
ಶ್ರೀನಿವಾಸಪುರ : ಕೋಲಾರದ ಬಿಜಿಎಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಶುಕ್ರವಾರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳು ಚದುರಂಗ ಸ್ಪರ್ಧೆಯಲ್ಲಿ ಶ್ರೀನಿವಾಸಪುರ ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಿಮಾಮಲ್ಯ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಲಿ ಕಾರ್ಯದರ್ಶಿ ಅಮರನಾಥ್ ವಿದ್ಯಾರ್ಥಿಯನ್ನು ಅಭಿನಂದಿಸಿದರು.

ಕೋಲಾರ-ನ-11, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಟೆಮೋಟೋ ಆಲೂಗಡ್ಡೆಗೆ 2 ಲಕ್ಷ ಪರಿಹಾರ ನೀಡಿ ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ರಚನೆ ಮಾಡುವಂತೆ ಹಾಗೂ ಕೆ.ಸಿ.ವ್ಯಾಲಿ 3ನೇ ಹಂತದ ಶುದ್ದೀಕರಣಕ್ಕಾಗಿ ರೈತ ಸಂಘದಿಂದ ಯರಗೋಳ್ ಉದ್ಗಾಟನಗೆ ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ನಷ್ಟ ಆಲೂಗಡ್ಡೆ ಬೆಳೆ ಸಮೇತ ಮನವರಿಕೆ ಮಾಡಿ ಮನವಿ ನೀಡಿ ಒತ್ತಾಯಿಸಲಾಯಿತು.ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ರಕ್ಷಣೆಗಾಗಿ ಸರ್ಕಾರ ಪ್ರತಿ ಪಂಚಾಯ್ತಿಗೊಂದು ಘೋಶಾಲೆ […]

ಕೋಲಾರ ನವೆಂಬರ್ 11 : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಯರಗೋಳ್ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಿದರು.ಶನಿವಾರ ಕೋಲಾರ ಜಿಲ್ಲೆಗೆ ಆಗಮಿಸಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕಲ್ವಮಂಜಲಿ ರಾಮುಶಿವಣ್ಣ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಕೊಲೆ ದರೋಡೆ ಮಟ್ಕಾ ಜೂಜು ಇನ್ನು ಸುಮಾರು ಕಾನೂನುಬಾಹಿರ ಚಟುವಟಿಕೆಗಳು ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ವಿರುದ್ಧ ಕಠಿಣ ಕಾನೂನು ಕ್ರಮ […]

ಕೋಲಾರ: ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಉಂಟಾಗುವ ಅನಾಹುತ ತಪ್ಪಿಸಲು, ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಓಆರ್ಎಸ್ ನೀಡಿ ಮಕ್ಕಳಿಗೆ 14 ದಿನಗಳವರೆಗೆ ಜಿಂಕ್ ದ್ರಾವಣ ಕೊಟ್ಟು ಸೂಕ್ತ ಆಹಾರ ಪದಾರ್ಥಗಳನ್ನು ಶಿಶುವಿಗೆ ನೀಡುವ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೀವ್ರತರ ಅತಿಸಾರ ನಿಯಂತ್ರಣ […]

ಶ್ರೀನಿವಾಸಪುರ: ಮಳೆ ಕೊರತೆಯಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ಕೃಷಿ ಹಾಗೂ ಹೈನುಗಾರಿಕೆ ಮೇಲೆ ದುಷ್ಪರಿಣಾಮ ಉಂಟುಮಾಡಿದೆ ಎಂದು ಹೇಳಿದರು.ಸಧ್ಯದ ಪರಿಸ್ಥಿತಿಯಲ್ಲಿ ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜಾನುವಾರು ಮೇವು ಬೆಳೆಯಲು […]

ಕೋಲಾರ, ನ.10: ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಿ ನಾಪತ್ತೆ ಆಗಿರುವ ಡ್ರಗ್ಸ್ ನಿಯಂತ್ರಣಾಧಿಕಾರಿಗಳನ್ನು ಹುಡುಕಿ ಕೊಡಬೇಕಬೇಕೆಂದು ರೈತ ಸಂಘದಿಂದ ಮಾದಕ ವಸ್ತು ನಿಯಂತ್ರಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.9 ತಿಂಗಳು ಹೊಟ್ಟೆಯಲ್ಲಿ ಜೋಪಾನ ಮಾಡಿ ನೋವು ತಡೆದುಕೊಂಡು ಜನ್ಮ ಕೊಟ್ಟ ತಾಯಿ ತನ್ನ ಮಗು ಸಮಾಜಕ್ಕೆ ಉತ್ತಮ ಪ್ರಜೆ ಆಗಲಿ ಎಂಬ ಆಸೆ ಹೊತ್ತಿರುವ ಪೋಷಕರ […]

ಶ್ರೀನಿವಾಸಪುರ: ಪಟ್ಟಣದ ಶ್ರೀ ಬೋಯಿಕೊಂಡ ಗಂಗಮ್ಮ ದೇವಾಲಯ ಸಂತೆ ಮೈದಾನ ಸೇವಾ ಸಮಿತಿ ವತಿಯಿಂದ ಅಮ್ಮನವರ ಉತ್ಸವ ಮೆರವಣಿಗೆ ಹಾಗು ದೀಪೋತ್ಸವ ಕಾರ್ಯಕ್ರಮ ಶ್ರದ್ದಾ ಭಕ್ತಿ ವಿಜೃಂಭಣೆಯಿಂದ ನಡೆಸಲಾಯಿತು.ಪಟ್ಟಣದ ಸಂತೆ ಮೈದಾನದಲ್ಲಿ ನೆಲೆಸಿರುವ ಶ್ರೀ ಬೋಯಿಕೊಂಡ ಗಂಗಮ್ಮ ದೇವಿಗೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಸಾಂಪ್ರದಾಯದಂತೆ ಸೇವಾಸಮಿತಿ ಬಳಗದ ವತಿಯಿಂದ ಪಟ್ಟಣದ ಸಂತೆ ಮೈದಾನ, ಅಂಬೇಡ್ಕರ್ ಪಾಳ್ಯ, ರಥಬೀದಿಗಳಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ತಮಟೆ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸೇವಾಕರ್ತರು ಹೊತ್ತು ಮೆರವಣಿಗೆ ನಡೆಸಲಾಯಿತು.ಜೊತೆಗೆ ಸ್ಥಳೀಯ ಭಕ್ತಾದಿಗಳಿಂದ […]

ಶ್ರೀನಿವಾಸಪುರ ಶಾಲಾ ಕಾಂಪೌಂಡ್ ನರೇಗಾ ಯೋಜನೆ ಅಡಿಯಲ್ಲಿ ಅಂದಾಜು 5ಲಕ್ಷ ಮೌಲ್ಯದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ , ಶಾಲಾ ಜಾಗವನ್ನು ಒತ್ತುವರಿ ಆರೋಪ ಸರ್ವೇ ನಂತರ ಕಾಮಗಾರಿ ಮಾಡಲು ಜೆಡಿಎಸ್ ಕಾರ್ಯಕರ್ತರ ಪಟ್ಟು. ಹಿಡಿದಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಸರ್ವೇ ಮಾಡಿಸದೇ ಕಾಮಗಾರಿ ಮಾಡಲು ಮುಂದಾಗಿದ್ದಾರೆಂದು ಆರೋಪ ಮಾಡಿದ್ದಾರೆ.ಶ್ರೀನಿವಾಸಪುರ ತಾಲೂಕಿನ ಪಾಪಿಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ಸೋಮವಾರ ಸಂಜೆ ಕಾಂಗ್ರೆಸ್ , ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.ಕಾಮಗಾರಿ ನಿರ್ಮಾಣ ವಿಚಾರವಾಗಿ […]

ಶ್ರೀನಿವಾಸಪುರ 2 : ಭಾನುವಾರ ತಾಲೂಕಿನ ಪಾತಪಲ್ಲಿ ಗ್ರಾಮಕ್ಕೆ ಹಾಗೂ ಲಕ್ಷ್ಮೀಸಾಗರ ಕ್ರಾಸ್ ಬಳಿ ಬಿಜೆಪಿ ಪಕ್ಷದವತಿಯಿಂದ ಬರ ಅಧ್ಯಯನ ತಂಡದ ನೇತೃತ್ವದೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು.ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ ಅರಣ್ಯ ರಕ್ಷಾಣಾಧಿಕಾರಿಯನ್ನು ಅತಿ ಶೀಘ್ರವಾಗಿ ವಜಾ ಮಾಡುವಂತೆ ಆಗ್ರಹಿಸಿ, ಮಾನವೀಯತೆ ಇಲ್ಲದೆ, ಮರಗಳನ್ನು ಕಡಿದಿದ್ದು, ಮರಗಳನ್ನು ಕಡಿಯುವ ಅಧಿಕಾರಿ ಯಾರಿಗೂ ಇಲ್ಲ. ಮರಗಳನ್ನು ಕಡಿಯುವ ಅಧಿಕಾರ ಈ ಅರಣ್ಯ ಅಧಿಕಾರಿಗೆ ಯಾರು ಕೊಟ್ಟರು.ಸರ್ಕಾರವೇ ಸ್ವಾತಂತ್ರ ಪೂರ್ವ, ಸ್ವತಂತ್ರ ನಂತರ ಭೂಮಿಯನ್ನು ಸಾಗವಳಿ ಮಾಡಿರುವುದಕ್ಕಾಗಿ […]