ ಹಂತವಾಗಿ ಎಲ್ಲ ಗ್ರಾಮಗಳನ್ನೂ ಪೋಡಿ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ: ಟೊಮ್ಯಾಟೊ ಬೆಳೆಯಲ್ಲಿ ಊಜಿ ಹಾವಳಿಗೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳು ಕೋಲಾರ : ಕೋಲಾರ ಜಿಲ್ಲೆಯ ಹಲವು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಮೇರಿಕನ್ ಪಿನ್‍ವರ್ಮ್ (ಟುಟಾ ಅಬ್ಸಲೂಟ- ರೈತರ ಭಾಷೆಯಲ್ಲಿ ಊಜಿ) ಎಂಬ ಕೀಟದ ಹಾವಳಿ ಹೆಚ್ಚಾಗಿದ್ದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಹಲವು ನಿರ್ವಹಣೆ ಕ್ರಮ ಕೈಗೊಂಡರೂ ಇದರ ಉಲ್ಬಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಮಾರುಕಟ್ಟೆಗೆ ಸಾಗಿಸಲು ಭಯಭೀತರಾಗಿದ್ದು ಕಡಿಮೆ ಆದಾಯಕ್ಕೆ ಒಗ್ಗಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಐಸಿಎಆರ್- ಕೃಷಿ ವಿಜ್ಞ್ಞಾನ ಕೇಂದ್ರದ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು. ಶ್ರೀನಿವಾಸಪುರ: ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ, ಮನೆ ಹಾಗೂ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸತತ ಪ್ರಯತ್ನದ ನಡುವೆಯೂ ಕೆಲವು ಕಡೆ ಅಂತರ್ಜಲದ ಕೊರತೆಯಿಂದಾಗಿ ಕುಡಿಯುವ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ: ಸರ್ಕಾರಿ ಜಮೀನನ್ನು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ನೀಡಿದಕ್ಕೆ ವಿರೋಧ, ಜಮೀನನ್ನು ವಾಪಸು ಪಡೆದು ರೈತ್ರರ ಅನುಕೂಲಕ್ಕಾಗಿ ಬಳಸಬೆಕೆಂದು ರೈತರ ವತ್ತಾಯ ಕೋಲಾರ, ಅ-17, ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಸೇರಿದ ಸರ್ಕಾರಿ ಜಮೀನನ್ನು ಖಾಸಗಿ ಮಾಲೀಕತ್ವದ ಜಾಲಪ್ಪ ಆಸ್ಪತ್ರೆಯ ಸ್ಥಾಪನೆಗೆ ನೀಡಿರುವ ಕಸಬಾ ಹೋಬಳಿ ನಡುಪಳ್ಳಿ ಸರ್ವೇ ನಂ.115ರಲ್ಲಿ 10 ಎಕರೆ ಜಮೀನನ್ನು ಕೂಡಲೇ ವಾಪಸ್ಸು ಪಡೆದು ರೈತರಿಗೆ, ಅನುಕೂಲವಾಗುವ ಪ್ರಯೋಗಿಕ ಬೆಳೆಗಳಿಗೆ ಅಥವಾ ಸರ್ಕಾರಿ ಕಟ್ಟಡಗಳಿಗೆ ಉಪಯೋಗಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಇಲಾಖೆ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು. ಶ್ರೀನಿವಾಸಪುರ: ಇಲ್ಲಿನ ಕೆಲವು ಸರ್ಕಾರಿ ಕಚೇರಿಗಳನ್ನು ನೂತನ ರಸ್ತೆ ಸಾರಿಗೆ ಸಂಸ್ಥೆ ಸಮೀಪದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು. ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿರುವ ಕಟ್ಟವನ್ನು ಪರಿಶೀಲಿಸಿದ ಬಳಿಕ, ಅದೇ ಕಟ್ಟಡದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೆಲವು ಇಲಾಖೆಗಳನ್ನು ಒಂದೇ ಕಚೇರಿಗೆ ಸ್ಥಳಾಂತರ ಮಾಡುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಸುತ್ತಾಡುವ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ರೈಲು ನಿಲ್ದಾಣದಲ್ಲಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಸಾರ್ವಜನಿಕರ ಕುಂದು ಕೊರತೆ ವಿಚಾಯಿಸಿದರು. ಸಂಸದ ಎಸ್.ಮುನಿಸ್ವಾಮಿ ಜೊತೆಗಿದ್ದರು ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ರೈಲು ನಿಲ್ದಾಣಕ್ಕೆ ವಿಶೇಷ ರೈಲಿನಲ್ಲಿ ಆಗಮಿಸಿದ ರೈಲ್ವೆ ವಿಭಾಗೀಯ ವ್ಯಸ್ಥಾಪಕ ಅಜಯ್ ಕುಮಾರ್ ಸಿಂಗ್ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಬೇಕು. ಭದ್ರತೆಗೆ ಆದ್ಯತೆ ನೀಡಬೇಕು. ಅಂಡರ್ ಪಾಸ್‌ಗಳನ್ನು ದುರಸ್ತಿ ಮಾಡಿ ಮಳೆ ನೀರು ಸರಾಗವಾಗಿ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲದ ಹಣ ವಿತರಣೆ ಮಾಡಿದರು. ಶ್ರೀನಿವಾಸಪುರ: ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಪಟ್ಟಣದ ಪುರಸಭೆ ಮಾರುಕಟ್ಟೆ ಕಟ್ಟಡದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲದ ಹಣ ವಿತರಿಸಿ ಮಾತನಾಡಿ, […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ನರೇಗಾದಲ್ಲಿ ರೇಷ್ಮೆ ಇಲಾಖೆ ಸಾಧನೆ-ಅ.21ರಂದು ಜಿಪಂ ಸಿಇಒಗೆ ದೆಹಲಿಗೆ ಆಹ್ವಾನ ರೇಷ್ಮೆ ಹುಳು,ತೋಟಗಳು,ನೂಲುಬಿಚ್ಚುವ ಕೈಗಾರಿಕೆಗಳ ವೀಕ್ಷಿಸಿದ ಸಿಇಒ ದರ್ಶನ್ ಕೋಲಾರ:- ಜಿಲ್ಲೆಯ ರೇಷ್ಮೆ ಇಲಾಖೆ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ ನಂ1 ಆಗಿದ್ದು, ಕೇಂದ್ರ ಸರ್ಕಾರ ಅ.21 ರಂದು ದೆಹಲಿಯಲ್ಲಿ ಈ ಸಾಧನೆಯ ವಿವರ ಮಂಡಿಸಲು ಆಹ್ವಾನ ನೀಡಿರುವ ಹಿನ್ನಲೆಯಲ್ಲಿ ಜಿಪಂ ಸಿಇಒ ಹೆಚ್.ವಿ.ದರ್ಶನ್ ತಾಲ್ಲೂಕಿನ ವಿವಿಧೆಡೆ ರೇಷ್ಮೆ ಕೃಷಿ ಚಟುವಟಿಕೆಗಳ ವೀಕ್ಷಣೆ ನಡೆಸಿದರು. ನರೇಗಾದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದರ ಜತೆಗೆ […]