
ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಸೋಮವಾರ ನವ ಕರ್ನಾಟಕ ವೇದಿಕೆ ಹಾಗು ಇತರೆ ಕನ್ನಡಪರ ಸಂಘನೆಗಳ ವತಿಯಿಂದ ಖಾಸಗಿ ವಲಯಗಳ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ಮತ್ತು ವೃತ್ತಿಪರ ವಿದ್ಯಾಭ್ಯಾಸಕ್ಕೆ ಶೇ.10% ರಷ್ಟು ಶುಲ್ಕ ಹೆಚ್ಚು ಮಾಡಿರುವ ಬಗ್ಗೆ. ಪ್ರತಿಭಟನೆ ನಡೆಸಿ ದಂಡಾಧಿಕಾರಿ ಜಿ.ಎನ್.ಸುದೀಂದ್ರರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ಅದೇ ರೀತಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ವ್ಯಾಪಾರಿಕರಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವೃತ್ತಿಪರ (ಇಂಜಿನಿಯರಿಂಗ್ ಮುಂತಾದ) ಕೋರ್ಸ್‍ಗಳಿಗೆ ಶೇ.10% ರಷ್ಟು ಹೆಚ್ಚಳ ಮಾಡಿದ್ದಲ್ಲದೇ 2024-2025ನೇ […]

ಕೋಲಾರ / ಜುಲೈ 20 : ಶಾಶ್ಚತ ನೀರಾವರಿ ಹೋರಾಟ ಸಮಿತಿ ವತಿಯಿಂದ ಕೋಲಾರ ನಗರದ ನೂತನ ಬಸ್ ನಿಲ್ದಾಣದ ಬಳಿ ಜಿಲ್ಲೆಯ ಶಾಸಕರುಗಳ ಮುಖವಾಡ ಧರಿಸಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ಒತ್ತಾಯಿಸಲಾಯಿತು.ಜಿಲ್ಲೆಯ ಎಲ್ಲಾ ಶಾಸಕರುಗಳಾದ ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ವಿಧಾನಪರಿಷತ್ ಸದಸ್ಯರುಗಳಾದ ನಜೀರ್ ಅಹಮದ್, […]

ಜೀವನದ ಗುರಿಯನ್ನ ಮುಟ್ಟಲು ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನ ಸಾಧಿಸುವಂತೆ ಎಂದು ಎಂ ಶ್ರೀನಿವಾಸನ್ ರವರ ಧರ್ಮಪತ್ನಿ ಶ್ರೀಮತಿ ಡಾ. ಚಂದ್ರಕಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣ ಮಾರುತಿ ಸಭಾಭವನದಲ್ಲಿ ಶನಿವಾರ ಜಿ.ಪಂ ಮಾಜಿ ಅಧ್ಯಕ್ಷ ದಿ|| ಎಂ. ಶ್ರೀನಿವಾಸನ್ ಅಭಿಮಾನಿ ಬಳಗ ಹಾಗೂ ಯುವ ಸೇನೆ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತ್ತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ […]

ಕೋಲಾರ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸಿಎಲ್-7 ಮಳಿಗೆಯ ಅನುಮತಿ ಪಡೆಯಲು ಕನಿಷ್ಠ 80 ರಿಂದ 85 ಲಕ್ಷಗಳ ರೂಪಾಯಿಗಳ ಪ್ಯಾಕೇಜ್ ನೀಡಬೇಕಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಅಬಕಾರಿ ಇಲಾಖೆಯ ವಿರುದ್ದ ಗಂಭೀರ ಆರೋಪ ಮಾಡಿದರು.ಗುರುವಾರ ವಿಧಾನ ಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ 2000 ದಿಂದ 2019 ರವರೆಗಿನ 19 ವರ್ಷಗಳ ಅವಧಿಯಲ್ಲಿ 41 ಸಿಎಲ್-2, ಸಿಎಲ್- ಮದ್ಯದ […]

ಶ್ರೀನಿವಾಸಪುರ : ಬೈಕ್ ಗಳುನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂದಿಸಿ 6 ಬೈಕುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಪೊಲೀಸರು.ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯ ಸಂತೆ ಮೈದಾನದಲ್ಲಿ ರಾಜೇಶ್ ಎನ್ನುವವರಿಗೆ ಸೇರಿದ್ದ ಪಲ್ಸರ್ ಮೋಟಾರ್ ಬೈಕ್ ಬುಧವಾರ ಕಳ್ಳತನವಾಗಿ ಕೂಡಲೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಕಳ್ಳತನ ಪ್ರಕರಣ ವೃತ್ತ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಅವರ ತಂಡ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್.ಬಿ ಮರ‍್ಗರ‍್ಶನದಲ್ಲಿ ಬೈಕುಗಳು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದವರ ಬೆನ್ನು […]

ಕೋಲಾರ,ಜು.18: ಮೌಲ್ಯಯುತ ಬದುಕಿಗೆ ಸ್ಫೂರ್ತಿದಾಯಕವಾದ ಕೃತಿಗಳನ್ನು, ಗ್ರಂಥಗಳನ್ನು ಹಾಗೂ ಪತ್ರಿಕೆಗಳನ್ನು ಓದುವ ಆಸಕ್ತಿ ವೃದ್ಧಿಪಡಿಸುವ ಒಳ್ಳೆಯ ಉದ್ದೇಶದಿಂದ ಮನ್ವಂತರ ಪ್ರಕಾಶನದಿಂದ ಹಮಿಕೊಂಡಿರುವ “ಜ್ಞಾನ ವಿಕಾಸ” ಅಭಿಯಾನ ಪ್ರಶಂಸನೀಯ ಕಾರ್ಯವೆಂದು ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಅವರು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.ಶ್ರೀನಿವಾಸಪುರ ಪಟ್ಟಣದ ಪ್ರಸಿದ್ಧ ಸಂಗೀತ ವಿಧೂಷಿ, ಲೇಖಕಿ ಮಾಯಾ ಬಾಲಚಂದ್ರ ಅವರ ನಿವಾಸದಲ್ಲಿ ಬುಧವಾರ(ಜು/17) ಸಂಜೆ ಹಮ್ಮಿಕೊಂಡಿದ್ದ “ಜ್ಞಾನ ವಿಕಾಸ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಆಸಕ್ತಿ ಕಡಿಮೆ […]

ಕೋಲಾರ : ಚೆನ್ನೈ ಮೈಸೂರು ಚೆನ್ನೈ ಅತಿ ವೇಗದ ರೈಲು ಕಾರಿಡಾರ್ ಯೋಜನೆ, 463.159 ಕಿಲೋ ಮೀಟರ್‌ಗಳ ಪರಮ ಆದ್ಯತೆಯ ಮಹತ್ವದ ಯೋಜನೆಯಾಗಿದ್ದು ಚೆನ್ನೈನಿಂದ ಶುರುವಾಗಲಿದ್ದು, ಚೆನ್ನೈ ಎಕ್ಸ್ ಪ್ರೆಸ್ ನಿಂದ ನಮ್ಮ ಕೋಲಾರಕ್ಕೆ ಯಾವುದೇ ತೊಂದರೆಯಿಲ್ಲದೆ ಬುಲೆಟ್ ರೈಲು ಬರುವುದಕ್ಕೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಣ ಸಭಾಂಗಣದಲ್ಲಿ ನಡೆದ ಮೈಸೂರು ಚೆನ್ನೈ ಹೈ ಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ಪರಿಸರ ಮತ್ತು ಸಾಮಾಜಿಕ ಪರಿಗಣನೆಗಳ ಸಾರ್ವಜನಿಕ ಸಮಾಲೋಚನೆ ಸಭೆಯನ್ನುದ್ದೇಶಿಸಿ […]

ಕೋಲಾರ:- ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ,ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭಾವೈಕ್ಯತೆ ಮೂಡಿಸಿ ಸಂಸ್ಕಾರಯುತ, ದೇಶಭಕ್ತ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಎಂದು ಭಾರತ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷ ಸಿಎಂಆರ್.ಶ್ರೀನಾಥ್ ಶಿಕ್ಷಕರಿಗೆ ಕರೆ ನೀಡಿದರು.ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕುರಿತು […]

ಶ್ರೀನಿವಾಸಪುರ : ಗುರಿವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರುವಿನ ಗುಲಾಮನಾಗಿ, ಗುರುಗಳು ನೀಡುವ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನು ಸಾಧಿಸುವಂತಾಗಬೇಕು ಎಂದು ಶಿಕ್ಷಕಿ ಲಲಿತಾ ಸಲಹೆ ನೀಡಿದರು.ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ 1999-2001 ರ ಬ್ಯಾಚ್‍ನ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾದ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಉಪನ್ಯಾಸಕಿ ಕೆ.ಜೆ.ರುಕ್ಮುಣಿ ಮತನಾಡಿ ಶಿಕ್ಷಕ ಸಮಾಜದ ಶಿಲ್ಪಿಯಾಗಿದ್ದು, ಯಾವುದೇ ಮೋಹ ಅಥವಾ ಬಂಧನಗಳಿಗೊಳಗಾಗದೇ ಸುಂದರ […]