ಶ್ರೀನಿವಾಸಪುರ: ಬಲಿಜ ಸಮುದಾಯಕ್ಕೆ ಸರ್ಕಾರ ಪೂರ್ಣ ಪ್ರಮಾಣದ 2ಎ ಮೀಸಲಾತಿ ಹಿಂದಿರುಗಿಸಬೇಕು ಎಂದು ತಾಲ್ಲೂಕು ಬಲಿಜ ಸಮುದಾಯದ ಮುಖಂಡ ಎಲ್.ವಿ.ಗೋವಿಂದಪ್ಪ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡಲಾಗಿತ್ತು. ಆದರೆ ಸಮುದಾಯದ ಗಮನಕ್ಕೆ ತರದೆ 3ಎ ಮೀಸಲಾತಿಗೆ ಸೇರಿಸಲಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ, ಸಮುದಾಯದ ಮನವಿಗೆ ಸ್ಪಂದಿಸಿ, ಶಿಕ್ಷಣಕ್ಕೆ ಮಾತ್ರ 2ಎ ಮೀಸಲಾತಿ ನೀಡಲಾಯಿತು. ಆದರೆ […]
ಕೋಲಾರ:- ನನ್ನ ವಿರುದ್ದ ದಾಖಲಾಗಿರುವ 9 ಕೇಸ್‍ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು.ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದ ಗೋವಿಂದರಾಜು ಹೇಳಿಕೆ ನೀಡಿ, ಡಿಸಿಸಿ ಬ್ಯಾಂಕ್‍ನಲ್ಲಿನ ಭ್ರಷ್ಟಾಚಾರದ ವಿರುದ್ದ 9 ಕೇಸುಗಳು ಹೈಕೋರ್ಟ್‍ನಲ್ಲಿದ್ದು, ಅದಕ್ಕೆ ಗೋವಿಂದಗೌಡರು ತಡೆಯಾಜ್ಞೆ ತಂದುಕೊಂಡಿದ್ದಾರೆ ಎಂದು […]
ಕೋಲಾರ:- ಶಿಕ್ಷಣ ಇಲಾಖೆ ಆಯುಕ್ತರು ಹಠಕ್ಕೆ ಬಿದ್ದು ಇಂದು ನಡೆಸಲು ಮುಂದಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಯಶಸ್ವಿಯಾಗಿದ್ದು, ಕಡೆಗೂ ಕೌನ್ಸಿಲಿಂಗ್‍ಅನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಶಿಕ್ಷಣ ಸಚಿವರೇ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದ್ದಾರೆ.ರಾಜ್ಯಾದ್ಯಂತ ಇಂದು ಆರಂಭವಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್‍ಗೆ ಸಂಬಂಧಿಸಿದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ, ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಕಳೆದ ವರ್ಷದ […]
ಕೋಲಾರ : ಪ್ರಜಾಧ್ವನಿ ಯಾತ್ರೆಯಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ , ಮೋದಿ ಬಂದ ಕಾಂಗ್ರೆಸ್ ಅಧಿಕಾರಕ್ಕೇರುವದು ಖಚಿತ ಎಂದರು. ನಗರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಮಾತನಾಡಿದ ಅವರು , 13 ನೇ ಜಿಲ್ಲೆಯ ಪ್ರವಾಸ ಪ್ರತಿ ಜಿಲ್ಲೆಯಲ್ಲಿಯೂ ಪ್ರಜಾಧ್ವನಿಗೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಸ್ಪಂದನೆ ಜನಸಮೂಹದಿಂದ ಹರಿದು ಬರುತ್ತಿದೆ. ರಾಜ್ಯದ ಜನ ಬಿಜೆಪಿ ಸರಕಾರದ ಆಡಳಿತದಿಂದ ಬೇಸತ್ತಿದ್ದಾರೆ , ನೊಂದಿದ್ದಾರೆ , ಅನೇಕ ಕಷ್ಟಗಳ […]
ಶ್ರೀನಿವಾಸಪುರ: ಇಲ್ಲಿನ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ಕನ್ಯಕಾಪರಮೇಶ್ವರಿ ಆತ್ಮಾರ್ಪಣಾ ದಿನೋತ್ಸವ ಆಚರಿಸಲಾಯಿತು. ಆತ್ಮಾರ್ಪಣಾ ದಿನಾಚರಣೆ ಪ್ರಯುಕ್ತ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ದೇವಾಲಯದಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ. ದೇವಿ ಮೂಲ ವಿಗ್ರಹಕ್ಕೆ 108 ಕಳಶಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.ಸಂಜೆ ಉಯ್ಯಾಲೋತ್ಸವ ಹಾಗೂ ಪ್ರಾಕಾರೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಲಘು ಉಪಹಾರದ […]
ಶ್ರೀನಿವಾಸಪುರ: ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಹೇಳಿದರು.ಗೊರವಿಮಾಕಲಪಲ್ಲಿ ಸಫಲಮ್ಮ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಬೆಳವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೆ ವಿದ್ಯಾರ್ಥಿಗಳ ಸೃಜನಶೀಲ ಅಭಿವೃದ್ಧಿ ಆಧುನಿಕ ಶಿಕ್ಷಣದ ಅತ್ಯಂತ ತುರ್ತು ಕಾರ್ಯಾಗಳಲ್ಲಿ […]
ಶ್ರೀನಿವಾಸಪುರ:ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು. ಯುವ ಸಮುದಾಯ ಸಾಹಿತ್ಯ ಕೃತಿಗಳ ಓದಿಗೆ ಹಿಂದಿರುಗಬೇಕು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕನ್ನಡ ಪ್ರೀತಿಗೆ ಕೊರತೆಯಿಲ್ಲ. ಆದರೆ ಜನರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.ಸರ್ಕಾರ ಗಡಿ […]
ಕೋಲಾರ : ಮಹಿಳೆಯರು ಠಾಣೆಯ ಬಳಿ ದೂರುಗಳನ್ನು ನೀಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿ ದೂರುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ನಿರ್ದೇಶನ ನೀಡಿದರು. ಇಂದು ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಮಹಿಳೆಯರಿಗೆ ಸಮಸ್ಯೆಗಳಾದಾಗ ಅವರು ಠಾಣೆಗೆ ದೂರನ್ನು ನೀಡಲು ಬರುತ್ತಾರೆ. ಇಂತಹ ದೂರುಗಳನ್ನು ಮಹಿಳೆಯರು ತಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಡೆದ ವಿಚಾರದ ಬಗ್ಗೆ ದೂರುಗಳನ್ನು ಸ್ವೀಕರಿಸಿ ಮುಂದಿನ ಕ್ರಮವನ್ನು ವಹಿಸಬೇಕೆಂದು […]
ಶ್ರೀನಿವಾಸಪುರ 3 : ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಬಿಆರ್‍ಸಿ ಕೆ.ಸಿ. ವಸಂತ ಕರೆ ನೀಡಿದರು.ಪಟ್ಟಣ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ವಿವಿಧ ಕ್ರೀಡೆಗಳ ಆಯ್ಕೆಗಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಅದರ ಸದುಪಯೋಗ […]