ಚಿತ್ರಗಳು ಎರವಲು ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಭೀಕರ ಕೊಲೆ ಪ್ರಕರಣದ ಮ್ರತರ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.ಇದಕ್ಕೂ ಮೊದಲು ಮ್ರತ ದೇಹಗಳ ಪೋಸ್ಟ್ ಮಾರ್ಟಮ್ ನೆಡೆಸಿ ಮ್ರತ ದೇಹಗಳನ್ನು ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಯಿತು. ಮ್ರತ ಶರೀರಗಳನ್ನು ನೇಜಾರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು, ದರ್ಶನ ಪಡೆದ ನಂತರ ನಾಲ್ಕು ಮೃತದೇಹವನ್ನು ಕೋಡಿಬೆಂಗ್ರೆ ಮಸೀದಿಗೆ ಸಾಗಿಸಿ ಜನಾಝ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಜನ ಪಾಲ್ಗೊಂಡರು. ನಂತರ ಸಮೀಪದ ದಫನ ಭೂಮಿಯಲ್ಲಿ […]
ಕೋಲಾರ : ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಯಾದ ಯರಗೊಳ್ ಯೋಜನೆಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಾಲನೆ ನೀಡಿದರು. ನಂತರ ಸಭಿಕರನ್ನುದ್ದೇಶಿ ಮಾತನಾಡಿದ ಅವರು ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ,ಎತ್ತಿನ ಹೊಳೆ ಸೇರಿದಂತೆ ರಾಜ್ಯದ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಈ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಯರಗೊಳ್ ಜಲಾಶಯದ ಕುಡಿಯುವ ನೀರನ್ನು ಕೆ. ಜಿ. ಎಫ್ ತಾಲ್ಲೂಕಿಗೂ ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ. […]
ಬಸ್ರೂರು, ಇಲ್ಲಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪಿಠೋಪಕರಣಗಳ ಕೊಡುಗೆಯನ್ನು ದಿ.ನಾರಯಣ ಶೆಟ್ಟಿ ಕೊಳ್ಕೆಬೈಲ್ ಸ್ಮರ್ಣಾರ್ಥ ಅವರ ಪುತ್ರರಾದ ಅನಿಲ್ ಪ್ರಸಾದ್ ಶೆಟ್ಟಿ ಮತ್ತು ಶಿವ ಪ್ರಸಾದ್ ಶೆಟ್ಟಿ ಇವರುಗಳು ನೀಡಿದ 80 ಸಾವಿರ ರೂ. ಮೌಲ್ಯದ ಪಿಠೋಪಕರಣಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿಯವರು ಶಾಲೆಗೆ ಹಸ್ತಾಂತರಿಸಿದರು.ದಾನಿಗಳಾದ ಅನಿಲ್ ಪ್ರಸಾದ್ ಶೆಟ್ಟಿಯವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ರಾಮ್ ಕಿಶನ್ ಹೆಗ್ಡೆ, ಗ್ರಾ.ಪಂ. ಸದಸ್ಯೆಯರಾದ ಇಂದಿರಾ ಪೂಜಾರಿ, ಮಾಲತಿ […]
ಬೆಂಗಳೂರು : ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಢದಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ ವಂಚಿಸಿದ ಪ್ರಕರಣ ಸಂಬಂಧಿಸಿದಂತೆ ಹಿಂದುತ್ವವಾದಿ ಭಾಷಣಗಾರ್ತಿ , ಕುಂದಾಪುರದ ಚೈತ್ರಾ ಮತ್ತು ಅವಳ ತಂಡದ ವಿರುದ್ಧ 68 ಸಾಕ್ಷಿಗಳು ಕಲೆ ಹಾಕಿ 800 ಪುಟಗಳ ಚಾರ್ಜ್ ಶೀಟ್ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಬುಧವಾರ ನಗರದ 3ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 75 ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿರುವ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ […]
ಹಾಸನ, ನ.9: ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ‘ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ’ ಎಂದು ತನ್ನ ಟೇಬಲ್ ಮೇಲೆ ಬೋರ್ಡ್ ಹಾಕಿರುವ ದೃಶ್ಯದ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಹಾಸನ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್ ತಮ್ಮ ಟೇಬಲ್ ಮೇಲೆ ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಬೋರ್ಡ್ ಹಾಕಿರುವುದು ಗಮನ ಸೆಳೆದಿದೆ. ಲೋಕೇಶ್ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ […]
ಬೆಂಗಳೂರು: ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಟಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್‌ಗೆ ಸಿಲುಕಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಹಿಳೆ ಶ್ವೇತಾ(33) ಎಂದು ತಿಳಿದು ಬಂದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಽ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು, ಮಲ್ಲತ್ತಹಳ್ಳಿಯಲ್ಲಿ ವಾಸ ಮಾಡುತಿದ್ದ ಶ್ವೇತಾ, ಬುಧವಾರ ದಿವಸ ಶ್ರೀಪೇಂಟ್ಸ್ ಫ್ಯಾಕ್ಟರಿಯಲ್ಲಿ ಡ್ಯೂಟಿಯಲ್ಲಿದ್ದು ಬಣ್ಣ ಬೆರೆಸುವ ಗ್ರೈಂಡರ್ ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾಳ ತಲೆ ಸೆಳೆದುಕೊಂಡಿದೆ, ಪರಿಣಾಮ ತಲೆ ಕತ್ತರಿಸಿ ಹೋಗಿ ಶ್ವೇತಾ ಮೃತಪಟ್ಟಿದ್ದಾರೆ ಎಂದು ತಿಳಿದು […]
ಕುಂದಾಪುರ: ನವೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ಕುಂದುಕೊರತೆ ಪರಿಹಾರ ಕೋಶ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗಾಗಿ “ಉತ್ತಮ ನೈರ್ಮಲ್ಯ ಮತ್ತು ಸಾಮಾಜಿಕ ಅಭಿವೃದ್ಧಿ” ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಮನೀಶ್ ಆಸ್ಪತ್ರೆಯ ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಪ್ರಮೀಳಾ ನಾಯಕ್ ಮಾತನಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಿರಬೇಕು. ನಿತ್ಯವು ಒಂದು ಜಾತಿಯ ತರಕಾರಿ, ಒಂದು ಲೋಟ […]
ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಜನರು ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಕೇಂದ್ರದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಯಲ್ಪಾಡ್ ಹೋಬಳಿ […]
ಬೆಂಗಳೂರು,ನ.6: ಬೆಂಗಳೂರಿನ ಸಹಕಾರ್ ನಗರದ ಹೋಲಿ ತ್ರಿನಿಟಿ ಚರ್ಚಿನಲ್ಲಿ ನ. 5 ರಂದು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಮರುನಾಮಕರಣದ ಸುವರ್ಣ ಮಹೋತ್ಸವ ಉತ್ಸಾಹ ಸಂಭ್ರಮದಿಂದ ಆಚರಿಸಲಾಯಿತು ಜೊತೆಗೆ ರಾಜ್ಯೋತ್ಸವದ ಸ್ಥಳೀಯ ಲಯನ್ಸ್ ಕ್ಲಬ್ ನೇತ್ರತ್ವದಲ್ಲಿ, ಸ್ವಯಂ ರಕ್ತದಾನ ಶಿಬಿರ ನಡೆಯಿತು.ಬೆಳಿಗೆನೇ ಬಲಿದಾನದ ಬಳಿಕ ಕನ್ನಡ ಧ್ವಜರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ಸೆಕ್ರೆಟ್ ಹಾರ್ಟ್ ಶಾಲೆಯ ಅಧ್ಯಾಪಕ ಧರ್ಮಗುರು ವಂ|ರಾಯಪ್ಪನವರು ಧ್ವಜರೋಹಣ ಗೈದು. ಕನ್ನಡ ಭಾಶೆಯ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿದರು. “ಕನ್ನಡ […]