
ಶ್ರೀನಿವಾಸಪುರ : ಈಗಲಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸುತ್ತಮುತ್ತಲಿರುವ ನೈಸರ್ಗಿಕ ಸಂಪತ್ತುಗಳಾದ ಗಿಡ, ಮರ, ಕೆರೆ, ಕುಂಟೆ , ಗೋಮಾಳ ಹಾಗೂ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ನಮ್ಮ ಜೀವನಾದಾರಗಳನ್ನು ಸುದಾರಣೆ ಮಾಡಿಕೊಳ್ಳಲು ಗ್ರಾಮೀಣ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದು ಅರ್.ಐ ಮುನಿರೆಡ್ಡಿ ಎಂದರು.ತಾಲ್ಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ವ್ಯಾಪ್ತಿಗೆ ಬರುವ ಮೊಗಿಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೆರೆ ಒತ್ತುವರಿ ಜಾಗ ತೆರುವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದರು .ಪಿ.ಡಿ.ಓ ಜಗದೀಶ್ ಕುಮಾರ್ ಮಾತನಾಡಿ ಮೊಗಿಲಹಳ್ಳಿ ಗ್ರಾಮದ ಸರ್ವೆ ನಂಬರ್ 92 […]

ಶ್ರೀನಿವಾಸಪುರ : ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ಕೆರೆ ಬಳಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯವಾಡುತ್ತಿದ್ದವರ ಮೇಲೆ ದಾಳಿ ನಡೆಸಿ 4 ಜನರನ್ನು ವಶಕ್ಕೆ ಪಡೆದು, ಪಂದ್ಯಕ್ಕೆ ಪಣವಾಗಿ ಇಟ್ಟಿದ್ದ 3200 ರೂ ನಗದು, ಒಂದು ಕೋಳಿ ವಶಕ್ಕೆ ಪಡೆದು 4 ಜನರ ವಿರುದ್ಧ ಪ್ರಕರಣ ದಾಖಲಿಸಿ , ನ್ಯಾಯಂಗ ಬಂದನಕ್ಕೆ ಒಪ್ಪಿಸಲಾಗಿದೆ.ಎಸ್ಪಿ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ,ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ನಂದಕುಮಾರ್ ನೇತೃತ್ವದಲ್ಲಿ ಪಿಐ ಎಂ.ಬಿ.ಗೊರವನಕೊಳ್ಳ, ಪಿಎಸ್‍ಐ ಜಯರಾಮ್, ಸಿಬ್ಬಂದಿಗಳಾದ ಸಂತೋಷ್, ಪತ್ರಿ […]

ಶ್ರೀನಿವಾಸಪುರ : ಪಟ್ಟಣದ ಮಾರತಿನಗರದಲ್ಲಿ ಸೋಮವಾರ ಅರಿಕೆರೆ ಲಕ್ಷ್ಮಮ್ಮ 65 ವರ್ಷದ ಮಹಿಳೆಗೆ ಬೀದಿ ನಾಯಿಗಳು ತಲೆಗೆ ತೀವ್ರಗಾಯವಾಗಿದೆ ಹಾಗು ದೇಹದ ಇತರೆ ಭಾಗಗಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.ಅರಿಕೆರೆ ಲಕ್ಷ್ಮಮ್ಮ ಪಟ್ಟಣದಲ್ಲಿ ಮಾರತಿ ನಗರದ ತನ್ನ ತಂಗಿಯ ಮನೆಗೆ ಬಂದಿದ್ದು, ಮನೆಯ ಸಮೀಪ ನಿಂತಿದ್ದ ಸಮಯದಲ್ಲಿ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಕಳೆದ ವರ್ಷ ನವಬಂರ್ ತಿಂಗಳಲ್ಲಿ ಬೀದಿನಾಯಿಗಳ ಕಾಟದಿಂದ ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ […]

ಕೋಲಾರ,ಫೆ.10: ಮಕ್ಕಳನ್ನು ಸಮಾಧಾನಪಡಿಸಲು ಹಾಗೂ ಲಾಲನೆ-ಪಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿಕೊಳ್ಳುವುದು ಅಪಾಯಕಾರಿ ಎಂದು ಹೃದಯತಜ್ಞ ಡಾ.ಯಶ್ವಂತ್ ಪೋಷಕರನ್ನು ಎಚ್ಚರಿಸಿದರು.ನಗರದ ಸುವರ್ಣ ಕನ್ನಡ ಭವನದಲ್ಲಿ ಸರಸ್ಪತಿನಾರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ (ಸ್ಮಾರ್ಟ್ ಕಿಡ್ಸ್ ಪ್ರಿ-ಸ್ಕೂಲ್)ನ ನಾಲ್ಕನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ ಅವಲಂಭನೆ ಬೆಳೆಸಿದರೆ ಅದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಕುಗ್ಗಲು ಕಾರಣವಾಗುತ್ತದೆ. ಅದರ ಬದಲು ಆಟೋಟಗಳ ಮೂಲಕ ಮಕ್ಕಳನ್ನು ಸಮಾಧಾನಪಡಿಸುವುದು ಎಲ್ಲಾ ರೀತಿಯಿಂದಲ್ಲೂ ಪ್ರಯೋಜನಕಾರಿಯಾದುದು ಎಂದು […]

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯಮಶೀಲತಾ ತರಬೇತಿ ಶಿಬಿರದ ಲಾಭ ಪಡೆದು, ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಕ್ಷುಸಾಬ್ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಮಾಲಿಕ್ ಫಂಕ್ಷನ್ ಹಾಲ್‌ನಲ್ಲಿ. ಬೆಂಗಳೂರಿನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಿರು ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಆರ್ಥಿಕ ಸಂಸ್ಥೆಗಳಿAದ ಪಡೆದುಕೊಂಡ ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು.ಯಾವುದಾದರೂ ಉದ್ಯಮ ಪ್ರಾರಂಭಿಸಿ ಮಾದರಿಯಾಗಿ ಹಾಗೂ ಲಾಭದಾಯಕವಾಗಿ ಬೆಳೆಸಬೇಕು ಎಂದು ಹೇಳಿದರು.ಇಡಿಐಐ ಸಂಸ್ಥೆಯಿಂದ ಮಹಿಳೆಯರಿಗೆ […]

ಶ್ರೀನಿವಾಸಪುರ : ಹಾಲಿ ಅಧ್ಯಕ್ಷರ ವಿರುದ್ಧ ಕೈ ಎತ್ತುವದರ ಮೂಲಕ ಅವಿಶ್ವಾವನ್ನು ತೋರಿಸಿದ್ದು, ಈ ಮೂಲಕ ರೋಣೂರು ಗ್ರಾಮಪಂಚಾಯಿತಿ ಅಧ್ಯಕ್ಷ ಅಮರಾವತಮ್ಮ ರವರನ್ನು ತೆರವು ಗೊಂಡಿದೆ ಘೋಷಣೆ ಮಾಡಲಾಗಿದೆ ಎಂದು ಉಪ ವಿಭಾಗಧಿಕಾರಿ ಮೈತ್ರಿ ಮಾಹಿತಿ ನೀಡಿದರು. ತಾಲೂಕಿನ ರೋಣೂರು ಗ್ರಾಮ ಪಂಚಾಯಿತಿ ೧೩ ಸದಸ್ಯರು ಜ.೨೪ ನೇ ತಾರೀಖಿನಂದು ನಮ್ಮ ಕಚೇರಿಗೆ ಬಂದು ಹಾಲಿ ಅಧ್ಯಕ್ಷರ ಬಗ್ಗೆ ಅವಿಶ್ವಾಸದ ಬಗ್ಗೆ ಮನವಿ ನೀಡಿದ್ದರು ಅದರಂತೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು ೧೮ ಸದಸ್ಯರ ಪೈಕಿ ೧೨ […]

ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್ ನಲ್ಲಿರುವ ಮಿನರ್ವ ಶಾಲೆಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲಾನಯನ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಸಹಾಯ ಕೃಷಿ ನಿರ್ದೇಶಕರು ಕೆ.ಸಿ.ಮಂಜುನಾಥ್ ನೆಲವಂಕಿ ಗ್ರಾ.ಪಂ ಅಧ್ಯಕ್ಷರಾದ ರಾಧಮ್ಮ ರಘುನಾಥರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಕುರಿತು ಸಹಾಯ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಣ್ಣು ರಕ್ಷಣೆ, ನೀರು ರಕ್ಷಣೆ ಮಾಡುವ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ […]

ಶ್ರೀನಿವಾಸಪುರದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಶ್ರೀನಿವಾಸಪುರ: ಗ್ರಾಮ ಆಡಳಿತಾಧಿಕರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾಂಘಿಕ ಪ್ರಯತ್ನ ನಡೆಸಬೇಕು. ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎನ್.ಶಂಕರ್ ಹೇಳಿದರು.ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಈ ಹಿಂದೆ […]

ಶ್ರೀನಿವಾಸಪುರ : ಯದರೂರು ಹಾಗು ಸುತ್ತಮುತ್ತಲ ಗ್ರಾಮಗಳ ರೈತ ಕೂಲಿಕಾರರ ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ಉದ್ಯಮಿಗಳ ವಶಕ್ಕೆ ನೀಡಲು ಕೆಐಎಡಿಬಿ ಹೆಸರಿನಲ್ಲಿ ವಶಕ್ಕೆ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಹಾಗೂ ಆತಂಕದ ವಿಷಯವಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತೂರು ನವೀನ್ ಆರೋಪಿಸಿದರು. ಶ್ರೀನಿವಾಸಪುರ ತಾಲೂಕಿನ ಯದರೂರು ರೈತ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತಾ ರಾಜ್ಯಾದ್ಯಂತ ಕೈಗಾರಿಕೆಗೆ ಎಂದು ಭೂ ಸ್ವಾಧೀನ ಪ್ರಕ್ರಿಯ […]