
ಕೋಲಾರ, ಜೂನ್22 : ಕೋಲಾರ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ನೂತನ ಜಿಲ್ಲಾಧಿಕಾರಿ ಅಕ್ರಂ ಪಾಷಾರವರು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊದಲ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸರ್ಕಾರ ಬದಲಾಗಿದೆ. ಸರ್ಕಾರದ ಕಾರ್ಯವೈಖರಿಯೂ ಬದಲಾಗಿದೆ ಆದ್ದರಿಂದ ಹೊಸ ಸರ್ಕಾರದ ಆಶಯಗಳಿಗನುಗುಣವಾಗಿ ಅದರ ವೇಗಕ್ಕೆ ತಕ್ಕಂತೆ ಕೆಲಸ ಮಾಡುವುದು ಕಾರ್ಯಾಂಗದ ಮೇಲಿನ ಜವಾಬ್ದಾರಿಯಾಗಿದೆ ಎಂದರು. ಜಿಲ್ಲಾ ಮಟ್ಟದ […]

ಕೋಲಾರ : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಕ್ರಮ್ ಪಾಷಾ ಅವರು ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು . ಕೋಲಾರ ಜಿಲ್ಲಾಧಿಕಾರಿಯಾಗಿ ಅಕ್ರಮ್ ಪಾಷಾ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು . ಈ ವೇಳೆ ಅಪರ ಜಿಲ್ಲಾಧಿಕಾರಿಯವರಿಗೆ ಹೂಗುಚ್ಚು ನೀಡಿ ಶುಭ ಕೋರಿದರು. ಈ ಸಂಧರ್ಭದಲ್ಲಿ ಉಪವಿಭಗಾಧಿಕಾರಿ ವೆಂಕಟಲಕ್ಷ್ಮಿ ಜಿಲ್ಲೆಯ ಎಲ್ಲ ತಹಸೀಲ್ದಾರ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರುಗಳು ಹಾಜರಿದ್ದರು.

ಪಟ್ಟಣದ ಎಂಜಿ ರಸ್ತೆಯಲ್ಲಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆ ಪ್ರಯುಕ್ತ 108 ಲೀಟರ್ ಕ್ಷೀರಾಭಿಷೇಕ ಕಾರ್ಯಕ್ರಮವು ತಾಲೂಕು ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಮೋಹನಾಚಾರಿ ನೇತೃತ್ವದಲ್ಲಿ ನಡೆಯಿತು. ಅರ್ಚಕ ಮಂಜುನಾಥಚಾರಿ ನಡೆಸಿಕೊಟ್ಟರು. ಮುಖಂಡರಾದ ರುದ್ರಪ್ಪ ಚಾರಿ, ಕೆ.ರತ್ನಚಾರಿ, ಕಾಳಾಚಾರಿ, ರವಿಚಂದ್ರಚಾರಿ, ರಾಮಚಂದ್ರಚಾರಿ, ಕೆ.ರಾದಮ್ಮ, ಕಾಳಮ್ಮ, ರಮೇಶ್ ಇದ್ದರು.

ಶ್ರೀನಿವಾಸಪುರ : ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಶೈಕ್ಷಣಿಕ ಸಾಮಾಗ್ರಿಗಳನ್ನು ಬಳಿಸಿಕೊಂಡು ಶೈಕ್ಷಣಿಕ ಪ್ರಗತಿ ಕಾಣುವಂತೆ ವಿದ್ಯಾರ್ಥಿಗಳಿಗೆ ಬಿಇಒ ವಿ.ಉಮಾದೇವಿ ಕರೆ ನೀಡಿದರು. ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಮೀಪ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶನಿವಾರ ಮಣಿಪುರಂ ರಿತಿ ಜ್ಯೂಲರೀಸ್ ವತಿಯಿಂದ ೨೫೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಬ್ಯಾಗ್ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರವು ಪ್ರತಿಯೊಬ್ಬ ಮಗುವು ಶಿಕ್ಷಣವನ್ನು ಪಡೆಯಲೇ ಬೇಕೆಂಬ ನಿಟ್ಟಿನಲ್ಲಿ ಅನೇಕ ಯೋಜನೆಗಳ ಮುಖಾಂತರ ಶಿಕ್ಷಣ ಪಡೆಯಲು ಪ್ರೋತ್ಸಾಹ ಮಾಡುತ್ತಿದೆ. ವಸತಿ ಶಾಲೆಯಲ್ಲಿ ಅನೇಕ ಮೂಲಭೂತ […]

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ವತಿಯಿಂದ ಶ್ರೀನಿವಾಸಪುರ ತಾಲ್ಲೂಕಿನ ತರ್ನಹಳ್ಳಿ ಗ್ರಾಮದಲ್ಲಿ “ಸಮಗ್ರ ಬೆಳೆ ನಿರ್ವಹಣೆ” ಅಡಿಯಲ್ಲಿ ಮಾವು ಬೆಳೆಯ ಕ್ಷೇತ್ರೋತ್ಸವ ನಡೆಸಲಾಯಿತು. ಗ್ರಾಮದ ಮಂಜುನಾಥ್ ಎಂಬ ರೈತರ ಮಾವಿನ ತೋಟದಲ್ಲಿ ಕಳೆದ ವರ್ಷ ಸಮಗ್ರ ಬೆಳೆ ನಿರ್ವಹಣೆ ಅಡಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡಿದ್ದು ಅದರ ಅಡಿಯಲ್ಲಿ “ಮಾವು ಬೆಳೆಯ ಕ್ಷೇತ್ರೋತ್ಸವ” ನಡೆಸಲಾಯಿತು. ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕ್ರಮಗಳನ್ನು ಅನುಸರಿಸಿದ ತರ್ನಹಳ್ಳಿ ಗ್ರಾಮದ ಮಂಜುನಾಥರವರು ತಮ್ಮ ಮಾವಿನ […]

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮನೆ ನೀಡುವಲ್ಲಿ ಗುಡಿಸಲು ವಾಸಿಗಳು ಹಾಗೂ ವಾಸಿಸಲು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿರವ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ […]

ಕೋಲಾರ:- ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದು ಬಡ್ಡಿರಹಿತ ಸಾಲ ಮಹಿಳೆಯರು ವದಂತಿಗಳಿಗೆ ಕಿವಿಗೊಡದಿರಿ, ಪಡೆದ ಸಾಲ ಮರುಪಾವತಿಸಿ, ಬ್ಯಾಂಕ್ ಉಳಿಸಿ ಬೆಳೆಸಿದ ನೀವು ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಲು ಕಾರಣರಾಗದಿರಿ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ತೀರ್ಮಾನಕ್ಕೂ ಬ್ಯಾಂಕಿಗೂ ಸಂಬಂಧವಿಲ್ಲ ಏಕೆಂದರೆ ಬ್ಯಾಂಕಿನ ಸ್ವಂತ ಬಂಡವಾಳ, ಠೇವಣಿ ಜತೆಗೆ ಅಫೆಕ್ಸ್ ಬ್ಯಾಂಕ್,ನಬಾರ್ಡ್ನಿಂದ ಸಾಲ ತಂದು ಮಹಿಳೆಯರಿಗೆ ಬಡ್ಡಿರಹಿತ […]

ಮುಳಬಾಗಿಲು,ಜೂ.16 : ಮುಳಬಾಗಲು ಬೈರಕೂರು ಹೋಬಳಿ ಹೀರೇಗೌಡನಹಳ್ಳಿಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಮಾತು ತಪ್ಪಿದ ಸರ್ಕಾರದ ವಿರುದ್ದ ಸಾಲ ಕಟ್ಟಲ್ಲ ಎಂದು ಸಿಡಿದೆದ್ದ ಮಹಿಳೆಯರುಸಾಲ ಮನ್ನಾ ಮಾಡುತ್ತೇನೆಂದು ಮಾತಿದ ತಪ್ಪಿದ ಕಾಂಗ್ರೇಸ್ ಸರ್ಕಾರ ಮಹಿಳೆಯರ ಆಕ್ರೋಶಕ್ಕೆ ಗುರಿಯಾದ ಪಲವಾಗಿ ಇಂದು ಸಾಲವಸೂಲಿಗೆ ಹೋದ ಸೋಸೈಟಿ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದು ಆಗಿ ಸಾಲ ವಸೂಲಿ ಮಾಡಲು ಬಂದರೆ ಹುಷಾರ್ ಸಾಲ ಮನ್ನಾ ಮಾಡುತ್ತೇವೆಂದು ನಮಗೆ ಮೋಸ ಮಾಡಿದ ಮುಖ್ಯಮಂತ್ರಿಗಳ ಬಳಿ ಸಾಲ ವಸೂಲಿ ಮಾಡಿಕೊಳ್ಳಿ […]

ಕೋಲಾರ ಜೂ.16: ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರತಿ 100 ಮೊಟ್ಟೆಗೆ 1 ಲಕ್ಷ ಪರಿಹಾರ ಜೊತೆಗೆ ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ತಂಡ ರಚನೆ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೇಷ್ಮೆ ಸಚಿವರನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯ ಮಾಡಿದರು.ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ವರದೇನಹಳ್ಳಿ ರೈತ ರಮೇಶ್ ಅವರ ಹುಳ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಟೊಮೇಟೊ ಮಾವಿಗೆ ರೋಗ ಬಾಧೆ, ಹೈನೋದ್ಯಮಕ್ಕೆ ಕಲಬೆರಕೆ […]