
ಬೆಂಗಳೂರಿನ ‘ಮಯೂರ ಗ್ರೂಪ್’ನ ಸಿ. ಎಂ. ಡಿ., ಚೇಯರ್‍ಮೆನ್, ಬೇಕರಿ, ಹೋಟೆಲ್ ಉದ್ಯಮ ಹಾಗೂ ಗುಣಮಟ್ಟದ ಆಹಾರ ಉತ್ಪನ್ನದಲ್ಲಿ ಹೆಸರುವಾಸಿಯಾಗಿರುವ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಕರ್ನಾಟಕ ಹೋಟೆಲ್ ಅಸೋಸಿಯೇಶನ್ (ರಿ.) ವತಿಯಿಂದ ‘ಆತಿಥ್ಯ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ. ಮೇ 29 ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.ಗೋಪಾಡಿ ಶ್ರೀನಿವಾಸ ರಾವ್ ಅವರು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನೀಡಿದ ಸೇವೆಯನ್ನು ಗುರುತಿಸಲಾಗಿದ್ದು, ಈ ಅನಘ್ಯ ಕಾಣಿಕೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಗೋಪಾಡಿ ಶ್ರೀನಿವಾಸ ರಾವ್ […]

ಬೆಂಗಳೂರು, ಮೇ 25: ಕಾರ್ಮೆಲೈಟ್ ಎನ್‌ಜಿಒ, ಧ್ಯಾನ ಜ್ಯೋತಿ ಟ್ರಸ್ಟ್, ಮೂವತ್ತು ದೃಷ್ಟಿಹೀನ ಪೋಷಕರ ಮಕ್ಕಳ ಜೀವನದಲ್ಲಿ ಸಣ್ಣ ಆದರೆ ಪರಿಗಣನಾಶೀಲ ಪರಿಣಾಮ ಬೀರಲು ಮುಂದಾಯಿತು, ಇದು ಪ್ರೀತಿ ಮತ್ತು ದಾನದ ಉದಾತ್ತ ಉದ್ದೇಶವನ್ನು ಚಿತ್ರಿಸುತ್ತದೆ. ‘ಕಾರ್ಮೆಲ್ ವಿಷನ್ ಫಾರ್ ದಿ ಫ್ಯೂಚರ್’ ಬ್ಯಾನರ್ ಅಡಿಯಲ್ಲಿ, ಮೇ 25, 2025 ರಂದು ಬೆಂಗಳೂರಿನ ಮಾರಿಯಾ ನಿಕೇತನ್ ಹೈಸ್ಕೂಲ್ ಸಭಾಂಗಣದಲ್ಲಿ 30 ಮಕ್ಕಳಿಗೆ ಸುಮಾರು 6 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಕಾರ್ಯಕ್ರಮವು ಪ್ರಾರ್ಥನೆ ಸೇವೆಯೊಂದಿಗೆ ಪ್ರಾರಂಭವಾಯಿತು. ಸಂಯೋಜಕರಾದ […]

ಬೆಂಗಳೂರು, ಮೇ.27; ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ. ನೂರು ವರ್ಷದಲ್ಲೇ ಬೆಂಗಳೂರಲ್ಲಿ ಈ ಬಾರಿ ಬಿದ್ದು,ಮಳೆ ದಾಖಲೆ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮೇ ತಿಂಗಳಲ್ಲೇ 307.9 ಮಿಮೀ ಮಳೆ ದಾಖಲೆಯಾಗಿದೆ. 2023 ಮೇ ತಿಂಗಳಲ್ಲಿ 305.4 ಮಿಮೀ ಮಳೆ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಈ ಬಾರಿಯ ಮಳೆ ಮುರಿದಿದೆ ಎಂದು ಅವರು ಹೇಳಿದ್ದಾರೆ. ವಾಡಿಕೆಯಂತೆ ಜೂನ್ 5ಕ್ಕೆ ಮುಂಗಾರು […]

ಶ್ರೀನಿವಾಸಪುರ : ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾವಣೆ ಮಾಡುತ್ತಿದ್ದಾರೆ . ತಾಲ್ಲೂಕಿನ ಕೋಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಕ್ಕಲಗಡ್ಡ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾಗಿದಂತಹ ಸೀತಪ್ಪ ರವರು ವಿಧವಶರಾಗಿ ತೆರವಾಗಿದ್ದಂತಹ ಸ್ಥಾನಕ್ಕೆ ಭಾನುವಾರ ಉಪ ಚುನಾವಣಾ ದಿನಾಂಕವನ್ನು ಚುನಾವಣಾಧಿಕಾರಿಗಳು ನಿಗದಿ ಮಾಡಲಾಗಿದ್ದು ಯಾವುದೇ ವಿಧಾನ ಸಭೆ ಚುನಾವಣೆಗೆ ಕಮ್ಮಿ ಇಲ್ಲಾ ಎಂಬಂತೆ ಚುನಾವಣೆ ನಡೆಯುತ್ತಿದೆ. ಗ್ರಾಮದಲ್ಲಿ ಒಟ್ಡು 1185 ಮತದಾರರು ಇದ್ದು, ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ್ ನಂ. 61 ರಲ್ಲಿ […]

ಬೆಂಗಳೂರು: ಚೆಲ್ಲಿಕೆರೆಯ ಸೇಂಟ್ ರಾಕ್ಸ್ ಚರ್ಚ್‌ನ ಭಕ್ತರು ತಮ್ಮ ಹೊಸದಾಗಿ ನವೀಕರಿಸಿದ ಚರ್ಚ್‌ನ ಉದ್ಘಾಟನೆಯನ್ನು ಆಚರಿಸಲು ಸಂತೋಷದ ಹೃದಯಗಳೊಂದಿಗೆ ಒಟ್ಟುಗೂಡಿದರು – ಪ್ರಾರ್ಥನೆ, ತ್ಯಾಗ ಮತ್ತು ದೇವರ ಅನುಗ್ರಹದಿಂದ ಅಂತಿಮವಾಗಿ ಈಡೇರಿದ ಬಹುನಿರೀಕ್ಷಿತ ಕನಸು ನನಸಾಗಿ ಲೋಕಾರ್ಪಣೆಗೊಂಡಿತುಆಚರಣೆಯು ಪವಿತ್ರ ಯೂಕರಿಸ್ಟಿಕ್ ಬಲಿದಾನದೊಂದಿಗೆ ಪ್ರಾರಂಭವಾಯಿತು, ಇದನ್ನು ಹಿಸ್ ಗ್ರೇಸ್ ಆರ್ಚ್‌ಬಿಷಪ್ ಪೀಟರ್ ಮಚಾದೊ ನೇತೃತ್ವದಲ್ಲಿ ಮತ್ತು ಸಹಾಯಕ ಬಿಷಪ್‌ಗಳಾದ ರೆವರೆಂಡ್ ರೆವರೆಂಡ್ ಅರೋಕಿಯರಾಜ್ ಸತೀಶ್ ಕುಮಾರ್ ಮತ್ತು ರೆವರೆಂಡ್ ರೆವರೆಂಡ್ ಜೋಸೆಫ್ ಸುಸೈನಾಥನ್, ಪ್ಯಾರಿಷ್ ಪಾದ್ರಿ ಫಾದರ್ ಅರುಣ್ […]

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಲಾಂಬಾ ಅವರ ಅನುಮೋದನೆಯ ಮೇರೆಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಡಿಸೋಜ ಬೆಳ್ಮಣ್ ಆಯ್ಕೆಯಾಗಿದ್ದಾರೆ. ಇವರು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.ಶ್ರೀಮತಿ ಅನಿತಾ ಡಿಸೋಜ ಬೆಳ್ಮಣ್ ಇವರು ಪಕ್ಷದ ಸಕ್ರಿಯ ಸದಸ್ಯರಾಗಿದ್ದು ಗ್ರಾಮಪಂಚಾಯತ್ ಸದಸ್ಯರಾಗಿ, ಕಾರ್ಕಳ ಬ್ಲಾಕ್ ಮಹಿಳಾ […]

ಬರಹ ; ಸಚಿನ್ ಸುವರ್ಣ ಪಿತ್ರೋಡಿ ಕಾಪು : ಮೊಗವೀರ ಸಮಾಜವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ದೈವಸ್ಥಾನ ಹಾಗೂ ಮಠ-ಮಂದಿರಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಂತಹ ಸಮಾಜ. ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡಿದಂತಹ ಮೊಗವೀರ ಸಮುದಾಯಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡದಿರುವುದು – ಮೊಗವೀರ ಸಮುದಾಯದ ಬಗೆಗಿನ ಕಡೆಗಣನೆಯನ್ನು ಪ್ರತಿಬಿಂಬಿಸುತ್ತಿದೆ. ಸರಕಾರದಿಂದ ನಿಯೋಜಿತವಾಗುವ ಈ ವ್ಯವಸ್ಥಾಪನ ಸಮಿತಿಯಲ್ಲಿ ಮೋಗವೀರ ಸಮುದಾಯಕ್ಕೆ ಪ್ರಾತಿನಿಧ್ಯ ಲಭಿಸಬೇಕು ಎಂದು […]

ಬರಹ ;ಮ್ಯಾಕ್ಷಿ ಡಿಸೋಜಾ ಮಾನ್ಯ ಮುಖ್ಯಮಂತ್ರಿಗಳಾದ ನಮ್ಮ ಪ್ರೀತಿಯ ಸಿದ್ದರಾಮಯ್ಯ ರವರೇ,ಆದಷ್ಟು ಬೇಗ ಜನ ಔಷದಗಳಲ್ಲಿರುವ ಖಾಸಗಿ ಔಷಧಗಳನ್ನು ಮಾರಾಟ ಮಾಡೋದನ್ನು ನಿಲ್ಲಿಸಿ , ಸರಕಾರಿ ಆಸ್ಪತ್ರೆ ಹತ್ತಿರ ಇರುವ ಜನ ಔಷಧಿ ಕೇಂದ್ರಗಳು ತಮ್ಮ ಲಾಭಕ್ಕಾಗಿ ಖಾಸಗಿ ಔಷಧಗಳನ್ನು ಮಾರಾಟ ಮಾಡುತ್ತಿವೆ ಇದರ ಬಗ್ಗೆ ಗಮನ ಹರಿಸಿ. ಹೆಸರು ಪ್ರದಾನ ಮಂತ್ರಿ ಜನ ಔಷಧ ಕೇಂದ್ರ ,ಮಾರಾಟಮಾಡೋದು ಖಾಸಗಿ ಜನರೀಕ್ ಔಷಧಗಳು,ಸರಕಾರಿ ಜನ ಔಷಧ ಕೇಂದ್ರ ಅಂದರೆ ಕೇವಲ ಜನಪುಷದಿ ಮುದ್ರೆಯುಳ್ಳ ಔಷಧಗಳನ್ನು ಮಾರಾತಮಾಡೋದು,ಕೇಂದ್ರ ಸರಕಾರ […]

ಬೆಂಗಳೂರು; ಹೊಸೂರು ಆನೇಕಲ್‌ನ ಚಂದಾಪುರದ ರೈಲ್ವೆ ಸೇತುವೆ ಬಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 18 ವರ್ಷದ ಯುವತಿಯ ಮೃತದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆದಿರುವ ಶಂಕೆ ವ್ಯಕ್ತವಾಗಿದ್ದು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಾಲಕಿಯ ರುಂಡ ಮತ್ತು ಮುಂಡ ಕತ್ತರಿಸಿದ ರೀತಿಯಲ್ಲಿ ಮುಚ್ಚಿದ ನೀಲಿ ಸೂಟ್ ಕೇಸ್‌ವೊಂದರಲ್ಲಿ ಪತ್ತೆಯಾದ ಆತಂಕಕಾರಿ ಘಟನೆ ಹಳೆ ಚಂದಾಪುರ ರೈಲ್ವೆ ಹಳಿ ಬಳಿ ನಡೆದಿದೆ. ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ಮಾಹಿತಿ […]