
ಕುಂದಾಪುರ:ಇತ್ತಿಚೆಗೆ ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಭಾರ ಎತ್ತುವ ಸ್ಪರ್ಧೆ 2024-25 ದಿಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿ ಸಮಗ್ರ ಪ್ರಶಸ್ತಿ ಪಡೆಯಿತು.

ರೋಲರ್ ಸ್ಕೇಟಿಂಗ್‌ಗಾಗಿ ಮೌಂಟ್ ಕಾರ್ಮೆಲ್‌ನ ಜೆಸ್ನಿಯಾ ಕೊರಿಯಾ ಅವರಿಗೆ ಪ್ರತಿಷ್ಠಿತ “ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ” ನೀಡಿ ಗೌರವಿಸಲಾಗಿದೆಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ 8 ನೇ ತರಗತಿಯ ಪ್ರತಿಭಾನ್ವಿತ ರೋಲರ್ ಸ್ಕೇಟರ್ ಜೆಸ್ನಿಯಾ ಕೊರಿಯಾ ಅವರಿಗೆ ರೋಲರ್ ಸ್ಕೇಟಿಂಗ್‌ನಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ 2024-25 ರ ಗೌರವಾನ್ವಿತ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಾರ್ಚ್ 8, 2025 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, […]

ಫೆಬ್ರವರಿ 5, 2025 ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆದ ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಬ್ರೌನ್ ಬೆಲ್ಟ್ 17 ವಯಸ್ಸಿನೊಳಗಿನ ವಿಭಾಗದ ಕಟಾದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿ -45ಕೆಜಿ ವಿಭಾಗದ ಕುಮಿಟೆಯಲ್ಲಿ ಬೆಳ್ಳಿ ಪದಕವನ್ನು ಪಡೆದು ತನ್ನ ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ. ಇಲ್ಲಿಯ ತನಕ 16 ಚಿನ್ನ 8 ಬೆಳ್ಳಿ ಮತ್ತು 3 ಕಂಚಿನ ಪದಕದ ಜೊತೆ ಒಟ್ಟಾರೆ 27 ಪದಕಗಳನ್ನು ಸಂಪಾದಿಸಿರುವ ಸಾನಿಧ್ಯ, 2024 ಸಾಲಿನ ಡಾ. ಶಿವರಾಮ ಕಾರಂತ ಪುರಸ್ಕಾರಕ್ಕೆ ಭಾಜರಾಗಿರುವುದನ್ನು […]

ಮಂಗಳೂರು; ಜನವರಿ 5 ರಿಂದ 10, 2025 ರವರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟ ಫೆಡರೇಶನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಅಂಡರ್ -19 ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಹುಲಿಗೆಮ್ಮ ಕರ್ನಾಟಕವನ್ನು ಪ್ರತಿನಿಧಿಸಿದರು. ಅವರು ಅಸಾಧಾರಣ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದರು ಮತ್ತು ಬೆಳ್ಳಿ ಪದಕವನ್ನು ಪಡೆದರು. ಹುಲಿಗೆಮ್ಮ ಅವರ ಗೆಲುವು ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಯಾರಾದರೂ ಚಾಂಪಿಯನ್ ಆಗಬಹುದು ಎಂಬುದನ್ನು ಸಾಬೀತುಪಡಿಸುತ್ತದೆ. ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಮತ್ತು […]

ಮಂಗಳೂರು,ಫೆಬ್ರವರಿ 2, 2025 ರಂದು ಮಂಗಳೂರಿನ ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ® ಆಯೋಜಿಸಿದ್ದ ಪುರುಷರ ಮುಕ್ತ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅನುಭವಿ ಜೋಡಿ ಗ್ಲಾನಿಶ್ ಮತ್ತು ರಾಯ್ಡೆನ್ ಅವರನ್ನು ಸೋಲಿಸಿ ಆರುಷ್ – ಮೋಹಿತ್ ಜೋಡಿ ಪ್ರಶಸ್ತಿ ಗೆದ್ದುಕೊಂಡರು ಅಸೋಸಿಯೇಷನ್ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯ ನಾಲ್ಕನೇ ಆವೃತ್ತಿಯಲ್ಲಿ ವಿವಿಧ ವಯೋಮಾನದ 110 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರಿಂದ ಅವಿಭಜಿತ ಮಂಗಳೂರು ಡಯಾಸಿಸ್‌ನ ಕ್ರಿಶ್ಚಿಯನ್ ಸಮುದಾಯಕ್ಕೆ ಹಬ್ಬದ ವಾತಾವರಣವಿತ್ತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸೇಂಟ್ ಅಲೋಶಿಯಸ್ ಐ.ಟಿ.ಐ. ನಿರ್ದೇಶಕ […]

ಕುಂದಾಪುರ; ಕಂಡ್ಲೂರಿನ ಜಿಯಾ ಪಬ್ಲಿಕ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರತಿಭಾನ್ವಿತ ಯುವ ಕರಾಟೆ ಪಯಣದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದಾರೆ. ಅವರು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಪ್ರತಿಷ್ಠಿತ ಪದಕವನ್ನು ಗಳಿಸಿದರು ಮತ್ತು ಈ ಜುಲೈನಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆದರು. ಶೇಖ್ ಸಯ್ಯದ್ ಮಕ್ಬೂಲ್ ಮತ್ತು ಬಿಸ್ಮಿಲ್ಲಾ ಯಾಸ್ಮಿನ್ ಅವರ ಪುತ್ರ ಸಫಾನ್, ಕುಂದಾಪುರದ ಕೆಡಿಎಫ್ ಕರಾಟೆ ಮತ್ತು ಫಿಟ್‌ನೆಸ್ ಅಕಾಡೆಮಿಯಲ್ಲಿ ಕಿರಣ್ ಕುಂದಾಪುರ, ಶಿಹಾನ್ […]

ಕುಂದಾಪುರ; ಕೆ. ಡಿ. ಫ್ 2025 ಕಪ್.ಕಿರಣ್, ಸ್ ಡ್ರಾಗನ್ ಫೀಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿತ, ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಅಂಡ್ ರೆಸಾರ್ಟ್ ಕುಂದಾಪುರ ಇಲ್ಲಿ ಜನವರಿ 19 ರಂದು ನೆಡೆದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಇಂಟರ್ ಡಾಜೊ ಕರಾಟೆ -ಕೆ. ಡಿ. ಎಫ್ ಕಪ್ -2025 ಚಾಂಪಿಯನ್ಶಿಪ್ ನಲ್ಲಿ ಜ್ಞಾನೇಶ್ ಎ ಮೊಗವೀರ ಪ್ರಥಮ ಸ್ಥಾನ ಪಡೆದಿದ್ದಾನೆ.ಈತ ಕಿರಿ ಮಂಜೇಶ್ವರ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿ 6ನೇ ತರಗತಿಯಲ್ಲಿ […]

ಗಂಗೊಳ್ಳಿ :ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ಜ. 12 ರಂದು ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸ್ಟೇಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಅನ್ಸನ್ ಫೇರ್ನಾoಡಿಸ್ ಗಂಗೊಳ್ಳಿ,ಇವನು ದ್ವಿತೀಯ ಸ್ಥಾನ ಪಡೆದಿದ್ದಾನೆ. ಇವನು ಗಂಗೊಳ್ಳಿಯ ಪ್ರವೀಣ್ ಫೇರ್ನಾoಡಿಸ್ ಮತ್ತು ಮೊಂತಿನ್ ಫೇರ್ನಾoಡಿಸ್ ದಂಪತಿಯ ಪುತ್ರ.

ಕುಂದಾಪುರ(ಜ.11): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬೈಂದೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್-2025 ರಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುತ್ತಾರೆ. ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಆರ್ಯನ್ ಕೆ.ಪೂಜಾರಿ ಮತ್ತು ಅಥರ್ವ ಖಾರ್ವಿ ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕವನ್ನು, ದಕ್ಷ ಆರ್ ಖಾರ್ವಿ ಕಟಾ-ಪ್ರಥಮ, ಕುಮಿಟೆ-ದ್ವಿತೀಯ, ಅರ್ನೋನ್ ಡಿ.ಅಲ್ಮೆಡಾ ಕಟಾ-ದ್ವಿತೀಯ ಕುಮಿಟೆ-ಪ್ರಥಮ, ಪ್ರತೀಕ್ ಕಟಾ- ದ್ವಿತೀಯ ಕುಮಿಟೆ-ಪ್ರಥಮ, […]