ಶ್ರೀನಿವಾಸಪುರ 1 : ಸಮಾಜದಿಂದ ಸಕಲ ಸಂಪತ್ತು ಪಡೆಯುವ ಮನುಷ್ಯನು ಸೇವಾ ಮನೋಭಾವ ಬೆಳಸಿಕೊಳ್ಳಬೇಕೆಂದರು. ಸುಖದ ಜೀವನಕ್ಕೆ ಜೋತು ಬಿದ್ದಿರುವ ಜನ ಮಾನಸಿಕ ದೈಹಿಕ ಆರೋಗ್ಯ ಕ್ಷೀಣಿಸಿ ಒತ್ತಡಗಳಿಂದ ಬಳಲುತ್ತಿದ್ದಾರೆ ಎಂದು ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು.ಪಟ್ಟಣ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಗುಂಜೂರು ಶ್ರೀನಿವಾಸರೆಡ್ಡಿಯವರ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾದ 53 ನೇ ಹಟ್ಟು ಹಬ್ಬದ ಅಂಗವಾಗಿ ನಡೆದ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬರು ಸಮಾಜದ ಹಿತದೃಷ್ಟಿಯಿಂದ ಆರೋಗ್ಯವಂತ ಸಮಾಜ ನಿರ್ಮಾಪಕರಾಬೇಕೆಂದು ಸಲಹೆ ಮಾಡಿದರು. ಇತ್ತೀಚಿನ ದಿನಗಳಲ್ಲಿ […]
ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಆಟಗಳಲ್ಲಿ ಪಾಲ್ಗುಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳನ್ನು ಬೆಳಸುವಂತಾಗುತ್ತದೆ. ಹಾಗು ಕ್ರೀಡೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಬಿಇಒ ವಿ.ಉಮಾದೇವಿ ತಿಳಿಸಿದರು.ತಾಲ್ಲೂಕಿನ ಗೌನಿಪಲ್ಲಿಯ ವೆಂಕಟೇಶ್ವರ ಪ್ರೌಡಶಾಲಾ ಆವರಣದಲ್ಲಿ ಸೋಮವಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಆಟ , ಪಾಠಗಳು ಒಂದೇ ನಾಣ್ಯದ ಎರಡು ಮುಖಗಳಂತೆ ವಿದ್ಯಾರ್ಥಿಗಳು ಪಾಠಕ್ಕೆ ಎಷ್ಟು ಪಾಮುಖ್ಯತೆಯನ್ನು ನೀಡಿತ್ತೀರೂ , ಅದೇ ರೀತಿಯಾಗಿ ಆಟಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡುವಂತೆ ಕರೆ ನೀಡಿದರು.ರಾಯಲ್ಪಾಡು ಬ್ಲಾಕ್ […]
ಕೋಲಾರ, ಜು.18: ವಿಕಲಚೇತನರು ತಮ್ಮಲ್ಲಿನ ನ್ಯೂನ್ಯತೆಗಳ ಬಗ್ಗೆ ಆಲೋಚಿಸುವ ಬದಲು, ಅದನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ ಹೇಳಿದರು.ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ವಿಕಲಚೇತನ ಶಿಬಿರಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತರಬೇತಿಯ ಬೀಳ್ಕೂಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮಲ್ಲಿ ಎಂತಹ ಸಮಸ್ಯೆ ಇದ್ದರು ಅದನ್ನು ಋಣಾತ್ಮಕವಾಗಿ ಪರಿಗಣಿಸಬಾರದು, ಬದಲಾಗಿ ಧನಾತ್ಮಕವಾಗಿ ಆಲೋಚಿಸುವ ಮನಸ್ಸಿದ್ದಾಗ ಮಾತ್ರ ಸಾಧನೆ […]
ಕೋಲಾರ; ಜು.18: ಟೊಮೇಟೊ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಪ್ರತಿ ಕೆಜಿ ಟೊಮೇಟೊಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿ, ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಬೇಕೆಂದು ರೈತಸಂಘದಿಂದ ಟೊಮೇಟೊ ಸಮೇತ ಎಪಿಎಂಸಿ ಮಾರುಕಟ್ಟೆಯಿಂದ ಮೆಕ್ಕೆ ವೃತ್ತದವರೆಗೆ ಟ್ರಾಕ್ಟರ್ ರ್ಯಾಲಿ ನಡೆಸಿ, ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.ಹಸಿವೆಂಬ ಮಹಾ ಮಾರಿಗೆ ಕೃಷಿ ಎಂಬ ಔಷಧಿಗೆ ಹೆಚ್ಚಿನ ಆದ್ಯತೆ ನೀಡಿ ದೇಶದ ಕೋಟ್ಯಾಂತರ ಜನರ ಹಸಿವನ್ನು ನೀಗಿಸದೇ ಹೋದರೆ ತುತ್ತು ಅನ್ನಕ್ಕಾಗಿ ಅನ್ನದಾತನೇ ಕಾನೂನು ಕೈಗೆತ್ತಿಕೊಳ್ಳುವ […]
ಶ್ರೀನಿವಾಸಪುರ: ಫಲಾನುಭವಿಗಳು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳನ್ನು ಆಶ್ರಯಿಸಬಾರದು. ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಹೇಳಿದರು.ತಾಲ್ಲೂಕಿನ ಪುರ್ನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುತ್ತಾರೆ. ಅರ್ಹ ಫಲಾನುಭವಿಗಳು ನಿಯಮಾನುಸಾರ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.ಕಂದಾಯ ಇಲಾಖೆಗೆ […]
ಕೋಲಾರ:- ಓಟಿಗಾಗಿ ನೋಟು ನೀಡುವ ಸಂಸ್ಕøತಿ ವಿರುದ್ದ ಮಹಿಳೆಯರು ಸಿಡಿದು ಧ್ವನಿಯೆತ್ತಿದರೆ ಮಾತ್ರ ಸಮಾಜ ಹಾಗೂ ದೇಶ ಉಳಿಯಲು ಸಾಧ್ಯ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ 29 ಮಹಿಳಾ ಹಾಗೂ ಒಂದು ಪುರುಷ ಸ್ವಸಹಾಯ ಸಂಘಗಳಿಗೆ 1.50 ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ಮತವನ್ನು ಮಾರಿಕೊಳ್ಳುವ ಅನಿಷ್ಠ ಪದ್ದತಿ ಕೊನೆಗೊಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ ಎಂದ ಅವರು, ಇದರ […]
ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೆಡ ಕ್ರಾಸ್ ಘಟಕದ ವತಿಯಿಂದ ” ಯಶಸ್ಸಿನಲ್ಲಿ ಗುರುವಿನ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈಯ ಇಸ್ಕಾನ್ ಸಂಸ್ಥೆಯ ಲೋಕಭವನ ಮಾತಾಜಿ ಆಗಮಿಸಿ ವ್ಯಕ್ತಿಯ ಜೀವನದಲ್ಲಿ ಒಬ್ಬ ಗುರುವಿನ ಪಾತ್ರ ಯಾವ ರೀತಿಯಲ್ಲಿ ಬಹುಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು. […]
ಕೋಲಾರ : ಮೇಕ್ ಇನ್ ಇಂಡಿಯಾ , ಡಿಜಿಟಲ್ ಇಂಡಿಯಾ , ಸ್ಟಾರ್ಟ್‌ಅಪ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಂಡು ಯುವಜನತೆ ಶ್ರೇಷ್ಠ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಗೌರವಾನ್ವಿತ ರಾಜ್ಯಪಾಲರು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹೋಟ್ ಅವರು ತಿಳಿಸಿದರು . ಇಂದು ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2 ನೇ ವಾರ್ಷಿಕ […]
ಕೋಲಾರ:- ಬೆಂಗಳೂರು ಉತ್ತರ ವಿವಿಯ ಗಣಿತಶಾಸ್ತ್ರ ವಿಭಾಗಕ್ಕೆ ದ್ವಿತೀಯ ಘಟಿಕೋತ್ಸವದಲ್ಲಿ ಮೊದಲ ಐದು ರ್ಯಾಂಕ್ ಬಂದಿದ್ದು, ಪ್ರಥಮ ರ್ಯಾಂಕ್ ಗಳಿಸಿದ ಎಸ್.ರುಷಿತಾ ಅವರಿಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಚಿನ್ನದ ಪದಕ ನೀಡಿ ಪುರಸ್ಕರಿಸಿದರು.ವಿವಿಯ ವಿದ್ಯಾರ್ಥಿಗಳಾದ ರಾಜು ಅವರಿಗೆ ದ್ವಿತೀಯ ರ್ಯಾಂಕ್, ಸ್ವಾತಿ ಅವರಿಗೆ ತೃತೀಯ ರ್ಯಾಂಕ್, ಉಮ್ರಾಭಾನು ಅವರಿಗೆ 4ನೇ ರ್ಯಾಂಕ್ ಹಾಗೂ ಸುಷ್ಮಾ ಅವರಿಗೆ 5ನೇ ರ್ಯಾಂಕ್ ದೊರೆತಿದೆ.ಪ್ರಥಮ ರ್ಯಾಂಕ್ ಸಾಧಕಿ ಎಸ್.ರುಷಿತಾ ಅವರಿಗೆ ಮಾತ್ರ ರಾಜ್ಯಪಾಲರು ಚಿನ್ನದ ಪದಕ ನೀಡಿ ಪುರಸ್ಕರಿಸಿದ್ದು, ಅವರು ಕೋಲಾರ […]