ಶ್ರೀನಿವಾಸಪುರ: ಆವಲಕುಪ್ಪ ಗ್ರಾಮದಲ್ಲಿ ವಾಸ್ತು ದೋಷ ನಿವಾರಿಸಲು ಚಕ್ರ ಸ್ಥಾಪನೆ, ಕಳಶಗಳ ಪೂಜೆ,ಅಷ್ಟಬಂದನ, ಅಗ್ನಿಕುಂಡ, ಹೋಮ, ಮುಂತಾದ ಪೂಜಾ ಕಾರ್ಯಕ್ರಮಗಳನ್ನು ಗ್ರಾಮದ ಜನತೆಯ ಕಲ್ಯಾಣಾರ್ಥಕ್ಕಾಗಿ ರಾಯಲ್ಪಾಡಿನ ವಾಸ್ತುದೋಷ ನಿವಾರಣಾ ಪರಿಣಿತರಾದ ವಿಶ್ವನಾಥ ಶಾಸ್ತ್ರಿ ತಂಡದವರು ನಡೆಸಿಕೊಟ್ಟಿದ್ದರು. ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಆವಲಕುಪ್ಪ ಗ್ರಾಮದಲ್ಲಿ 2-3 ವರ್ಷಗಳಿಂದ ಅನೇಕ ಪ್ರಾಣನಷ್ಟಗಳು ಸಂಭವಿಸಿದ್ದು ಈ ಅನಾಹುತವನ್ನು ತಪ್ಪಿಸಲು ಗ್ರಾಮಸ್ಥರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಲು ರಾಯಲ್ಪಾಡ್ನ ಸುಪ್ರಸಿದ್ದ ವಾಸ್ತುದೋಷ ಪರಿಣಿತರಾದ ಶ್ರೀ ವೆಲ್ಲಾಲ ಸತ್ಯನಾರಾಯಣಸ್ವಾಮಿ ಇವರ ಸಲಹೆ ಮಾರ್ಗ […]
ಶ್ರೀನಿವಾಸಪುರ: ರೋಗನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಕಾಲದಲ್ಲಿ ಸವರುವಿಕೆ ಮತ್ತು ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ . ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ . ಆದ್ದರಿಂದ ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸವರುವಿಕೆ ಮಾಡುವುದು ಅವಶ್ಯವಾಗಿದೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಅಂಗವಾಗಿ ಮಾವು ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಮಾವು ಸ್ಪೆಷಲ್ ಅತ್ಯಂತ ಉಪಯುಕ್ತವಾಗಿದೆ . ಈ ನಿಟ್ಟಿನಲ್ಲಿ ವಿಸ್ತರಣ ಶಿಕ್ಷಣ ಘಟಕ ( […]
ಶ್ರೀನಿವಾಸಪುರದ ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಟಿ.ವಿ.ವೆಂಕಟೇಶಪ್ಪ, ತರಬೇತುದಾರ ವಿ.ನಾರಾಯಣಸ್ವಾಮಿ, ಶಿಕ್ಷಕರಾದ ಕೆ.ಎನ್.ವೆಂಕಟರವಣ, ರಘುನಾಥ್, ನಾಗರಾಜ್, ಲಕ್ಷ್ಮಯ್ಯಗೌಡ, ಚಿಕ್ಕರೆಡ್ಡಪ್ಪ, ಮನೋಜ್, ಪ್ರತಿಮಾ ಇದ್ದರು.
ಶ್ರೀನಿವಾಸಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಮಾಡಿರುವ ಶೇ.40 ಕಮೀಷನ್ ಆಪಾದನೆ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪಣ್ಣ ಕಮೀಷನ್ ಆಪಾದನೆ ಮಾಡುವ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸರ್ಕಾರ ಕಮೀಷನ್ ಪಡೆಯುತ್ತಿರುವುದು ನಿಜವೇ ಆಗಿದ್ದಲ್ಲಿ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಹೇಳಿದರು.ಸಚಿವ […]
ಶ್ರೀನಿವಾಸಪುರ: ಜನರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.. ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ತಾಲ್ಲೂಕು ಆಮ್ ಆದ್ಮಿ ಪಕ್ಷದ ಮುಖಂಡ ಡಾ. ವೈ.ವಿ.ವೆಂಕಟಾಚಲ ಹೇಳಿದರು.ತಾಲ್ಲೂಕಿನ ರೋಜೇನಹಳ್ಳಿ ಸಂತೆ ಮೈದಾನದಲ್ಲಿ ಬುಧವಾರ ಆಮ್ ಆದ್ಮಿ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಾಲ್ಲೂಕಿನ ಎಲ್ಲ ಸಂತೆಯಲ್ಲೂ ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು ಎಂದು […]
ಶ್ರೀನಿವಾಸಪುರ: “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರಿಗೆ 2021-22ನೇ ಸಾಲಿನಲ್ಲಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಆರೋಗ್ಯ ರಕ್ಷಾ ಕ್ಲೈಂ ಆದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಕಛೇರಿಯ ಮಾನ್ಯ ನಿರ್ದೇಶಕರಾದ ಶ್ರೀಯುತ ಮುರಳಿಧರ ಶೆಟ್ಟಿ.ಕೆ ರವರು ಉದ್ಘಾಟಿಸಿಮಾತನಾಡುತ್ತಾ ಇದುವರೆಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಒಟ್ಟು-102 ಸದಸ್ಯರಿಗೆ9 ಲಕ್ಷ30 ಸಾವಿರದ655 ರೂಗಳನ್ನು ವಿತರಣೆ ಮಾಡಲಾಗಿರುತ್ತದೆ ಎಂದು ತಿಳಿಸಿದರು ಹಾಗೂ ಯೋಜನೆ ಹಲವು ಕಾರ್ಯಕ್ರಮಗಳಲ್ಲಿ ಒಂದಾದ ಆರೋಗ್ಯ ವಿಮೆಯು […]
ಕೋಲಾರ: ಸಮಾಜದ ಎಲ್ಲಾ ವರ್ಗಗಳಿಗೂ ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶದಿಂದ ಹೊಂಡಾ ಕಂಪನಿಯು ಮುಂದೆ ಬಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು ವಕ್ಕಲೇರಿಯ ಸಿ.ಬ್ಲಾಕ್ ನಲ್ಲಿ ನರಸಾಪುರ ಹೊಂಡಾ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ 10 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಕುಡಿಯುವ ನೀರು ಫ್ಲೋರೈಡ್ ನಿಂದ ಕೂಡಿದ್ದು ಮನುಷ್ಯನ ಆರೋಗ್ಯ ದೃಷ್ಟಿಯಿಂದ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿದ್ದಾರೆ […]
ಶ್ರೀನಿವಾಸಪುರ: ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಬತ್ತಲಗುಟ್ಟಪಲ್ಲಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿನ ವಿವಿಧ ಸಮುದಾಯಗಳ ಮಧ್ಯೆ ಸಾಮರಸ್ಯ ನೆಲೆಗೊಳ್ಳಲು ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಹೇಳಿದರು.ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಜೀವಿಸುವ ಹಕ್ಕು ಕಲ್ಪಿಸಿದ ಪರಿಣಾಮಗಾಗಿ, ಸಾಮಾಜಿಕ […]
ಶ್ರೀನಿವಾಸಪುರ: ಯರ್ರಂವಾರಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಆಗ್ರಹಿಸಿದರು.ಸೋಮವಾರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ 40 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಉಳಿಸುವ ಉದ್ದೇಶದಿಂದ ಪೋಷಕರನ್ನು ಕಾಡಿ ಬೇಡಿ ಮಕ್ಕಳನ್ನು ದಾಖಲು ಮಾಡಲಾಗಿದೆ. ಇರುವ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಶಿಕ್ಷಕಿ ಹೆರಿಗೆ […]