
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ವಿಮೆ ಮಾಡಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ಪಟ್ಟಣದ ಕೋಚಿಮುಲ್ ಕ್ಯಾಂಪ್ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಆಕಸ್ಮಿಕವಾಗಿ ಹಸು ಮರಣಹೊಂದಿದ್ದ ಹಾಲು ಉತ್ಪಾದಕರಿಗೆ ವಿಮಾ ಹಣದ ಚೆಕ್ ವಿತರಿಸಿ ಮಾತನಾಡಿ, ವಿವಿಧ ಕಾರಣಗಳಿಂದ ಹಸು ಮರಣ ಹೊಂದಿದ್ದ ಹಾಲು ಉತ್ಪಾದಕರಿಗೆ ರೂ.6 ಲಕ್ಷ ವಿಮಾ ಹಣ ವಿತರಿಸಲಾಗಿದೆ ಎಂದು ಹೇಳಿದರು. ಪ್ರಸಕ್ತ ಸಾಲಿನ ಮಾರ್ಚ್ನಿಂದ ಜುಲೈ ವರೆಗೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಮತ್ತು ತೋಟಗಾರಿಕೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 09.09.2020 ರಂದು “ಟೊಮ್ಯಾಟೊ ಬೆಳೆಯಲ್ಲಿ ಊಜಿನೊಣ (ಸೌತ್ ಅಮೆರಿಕನ್ ಪಿನ್ ವಾರ್ಮ್) ದ ಸಮಗ್ರ ನಿರ್ವಹಣೆ” ಬಗ್ಗೆ ಹಮ್ಮಿಕೊಂಡಿದ್ದ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರಿನ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ವಿ. ಶ್ರೀಧರ್, ಪ್ರಧಾನ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಟೊಮ್ಯಾಟೊದಲ್ಲಿ ಇತ್ತೀಚಿಗೆ 4-5 ವರ್ಷಗಳಿಂದ ಟೂಟಾದ/ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕಲಾವಿದರು ಪ್ರೋತ್ಸಾಹದ ಕೊರತೆಯಿಂದಾಗಿ ಹಿಂದುಳಿದಿದ್ದಾರೆ. ಅವಕಾಶ ವಂಚಿತರಾಗಿ ಕೈ ಕೊಟ್ಟಿ ಕುಳಿತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಚಲನ ಚಿತ್ರ ನಿರ್ದೇಶಕ ನಿಶಾಂತ್ ಹೇಳಿದರು. ತಾಲ್ಲೂಕಿನ ವೈ.ಹೊಸಕೋಟೆ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಚಲನ ಚಿತ್ರವೊಂದರ ಹಾಡಿನ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಕೇರ್ ಆಫ್ ಫಿಲಿಂಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ಕಲ್ಪಿಸಲು ಮುಂದಾಗಿದೆ. ಸೂಕ್ತ ತರಬೇತಿ ನೀಡಿದ ಬಳಿಕ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ವಿದ್ಯಾರ್ಥಿಗಳು ಉತ್ತಮ ಅಂಕಗಳು ಗಳಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ವಿ.ಸೋಮಶೇಖರ್ ತಿಳಿಸಿದರು.ಪಟ್ಟಣದ ಕನಕ ಮಂದಿರದಲ್ಲಿ ಸ್ನೇಹ ಸಂಗಮ ಟ್ರಸ್ಟ್ (ರಿ) ವತಿಯಿಂದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪ್ರತಿಭ್ವಾನಿತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋಮಶೇಖರ್ ನಮ್ಮ ಜಿಲ್ಲೆಗೆ ಯಾವುದೇ ಶಾಶ್ವತ ನೀರಾವರಿ ಮೂಲ ಇಲ್ಲ, ಆದರೂ ನಮ್ಮ ಜಿಲ್ಲೆಯು ಶೈಕ್ಷಣಿಕವಾಗಿ ಮುಂದುವರಿದೆ ಶಿಕ್ಷಣವೇ ನಮಗೆ ಆಧಾರವಾಗಿದ್ದು, […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಟೊಮ್ಯಾಟೊ ಬೆಳೆಯಲ್ಲಿ ಇತ್ತೀಚೆಗೆ ಊಜಿನೋಣ (ಸೌತ ಅಮೇರಿಕನ್ ಪಿನವರ್ಮ) ಭಾದೆ ಹೆಚ್ಚಾಗಿದ್ದು ಟೂಟಾಮೋಹಕ ಬಲೆಯನ್ನು ಉಪಯೋಗಿಸುವುದರಿಂದ ಊಜಿನೋಣದ ಭಾದೆ ಕಡಿಮೆ ಮಾಡಿ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಅಂಬಿಕಾ ಡಿ.ಎಸ್ ತಿಳಿಸಿದರು. ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ತಿಮ್ಮಸಂದ್ರ ಗ್ರಾಮದಲ್ಲಿ ಟೂಟಾ ಮೋಹಕಬಲೆಯನ್ನು ಅಳವಡಿಸಿಕೊಳ್ಳುವಿಕೆಯನ್ನು ಪ್ರಾತ್ಯೆಕ್ಷಿಕೆಯ ಮೂಲಕ ಗ್ರಾಮದ ರೈತರಿಗೆ ತಿಳಿಸಿದರು. ಅಲ್ಲದೇ ರೈತರು ಕೀಟ ಮತ್ತು […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಯಲ್ಪಾಡು 4: ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಸಾವಿತ್ರಿಬಾಯಿ ಪುಲೆ ಬದ್ದವಾಗಿ ನಂಬಿದ್ದರು ಎಂದು ಸಾವಿತ್ರಿಬಾಯಿ ಪುಲೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಮತ ಹೇಳಿದರು.ಮುದಿಮಡುಗು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಸಂಘ(ರಿ) ಧಾರವಾಡ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಿಗೆ ಸನ್ಮಾನಿಸಿ ಮಾತನಾಡಿದರು.ದೇಶದಲ್ಲಿ ಮೊದಲನೇ ಮಹಿಳಾ ಶಿಕ್ಷಕಿಯಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕಾಂತ್ರಿ ಮಾಡಿದ್ದಾರೆ . ಅಲ್ಲಿನ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಯಲ್ಪಾಡು 1 : ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಮುಖ್ಯ ಹಾಗೂ ಶ್ರೇಷ್ಠವಾದದ್ದು, ಶಿಕ್ಷಕನು ವಿದ್ಯಾರ್ಥಿಯ ಮನಸ್ಸಿನಲ್ಲಿ ಕಲಿಕೆಯ ಉತ್ಸಾಹ, ಜ್ಞಾನದ ಹಸಿವನ್ನು ಮೂಡಿಸಿ , ಸಚ್ಚಾರಿತ್ರ್ಯವಂತರಾಗಿಸಿ , ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಮೂಲ್ಯವಾದದು ಎಂದು ಪ್ರಾಂಶುಪಾಲ ವಿ.ವೆಂಕಟರಮಣ ತಿಳಿಸಿದರು.ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ , ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯ ಸರಳ ಸಮಾರಂಭದಲ್ಲಿ ಮಾತನಾಡಿದರು .ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಭವ್ಯ ಭಾರತ ನಿರ್ಮಾಣಕ್ಕೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಗುರು ಶಿಷ್ಯ ಸಂಬಂಧ ಮುಂದುವರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಸಮುದಾಯ ಸಮಾಜಕ್ಕೆ ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು. ಜ್ಞಾನಾರ್ಜನೆಗೆ ಶಿಕ್ಷಕರು ಪ್ರೇರಣ ಶಕ್ತಿಯಾಗಬೇಕು. ಎಲ್ಲ ಶಿಕ್ಷಕರಿಗೂ ಸಮಾನ ಗೌರವ ಪ್ರಾಪ್ತವಾಗಬೇಕು. ಶಿಕ್ಷಕರನ್ನು […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಯಲ್ಪಾಡು 2 : ಗೌನಿಪಲ್ಲಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಗೌನಿಪಲ್ಲಿ – ರಾಯಲ್ಪಾಡು ರಸ್ತೆ ಎರಡು ಬದಿಯಲ್ಲಿರುವ ಪುಟ್ ಪಾತ್ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಮುಂಬಾಗ ಛಾವಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಯಶ್ವಸಿಯಾಗಿ ನಡೆಯಿತು.ಈ ಪುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಲು ಹಲವು ವರ್ಷಗಳಿಂದ ತಕರಾರು ನಡೆಯುತ್ತಿತ್ತು ಇದರಲ್ಲಿ ರಾಜಕೀಯ ಹಸ್ತಕ್ಷೇಪವು ಬಳಕೆ ಮಾಡಿಕೊಂಡು ಕಾಲಕಳೆಯುತ್ತಿದ್ದರು. ಇದರಿಂದ ಸಾರ್ವಜನಿಕರು ಓಡಾಡಲು ಕಿರಿಕರಿ ಉಂಟು ಮಾಡಿದೆ ಎಂದು ದೂರುಗಳು ಗ್ರಾಮಪಂಚಾಯಿತಿ , ಲೋಕೋಪಯೋಗಿ ಹಾಗೂ ಪೊಲೀಸ್ […]