
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಇಲ್ಲಿನ ಇಂದಿರಾ ಕ್ಯಾಂಟೀನ್‍ನಲ್ಲಿ ನಿರಾಶ್ರಿತರಿಗೆ, ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿರಿಸಲಾಯಿತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನ ಕೋವಿಡ್ ನಿಯಮಾನುಸಾರ ಸಾಲಿನಲ್ಲಿ ನಿಂತು ಆಹಾರದ ಪೊಟ್ಟಣ ಪಡೆದುಕೊಂಡರು.ಕ್ಯಾಂಟೀನ್‍ನಲ್ಲಿ ಆಹಾರದ ಪೊಟ್ಟಣ ಪಡೆದವರು ಸಮೀಪದ ಮರದ ಕೆಳಗೆ ಕೋವಿಡ್ ನಿಯಮಾನುಸಾರ ದೂರ ದೂರ ಕುಳಿತು, ಆಹಾರ ಸೇವಿಸಿದರು. ಸ್ಥಳೀಯರು ತಾವು ಪಡೆದುಕೊಂಡ ಪೊಟ್ಟಣಗಳನ್ನು ಮನೆಗಳಿಗೆ ಕೊಂಡೊಯ್ದರು.ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸಿಇಒ […]

JANANUDI.COM NETWORK ಕೋಲಾರ,ಮೇ.12: ಶ್ರೀ ದೇವರಾಜ್ ಅರಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ನರ್ಸಿಂಗ್ ಸರ್ವಿಸ್ ಡಿಪಾರ್ಟಮೆಂಟ್ ಆರ್ ಎಲ್ ಜೆ ಹೆಜ್ & ಆರ್ ಸಿ ಸಹಕಾರದೊಂದಿಗೆ ಮೇ 12 ರಂದು ಬೆಳಿಗ್ಗೆ 9.30 ಕ್ಕೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸಲಾಯಿತು.ಈ ದಿನದಂದು ಕೋವಿಡ್ – 19 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸ್ಕ್ ಮತ್ತು ಕೋವಿಡ್ -19 ಆರೋಗ್ಯ ಮಾಹಿತಿ ಕರ ಪತ್ರವನ್ನು ಎಲ್ಲಾ ರೋಗಿಗಳಿಗೆ ಮತ್ತು ಆರೈಕೆ ನೀಡುವವರಿಗೆ ಆರ್ ಎಲ್ ಜೆ […]

JANANUDI.COM NETWORK ಶ್ರೀನಿವಾಸಪುರ:ಕರೋನ ಸೋಂಕು ತಡೆಯಲು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ವಲಯಅರಣ್ಯಾಧಿಕಾರಿ ಸುರೇಶ್ ಬಾಬು ತಿಳಿಸಿದರು.ಪಟ್ಟಣದಅರಣ್ಯಇಲಾಖೆಯಕಚೇರಿಯಆವರಣದಲ್ಲಿ ಕೋ-ವ್ಯಾಕ್ಸಿನ್ ಲಸಿಕೆ ನೀಡಲು ಚಾಲನೆ ನೀಡಿ ಮಾತನಾಡಿದ ಸುರೇಶ್ ಬಾಬು, ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಭಯ ಬೇಡ, ಇದರಿಂದತೊಂದರೆಉಂಟಾಗುವುದಿಲ್ಲ. ಇಡೀದೇಶವನ್ನು ಮಾರಕವಾಗಿಕಾಡುತ್ತಿರುವಕರೋನ ಸೋಂಕನ್ನುದೇಶದಿಂದಇಮ್ಮೆಟ್ಟಿಸಲು ಪ್ರತಿಯೊಬ್ಬರೂಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.ಮೊದಲು ಹಲವು ಜನರಲ್ಲಿಈ ಲಸಿಕೆಬಗ್ಗೆ ಅನುಮಾನಗಳು ಇದ್ದವು, ಈಗ ಅದು ನಿಧಾನವಾಗಿದೂರ ಸರಿಯುತ್ತಿದೆ. ಲಸಿಕೆ ಹಾಕಿಸಿಕೊಂಡರೆÀ ಸೋಂಕು ಹಬ್ಬಿದರು ಹೆಚ್ಚು ಪರಿಣಾಮ ಬೀರದು, ಯಾವುದೆಅಡ್ಡ ಪರಿಣಾಮಉಂಟಾಗುವುದಿಲ್ಲ ಎಂಬುದು ಈಗಾಗಲೆ ಸಾಬೀತಾಗಿದೆಎಂದು ವಿವರಿಸಿದರು. […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ ಸೌಲಭ್ಯ ಸಿಗದೆ ತೊಂದರೆಯಾಗಿರುವುದನ್ನು ನಿವಾರಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಜೊತೆಗೆ ರಾಜಕಾರಣಿಗಳ ಸಹಾಯ ಪಡೆದು ಹೊರ ಜಿಲ್ಲೆಗಳಿಂದ ಜಿಲ್ಲಾಸ್ಪತ್ರೆಗೆ ಬರುತ್ತಿರುವವರಿಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಕೊರೊನಾ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಯಗೊಂಡ ಕೆಲವು ನಾಗರಿಕರು, ಸಾಮೂಹಿಕವಾಗಿ ರಸ್ತೆ ಮಧ್ಯ ಭಾಗದಲ್ಲಿ ಅನ್ನದಿಂದ ಮಾಡಿದ ದೊಡ್ಡದಾದ ತಣಿವು ಮುದ್ದೆ ಇಟ್ಟು, ಅನ್ನದ ಕಟ್ಟೆಯೊಳಗೆ ಮಜ್ಜಿಗೆ ಸುರಿದು, ಅರಶಿನ, ಕುಂಕುಮ ಇಟ್ಟು, ತೆಂಗಿನ ಕಾಯಿ ಒಡೆದು ಸಾಮೂಹಿಕ ಪೂಜೆ ಸಲ್ಲಿಸಿದ ಬಳಿಕ ಕುರಿಯನ್ನು ಬಲಿ ಕೊಡಲಾಯಿತು.ಪೂಜೆ ಹಾಗೂ ಕುರಿ ಬಲಿಯನಂತರ ರಕ್ತ ಮಿಶ್ರಿತ ತಣಿವು ಮುದ್ದೆಯ ಅನ್ನವನ್ನು ನೆರೆದಿದ್ದ ಜನರಿಗೆ ಹಂಚಿ, ಕೊರೊನಾ ಶಾಂತಿಗಾಗಿ ಮನೆಗಳ ಮೇಲೆ ಹಾಕುವಂತೆ ಸೂಚಿಸಲಾಯಿತು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಟೊಮೆಟೊ ವರ್ತಕರ ಸಂಘದ ಅಧ್ಯಕ್ಷ ಎಚ್.ರವೀಂದ್ರರೆಡ್ಡಿ (47) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರು ಕೆಲವು ದಿನಗಳ ಹಿಂದೆ ಅಸ್ವಸ್ಥರಾಗಿ ಚೇತರಿಸಿಕೊಂಡಿದ್ದರು.ಮೃತರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.ಮೃತರ ಅಂತ್ಯ ಸಂಸ್ಕಾರವನ್ನು ತಾಲ್ಲೂಕಿನ ಚಿಲ್ಲೊರಪಲ್ಲಿ ಗ್ರಾಮದ ಹೊರ ವಲಯದಲ್ಲಿ ಸೋಮವಾರ ನೆರವೇರಿಸಲಾಯಿತು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದಲ್ಲಿ ಕೆಲಸವಿಲ್ಲದೆ ಬೈಕ್‍ನಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರು ಲಾಟಿ ರುಚಿ ತೋರಿಸಿದರು.ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ಪೊಲೀಸರು ವಾಹನಗಳನ್ನು ಪಟ್ಟಣ ಒಳಗೆ ಬಿಡಲಿಲ್ಲ. ಖರೀದಿಗೆ ಬಂದಿದ್ದವರು ಬೈಕ್ ಮತ್ತಿತರ ವಾಹನಹಗಳನ್ನು ಪಟ್ಟಣದ ಹೊವವಲಯದಲ್ಲಿ ನಿಲ್ಲಿಸಿ, ಕಾಲ್ನಡಿಗೆಯಲ್ಲಿ ಹೋಗಿ ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಿ ಹೊತ್ತು ತರುತ್ತಿದುದು ಕಂಡುಬಂದಿತು.ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ರಸ್ತೆಯಲ್ಲಿ ನಿಂತು, ವಿನಾಕಾರಣ ಸುತ್ತಾಡುತ್ತಿದ್ದ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಗುಲಾಬಿ ನೀಡಿ ಅಭಿನಂದಿಸುವುದರ ಮೂಲಕ ಅರಿವು ಮೂಡಿಸಿದರು.ಪಟ್ಟಣದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸುವಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಂಥ ವ್ಯಕ್ತಿಗಳನ್ನು ಗುರುತಿಸಿ ದಂಡ ವಿಧಿಸಿದ್ದರು. ಆದರೆ ಅದಾವುದಕ್ಕೂ ಬಗ್ಗದ ಕೆಲವರು ಮಾಸ್ಕ್ ರಹಿತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು.ಪುರಸಭೆಯ ಮುಖ್ಯಾಧಿಕಾರಿ ಡಿ.ಶೇಖರ್ ರೆಡ್ಡಿ ಹಾಗೂ ಆರೋಗ್ಯ ನಿರೀಕ್ಷಕ ಪೃಥ್ವಿರಾಜ್ ಶನಿವಾರ ವಿನೂತನ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ರಾಸು ವಿಮಾ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಅನುದಾನದ ಚೆಕ್‍ಗಳನ್ನು ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ತಿಳಿಸಿದ್ದಾರೆ.ಇಷ್ಟು ದಿನ ಫಲಾನುಭವಿಗಳನ್ನು ಕ್ಯಾಂಪ್ ಕಚೇರಿಗೆ ಬರಮಾಡಿಕೊಂಡು ಸಾಮೂಹಿಕವಾಗಿ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಾಲ್ಲೂಕಿನ ಜೀಡಿಮಾಕಲಹಳ್ಳಿ ಹಾಲು ಉತ್ಪಾಕದರ ಸಂಘದ ವ್ಯಾಪ್ತಿಯಲ್ಲಿ […]