
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ನಿವಾಸಪುರ: ಎಸ್‌ಎಸ್‌ಎಲ್ಸಿ ಯಲ್ಲಿ ಮರುಪಾಪನ : ಸಿರಿ.ಆರ್.ಕುಲಕರ್ಣಿಗೆ 620 ಅಂಕ – ರಾಜ್ಯದಲ್ಲಿ 6ನೇ ಸ್ಥಾನ ನಿವಾಸಪುರ: ಪಟ್ಟಣದ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಿರಿ.ಆರ್.ಕುಲಕರ್ಣಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದಲ್ಲಿ 6ನೇ ಸ್ಥಾನ, ಜಿಲ್ಲಾಗೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮರಾಗಿದ್ದಾರೆ. ಮರು ಮೌಲ್ಯ ಮಾಪನದಲ್ಲಿ 3 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ 3ನೇಯವರಾಗಿ, ಜಿಲ್ಲೆಗೆ ಪ್ರಥಮರಾಗಿ, ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಹೊರವೊಮ್ಮುವುದರೊಂದಿಗೆ ಶಾಲಾ ಆಡಳಿತ ಮತ್ತು ಬೋಧಕ ವೃಂದದವರಲ್ಲಿ ಹಾಗೂ ಪೋಷಕರಲ್ಲಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸಲು ರೈತರನ್ನು ಪ್ರೇರೇಪಿಸಿ- ಡಾ|| ಎನ್ .ಮಂಜುಳ. ಕೋಲಾರ:ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸುವಂತೆ ರೈತರನ್ನು ಪ್ರೇರೇಪಿಸಿ ಅನಾಹುತಗಳು ಆಗದಂತೆ ತಡೆಗಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ|| ಎನ್. ಮಂಜುಳ ಅವರು ಸೂಚಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿಭಾಗ್ಯ ಯೋಜನೆಯಲ್ಲಿ ರೈತರಿಗೆ ಹಸಿರು ಮನೆ ನೆರಳು ಪರದೆ, ಕೃಷಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಮಹಿಳಾ ಕಾರ್ಮಿಕರಿಗೆ ತೊಂದರೆಯಾದರೆ ಉಗ್ರ ಹೋರಾಟ: ಕೆ.ಎಂ.ಸಂದೇಶ್ ಮಹಿಳಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೋರಿ ಕಾರ್ಖಾನೆ ಎದುರು ಪ್ರತಿಭಟನೆ ಕೋಲಾರ: ಅಂಬೇಡ್ಕರ್ ಸೇವಾ ಸಮಿತಿಯ 120ನೇ ಹೋರಾಟವನ್ನು ಕೋಲಾರದ ಬೆತ್ತನಿ ಗ್ರಾಮದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆ ಎದುರು ಮಹಿಳಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಕೆ.ಎಂ.ಸಂದೇಶ್ ಮಾತನಾಡಿ ಮಹಿಳಾ ಕಾರ್ಮಿಕರಿಗೆ ತೊಂದರೆಯಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಹಾಗೂ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡ(ಎಸ್.ಟಿ)ಗೆ ಕೇಂದ್ರ ಸರ್ಕಾರದಲ್ಲಿ ನೀಡುತ್ತಿರುವ ಪ್ರಕಾರ ಸಂವಿಧಾನತ್ಮಕವಾಗಿ ಮೀಸಲಾತಿಯನ್ನು ವಿಸ್ತರಿಸುವಂತೆ ಜಿಲ್ಲಾ ಶ್ರೀ ವಾಲ್ಮೀಕಿ ನಾಯಕ ಸಂಘಟನೆಗಳ ಒತ್ತಾಯ ಕೋಲಾರ.ಜೂ,6: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡ(ಎಸ್.ಟಿ)ಗೆ ಕೇಂದ್ರ ಸರ್ಕಾರದಲ್ಲಿ ನೀಡುತ್ತಿರುವ ಪ್ರಕಾರ ಸಂವಿಧಾನತ್ಮಕವಾಗಿ ಮೀಸಲಾತಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾ ಶ್ರೀ ವಾಲ್ಮೀಕಿ ನಾಯಕ ಸಂಘಟನೆಗಳ ಯುವ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪರಿಶಿಷ್ಟ ವರ್ಗದವರಿಗೆ ಕರ್ನಾಟಕ ರಾಜ್ಯದಸಲ್ಲಿ ಕೇಂದ್ರ ಸರ್ಕಾರ ನಿಗಧಿಪಡಿಸಿರುವ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ.ಜೂ,6: ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕೋಲಾರ.ಜೂ,6: ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಆವರಣದೊಳಗೆ ಪ್ರವೇಶಿಸದಾಗ ಪೊಲೀಸರು ಕಾಂಪೌಂಡ್ ಗೇಟ್ ಬಾಗಿಲು ಮುಚ್ಚಿ ಒಳಗೆ ಬಿಡಲು ನಿರಾಕರಿಸಿದಾಗ ಸಂಘದ ಮುಖಂಡರಿಗೂ ಹಾಗೂ ಪೊಲೀಸರಿಗೂ ವಾಗ್ವಾದ ನಡೆದು ಕೊನೆಗೆ ಸಂಘಟನೆಯವರು ರಾಷ್ಟ್ರೀಯ ಹೆದ್ದಾರಿ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ನಿರ್ದೇಶಕರಿಂದ ಜಿಲ್ಲೆಯ ಜನತೆಗೆ ರಂಜಾನ್ ಈದುಲ್ ಫಿತ್ರ್ ಹಬ್ಬದ ಶುಭಾಶಯ. ಶ್ರೀನಿವಾಸಪುರ: ದಿನಾಂಕ: 05-06-2019 ರಂದು ಬುಧವಾರ ಕೋಲಾರ ಜಿಲ್ಲೆಯಾದ್ಯಂತ ಆಚರಿಸುತ್ತಿರುವ ಈದುಲ್ ಫಿತ್ರ್ ಹಬ್ಬವು ಮುಸ್ಲಿಂ ಬಾಂಧವರಿಗೆ ಸುಖ, ಶಾಂತಿ, ನೆಮ್ಮದಿಯನ್ನು ನೀಡಲೆಂದು ನಿರ್ದೇಶಕರು ಶ್ರೀನಿವಾಸಪುರ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ಶ್ರೀನಿವಾಸಪುರ ತಾಲ್ಲೂಕು ಶಬ್ಬೀರ್ ಅಹಮ್ಮದ್ ಅವರು ಹೃದಯಪೂರ್ವಕವಾಗಿ ಶುಭಾಶಯಗಳನ್ನು ಹಾರೈಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ಮಾಹಿತಿಯು ಜನರಿಗೆ ತಿಳಿಯಬೇಕು. ಇದರಿಂದ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಗ್ರೀನ್ ಯೋಜನೆಯಡಿ ಟೊಮ್ಯೋಟೋ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ ಬಡ್ಡಿರಹಿತ ಸಾಲದ ಮೊತ್ತ 10ಲಕ್ಷಕ್ಕೇರಿಸಲು ಕ್ರಮ -ಸ್ವೀಕರ್ ರಮೇಶ್‍ಕುಮಾರ್ ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಲು ಒಂದು ವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು. ಭಾನುವಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸುಗಟೂರು ಹೋಬಳಿಯ 186 ಸ್ವಸಹಾಯ […]

ವರದಿ:ಶಬ್ಬೀರ್ ಅಹ್ಮದ್ ಅರ್ಕ ಶಾಲೆಯಲ್ಲಿ ಮಾನಸಿಕ ಆರೋಗ್ಯ, ಸಂವಹನ ಕಾರ್ಯಾಗಾರ : ಕಲಿಕೆಗೆ ಮನೋವಿಜ್ಞಾನವು ಪೂರಕ-ಡಾ.ಸುಬ್ರಹ್ಮಣ್ಯಂ ಅಭಿಮತ ಕೋಲಾರ:- ಮಕ್ಕಳ ಮನಸ್ಸಿನ ಭಾವನೆಗೆ ಘಾಸಿಗೊಳಿಸದೆ ಪೋಷಣೆ ಮಾಡಿದಲ್ಲಿ ಸಕಾರಾತ್ಮಕ ವ್ಯಕ್ತಿತ್ವ ರೂಪಗೊಂಡು ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಮನೋವೈದ್ಯ ಡಾ|| ಎಸ್. ಸುಬ್ರಹ್ಮಣ್ಯ ತಿಳಿಸಿದರು. ಶನಿವಾರ ತಾಲ್ಲೂಕಿನ ಮಡೇರಹಳ್ಳಿಯ ಅರ್ಕ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸಂವಹನೆ ಕುರಿತಾಗಿ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. ಪೋಷಕರು ಬಾಲ್ಯದಿಂದಲೇ ಮಗುವಿನ ಗುಣಗಳನ್ನು ಗಮನಿಸುತ್ತಾ ಅವಶ್ಯವಿದ್ದಲ್ಲಿ ಸೂಕ್ತ […]