ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ಮಾಹಿತಿಯು ಜನರಿಗೆ ತಿಳಿಯಬೇಕು. ಇದರಿಂದ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಗ್ರೀನ್ ಯೋಜನೆಯಡಿ ಟೊಮ್ಯೋಟೋ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ ಬಡ್ಡಿರಹಿತ ಸಾಲದ ಮೊತ್ತ 10ಲಕ್ಷಕ್ಕೇರಿಸಲು ಕ್ರಮ -ಸ್ವೀಕರ್ ರಮೇಶ್‍ಕುಮಾರ್ ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಲು ಒಂದು ವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು. ಭಾನುವಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸುಗಟೂರು ಹೋಬಳಿಯ 186 ಸ್ವಸಹಾಯ […]
ವರದಿ:ಶಬ್ಬೀರ್ ಅಹ್ಮದ್ ಅರ್ಕ ಶಾಲೆಯಲ್ಲಿ ಮಾನಸಿಕ ಆರೋಗ್ಯ, ಸಂವಹನ ಕಾರ್ಯಾಗಾರ : ಕಲಿಕೆಗೆ ಮನೋವಿಜ್ಞಾನವು ಪೂರಕ-ಡಾ.ಸುಬ್ರಹ್ಮಣ್ಯಂ ಅಭಿಮತ ಕೋಲಾರ:- ಮಕ್ಕಳ ಮನಸ್ಸಿನ ಭಾವನೆಗೆ ಘಾಸಿಗೊಳಿಸದೆ ಪೋಷಣೆ ಮಾಡಿದಲ್ಲಿ ಸಕಾರಾತ್ಮಕ ವ್ಯಕ್ತಿತ್ವ ರೂಪಗೊಂಡು ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಮನೋವೈದ್ಯ ಡಾ|| ಎಸ್. ಸುಬ್ರಹ್ಮಣ್ಯ ತಿಳಿಸಿದರು. ಶನಿವಾರ ತಾಲ್ಲೂಕಿನ ಮಡೇರಹಳ್ಳಿಯ ಅರ್ಕ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸಂವಹನೆ ಕುರಿತಾಗಿ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. ಪೋಷಕರು ಬಾಲ್ಯದಿಂದಲೇ ಮಗುವಿನ ಗುಣಗಳನ್ನು ಗಮನಿಸುತ್ತಾ ಅವಶ್ಯವಿದ್ದಲ್ಲಿ ಸೂಕ್ತ […]
ವರದಿ:ಶಬ್ಬೀರ್ ಅಹ್ಮದ್ ಕೆ.ಸಿ. ವ್ಯಾಲಿ ನೀರು ಅಂತರ್ಜಲ ವೃದ್ಧಿಗಾಗಿ ಮಾತ್ರ: ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ -ಶ್ರೀ ಕೃಷ್ಣ ಬೈರೇಗೌಡ ಕೋಲಾರ: ಜೂನ್ 01 ಕೆ.ಸಿವ್ಯಾಲಿಯ ಸಂಸ್ಕರಿಸಿದ ನೀರು ಜಿಲ್ಲೆಯ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮಾತ್ರ ಉದ್ದೇಶಿಸಿದ್ದು, ಸಾರ್ವಜನಿಕರು ಇದನ್ನು ನೇರವಾಗಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ […]
ವರದಿ:ಶಬ್ಬೀರ್ ಅಹ್ಮದ್ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಿ: ಡಾ.ಸಿ.ಜಿ.ರಮೇಶ್ ಕೋಲಾರ: ಜೂನ್ 01 ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮಡಿಯಲ್ಲಿ ಶಿಶು ಮರಣ ಪ್ರಮಾಣವನ್ನು ತಡೆಗಟ್ಟುವ ಸಲುವಾಗಿ 0 ಯಿಂದ 5 ವರ್ಷದೊಳಗಿನ ಮಕ್ಕಳ ಕುಟುಂಬಗಳಲ್ಲಿ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕವನ್ನು ಅಂಗನವಾಡಿಗಳಲ್ಲಿ ಜೂನ್. 3 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಯಾದ ಡಾ.ಸಿ.ಜಿ.ರಮೇಶ್ ಅವರು ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಆರ್.ಬಿ.ಎಸ್.ಕೆ, ಆರ್.ಕೆ.ಎಸ್.ಕೆ, […]
ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ 11 ಸ್ಥಾನ ಗಳಿಸಿದೆ. ಉಳಿದಂತೆ ಕಾಂಗ್ರೆಸ್ 8 ಹಾಗೂ ಪಕ್ಷೇತರರು 4 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಪುರಸಭೆ ಆಡಳಿತ ಯಾರ ತೆಕ್ಕೆಗೆ ಬರುತ್ತದೆ ಎಂಬುದು ಪಕ್ಷೇತರರು ನೀಡುವ ಬೆಂಬಲದ ಮೇಲೆ ಆಧಾರಪಟ್ಟಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರ: ಅಭ್ಯರ್ಥಿಗಳು: ವಾರ್ಡ್ ನಂ 1: ನಾಗೇಶ್ ಕುಮಾರ್, ಪಡೆದ ಮತಗಳು 498(ಕಾಂಗ್ರೆಸ್), ಪ್ರತಿಸ್ಪರ್ಧಿ ಜಿ.ವಿ.ಪ್ರಸನ್ನಕುಮಾರ್, […]
ವರದಿ: ಶಬ್ಬೀರ್ ಅಹ್ಮದ್ ಕೆ.ಜಿ.ಎಫ್. : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ; ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಕೋಲಾರ : ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ತ್ರೀಗೆ ಚಿಕಿತ್ಸೆ ನೀಡದೆ ಮಗು ಸಾವಿಗೆ ಕಾರಣರಾದ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ರೈತನ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕವು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಕೋಲಾರ ಜಿಲ್ಲೆ ಕೆ.ಜಿಎಫ್. […]
ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನ ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ. ಬೆಳಿಗ್ಗೆ ಚುರುಕಾಗಿ ನಡೆದ ಮತದಾನ, ಮಧ್ಯಾಹ್ನ ಸುಡು ಬಿಸಿಲಿನ ಪರಿಣಾಮವಾಗಿ ಮಂದವಾಯಿತು. ಬಿಸಿಲು ಕಡಿಮೆ ಆಗುತ್ತಿದ್ದಂತೆ ಮತ್ತೆ ಮತದಾನ ಚುರುಕುಗೊಂಡಿತು. ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ 23 ಮತಗಟ್ಟೆಗಳಲ್ಲೂ ಪುರುಷ ಹಾಗೂ ಮಹಿಳಾ ಮತದಾರರು ಪ್ರತ್ಯೇಕ ಸರತಿ ಸಾಲುಗಳಲ್ಲಿ ನಿಂತು ಮತ ಚಲಾಯಿಸಿದರು. ಮತದಾನದ ಸಂದರ್ಭದಲ್ಲಿ ಭಾರಿ […]
ವರದಿ:ಶಬ್ಬೀರ್ ಅಹ್ಮದ್ ಡಿಸಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪೀಕರ್ ಸೂಚನೆ ಸುಸ್ತಿ ಆಗದವರಿಗೆ ಮರು ಸಾಲ ವಿತರಣೆಗೆ ನಿರ್ಧಾರ ಸಾಲ ವಸೂಲಾತಿಗೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು ಕೋಲಾರ: ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿಗೆ ಅಡ್ಡಿಯಾಗಿರುವ ಮುಖಂಡರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೂಚಿಸಿದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‍ನಿಂದ ವಿತರಿಸಲಾಗಿರುವ ಸಾಲದ ಮರುಪಾವತಿ, ಸಾಲ ವಿತರಣೆ, ಸಾಲ ನವೀಕರಣದ ಕುರಿತು ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆ […]