ಶ್ರೀನಿವಾಸಪುರ: ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಸ್ಥಳೀಯ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸಿ, ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸಲಾಯಿತು ಎಂದು ಹೇಳಿದೆ.ಈಗ ರೂ.50 ಬಡ್ಡಿರಹಿತ ಹಾಗೂ ಶೇ.4 ರಷ್ಟು ಬಡ್ಡಿ ದರದಲ್ಲಿ […]
ಬಡ ಮಕ್ಕಳಲ್ಲಿ ದೇವರನ್ನು ಕಾಣಬೇಕು ಕೋಲಾರ: ಮಕ್ಕಳಲ್ಲಿ ದೇವರನ್ನು ಕಾಣಬೇಕು. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಶಿಕ್ಷಕ ಹಾಗೂ ದಾನಿ ಧರ್ಮೇಶ್ ಹೇಳಿದರು.ತಾಲ್ಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ತಟ್ಟೆ ಲೋಟ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬುದ್ಧಿವಂತ ಮಕ್ಕಳಿದ್ದಾರೆ. ಆದರೆ ಬಡತನದಿಂದಾಗಿ ಅವರ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿದೆ. ಸರ್ಕಾರದ ಸೌ¯ಭ್ಯದ ಜತೆಗೆ ಸಮುದಾಯ […]
ಶ್ರೀನಿವಾಸಪುರ.ಸೆ,13: ಬಡವರ ಅನ್ನ ಹಾಗೂ ಮಾಂಗಲ್ಯವನ್ನುಕಿತ್ತುಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಅಕ್ರಮಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಅಬಕಾರಿಇಲಾಖೆಯ ಬಡ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ: 17-09-2022ರಂದು ಮಾಂಗಲ್ಯಗಳ ಸಮೇತ ಅಬಕಾರಿ ಕಚೇರಿ ಮುತ್ತಿಗೆಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದಸಭೆಯಲ್ಲಿ ತೀರ್ಮಾನಿಸಲಾಯಿತು.ಕಿಲೋಮೀಟರ್ ಗಟ್ಟಲೆ ಅಲೆದಾಡಿದರು ಹನಿ ನೀರು ಸಿಗದೆಇರಬಹುದು ಆದರೆ ದಿನದ 24 ಗಂಟೆ ಗ್ರಾಮೀಣ ಪ್ರದೇಶದ ದಿನಸಿಅಂಗಡಿಗಳಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟಮಾಡುವ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ಹಾಗೂಬಡವರ ಅನ್ನವನ್ನು ಅಬಕಾರಿ ಇಲಾಖೆ ಅಧಿಕಾರಿಗಳೇಕಸಿದುಕೊಳ್ಳುತ್ತಿದ್ದಾರೆ. […]
ರಾಯಲ್ಪಾಡು 1 : ಮನಸ್ಸು ಬುದ್ದಿ ಸಾತ್ವಿಕತೆಗಳು ನಿಷ್ಕಳಂಕವಾಗಿ ಸ್ಥಿತಿ ಪ್ರಜ್ಞೆಯಿಂದ ವಿಚಾರಾತ್ಮಕ ರೀತಿಯಲ್ಲಿ ಬಳಿಸಿದಾಗ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಹೇಳಿದರು.ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಂದ ನಮ್ಮ ದೇಶದ ಕಲೆ ಸಂಸ್ಕøತಿಯನ್ನು ಉಳಿಸಲು ಸಾದ್ಯ , ವಿದ್ಯಾರ್ಥಿಗಳು ತಮ್ಮ ಹಳ್ಳಿಯಲ್ಲಿನ ಹಿರಿಯರು ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಸಮಯದಲ್ಲಿ ಹಾಡುವ ಜಾನಪದ ಹಾಡುಗಳನ್ನು , ಭಜನೆಯ ಹಾಡುಗಳನ್ನು […]
ಶ್ರೀನಿವಾಸಪುರ: ಪೆದ್ದೂರು ಗ್ರಾಮದ ಹೊರವಲಯದಲ್ಲಿ ಪ್ರಭಾರ ಪಿಡಿಒ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.ಪೆದ್ದೂರು ಗ್ರಾಮದ ವಿಶ್ವನಾಥರೆಡ್ಡಿ ಮೃತರು. ಅವರು ಮುಳಬಾಗಿಲು ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಗೌನಿಪಲ್ಲಿ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶ್ರೀನಿವಾಸಪುರ: ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಶ್ರೀನಿವಾಸಪುರದ ಪೊಲೀಸರು ಯಶಸ್ವಿಯಾಗಿದ್ದಾರೆ.ಸೆ.9 ರಂದು ತಾಲ್ಲೂಕಿನ ಆವಲಕುಪ್ಪ ಗ್ರಾಮದ ಅಮಾನಿಕೆರೆ ಕಾಲುವೆ ಸಮೀಪ ಅಪ್ಪಿರೆಡ್ಡಿ ಶವ ಪತ್ತೆಯಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಸೆ.11 ರಂದು ಅಲಂಬಗಿರಿ ಗ್ರಾಮದ ಮಂಜುನಾಥ ಮತ್ತು ಮಂಜುನಾಥ ಎಂಬ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಅಪ್ಪಿರೆಡ್ಡಿ ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಅವರ ಬಳಿಯಿದ್ದ ಒಂದು ಚಿನ್ನದ ಉಂಗುರು ಮತ್ತು ಅವರ ಮನೆಯಲ್ಲಿ ಚಿನ್ನದ […]
ಕೋಲಾರ : ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಯಾವುದೇ ಅಡ್ಡದಾರಿ ಯಾಗಲಿ , ಟಿಪ್ಸ್ ಆಗಲಿ ಇಲ್ಲ . ಕಠಿಣ ಪರಿಶ್ರಮ ಹಾಕಿ , ಶ್ರದ್ದೇ , ತ್ಯಾಗ ಮನೋಭಾವ ದಿಂದ ಸಿದ್ಧತೆ ನಡೆಸಿದರೆ ಮಾತ್ರ ಉತ್ತೀರ್ಣರಾಗಿ ನಾಗರಿಕ ಸೇವಾ ಅಧಿಕಾರಿಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಆರಂಭಿಸಿರುವ ಯುಪಿಎಸ್ಸಿ – ಕೆಪಿಎಸ್ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಮೊದಲ ಬ್ಯಾಚ್ನ ತರಗತಿಯನ್ನು ಉದ್ಘಾಟಿಸಿ […]
ಕೋಲಾರ : ಕಾವ್ಯ ಕಮ್ಮಟ ಶಿಬಿರದ ಪ್ರಯೋಜನ ಪಡೆದು ಕಮ್ಮಟಾರ್ಥಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕವಿತೆಗಳ ಕೊಡುಗೆ ನೀಡಬೇಕೆಂದು ಕೋಟಗಲ್ಲಿನ ಚಿತ್ರಬಂಧ ಕವಿ ನಾಗಸುಬ್ರಹ್ಮಣ್ಯ ಹೇಳಿದರು. ತಾಲೂಕಿನ ಚೊಕ್ಕಹಳ್ಳಿ ಚಿನ್ಮಯ ಸಾಂಧೀಪನಿ ಆಶ್ರಮದ ಪದವಿ ಪೂರ್ವ ಕಾಲೇ ಜಿನ ನಳಂದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಎರಡು ದಿನಗಳ ಕಾವ್ಯ ಸಂಭವ ವಿಸ್ಮಯ ಕಾವ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಮ್ಮಟ ಕುರಿತಂತೆ ಮುಖನುಡಿ ಆಡಿದ ಕಸಾಪ ಗೌರವಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ , […]
ಕೋಲಾರ; ಸೆ.10: ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ ಜನ ಸಾಮಾನ್ಯರ ಅಮೂಲ್ಯ ಪ್ರಾಣ ರಕ್ಷಣೆ ಮಾಡುವಂತೆ ರೈತಸಂಘದಿಂದ ಹದಗೆಟ್ಟಿರುವ ಕೋಲಾರಮ್ಮನ ಕೆರೆ ಪಕ್ಕದ ರಸ್ತೆಯಲ್ಲಿ ಜನಪ್ರತಿನಿಧಿಗಳಿಗೆ ಹೂವಿನ ಅಭಿಷೇಕದ ಮೂಲಕ ಹೋರಾಟ ಮಾಡಿ ಲೋಕೋಪಯೋಗಿ ಇಂಜಿನಿಯರ್ಗೆ ಮನವಿ ನೀಡಿ ಆಗ್ರಹಿಸಲಾಯಿತು.ಕೋಲಾರ ಜಿಲ್ಲೆಯ ರಸ್ತೆಗಳನ್ನು ಸಿಂಗಪೂರ್ ರಸ್ತೆಗಳನ್ನಾಗಿ ಮಾಡಿರುವ ಜನಪ್ರತಿನಿಧಿಗಳ ಮುಖವಾಡ ಧರಿಸಿ ಟೇಪ್ ಕಟ್ ಮಾಡುವ ಮೂಲಕ ಜಿಲ್ಲೆಯ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿರುವ ರಾಜಕಾರಣಿಗಳ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ […]