
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 2020 – 22 ನೇ ಸಾಲಿನ ಅಧ್ಯಕ್ಷರಾಗಿ ಬೆಳ್ವೆ ವಲಯದ ಪ್ರಗತಿಪರ ಕೃಷಿಕ, ಹೈನುಗಾರ ಅನಂತಪದ್ಮನಾಭ ಬಾಯಿರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ನಡೆದ ಪರಿಷತ್ ನ 26 ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಐತಾಳ್ ಕಿರಿಮಂಜೇಶ್ವರ ಹಾಗೂ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ರಾಯಲ್ಪಾಡ್ ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಚಿಕಿತ್ಸಾಲಯಗಳಿಗೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬೀಗ ಮುದ್ರೆ ಹಾಕಿ, ಚಿಕಿತ್ಸಾಲಯ ನಡೆಸಲು ಹೊಂದಿರುವ ದಾಖಲೆಗಳೊಂದಿಗೆ ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಭೇಟಿಯಾಗುವಂತೆ ಸೂಚಿಸಿ ಬಾಗಿಲಿಗೆ ನೋಟಿಸ್ ಅಂಟಿಸಿದರು.ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅನಧಿಕೃತ ಚಿಕಿತ್ಸಾಲಯಗಳಿಗೆ ಬೀಗ ಮುದ್ರೆ ಹಾಕಿ, ವೈದ್ಯಕೀಯ ಸೇವೆ ನಡೆಸಲು ತಮ್ಮ ಬಳಿ ಇರುವ ದಾಖಲೆಗಳನ್ನು […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ನ.5: – ಕೊವೀಡ್-19 ಸೊಂಕು ಹರಡದಂತೆ ಮುಂಜಾಗೃತ ಕ್ರಮಗಳ ಕುರಿತು ಮಾದ್ಯಮಗಳು ವಾರಿಯರ್ಸ್ ಮಾದರಿಯಲ್ಲಿ ದಿನದ 24 ಗಂಟೆಗಳು ಶ್ರಮಿಸುವ ಮೂಲಕ ಸೊಂಕನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಕಾಯ್ನಿರತ ಪತ್ರಕರ್ತರ ಸಂಘ, ಬಂಗಾರಪೇಟೆಯ ಚಿಗುರು ಟ್ರಸ್ಟ್ ಮತ್ತು ಬೆಂಗಳೂರಿನ ಕ್ರೈ ಸಂಸ್ಥೆಯ ಸಂಯುಕ್ತಾಶ್ರದಲ್ಲಿ ನಗರದ ಕೋವಿಡ್ ವಾರಿಯರ್ಸ್ ಪತ್ರಕರ್ತರಿಗೆ ಮಾಸ್ಕ್ ಹಾಗೂ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ಸುಲಭ ಕಲಿಕೆಗೆ ಪೂರಕವಾಗಿ ಬದಲಾಗಲು ಶಿಕ್ಷಕರಿಗೆ ತರಬೇತಿ ಅಗತ್ಯ ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರೂ ಆದ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.ಗುರುವಾರ ನಗರದ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಾಗಾರ (ಟಾಲ್ಪ್)ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಬೋಧನೆ ಪರಿಣಾಮಕಾರಿಯಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತಕ್ಕಂತೆ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಕೇಂದ್ರ ಅಧ್ಯಯನ ತಂಡ ಬುಧವಾರ ತಾಲ್ಲೂಕಿಗೆ ಭೇಟಿ ನೀಡಿ ವಿವಿಧ ಯೋಜನೆಗಳಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗರಿಗಳ ಪ್ರಗತಿ ಪರಿಶೀಲನೆ ನಡೆಸಿತು. ದೆಹಲಿಯಿಂದ ಆಗಮಿಸಿದ್ದ ಅಧ್ಯಯನ ತಂಡದ ನೇತೃತ್ವವನ್ನು ಮಹಾರಾಷ್ಟ್ರದ ಗಾಯಕ್ವಾಡ್ವಹಿಸಿದ್ದರು. ವಿನಾಯಕ ಘಾಡೆ ತಂಡದ ಉಪ ಮುಖ್ಯಸ್ಥರಾಗಿದ್ದರು. ತಂಡದ ಸದಸ್ಯರು ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಕೃಷಿ, ಸ್ವಚ್ಛ ಭಾರತ್ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ ನ.04 : ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ರಾಯಚೂರು ಚಿತ್ರದುರ್ಗ ಜಿಲ್ಲೆ ಕಡೆ ಫ್ಯಾನ್ ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುತ್ತಾರೆ. ಸೂರ್ಯನ ಬೆಳಕಿನಿಂದ ಸೋಲಾರ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತಿದ್ದು, ಸಾಧಾರಣ ಬಲ್ಬ್ಗಳ ಬಳಕೆ ಬೇಡ, ಪ್ರತಿಯೊಬ್ಬರು ಕಡಿಮೆ ಹಣದಿಂದ ಸೋಲಾರ್ ಹಾಕಿಸಿಕೊಳ್ಳಿ ಅಥವಾ ಎಲ್.ಇ.ಡಿ ಲೈಟ್ ಗಳನ್ನು ಹಾಕಿಸಿಕೊಂಡು ವಿದ್ಯುತ್ ಉಳಿತಾಯ ಮಾಡಿ ಇದರಿಂದ ಹಣವೂ ಉಳಿತಾಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಎಸ್. ಎಚ್ .ಚೌಡಪ್ಪ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕು ನರೇಗಾ ಯೋಜನೆ ಅನುಷ್ಠಾನದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೋಲಾರ ಜಿಲ್ಲೆ, ರಾಜ್ಯದಲ್ಲಿ 15ನೇ ಸ್ಥಾನದಲ್ಲಿತ್ತು. ಆದರೆ ಈಗ 12ನೇ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಸಂಚಾರಿ ಆರೋಗ್ಯ ವಾಹನ ಸೇವೆ ಆರಂಭಿಸಿ, ಪ್ರತಿ ಪಂಚಾಯಿತಿಗೊಂದು ಫೀವರ್ ಕ್ಲಿನಿಕ್ ತೆರೆಯಬೇಕೆಂದು ಒತ್ತಾಯಿಸಿ ರೈತಸಂಘದಿಂದ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ ವೈರಸ್ ನೆಪದಲ್ಲಿ ಎಗ್ಗಿಲ್ಲದೆ ನಾಯಿಕೊಡೆಗಳಂತೆ ಸುಮಾರು 336 ನಕಲಿ ಕ್ಲಿನಿಕ್ಗಳು ಆರಂಭವಾಗಿದ್ದು, ಅವರನ್ನು ಕೇಳುವವರೇ ಇಲ್ಲದಾಗಿದೆ. ವಿಧಿ ಇಲ್ಲ ಎನ್ನುವಂತೆ ಆ ಭಾಗಗಳ ಗ್ರಾಮೀಣ ಜನರು ನಕಲಿ ಕ್ಲಿನಿಕ್ಗಳ ಮೊರೆ ಹೋಗಿ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ.ನ.3: ದಿನಾಂಕ : 6-11-2020 ರಿಂದ 8-11-2020 ರ ವರೆಗೂ 14 ವರ್ಷ 16,18,20 ವರ್ಷ ವಯೋ ಮಿತಿಯ ಕರ್ನಾಟಕ ರಾಜ್ಯದಿಂದ ಸೌತ್ ಜೋನ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲು ಕರ್ನಾಟಕ ಅಥ್ಲೆಟಿಕ್ ಅಸೋಷಿಯೇಷನ್ ರವರು ನಮ್ಮ ಜಿಲ್ಲೆಯಲ್ಲಿ ಆಯೋಜಿಸಲು ಅನುಮತಿಯನ್ನು ನೀಡಿದ್ದು, ಅದರಂತೆ ಮೇಲ್ಕಂಡ ದಿನಾಂಕದಲ್ಲಿ ಕ್ರೀಡಾಕೂಟವನ್ನು ನಡೆಸಬೇಕಾಗಿತ್ತು.ಆದರೆ ಕೋವಿಡ್ 19 ಪುದುಚೆರಿಯಲ್ಲಿ ಹೆಚ್ಚಾಗಿ ಇರುವ ಕಾರಣ ನ್ಯಾಷನಲ್ ಸೌತ್ ಜೋನ್ ಕ್ರೀಡಾಕೂಟವನ್ನು ಪುಧುಚೇರಿ ರಾಜ್ಯದ ಅಥ್ಲೆಟಿಕ್ ಅಸೋಷಿಯೇಷನ್ ರವರು ಈ […]