
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು -ಎಸ್.ಸುರೇಶ್ ಕುಮಾರ್ ಕೋಲಾರ ; ಎಸ್.ಎಸ್.ಎಲ್.ಸಿ ಮಕ್ಕಳಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4 ರವೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವರು ಹಾಗೂ ಸಕಾಲ ಸಚಿವರಾದ ಎಸ್ ಸುರೇಶ್ ಕುಮಾರ್ ಅವರು ತಿಳಿಸಿದರು. ಇಂದು ಜಿಲ್ಲಾ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ: ಸಿ.ಎಸ್. ವೆಂಕಟೇಶ್ ಕೋಲಾರ ; ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ ಇದರಿಂದ ಸಕಾಲದಲ್ಲಿ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್. ವೆಂಕಟೇಶ್ ಅವರು ತಿಳಿಸಿದರು. ಇಂದು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ ಕೋವಿಡ್‍ನಿಂದ 5 ಜನ ಗುಣಮುಖರಾಗಿ ಬಿಡುಗಡೆ :ಸಂಸದರಾದ ಎಸ್.ಮುನಿಸ್ವಾಮಿ ಅವರು ಹಣ್ಣು ಹಂಪಲುಗಳನ್ನು ನೀಡಿ ಶುಭ ಹಾರೈಸಿದರು. ಕೋಲಾರ ; ಕೋವಿಡ್-19 ಪಾಸಿಟಿವ್ ಕಂಡುಬಂದು ಚಿಕಿತ್ಸೆ ಪಡೆಯುತ್ತಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಐದು ಜನರು ಗುಣಮುಖರಾಗಿ ಇಂದು ಎಸ್.ಎನ್.ಆರ್. ಆಸ್ಪತ್ರೆಯಿಂದ ಬಿಡುಗಡೆಯಾದರು. ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಹೆಚ್.ನಾಗೇಶ್ ಹಾಗೂ ಸಂಸದರಾದ ಎಸ್.ಮುನಿಸ್ವಾಮಿ ಅವರು ಹಣ್ಣು ಹಂಪಲುಗಳನ್ನು ನೀಡಿ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೆ.ಸಿ.ವ್ಯಾಲಿ ನೀರು ಕೋಲಾರದ ಕೆರೆಗಳಿಗೆ ಹರಿಸುವ ಮೊದಲು ಮುಂಜಾಗ್ರತಾ ಕ್ರಮ ಅಗತ್ಯ – ಎಸ್.ಆರ್.ಮುರಳಿಗೌಡ ಕೋಲಾರ ಮೇ 29: ಕೋಲಾರ ನಗರದ ಕುಡಿಯುವ ನೀರಿನ ಮೂಲವಾದ ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಮತ್ತು ಕೋಲಾರಮ್ಮ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುವ ಮೊದಲು ಕೆರೆಗಳಲ್ಲಿರುವ ಕೊಳವೆ ಬಾವಿಗಳ ಸುತ್ತ ಕಟ್ಟೆಕಟ್ಟಿ, ಅನುಪಯುತ್ತ ಕೊಳವೆಬಾವಿಗಳಿಗೆ ಮರಳು ತುಂಬಿಸುವ ಕೆಲಸವಾಗಬೇಕೆಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣು ಬೆಳೆಸಿ ಮಾದರಿಯಾದ ರೈತ ಇತ್ತೀಚಿನ ದಿನಗಳಲ್ಲಿ ಸ್ಥಳದ ಅಭಾವದಿಂದ ಕೈತೋಟ ಮಾಡುವುದು ಕಡಿಮೆಯಾಗಿದ್ದು ತಾರಸಿ ತೋಟಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ತಾರಸಿ ತೋಟಕ್ಕೆ ಹೆಚ್ಚಿನ ಮನ್ನಣೆ ಇದೆ. ತಾರಸಿ ತೋಟ ಮಾಡುವುದರಿಂದ ಒಂದು ಕುಟುಂಬಕ್ಕೆ ಬೇಕಾದಷ್ಟು ತರಕಾರಿಗಳನ್ನು ತಾವೇ ಬೆಳೆದುಕೊಂಡು ಗುಣಮಟ್ಟದ ಬೆಳೆಯಿಂದ ಅಪೌಷ್ಟಿಕತೆಯನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಬೇತಮಂಗಲ : ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣವು ದಾಖಲಾಗಿದೆ. ಬೇತಮಂಗಲ ಹೋಬಳಿ ಬರ್ಲಿ ಗ್ರಾಮದ ವಿಮಲ ಎಂಬಾಕೆಯು ರವಿ ಎಂಬುವರನ್ನು 2013ನೇ ಸಾಲಿನಲ್ಲಿ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಮದುವೆಯ ಸಂದರ್ಭದಲ್ಲಿ ತವರು ಮನೆಯವರು ನೀಡಿದ್ದ ವರದಕ್ಷಿಣೆಯು ಸಾಲದೆಂದು, […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೆಜಿಎಫ್ : ರಸ್ತೆ ಅಪಘಾತ, ಓರ್ವ ವೃದ್ದನ ಸಾವು ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಂಭವಿಸಿದ ರಸ್ತೆ ಆಕಸ್ಮಿಕದಲ್ಲಿ ಓರ್ವ ವೃದ್ದನು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೇತಮಂಗಲ ಸಮೀಪದ ವೆಂಕಟಾಪುರ ಗ್ರಾಮದ ಮುನಿಯಪ್ಪ (67) ಎಂಬುವರು ಗುಟ್ಟಹಳ್ಳಿ – ಮುಳಬಾಗಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ಅಪರಿಚಿತ ವಾಹನವು ಢಿಕ್ಕಿ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೆಜಿಎಫ್ : ಆರೋಪಿಯ ಬಂಧನ, ಕಳವು ಮಾಲು ವಶ ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಮಾರಿಕುಪ್ಪಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿ, ರೂ: 3.15 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ. ವಿಲೇಜ್ ಮಾರಿಕುಪ್ಪಂನಲ್ಲಿ ಆರ್. ಮೂರ್ತಿ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಶಾಘನೀಯವಾಗಿದೆ :ತಹಸೀಲ್ದಾರ್ ಎಸ್.ಎಂ. ಶ್ರೀನಿವಾಸ್ ಶ್ರೀನಿವಾಸಪುರ: ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಶಾಘನೀಯವಾಗಿದೆ ಎಂದು ತಹಸೀಲ್ದಾರ್ ಎಸ್.ಎಂ. ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಸರ್ಕಾರಿ ನೌಕರರ ಭವನದ ಬಳಿ ತಾಲ್ಲೂಕಿನಸುಮಾರು 180 ಆಶಾ ಕಾರ್ಯಕರ್ತರಿಗೆ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆವತಿಯಿಂದ ಆಹಾರ ಕಿಟ್ಟನ್ನು ವಿತರಿಸಿ ಮಾತನಾಡಿದ ಎಸ್‍ಎಂ. ಶ್ರೀನಿವಾಸ್, […]