ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಸೆಪ್ಟೆಂಬರ್ 17ನೇ ತಾರೀಖಿನಿಂದ ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೂ ಇಡೀ ರಾಷ್ರವ್ಯಾಪ್ತಿಯಲ್ಲಿ ಸ್ವಚ್ಛತಾ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಗಿದೆ ಎಂದು ಯಲ್ದೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಪಿ.ಶ್ರೀನಿವಾಸರೆಡ್ಡಿ ತಿಳಿಸಿದರು. ಯಲ್ದೂರು ಬಸ್ಸುನಿಲ್ದಾಣದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಂಘ ಸಂಸ್ಥೆಗಳ ಸದಸ್ಯರು , ಶಾಲಾ […]
ಶ್ರೀನಿವಾಸಪುರ : ತಾಲೂಕಿನ ಯಲ್ದೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಆದಿನಾರಾಯಣ ಮಾತನಾಡಿ 2023-24ನೇ ಸಾಲಿನಲ್ಲಿ 5.90 ಲಕ್ಷರೂ ವ್ಯಾಪಾರ ಲಾಭ ಮತ್ತು ನಿವ್ವಳ ಲಾಭ 2.06 ಲಕ್ಷರೂ ಬಂದಿದೆ. ಬಂದಿರುವ ಲಾಭಾಂಶದಲ್ಲಿ ಹಾಲು ಉತ್ಪಾದಕರಿಗೆ ಬೋನಸ್ ನೀಡಲಾಗುತ್ತದೆ ಎಂದು ತಿಳಿಸಿದರು. ಕೋಚಿಮುಲ್ ಶ್ರೀನಿವಾಸಪುರದ ವಿಸ್ತರಣಾಧಿಕಾರಿ ಎಸ್. ವಿನಾಯಕ ಮಾತನಾಡಿ ರೈತರು ಡೇರಿಗೆ ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಬೇಕು. ಹಾಲಿನಲ್ಲಿ ಕೊಬ್ಬಿನಾಂಶ […]
2024 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶ್ರೀನಿವಾಸಪುರದ ಎಸ್ ಎಫ್ ಎಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷರಾದ ಬಾಸ್ಕರ್,ಪುರಸಭೆ ಮುಖ್ಯಾಧಿಕಾರಿಗಳಾದ ಸತ್ಯನಾರಾಯಣ, ಎಸ್ ಎಫ್ ಎಸ್ ಶಾಲೆಯ ಪ್ರಾಂಶುಪಾಲರಾದ ಸ್ಯಾಂಟಿ ಕುರಿಯನ್ ಪ್ರಮುಖ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿದರು. ಉದ್ಘಾಟನೆ ನಂತರ ಪುರಸಭೆ ಅಧ್ಯಕ್ಷಕರಾದ ಶ್ರೀಯುತ ಭಾಸ್ಕರ್ ಮಾತನಾಡುತ್ತಾ.. “ಮಕ್ಕಳೆಲ್ಲರು ಗೆಲ್ಲಬೇಕೆಂದು” ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಬಂದಿದ್ದೀರಾ..ಎಲ್ಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಉತ್ತಮವಾಗಿ ಪ್ರದರ್ಶನ ಮಾಡಿ ನಿಮಗೆಲ್ಲ ಒಳ್ಳೆಯದಾಗಲಿ” ಎಂದು ಎಲ್ಲಾ ಮಕ್ಕಳಿಗೆ ಶುಭ […]
ಕೋಲಾರ:- ಸದೃಢ ಆರೋಗ್ಯಕ್ಕಾಗಿ ಮಕ್ಕಳಿಗೆ ಪಠ್ಯದಷ್ಟೇ ಕ್ರೀಡೆಗೂ ಒತ್ತು ನೀಡುವ ಅಗತ್ಯವಿದ್ದು, ವಿದ್ಯಾರ್ಥಿಗಳನ್ನು ಮಾನಸಿಕವಾಗಿಯೂ ಗಟ್ಟಿಗೊಳಿಸಲು ಆಟೋಟಗಳು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯ ಪಟ್ಟರು.ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ 14-17 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೊಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು,ಈ […]
ಶ್ರೀನಿವಾಸಪುರ : ರೈತರು ಬ್ಯಾಂಕಿನಿಂದ ಪಡೆದುಕೊಂಡ ಕೃಷಿ ಸಾಲವನ್ನು ಸಕಾಲಕ್ಕೆ ಪಾವತಿಸಿಸಿದರೆ ಇನ್ನೂ ಹೆಚ್ಚಿನ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ದಿಂಬಾಲ್ ಅಶೋಕ್ ತಿಳಿಸಿದರು.ಅವರು ಬ್ಯಾಂಕಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ, ಈ ಬ್ಯಾಂಕಿನ ಉದ್ದೇಶವೇ ರೈತರ ಕೃಷಿ ಅಭಿವೃದ್ದಿಗೆ ಸಾಲ ನೀಡುವುದು. ವಾಣಿಜ್ಯ ಬ್ಯಾಂಕುಗಳು ರೈತರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಆದರೆ […]
ಕೋಲಾರ : ಕೆಡಿಪಿ ಸಭೆಯು, ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಧ್ಯತೆ ಮೇಲೆ ಚರ್ಚೆ ಆಗಬೇಕು. ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೆರುವುದಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಕಳಕಳಿ ಇರಬೇಕು. ಅಧಿಕಾರಿಗಳು ಜವಾಬ್ದರಿಯಿಂದ ಸಭೆಗೆ ಸರಿಯಾದ ಮಾಹಿತಿ ಮತ್ತು ಉತ್ತರ ನೀಡಬೇಕೆಂದು ಸಚಿವ ಬಿ. ಎಸ್. ಸುರೇಶ್ ಅವರು ಎಚ್ಚರಿಕೆ ನೀಡಿದರು. ಅವರು ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25 ನೇ ಸಾಲಿನ […]
ಶ್ರೀನಿವಾಸಪುರ: ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೇ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಇಒ ಎ.ಎನ್.ರವಿ ಅಭಿಪ್ರಾಯ ಪಟ್ಟರು.ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಾಗು ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಯುವ ಜನತೆಯಲ್ಲಿ ಮಾನಸಿಕ ಹಾಗು ದೈಹಿಕವಾಗಿ ಉತ್ಸಾಹ ತುಂಬಿದರೆ […]
ಶ್ರೀನಿವಾಸಪುರ : ತಾಲೂಕಿನ ಆರಿಕುಂಟೆ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನವಾಣೆಯಲ್ಲಿ ಕಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗ್ರಾಮಪಂಚಾಯಿತಿಗೆ ಸೇರಿದಂತೆ ಒಟ್ಟು 19 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 14, ಕಾಂಗ್ರೆಸ್ ಬೆಂಬಲಿತ 05 ಸದ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ವೆಂಕಟಲಕ್ಷಮ್ಮ ರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನವಾಣೆಯಲ್ಲಿ ಕುಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರವಿಚಂದ್ರ ಮಾಹಿತಿ ನೀಡದರು.ಈ ಸಂದರ್ಭದಲ್ಲಿ ಪಿಡಿಒ ಮಂಗಳಾಂಬ, ಲೆಕ್ಕಪರಿಶೋದಕ ಶ್ರೀನಿವಾಸ್ […]
ಕೋಲಾರ, ಸೆ.17: ಜಿಲ್ಲಾದ್ಯಂತ ಆಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪಿ.ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಿ ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ರೈತ ಸಂಘದಿಂದ ಉಪ ವಿಭಾಗಧಿಕಾರಿ ಡಾ.ಮೈತ್ರಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಸೆ.2 ರಿಂದ ಚಾಲನೆ ಆಗಿರುವ ಕಂದಾಯ ಸಚಿವರ ಪಿ. ನಂಬರ್ ದುರಸ್ತಿ ಆದೇಶ ರೈತರಿಗೆ ಶಾಪವೇ? ವರದಾನವೇ! ಇಲ್ಲವೇ ರೈತರ ಹೆಸರಿನಲ್ಲಿ ಆಕ್ರಮ ದರಕಾಸ್ತ್ ಕಮಿಟಿ ದಾಖಲೆಗಳನ್ನು ಸೃಷ್ಠಿ ಮಾಡಿ ನಕಲಿ ಸಾಗುವಳಿ […]