JANANUDI.COM NETWORK ಹುಬ್ಬಳ್ಳಿ,ಮೇ 05: ಚಾಮರಾಜನಗರ ಹಾಗೂ ಕಲಬುರಗಿಯಲ್ಲಿ ಸಂಭವಿಸಿದ ಕೋವಿಡ್ ದುರಂತದ ಬಳಿಕ ಇಂತಹದ್ದೇ ಮತ್ತೊಂದು ದುರಂತ ಪ್ರಕರಣದ ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಹುಬ್ಬಳ್ಳಿಯ ಲೈಫ್’ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೇರಿದಂತೆ ಐವರು ಸೋಂಕಿತರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ನಿನ್ನೆ ಸಂಜೆ ಲೈಫ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು […]
JANANUDI.COM NETWORK ಬೆಂಗಳೂರು,ಮೇ.4: ಎಲ್ಲಾ ರೀತಿಯ ಪೊಳ್ಳು ಸುಳ್ಳು ಸುದ್ದಿ ಸುಳ್ಳು ಸಾಧನೆ ತೋರಿಸಿ ಜನರಿಗೆ ಮರುಳು ಮಾಡುವ ರಾಜಕೀಯ ಮಾಡಿ ಇದೀಗ ಕೋವಿಡ್ ಸೊಂಕಿನಿಂದ ಸತ್ತವರನ್ನು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವಲ್ಲಿಯೂ ಒಂದೂ ಚೂರು ಮಾನವೀಯತೆ, ಕರುಣೆ ಇಲ್ಲದೆ, ಸ್ಮಶಾನದಲ್ಲಿಯೂ ರಾಜಕೀಯ ಮಾಡಲು ರಾಜಕೀಯ ನಾಯಕರು ಹೊರಟು, ತಮ್ಮ ಬಿಜೆಪಿಯ ನರೇಂದ್ರ ಮೋದಿ, ಯುಡಿರಪ್ಪ, ಎಸ್.ಅರ್.ಅಶೋಕ್, ಸ್ಥಳೀಯ ನಾಯಕರಾದ ಎಸ್.ಮಲ್ಲಯ್ಯ, ಬಿ.ಮರಿಸ್ವಾಮಿ ಮುಂತಾದವರ ಚಿತ್ರಗಳಿರುವ ದೊಡ್ಡ ಬ್ಯಾನರ್ ಹಾಕಿ ಅಣಕ ಮಾಡಿರುವುದು ಸಾರ್ವಜನಿಕರಿಂದ ಅಸಹ್ಯವಾಗಿ ಕಂಡು […]
JANANUDI.COM NETWORK ಬೆಂಗಳೂರು, ಮೇ.04: ಕೊರೋನಾದಿಂದ ಜನ ವಿಲ ವಿಲವೆಂದು ಸಾಯುತ್ತಿರುವಾಗಲೂ, ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾಗಳ ಕುಕ್ರತ್ಯವನ್ನು ಬಿಜೆಪಿಯರದೇ ಆದ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ. ಅವರು ಮೇ.04 ರಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರುಅಕ್ರಮವಾಗಿ ಬಿಬಿಎಂಪಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಯಲಿಗೆಳೆದಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ವಾರ್ ರೂಮ್ ಗಳಿಂದಲೇ ಈ ವರೆಗೂ ಪ್ರಭಾವಿಗಳಿಂದ 4,065 ಬೆಡ್ ಗಳನ್ನು ಬುಕ್ ಮಾಡಿದ್ದಾರೆ. […]
JANANUDI.COM NETWORK ಮೈಸೂರು:ಮೇ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು,ಜನರು ನರಳಿನರಳಿ ಸಾಯುತಿದ್ದಾರೆ, ಇದೀಗ ಮೈಸೂರು ಚಾಮರಾಜ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಅಸಹಯಕರ ಘಟ್ನೆನಡೆದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಜೀವಗಳು ಲೆಕ್ಕೆ ಇಲ್ಲದಷ್ಟು ಬಲಿಯಾಗುತ್ತಿರುವಾಗ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮೋರಿಯಲ್ಲಿ ಕೊರೊನಾ ಸೋಂಕಿತನ ಶವ ಪತ್ತೆಯಾಗಿದ್ದು ಅಘಾತಕಾರಿ ಪ್ರಕರಣವಾಗಿದೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಇಂತಹ ಬೇಜವಾಬ್ಧಾರಿ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಾ ಇದ್ದಾರೆ. ಕೋವಿಡ್ ಸೊಂಕಿನಿಂದ ಬಳಲುತ್ತಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸುರೇಶ್ ಎಂಬುವವರನ್ನು […]
JANANUDI.COM NETWORK ಕಲಬುರಗಿ ,ಮೇ.4 : ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ೨೪ ಜನರ ದುರ್ಮರಣದ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿಯೂ ಇಂತಹದೇ ದುರಂತ ಸಂಭವಿಸಿದೆ. ಆಕ್ಸಿಜನ್ ಸಿಗದೆ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿಯ ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಮುಂಜಾನೆ 4 ಗಂಟೆಗೆ ಆಕ್ಸಿಜನ್ ಕೊರತೆ ಎದುರಾಗಿದ್ದು. ಆದರೆ ಬೆಳಗ್ಗೆ 11 ಗಂಟೆ ಸಮೀಪಿಸುತ್ತಾ ಬಂದಿದ್ದರೂ ಕೂಡ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ. ಇದರಿಂದಾಗೊ ರೋಗಿಗಳು ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಅಫಜಲ್ ಪುರ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಮೇ.3: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ 6ನೇ ಪೀಠದ ಆಯುಕ್ತ ಡಾ.ಕೆ.ಇ ಕುಮಾರಸ್ವಾಮಿ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣವನ್ನು ವಿಧಾನಸೌಧ ಪೊಲೀಸರು ದಾಖಲೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.ಸುಮಾರು 1000 ಕೋಟಿ ರೂಪಾಯಿಗಳ ಗಂಗಾ ಕಲ್ಯಾಣ ಯೋಜನೆಯಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು, ಡಾ. ದೇವರಾಜ್ ಅರಸು ಅಭಿವೃದ್ಧಿ ನಿಗಮ ಬೆಂಗಳೂರು, […]
JANANUDI.COM NETWORK ಜೆದ್ದಾ, ಸರಿಸುಮಾರು ಕಳೆದ ಒಂದು ವರ್ಷದಿಂದ ನಿಷೇಧಿಸಲ್ಪಟ್ಟ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ರಸ್ತೆ, ಜಲ ಹಾಗೂ ವಿಮಾನ ಪ್ರಯಾಣವು ಮೇ 17ರ ಮುಂಜಾನೆ 1 ಗಂಟೆಯಿಂದ ಸಹಜ ಸ್ಥಿತಿಗೆ ಬರಲಿದ್ದು, ಅಂದು ಮುಚ್ಚಲ್ಪಟ್ಟ ತನ್ನೆಲ್ಲಾ ಅಂತರರಾಷ್ರೀಯ ಗಡಿಗಳನ್ನು ಸೌದಿ ಅರೇಬಿಯಾವು ತೆರವುಗೊಳಿಸಲಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೌದಿ ಅರೇಬಿಯಾವು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಯಾಣಿಕರು ಎರಡು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಬೇಕು ಅಥವಾ ಒಂದು ಡೋಸ್ ಲಸಿಕೆ […]
[ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕಿರಣ್ ಜಿತ್ ರವರು ಬೆಳಗಾವಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿ ಹೋಳಿಯ ಆತ್ಮೀಯ ಮಿತ್ರರು. ಸತೀಶ್ ಜಾರಕಿ ಹೋಳಿಯವರು ಜೀವನದಲ್ಲಿ ತಮ್ಮದೆ ಆದ ಆದರ್ಶ ತತ್ವಗಳನ್ನು ಅಳವಡಿಸಿಕೊಂಡವರು, ಅವರು ಮೌಢ್ಯವನ್ನು ನಂಬುವುದಿಲ್ಲಾ, ಅವರು ಗಳಿಗೆಯನ್ನು ನಂಬುದಿಲ್ಲಾ, ಅವರು ಬೆಳಗಾವಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಪತ್ರವನ್ನು ಸಲ್ಲಿಸುವಾಗ ಬೇಕಂತ್ತಲೇ ಅತ್ಯಂತ ಕೆಟ್ಟ ಗಳಿಗೆಯಲ್ಲಿ ನೀಡಿದ್ದರು, ಕಾರಣ ಇಂತಹ ಮೌಢ್ಯಗಳನ್ನು ಅವರು ನಂಬುದಿಲ್ಲವೆಂದು, ಇದು ಡಾ| ಕಿರಣ್ ಜಿತ್ ತಿಳಿಸಿದ ವಿಷಯವಾಗಿದೆ. ಡಾ|ಕಿರಣ್ ಜಿತ್ […]
JANANUDI.COM NETWORK ಗುಜರಾತ್‌ನ ಭರೂಚ್‌ನ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 18 ಕರೋನ ವೈರಸ್ ರೋಗಿಗಳು ಸಾವನ್ನಪ್ಪಿದ್ದಾರೆ. ದುರಂತದ ಕರುಳು ಹಿಚುಕುವ ದೃಶ್ಯಗಳು ಕಾಣಸಿಗುತ್ತೇವೆ. ಕೆಲವು ರೋಗಿಗಳ ಅವಶೇಷಗಳನ್ನು ಸ್ಟ್ರೆಚರ್‌ಗಳು ಮತ್ತು ಹಾಸಿಗೆಗಳ ಮೇಲೆ ಜೀವಂತವಾಗಿ ಸುಟ್ಟು ಕರಕಲಾಗಿವೆ. ನಾಲ್ಕು ಅಂತಸ್ತಿನ ಕಲ್ಯಾಣ ಆಸ್ಪತ್ರೆಯಲ್ಲಿ ಮುಂಜಾನೆ 1 ಗಂಟೆಗೆ ಸಿಒವಿಐಡಿ -19 ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಸುಮಾರು 50 ಇತರ ರೋಗಿಗಳು ಇದ್ದರು. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ […]