JANANUDI.COM NEYWORK 1-9 ನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ಉತ್ತೀರ್ಣ – ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯ ವಿವರ ಬೆಂಗಳೂರು, ಎ.20; ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 1-9ನೇ ತರಗತಿವರೆಗೆ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1-9ನೇ ತರಗತಿವರೆಗೆ ಮೌಲ್ಯಾಂಕನ ವಿಶ್ಲೇಷಣೆ ಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು. ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದರು. 1-5ನೇ ತರಗತಿವರೆಗೆ ಹಾಗೂ 6-9ನೇ ತರಗತಿವರೆಗೆ ಮೌಲ್ಯಾಂಕನ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ 19 ತಡೆಯಲು ಸಹಕರಿಸಿ- ಮುಖ್ಯಾಧಿಕಾರಿ ಡಿ ಶೇಖರ್.ಶ್ರೀನಿವಾಸಪುರ : ಕಡ್ಡಾಯವಾಗಿ ಮಾಸ್ಕ್ ಧರಸಿ ಕೋವಿಡ್ -19 ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಅಗತ್ಯವಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಡಿ. ಶೇಖರ್ ರೆಡ್ಡಿ ತಿಳಿಸಿದರು .ಪಟ್ಟಣದ ಸಂತೇ ಮೈದಾನದಲ್ಲಿ ಕೊವಿಡ್ 19 ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾಸ್ಕ್ ಧರಸದೆ ಇರುವವರಿಗೆ ದಂಡವನ್ನು ವಿಧಿಸಿ ಮಾತನಾಡಿದ ಡಿ . ಶೇಖರ್ ಗ್ರಾಮೀಣ ಪ್ರದೇಶದ ಜನರು ವಿವಿದ ಕೆಲಸ […]
JANANUDI.COM NETWORK ಬೆಂಗಳೂರು; ಎ.18 ಬಂಟ್ವಾಳ ಕುರಿಯಾಲು ಗುತ್ತು ಕರ್ನಲ್ ಡಾ|ಪ್ರಹ್ಲಾದ್ ರೈ ತಾರೀಕು 17 ರಂದು ಬೆಂಗಳೂರಿನ ತಮ್ಮ ಸೇವಾ ವಿಹಾರ ಸ್ವಗ್ರಹದಲ್ಲಿ ದೈವಾಧಿನರಾಗಿದ್ದಾರೆ. ಇವರು ಭಾರತೀಯ ಸೇನಾವಿಭಾಗದಲ್ಲಿ ಸುಮಾರು 30 ವರ್ಷಗಳಿಗೂ ಮಿಕ್ಕಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.ಇವರು ಮಗ, ಮಗಳು ಮತ್ತು ಮೊಮ್ಮಕ್ಕಳನ್ನು ಅಗಲಿರುತ್ತಾರೆ.
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ ಏ.17 : ಹಿಂದುಳಿದವರಿಗೆ ಸರ್ಕಾರಿ ಸೌಲತ್ತು ಸಿಗಬೇಕಾದರೆ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗದವರು ಸಂಘಟಿತರಾಗಬೇಕೆಂದು ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎ.ಪ್ರಸಾದ್ಬಾಬು ಕರೆ ನೀಡಿದರು.ಅವರು ಮುಳಬಗಿಲು ಪಟ್ಟಣದ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಳಬಾಗಿಲು ತಾಲ್ಲೂಕು ಮಟ್ಟದ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು. ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ ಜಾತಿಗಳ ಸಮುದಾಯಗಳಿದ್ದು, ಇವರ ಅನೇಕ ಸಮಸ್ಯೆಗಳು ಸರ್ಕಾರಿ ಸೌಲಭ್ಯದಿಂದ […]
JANANUDI.COM NETWORK ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗುಂಪು ಸೇರುವ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ 200 ಜನ ಮತ್ತು ಕಲ್ಯಾಣ ಮಂಟಪದಂತಹ ಒಳಾಂಗಣಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 100 ಜನರ ಮಿತಿ ಹೇರಲಾಗಿದೆ. ಜನ್ಮದಿನ ಮತ್ತು ಇತರೆ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50 ಜನರ ಮಿತಿ ಮತ್ತು ಒಳಾಂಗಣ ಕಾರ್ಯಕ್ರಮಕ್ಕೆ 25 ಜನರ ಮಿತಿ ಹೇರಲಾಗಿದೆ. ಧಾರ್ಮಿಕ ಆಚರಣೆಗೆ ಅವಕಾಶ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಸಂವಿಧಾನ ರಚನೆಯಾಗಿ ಸುಮಾರು 70 ವರ್ಷಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ , ಅಸಮಾನತೆ ಹಾಗೂ ಅಪಮಾನಗಳು ಶೋಷಿತ ವರ್ಗದವರಿಗೆ ನಿರಂತರವಾಗಿ ನಡೆಯುತ್ತಿವೆ ಇದನ್ನು ಹೋಗಲಾಡಿಸಲು ವಿದ್ಯಾವಂತ ಯುವ ಪೀಳಿಗೆ ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌತಮಿ ಮುನಿರಾಜು ಕರೆ ನೀಡಿದರು . ನೆಲವಂಕಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಶಿಲ್ಪಿ ಡಾ // ಬಿ.ಆರ್ . ಅಂಬೇಡ್ಕರ್ ರವರ 130 ನೇ ಜಯಂತಿ ಹಾಗೂ ನಿವೃತ್ತ ಜಲಗಾರರಿಗೆ […]
JANANUDI.COM NETWORK ಕುಂದಾಪುರ,ಎ. 15: ಎಪ್ರಿಲ್ 14 ಬುದವಾರಂದು ಸಾಸ್ತಾನ ಸಂತ ಅಂತೋನಿ ಚರ್ಚ್ ಶತಮಾನೊತ್ಸೋವದ ಸಂಭ್ರಮ ಕೃತಜ್ಞತಾ ಬಲಿಪೂಜೆಯು ಶ್ರದ್ದೆ ಭಕ್ತಿಯೊಂದಿಗೆ ನಡೆಯಿತು. ಕೋವಿಡ್ ನಿಬರ್ಂಧಗಳಿಂದಾಗಿ, ಶತಮಾನೋತ್ಸವ ಆಚರಣೆಯನ್ನು ಸೂಕ್ಷ್ಮ ರೀತಿಯಲ್ಲಿ ನಡೆಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಅ|ವಂ| ಜೆರಾಲ್ಡ್ ಐಸಾಕ್ ಲೋಬೊ ಅವರು ಕೃತಜ್ಞತಾ ಬಲಿದಾನದ ಪ್ರಧಾನರಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅ|ವಂ| ಪೀಟರ್ ಪಾಲ್ ಸಲ್ಡಾನ್ಹಾ, ಮೊನ್ಸಿಜೆಂರ್ ಅ|ವಂ| ಎಡ್ವಿನ್ ಸಿ ಪಿಂಟೊ, ಅ|ವಂ| ಧರ್ಮಗುರು ಸ್ಟ್ಯಾನಿ ಬಿ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಕುಲಪತಿ, […]
JANANUDI.COM NETWORK ಭಾರತದ ಸಂವಿಧಾನ ರಚನೆ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಜಾಗೃತಿಯನ್ನು ಮೂಡಿಸಲು ಅಂಭೆಡ್ಕರ್ ಅವರ ನಾಯಕತ್ವ ನಮಗೆ ಸದಾ ಪ್ರೆರಣೆಯಾಗಿದೆ” ಎಂದು ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ , ಮೂಡುಬೆಳ್ಳೆ ಸಂತ ಲಾರೆನ್ಸ್ ಪ ಪೂ ಕಾಲೇಜಿನಲ್ಲಿ ನಡೆದ ಅಂಭೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಶತೆಯನ್ನು ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ವಿಧ್ಯಾರ್ಥಿ ನಾಯಕರಾದ ಕು. ಜೆಮಿಮಾ ಅರಾನ್ಹಾ, ಸುನೀಲ್ ಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಆಗ್ರಹಿಸಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಮಸ್ಯೆ ಈಡೇರಿಸುವಂತೆ ಸಿಐಟಿಯು ನೇತೃತ್ವದಲ್ಲಿ ತಹಶೀಲ್ದಾರ್ಗೆ ಮನವಿ ಪತ್ರ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರ ನೌಕರರ ವಿರುದ್ಧ ಕೈಗೊಳ್ಳುತ್ತಿರುವ ಶಿಸ್ತು ಕ್ರಮ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಹೇಳಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ […]