ಕೋಲಾರ,ಜೂ,3: ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ 11 ವರ್ಷದ ಹೆಣ್ಣು ಮಗು ಸಂಪೂರ್ಣ ಗುಣಮುಖವಾದ ಸಾಧನೆಯ ಸುದ್ದಿ ಡಾ. ವೈ ಸಿ ಬೀರೇಗೌಡ ರವರ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ದೊರಕಿದೆ.ಈ ಹೆಣ್ಣು ಮಗು ಜನನವಾಗಿದ್ದು ಇದೇ ಆಸ್ಪತ್ರೆಯಲ್ಲಿ. ಜನಿಸಿದಾಗಲೇ ಈ ಕಂದನಲ್ಲಿ ಥೆಲಸೆಮಿಯ ಖಾಯಿಲೆಯು ಪತ್ತೆಯಾಗಿತ್ತು. ತದನಂತರ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ಬದಲಾವಣೆ ಕಾರ್ಯ ಸಹ ನಡೆಯುತ್ತಿತ್ತು. ಇದರಿಂದ ಮುಕ್ತಿ ಹೊಂದಲು ಪೋಷಕರು ಪರಿತಪಿಸುತ್ತಿದ್ದರು. ಆಗ ಡಾ.ವೈ.ಸಿ ಬೀರೇಗೌಡರವರ ಸಲಹೆಯಂತೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ […]

Read More

ಕುಂದಾಪುರ,ಜೂನ್ 4 : ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಏರ್ಪಡಿಸಿದ ಮುದ್ದು ಯೇಸು ಫೋಟೊ ಸ್ಫರ್ಧೆಯ ವಿಜೇತರಿಗೆ ಕೋಟೆಶ್ವರ ಕಟ್ಕರೆಯ ಬಾಲ ಯೇಸುವಿನ ಆಶ್ರಮದಲ್ಲಿ ಮತ್ತು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಗುರುವಾರದಂದು ಬಾಲ ಯೇಸುವಿನ ನೊವೆನಾದ ದಿವಸ ವಿಜೇತರಿಗೆ ಶುಕ್ರವಾರದಂದು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ,ಆಶ್ರಮದ ನೂತನ ಮುಖ್ಯಸ್ಥರಾದ ವಂ|ಪ್ರವೀಣ್ ಪಿಂಟೊ ಮತ್ತು ಧರ್ಮಗುರು ವಂ|ಜೋ ತಾವ್ರೊ ವಿಜೇತ ಮಕ್ಕಳಿಗೆ ಬಹುಮಾನವನ್ನು […]

Read More

ಕೋಲಾರ:- ಸದಾ ರೈತರು,ಸಾರ್ವಜನಿಕರ ಸಂಪರ್ಕ ಹೊಂದಿರುವ ಕಂದಾಯ,ಸರ್ವೇ ಇಲಾಖೆಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಜನಸ್ನೇಹಿಯಾಗಿಸಲು ಇಲಾಖೆ ನೌಕರರು ಹೆಚ್ಚಿನ ಹೊಣೆಗಾರಿಕೆಯಿಂದ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯದ ನೂತನ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ಕಂದಾಯ ಸಚಿವರಾದ ನಂತರ ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳ ಭೂಮಾಪನ ಹಾಗೂ ಕಂದಾಯ ಇಲಾಖೆಗಳಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.ಕಚೇರಿಗಳಿಗೆ ಬರುವ ರೈತರನ್ನು ಅಲೆಸದೇ ಜನಪರವಾಗಿ ಕೆಲಸ ಮಾಡೋಣ, ನೌಕರರ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಪರಿಹರಿಸುವೆ ಆದರೆ ಜನರ ಕಷ್ಟಗಳಿಗೆ […]

Read More

(ಜಾಹಿರಾತು) (Advertisement) ವಿಶ್ವ ವಿಖ್ಯಾತ ಪವಾಡ ಪುರುಷಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ-2023ಪ್ರಿಯ ಭಕ್ತಾಧಿಗಳೇ,ಬಸಿಲಿಕಾ ಮಹೋತ್ಸವದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಪವಾಡ ಪುರುಷ ಸಂತ ಅಂತೋಣಿಯವರ ಮೂಲಕ ಪ್ರಭು ಯೇಸುವಿನ ವರದಾನಗಳನ್ನು ಪಡೆದು ಪಾವನರಾಗಲು ತಮ್ಮೆಲ್ಲರನ್ನು ಮೈಸೂರು ಧರ್ಮಕ್ಷೇತ್ರದ ಪರವಾಗಿ ಆತ್ಮೀಯವಾಗಿ ಆಮಂತ್ರಣ ನೀಡಿದ್ದಾರೆ.

Read More

ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ತಳಿರು-ತೋರಣ,ಬಲೂನು ಕಟ್ಟಿ ಬ್ಯಾಂಡ್ ಸದ್ದಿನೊಂದಿಗೆ ಭವ್ಯ ಮೆರವಣೆಯ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

Read More

The worldwide known Annual Feast of St Anthony Basilica Dornahalli will be celebrated on tuesday 13 June 2023 .As a preparation for the feast nine days novenas will be held from 4 june 2023.  The flag hoisting ceremony after which the novena begins, will be held at 5.30 pm on June 4. The Eucharistic celebration […]

Read More

ಎಂಐಟಿಕೆ ಮೂಡ್ಲಕಟ್ಟೆ ಕಾಲೇಜಿನಲ್ಲಿ ಹಳೆವಿದ್ಯಾರ್ಥಿಗಳ ಸಮ್ಮಿಲನ ಮಿಲಾಪ್ 2023” ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 2008ರಿಂದ ಹಿಡಿದು 2022ರವರೆಗೆ ಪದವಿ ಪಡೆದ ನೂರಾರು ವಿದ್ಯಾರ್ಥಿಗಳ ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂರವರು ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳ ಪದೋನ್ನತಿ ಅರಿತು ಹೆಮ್ಮೆ ವ್ಯಕ್ತಪಡಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜ, ಡೀನ್ ಟಿಪಿಐಆರ್ ಪ್ರೊ. ಅಮೃತಮಾಲಾ, ಪ್ರೊ. ಬಾಲನಾಗೇಶ್ವರ, ಪ್ರೊ. ಸೂಕ್ಷ್ಮ ಅಡಿಗರವರು ಈ […]

Read More

ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದ ಸಮೀಪ, ಶ್ರೀನಿವಾಸಪುರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಲಾರಿ ಮತ್ತು ಈಚರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಒಬ್ಬರು ಸ್ಥಳದಲ್ಲಿಯೇ ಸತ್ತು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ತಮಿಳು ನಾಡಿನ ಈಚರ್ ಚಾಲಕ ಸತ್ಯ (35) ಸ್ಥಳದಲ್ಲಿಯೇ ಸತ್ತಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದು, ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಅಪಘಾತದಲ್ಲಿ ಲಾರಿ ಹಾಗೂ ಈಚರ್ ನಜ್ಜುಗುಜ್ಜಾಗಿದ್ದು, ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More
1 50 51 52 53 54 181