
ಕೋಲಾರ:- ನಿಯಮಬಾಹಿರವಾಗಿ ಪ್ರಭಾವಿಯೊಬ್ಬರ ಜಮೀನಿಗೆ ದಾರಿ ಮಾಡಿಕೊಡಲು ಆಮಿಷಗಳಿಗೆ ಒಳಗಾಗಿ ಹತ್ತಾರು ಅನ್ನದಾತರು ಬೆವರು ಸುರಿಸಿ ಬೆಳೆದಿದ್ದ ಬೆಳೆಯನ್ನೇ ಜೆಸಿಬಿ ಮೂಲಕ ನಾಶಪಡಿಸಿದ ತಹಸೀಲ್ದಾರ್ ಹರ್ಷವರ್ಧನ್ ವಿರುದ್ದ ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ರೈತರು ಮುಖಂಡ ಸಿ.ಎಂ.ರಮೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಹಸೀಲ್ದಾರ್ ಕಾನೂನುಬಾಹಿರವಾಗಿ ಗ್ರಾಮದಲ್ಲಿ ಸುಮಾರು 60 ವರ್ಷಗಳಿಂದ ಜನರಿಗೆ ಮಂಜೂರು ಆಗಿರುವ ಕಲ್ಲೋಣಿ ಕೆರೆಯ […]

ಶ್ರೀನಿವಾಸಪುರ : ಸರ್ಕಾರ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆ ಮಾಡಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಅಂಬೇಡ್ಕರ್ ಭವನ ,ವಾಲ್ಮೀಕಿ ಭವನಗಳ ಭೂಮಿ ಪೂಜೆ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.2 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು. ಹಾಗು ತಾಲೂಕಿನಾದ್ಯಾಂತ 1ಕೋಟಿ 9.5 ಲಕ್ಷ ವೆಚ್ಚದಲ್ಲಿ 10 ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, 8.5ಲಕ್ಷ ವೆಚ್ಚದಲ್ಲಿ […]

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯ ಮತಗಟ್ಟೆಗಳು ಹಾಗೂ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿರುವ ಮಸ್ಟರಿಂಗ್ ಮತ್ತು ಡಿಮಸ್ಟ್ರಿಂಗ್ ಕೇಂದ್ರಗಳು, ಆರಕ್ಷಕ ವೃತ್ತ ಕಛೇರಿ, ತಹಶೀಲ್ದಾರ್ ಕಚೇರಿ, ಗ್ರಂಥಾಲಯ, ನೂತನ ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂಪಾಷಾ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ನಾರಾಯಣ, ತಹಶೀಲ್ದಾರ್ ಜಿ. ಎನ್ ಸುಧೀಂದ್ರ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಪುರಸಭಾ […]

ಶ್ರೀನಿವಾಸಪುರ : ಪ್ರಧಾನ ಮಂತ್ರಿ ನರೇಂದ್ರ ಮೋದಿರವ ನೇತೃತ್ವದಲ್ಲಿನ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಮಾಹಿತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಲಿದ್ದೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್ ಮಾಹಿತಿ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಗ್ರಾಮ ಮಟ್ಟದಲ್ಲಿ ಬೂತ ಮಟ್ಟದಲ್ಲಿ ಅಧ್ಯಕ್ಷರನ್ನ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. […]

ಶ್ರೀನಿವಾಸಪುರ : ಶ್ರೀನಿವಾಸಪುರ ಕಸಬಾ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸದಸ್ಯರ ಗಮನಕ 2024-25ನೇ ಸಾಲಿನ ಯಶಸ್ವಿನಿ ಯೋಜನೆಯ ಪಲಾನುಭವಿಗಳಾಗಲು ಸಂಘದಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಘದ ಷೇರುದಾರ ಸದಸ್ಯರು ಕುಟುಂಬದ ನಾಲ್ಕ ಮಂದಿಗೆ ಶುಲ್ಕ 500 ರೂಗಳಾಗಿರುತ್ತದೆ. ಒಂದು ಕುಟುಂಬದಲ್ಲಿ 10 ಸದಸ್ಯರಿಗೆ ಮಾತ್ರ ಅವಕಾಶವಿದೆ. ತಲಾ ಎರಡು ಭಾವಚಿತ್ರ, ಆಧಾರ್‌ಕಾರ್ಡ್, ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, 4 ಸದಸ್ಯರಿಗಿಂತ ಹೆಚ್ಚುವರಿ ಸದಸ್ಯರು ಕುಟುಂಬದಲ್ಲಿ ನೊಂದಾಯಿಸಿಕೊಳ್ಳಲು ತಲಾ ಒಬ್ಬೊಬ್ಬರಿಗೆ 100 ರೂಗಳನ್ನು ಹೆಚ್ಟುವರಿಯಾಗಿ ಪಾವತಿಸಿ ಯೋಜನೆಯ […]

ಶ್ರೀನಿವಾಸಪುರ : ತಾಲೂಕಿನಲ್ಲಿ 10 ಲಕ್ಷ ಮೌಲ್ಯದಲ್ಲಿ 20 ಸಮುದಾಯಭವನಗಳನ್ನು ನಿರ್ಮಿಸಲಾಗುವುದು. 2 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಕಾಲೇಜಿಗೆ ಕಾಂಪೌಡ್‍ನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣ ಪದವಿ ಕಾಲೇಜಿನ ಆವರಣದಲ್ಲಿ 1.80 ಕೋಟಿಯಲ್ಲಿ ನೂತನ 3 ಕೊಠಡಿಗಳ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಸರ್ಕಾರವು ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಅಕ್ಷರಸ್ಥನ್ನಾಗಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಉಪಯುಕ್ತ ಯೋಜನೆಗಳ ಮೂಲಕ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದು , ಅವುಗಳನ್ನು ಮಕ್ಕಳ […]

ಶ್ರೀನಿವಾಸಪುರ : ಬಡ ಕುಟುಂಬದ ವತಿಯಿಂದ ಬಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರ ಹಸಿವಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಭಾರತ್ ಅಕ್ಕಿಯನ್ನು 29 ರೂಗೆ ನರೇಂದ್ರ ಮೋದಿರವರು ನೀಡುತ್ತಿದ್ದು, ಈ ಒಂದು ಯೋಜನೆಯನ್ನು ಸದುಪಯೋಗವನ್ನು ಪಡೆಸಿಕೊಳ್ಳುವಂತೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ಹೇಳಿದರು.ಪಟ್ಟಣದ ಬೆಸ್ಕಾಂ ಮುಂಬಾಗದ ಕೊಟೆಕ್ ಬ್ಯಾಂಕ್ ಬಳಿ ಶುಕ್ರವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಭಾರತ್ ಅಕ್ಕಿಯ ಮಾರಾಟಕ್ಕಾಗಿ ಚಾಲನೆ ನೀಡಿ ಮಾತನಾಡಿದರು.ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಕೆಜಿ […]

ಶ್ರೀನಿವಾಸಪುರ : ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ . ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆ ಶುದ್ಧವಾದ ಕುಡಿಯುವ ನೀರನ್ನು ಪಡೆಯುವದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ತಾಲೂಕಿನ ಯಲ್ದೂರು ಗ್ರಾಮದಲ್ಲಿ 264 ಲಕ್ಷ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗಂಗೆ […]

ಶ್ರೀನಿವಾಸಪುರ 1 : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಗುರುವಾರ ವಿವಿಧ ಕನ್ನಡ ಪರ ಸಂಘನೆಗಳಿಂದ 60% ಕನ್ನಡ ಭಾಷೆ ನಾಮಫಲಕಗಳ ಕಡ್ಡಾಯವಾಗಿ ಜಾರಿಗೊಳಿಸುವಂತೆ ಆದೇಶಿಸಲು ತಹಶೀಲ್ದಾರ್ ಜಿ.ಎಸ್.ಸುದೀಂದ್ರ ರವರಿಗೆ ಮನವಿ ಪತ್ರ ನೀಡಿದರು.ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಜಗದೀಶ್ ಮಾತನಾಡಿ ರಾಜ್ಯ ಗಡಿ ತಾಲೂಕು ಆದ ಶ್ರೀನಿವಾಸಪುರ ತಾಲೂಕೆಗೆ ಸಂಬಂದಿಸಿದಂತೆ ಹಲವಾರು ಖಾಸಗಿ ಸಂಸ್ಥೆಗಳು ಹಾಗು ವಾಣಿಜ್ಯ ಮಳಿಗೆಗಳು ಇದ್ದು ಅವುಗಳ ಮೇಲೆ ಕನ್ನಡ ಭಾಷೆ ಬಿಟ್ಟು ಇತರೆ ಭಾಷೆಗಳಲ್ಲಿ ನಾಮಫಲಕಗಳು ಇದ್ದು, ಸರ್ಕಾರದ […]