
ಕೋಲಾರ:-ಸರ್ಕಾರಿ ನೌಕರರು ಸರ್ಕಾರಿ ಕಛೇರಿಗಳಲ್ಲಿ ಹಲವಾರು ಒತ್ತಡಗಳಿಂದ ಕಾರ್ಯನಿರ್ವಹಿಸುತ್ತಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವಂತಾಗಲು ಡಿಸೆಂಬರ್ ಕೊನೆವಾರ ಅಥವಾ ಜನವರಿ 2ನೇ ವಾರ ಕ್ರೀಡಾಕೂಟ ನಡೆಸಿ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದರು.ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ, 2022-23ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, […]

ಕೋಲಾರ: ಜಿಲ್ಲಾಧಿಕಾರಿಗಳಾದ ವೆಂಕಟ್‍ರಾಜಾ ರವರು ಭಾರತ ದಾಖಲೆ ಪುಸ್ತಕ ಸೇರಿದ ಹೋರಾಟಗಾರ ಡಾ.ಕೋದಂಡ ರಾಮ್ ರವರಿಗೆ ‘ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ 2022’ ಪ್ರಮಾಣಪತ್ರ ನೀಡಿ ತಮ್ಮ ಸಾಮಾಜಿಕ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಮುಂದುವರೆಯಲಿ ಎಂದು ಆಶಿಸುತ್ತಾ ಶುಭಕೋರಿದರು.ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದಳವಾಯಿಹೊಸಹಳ್ಳಿಯ ದಲಿತ ಕುಟುಂಬಕ್ಕೆ ಸೇರಿದ ದಿ.ರಾಮಪ್ಪ ನವರ ಮಗನಾದ ಕೋದಂಡ ರಾಮ್ ರವರು ದಲಿತ ಸಂಘಟನೆಗಳ ಹೋರಾಟಗಳನ್ನು ನಡೆಸಿಕೊಂಡು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಅನಂತರ […]

ಮುಳಬಾಗಿಲು; ಡಿ.13: ದುಬಾರಿ ಬೆಲೆಗೆ ಪಶು ಆಹಾರ ಮಾರಾಟ ಮಾಡುತ್ತಿರುವ ಖಾಸಗಿ ಅಂಗಡಿಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತಸಂಘದಿಂದ ಪಶು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಪಶು ಸಂಗೋಪನೆ ಹಾಗೂ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಅತಿವೃಷ್ಠಿ, ಪ್ರಕೃತಿ ವಿಕೋಪಗಳಿಂದ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವ ರೈತರ ಬೆಳೆ ಕಣ್ಣ ಮುಂದೆಯೇ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ […]

ಶ್ರೀನಿವಾಸಪುರ: ಎಲ್ಲಾ ಕಡೆಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.ತಾಲ್ಲೂಕಿನ ಲಕ್ಷ್ಮೀಪುರ ಪ್ರೌಢ ಶಾಲೆ ಆವರಣದಲ್ಲಿ ಜಿಲ್ಲಾ ಎನ್‍ಡಿಆರ್‍ಎಫ್ ಇಲಾಖೆ, ತಾಲ್ಲೂಕು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪ್ರೌಢ ಶಾಲೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಾಲಾ ಸುರಕ್ಷತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಅಜಯ್ ಕುಮಾರ್ ಮಾತನಾಡಿ, ಸುರಕ್ಷತೆ ಸಾಮಾಜಿಕ ಜವಾಬ್ದಾರಿ. ಅದರ ನಿರ್ವಹಣೆ ಪ್ರತಿಯೊಬ್ಬರಿಗೂ ಸೇರಿದ್ದು. ಹಾಗಾಗಿ […]

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳನ್ನು ಜಾಗತೀಕರಣಗೊಳಿಸಲು ಕೋಲಾರ ಸುದ್ಧಿ ಮನೆ ವೆಬ್ ಸೈಟ್‍ನ್ನು ಜನವರಿ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಕಟಿಸಿದರು.ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವೆಬ್‍ಸೈಟ್‍ಗೆ ಕೋಲಾರ ಸುದ್ದಿಮನೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.ಜನವರಿ ತಿಂಗಳ ಸಂಕ್ರಾಂತಿ ವೇಳೆಗೆ ವೆಬ್‍ಸೈಟ್ ಲೋಕಾರ್ಪಣೆ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ […]

ಕೋಲಾರ:- ನಗರದ ಎಂ.ಸರಿತ ಕುಮಾರಿ ಮಂಡಿಸಿದ ಪ್ರೌಢ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಬೆಂಗಳೂರು ವಿವಿಯ 57 ನೇ ಘಟಿಕೋತ್ಸವಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಮತ್ತು ಉಪ ಕುಲಪತಿ ಡಾ.ಎಸ್.ಎಂ.ಜಯಕರ್ ಮತ್ತಿತರರು ಸರಿತಕುಮಾರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ.ಕೋಲಾರ ಜಿಲ್ಲೆಯ ಕ್ರೈಸ್ತ ಮಿಷನರಿಸಂಸ್ಥೆಗಳು ಮತ್ತು ದಲಿತ ಕ್ರೈಸ್ತ ಮಹಿಳೆಯರ ಸಮಾಜೋ ಆರ್ಥಿಕ ಬದಲಾವಣೆಯ ಚಾರಿತ್ರಿಕ ಅಧ್ಯಯನ (1900-2001) ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಅವರು ಪಡೆದುಕೊಂಡಿದ್ದಾರೆ.ಮುಳಬಾಗಿಲು ಪದವಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ ಎಂ.ಸರಿತಕುಮಾರಿ […]

ಕೋಲಾರ:- ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯನ್ನು ನೀಡಿದ ಹಾಗೂ ಅಪ್ರತಿಮ ಜನನಾಯಕರ ಹುಟ್ಟಿಗೆ ಕಾರಣವಾದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳು ಇಂದು ಮತ ಮಾರಾಟಕೇಂದ್ರಗಳಾಗುತ್ತ ವೆ ಎಂಬ ಕೆಟ್ಟ ಪರಂಪರೆಗೆ ಸಾಕ್ಷಿಯಾಗುತ್ತಿದ್ದು, ಇಂತಹ ಕಳಂಕವನ್ನು ಹೋಗಲಾಡಿಸಲು ಮಹಿಳೆಯರು ಸಂಕಲ್ಪ ಮಾಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ 22 ಮಹಿಳಾ ಸಂಘಗಳಿಗೆ 1.20ಕೋಟಿರೂ ಸಾಲ ವಿತರಿಸಿ ಅವರು ಮಾತನಾಡಿ, ಪ್ರಥಮ ಮುಖ್ಯಮಂತ್ರಿ ಕೆಸಿರೆಡ್ಡಿ, ಜನನಾಯಕರಾದ ಸಿ.ಬೈರೇಗೌಡರು, […]

ಕೋಲಾರ:- ಮಹಿಳೆಯರಂತೆ ಪುರುಷರು ಸಾಲ ಮರುಪಾವತಿಯಲ್ಲಿ ನಂಬಿಕೆ ಉಳಿಸಿಕೊಂಡರೆ ಮತ್ತಷ್ಟು ಪುರುಷ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.ನಗರದ ಖಾದ್ರಿಪುರ ಬಡಾವಣೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಪುರುಷ ಸಂಘಗಳಿಗೆ ಸಾಲ ವಿತರಿಸಿ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ಉಳಿಸಿ ಬೆಳೆಸಿದವರೇ ಮಹಿಳೆಯರು, ಅವರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಹಿರಿಮೆ ಕಾಪಾಡಿದ್ದಾರೆ ಎಂದರು.ಪುರುಷರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯವಿರುವ ಸಾಲವನ್ನು ಒದಗಿಸಲು ಬ್ಯಾಂಕ್ ಸಿದ್ದವಿದೆ ಎಂದ ಅವರು, […]

ಕೋಲಾರ: ಕಂಪ್ಯೂಟರ್ ಹಾಗೂ ಟೈಪಿಂಗ್ ಕಲಿಕೆ ಹಿಂದೆ ಆಯ್ಕೆಯಾಗಿತ್ತು ಆದರೆ ಈಗ ಅನಿವಾರ್ಯವಾಗಿದೆ ಮತ್ತು ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಅತ್ಯಗತ್ಯವೂ ಆಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಗುರುವಾರ 2023ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.ಕಲಿಕೆಗೆ ಅವಕಾಶ ಇರುವಾಗ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕಾಲ ವ್ಯರ್ಥ ಮಾಡಬಾರದು ಎಂದ ಅವರು, ಸಾಧನೆಗೆ ಪ್ರತಿಕ್ಷಣವೂ […]