
ಕೋಲಾರ : ಜಗತ್ತನ್ನು ಆವರಿಸಿರುವ ಕರೋನಾವನ್ನು ನಿರ್ಮೂಲನೆ ಮಾಡಲು ಕರೋನಾ ವಾರಿಯರ್ ಸೇವೆ ಅತ್ಯಗತ್ಯವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು . ಇಂದು ವಾರ್ತಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕರೋನಾ ವಾರಿಯರ್ಸ್ರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಕೊವಿಡ್ -19 ಸಂದರ್ಭದಲ್ಲಿ ವಾರ್ತಾ ಇಲಾಖೆ , […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಗಣೇಶ ಚತುರ್ಥಿಯನ್ನು ಎಚ್ಚರಿಕೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಸಾದ್ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿನಾಯಕ ಚತುರ್ಥಿ ಆಚರಣೆ ಸಂಬಂಧ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಮಾತನಾಡಿ, ಕೊರೊನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ವಿನಾಯಕ ವಿಗ್ರಹ ಮೆರವಣಿಗೆ ಮಾಡುವಂತಿಲ್ಲ. ಪೂಜಾ ಕಾರ್ಯ ನೆರವೇರಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿರಬೇಕು ಎಂದು ಹೇಳಿದರು. ಸರ್ಕಾರದ ಹೊಸ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಸಾರ್ವಜನಿಕ ಗಣೇಶೋತ್ಸವಕ್ಕೆ ನಗರಸಭೆ ಪೂರ್ವಾನುಮತಿ ಪಡೆದಿರಬೇಕು ಮತ್ತು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ನಗರದ 8 ಮತ್ತು 9ನೇ ವಾರ್ಡಿನ ನಾಗರೀಕರಿಗೆ ನೋಡಲ್ ಅಧಿಕಾರಿಗಳಾದ ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಹಾಗೂ ಕೆ.ಎನ್.ಮಂಜುನಾಥ್ ಅರಿವು ಮೂಡಿಸಿದರು.ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಗರದ 8 ಮತ್ತು 9ನೇ ವಾರ್ಡಿನ ವಿವಿಧೆಡೆ ಸಂಚಾರ ನಡೆಸಿ ಕೋವಿಡ್ ಮಾರ್ಗಸೂಚಿ ಕುರಿತು ಅರಿವು ಮೂಡಿಸಿದ ಡಿಡಿಪಿಐ ಜಯರಾಂರೆಡ್ಡಿ, ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಬೇಕಾದಲ್ಲಿ ಇರುವ ನಿಯಮಗಳ ಕುರಿತು ಅರಿವು ಮೂಡಿಸಿದರು. […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕು ಕೋನೇಟಿ ತಿಮ್ಮನಹಳ್ಳಿಯ ಸಿ.ಶ್ರಾವಣಿ ಎಸ್ ಎಸ್ ಎಲ್ ಸಿಯಲ್ಲಿ ಸ.ಶಾಲೆಗಳಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ಶ್ರೀನಿವಾಸಪುರ ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ವಿದ್ಯಾರ್ಥಿನಿ ಸ್ವಗ್ರಾಮದಲ್ಲಿ ಅವರ ಮನೆಯಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸ.ನೌ.ಸಂ.ಅಧ್ಯಕ್ಷ ಎಂ.ನಾಗರಾಜ್, ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಬೈಚೇಗೌಡ, ಪ್ರಾ.ಶಿ.ಸಂ.ಮಾಜಿ ಅಧ್ಯಕ್ಷ ಡಾ.ಆರ್.ರವಿಕುಮಾರ್, ಗ್ರಾ.ಪಂ. ಮಾಜಿ.ಸದಸ್ಯ ಗುರ್ರಪ್ಪ, ರೈತ ಸಂ.ಹಾಗು ಹ.ಸೇ.ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಪ್ಪ ,ಶಿಕ್ಷಕ ಮುನಿಶಾಮಿ.ಶ್ರೀನಿವಾಸಮೂರ್ತಿ, […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಮನ್ವಂತರ ಪ್ರಕಾಶನ,ಮನ್ವಂತರ ಜನಸೇವಾ ಟ್ರಸ್ಟ್ ಕವಿನಮನದ ಮೂಲಕ ನನಗೆನೀಡಿರುವ ಈ ಗೌರವವನ್ನು ಕವಿ ಹಾಗೂ ಲೇಖಕ ಸಮುದಾಯಕ್ಕೆ ಸಮರ್ಪಿಸುತ್ತೇನೆ ಎಂದು ಕವಿ,ಲೇಖಕ ಆರ್.ಚೌಡರೆಡ್ಡಿ ತಿಳಿಸಿದರು.ನಗರದ ಕೆಇಬಿ ಸಮುದಾಯ ಭವನದಲ್ಲಿ ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ನ ಕವಿನಮನ-2020 ಕಾರ್ಯಕ್ರಮದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.ಕವಿನಮನ ಕಾಯಕ್ರಮ ಕವಿ ಸಮುದಾಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಈ ಗೌರವವನ್ನು ಕವಿಗಳಿಗೆ ಸಮರ್ಪಿಸಿದ್ದೇನೆ, ನಾನು ಬರೆದ ಕವಿತೆ, ಸಾಹಿತ್ಯಗಳನ್ನು 6 ವರ್ಷದ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶುಂಠಿ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಪಂಚದಲ್ಲೆ ಭಾರತದಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತದೆ. ಈ ಬೆಳೆಯಿಂದ ಹೆಚ್ಚಿನ ಲಾಭ ಗಳಿಸುತ್ತಿರುವದರಿಂದ ರೈತರು ಈ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ‘ವೈಜ್ಞಾನಿಕ ಶುಂಠಿ ಬೇಸಾಯ ಕ್ರಮಗಳು’ ಎಂಬ ಅಂತರ್ಜಾಲ ತರಬೇತಿ ಕಾರ್ಯಕ್ರಮವನ್ನು ದಿ: 17.08.2020 ರಂದು ಹಮ್ಮಿಕೊಂಡಿತ್ತು.ಪ್ರಾರಂಭದಲ್ಲಿ ಡಾ. ಜ್ಯೋತಿ ಕಟ್ಟೇಗೌಡರ, ವಿಜ್ಞಾನಿ (ತೋಟಗಾರಿಕೆ) ರವರು ಮಾತನಾಡಿ ಮುಖ್ಯವಾಗಿ ಸುಧಾರಿತ ತಳಿಗಳು ಬಿತ್ತನೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಗದ ಹೊರತು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಬುಡಮೇಲು ಮಾಡುವ ಶಕ್ತಿಗಳು ಇವೆ. ಆ ಶಕ್ತಿಗಳು ಸಂವಿಧಾನದ ಮೂಲ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಬೆಂಗಳೂರಿನ ದೇವರ ಜೀವನಹಳ್ಳಿ ( ಡಿ.ಜೆ.ಹಳ್ಳಿ ) ಮತ್ತು ಕೆ.ಜಿ.ಹಳ್ಳಿ ( ಕಾಡುಗೊಂಡಹಳ್ಳಿ ) ಘಟನೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿ , ವಾಹನ ಜಖಂ ಮಾಡಿರುವುದನ್ನು ಖಂಡಿಸಿ ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪಟ್ಟಣದ ತಾಲೂಕು ಕಚೇರಿಗೆ ತೆರಳಿ ,ತಹಶೀಲ್ದಾರ್ ಶ್ರೀನಿವಾಸ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು . ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್ ಚಂದ್ರಶೇಖರ, ಮಂಗಳವಾರ ರಾತ್ರಿ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ, ಜಿಲ್ಲೆಯಲ್ಲಿ ಮೊದಲ ಸ್ಥಾನ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಶ್ರೀನಿವಾಸಪುರ:ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಶ್ರೀನಿವಾಸಪುರ 8ನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದು ತಾಲ್ಲೂಕಿಗೆ ಶೇಕಡಾ 95 ರಷ್ಟು ಫಲಿತಾಂಶ ದೊರೆತಿರುವುದು ಸಂತೋಷದ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಗಳಾದ ಉಮಾದೇವಿ ತಿಳಿಸಿದರು. ಪಟ್ಟಣದ ಬಿ.ಆರ್.ಸಿ. ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು […]