ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದ ಪುರಸಭೆ ವತಿಯಿಂದ ಶನಿವಾರ ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ನಾಗರಾಜ್, ರಾಜು, ಶ್ರೀನಿವಾಸ್, ಸರ್ದಾರ್, ಶಬ್ಬೀರ್ ಖಾನ್, ಅಮರ್, ಅಧಿಕಾರಿಗಳಾದ ಡಿ.ಶೇಖರ್‍ರೆಡ್ಡಿ, ನಾಗರಾಜ್, ಶಂಕರ್ ಇದ್ದರು

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಶನಿವಾರ ಏರ್ಪಡಿಸಿದ್ದ ಶ್ರಮದಾನ ಶಿಬಿರವನ್ನು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಉದ್ಘಾಟಿಸಿದರು. ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಸರ್ದಾರ್, ಶಬ್ಬೀರ್ ಇದ್ದರು.

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ರಾಯಲ್ಪಾಡ್ ಸಮೀಪ ಶುಕ್ರವಾರ ರಾತ್ರಿ ಕಾರ್‍ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ರಾಯಲ್ಪಾಡ್ ಗ್ರಾಮದಿಂದ ಮುದಿಮಡಗು ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಾರನ್ನು ತಡೆದು 103.680 ಲೀಟರ್ ಮದ್ಯವನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.ಅಬಕಾರಿ ನಿರೀಕ್ಷಕ ಬಿ.ಎಸ್.ರೋಹಿತ್, ಅಬಕಾರಿ ಉಪ ನಿರೀಕ್ಷಕ ಕೆ.ಎಂ.ಕೃಷ್ಣಪ್ಪ, ಸಿಬ್ಬಂದಿ ಕೆ.ಆರ್.ಮಂಜುನಾಥ್, ರಾಘವೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಮಹಾತ್ಮಾ ಗಾಂಧೀಜಿ ಬದುಕು ಮಾದರಿಯಾಗಿದೆ. ಅವರ ಜೀವನ ದರ್ಶನ ಸರ್ವಕಾಲಿಕ ಮೌಲ್ಯ ಪಡೆದಿದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಸಿದ್ಧಾಂತ ಪಾಲನೆ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ಜಿಲ್ಲಾ ಭಾರತ ಸೇವಾದಳ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತ. ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್. ಗಣೇಶ್, ಕಾಂಗ್ರೆಸ್ ಮುಖಂಡ ಕೆ.ಜಯದೇವ್, ಆರ್. ಶ್ರೀನಿವಾಸನ್, ಬಹಾದ್ದೂರ್ ಸಾಬ್ , ಜಿಲ್ಲಾ ಸಂಘಟಕ ದಾನೇಶ್ ಹಾಗೂ ಬಿಇಓ ಕಚೇರಿ ಸಿಬ್ಬಂದಿ ಹಾಜರಿದ್ದರು.

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ಹಸಿರು ಶಾಲು ಹಾಗೂ ರೈತ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಎಸ್.ಮುನಿಸ್ವಾಮಿ ಕೂಡಲೇ ಕ್ಷೇಮಯಾಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎನ್. ಜಿ. ಶ್ರೀರಾಮರೆಡ್ಡಿ ಅಗ್ರಹಿಸಿದರು.ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಛೇರಿಯಲ್ಲಿ ಸುದ್ದಿಗೊಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಶ್ರೀರಾಮರೆಡ್ಡಿ ಇತ್ತೀಚಿಗೆ ಶಾಗೂತ್ತೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಇವರಿಗೆ ಶೋಬೆ ತರವುದಿಲ್ಲ. ಹಸಿರು ಸಾಲು […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಯುವಕ ಯುವತಿಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ಜಾತಿ, ಮತ ಭೇದವಿಲ್ಲದೆ ಅಗತ್ಯ ಇರುವವರಿಗೆ ರಕ್ತ ನೀಡಬೇಕು ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.ತಾಲ್ಲೂಕಿನ ದಳಸನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋಲಾರದ ಎಸ್‍ಎನ್‍ಆರ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಗತ್ಯ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ರೈತರ ಉತ್ಪಾದಕರ ಸಂಸ್ಥೆಗಳು , ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸಿ ಬೇರೆಡೆಗೆ ರವಾನಿಸುತ್ತವೆ . ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜವಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಎಂದು ಹೇಳಿದರು . ತಾಲ್ಲೂಕಿನ ಶ್ಯಾಗತ್ತೂರು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ಸೇವಾ ಮಾಸಾಚರಣೆ , ಸ್ವಚ್ಛತಾ ಆಂದೋಲನ ಮತ್ತು ಶ್ರಮದಾನ ಶಿಬಿರ ಹಾಗೂ ಆಶಾ ರೈತ ಉತ್ಪಾದಕ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು , ಕಾಯ್ದೆ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ಅಹಿಂದ ವರ್ಗ ಸರ್ಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ದಿ ಪಥದತ್ತ ಸಾಗಬೇಕೆಂದು ಅಹಿಂದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು ತಿಳಿಸಿದರು.ಪಟ್ಟಣದ ಕನಕಭವನದಲ್ಲಿ ತಾಲ್ಲೂಕು ಅಹಿಂದ ಒಕ್ಕೂಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಸಾದ್‍ಬಾಬು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಂಡು ಅರ್ಥಿಕವಾಗಿ ಮುಂದೆ ಬರಬೇಕು ಈ ಅಹಿಂದ ಒಕ್ಕೂಟವು ಜಿಲ್ಲೆಯಲ್ಲಿ ಅತ್ಯಂತ ಬಲಿಷ್ಟವಾಗಿದೆ ಕಟ್ಟೆಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬುದು ನಮ್ಮ ಆಶೆಯವಾಗಿದೆ. ಅಹಿಂದ ಸಮುದಾಯಗಳ ಸಮಸ್ಯೆಗಳ ನಿವಾರಣೆಗೆ ಅಹಿಂದ ವರ್ಗಗಳು ಒಗ್ಗೂಡಬೇಕು […]

Read More