ಜೂನ್ 16 ರಂದು ಸಂತ ಅಂತೋನಿ ಪಡುಕೋಣೆಯಲ್ಲಿ ಕೆಥೋಲಿಕ್ ಸಭಾ ಹಾಗೂ ಐ.ಸಿ.ವೈಮ್, ಪಡುಕೋಣೆ ಸಹಭಾಗಿತ್ವದಲ್ಲಿ ಅಪ್ಪಂದಿರ ದಿನಾಚರಣೆ ಆಚರಿಸಲಾಯಿತು. ಎಲ್ಲಾ ಅಪ್ಪಂದಿರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಅಧ್ಯಕ್ಷತೆಯನ್ನು ಧರ್ಮಗುರು ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ವಹಿಸಿದ್ದರು. ಅವರು ತಂದೆಯು ತಮ್ಮ ಕುಟುಂಬಕ್ಕಾಗಿ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ, ಮಕ್ಕಳ ಏಳಿಗೆಯಲ್ಲಿ ತನ್ನ ಯಶಸ್ಸನ್ನು ಬಯಸುತ್ತಾರೆ ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದ ಕೆಲವು ತಂದೆಯರ ಪರಿಶ್ರಮ ಮತ್ತು ಅವರ ಮಕ್ಕಳ ಸಾಧನೆಯನ್ನು ಗುರುತಿಸಿ ಅಭಿನಂದಿಸಿದರು. […]
ಬಸ್ರೂರು: ಓಂ ಶ್ರೀ ಯೋಗ ಕೇಂದ್ರ ಬಸ್ರೂರು ಇವರಿಂದ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ .ರಾಧಾಕೃಷ್ಣಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿ ಗಳಾದ ವಿಭಾ, ಸ್ಪಂದನ ಉಳ್ಳೂರು, ಸಾನಿಕಾ […]
ದಿನಾಂಕ : 18/06/2024 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಸಮಾರಂಭವು ಜರುಗಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನದ ಮೂಲಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.ಶಾಲಾ ಸಂಚಾಲಕರು ಹಾಗು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳೂ ಆದ ಅತೀ ವಂದನೀಯ ಪೌಲ್ ರೇಗೋರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ. ರಾಘವೇಂದ್ರಚರಣ್ ನಾವಡ ವಕೀಲರು ಕುಂದಾಪುರ ಹಾಗು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ […]
ರಕ್ತದಾನಿಗಳ ಬಳಗ ಮರವಂತೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ ) ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಮರವಂತೆಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕ 16/06/2024 ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ:ಗಣೇಶ್ ಭಟ್ ವೈದ್ಯಾಧೀಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ […]
ಚಿತ್ರದುರ್ಗ, ಜೂನ್ 17, 2024: ರೆ.ಫಾ. ರೊನಾಲ್ಡ್ ಡಿ’ಕುನ್ಹಾ ಅವರು ಜೂನ್ 16 ರಂದು ಸಂಜೆ 5:30 ಕ್ಕೆ ಶಿವಮೊಗ್ಗದ ಧರ್ಮಪ್ರಾಂತ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ನ ಪ್ಯಾರಿಷ್ ಅರ್ಚಕರಾಗಿ ಅಧಿಕಾರ ವಹಿಸಿಕೊಂಡರು. ನಿಷ್ಠಾವಂತರು ಫ್ರಾ ರೊನಾಲ್ಡ್ ಡಿ’ಕುನ್ಹಾ ಅವರನ್ನು ಗೇಟ್ನಲ್ಲಿ ಬರಮಾಡಿಕೊಂಡರು. ಹೊರಹೋಗುವ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರನ್ನು ಹಾರ ಹಾಕಿ ಸ್ವಾಗತಿಸಿದರು. ಬಿಷಪ್ ಅವರ ಪ್ರತಿನಿಧಿ ರೆ.ಫಾ.ರಿಚರ್ಡ್ ಅನಿಲ್ ಡಿಸೋಜ, ಹೋಲಿ ಫ್ಯಾಮಿಲಿ ಡೀನ್ನ ಸಮ್ಮುಖದಲ್ಲಿ ಪ್ರಮಾಣ ವಚನ […]
ಫಾ. ಫ್ರಾಂಕ್ಲಿನ್ ಡಿಸೋಜ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ನಿರ್ದೇಶಕರಾಗಿ ಮತ್ತು ಯಾಜಕ ವೃತ್ತಿ ಪ್ರಚಾರ ಮತ್ತು ರಚನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು ಶಿವಮೊಗ್ಗ, ಜೂನ್ 16, 2024: ಫ್ರಾಂಕ್ಲಿನ್ ಡಿಸೋಜಾ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ನಿರ್ದೇಶಕ ಮತ್ತು ವೃತ್ತಿ ಪ್ರಚಾರ ಮತ್ತು ರಚನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಶಿವಮೊಗ್ಗದ ಧರ್ಮಪ್ರಾಂತ್ಯದ ಬಿಷಪ್ ಆದ ಗೌರವಾನ್ವಿತ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಫ್ರಾಂಕ್ಲಿನ್ ಡಿಸೋಜ ಅವರನ್ನು 2024ರ ಏಪ್ರಿಲ್ 19ರಂದು ಶಿವಮೊಗ್ಗ ಡಯಾಸಿಸ್ನ […]
ಬ್ರಹ್ಮಾವರ: ಜೂ. 16: ಎಮ್.ಸಿ.ಸಿ. ಬ್ಯಾಂಕ್ ಲಿಮೆಟೆಡ್ ಇದರ ಬ್ರಹ್ಮಾವರ ಶಾಖೆಯಲ್ಲಿ ಜೂ.15 ರಂದು, ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳ ಜೊತೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಇದರ ಅಧ್ಯಕ್ಷರಾದ ಅನಿಲ್ ಲೋಬೊ ಮಾತನಾಡಿ ನಮ್ಮ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲಿ ಪ್ರಥಮ ಭಾರಿ ಈ ವರ್ಷ ನಮ್ಮ ಬ್ರಹ್ಮಾವರ ಶಾಖೆಯಲ್ಲಿ, ಬ್ರಹ್ಮಾವರ ವಲಯದ ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳೊಡನೆ ಬಕ್ರಿದ್ ಹಬ್ಬವನ್ನು ಆಚರಿಸುತ್ತೀದ್ದೆವೆ. ನಮ್ಮ ಬ್ಯಾಂಕ್ ಎಲ್ಲರಿಗೂ ಒಂದೇ ರೀತಿಯ ಸೇವೆಯನ್ನು ನೀಡುತ್ತದೆ, […]
ಬೆಂಗಳೂರು: ದಿನಾಂಕ 14-06-24 ರಂದು ಬೆಂಗಳೂರು ನಗರದ ಶೃದಯಭಾಗದಲ್ಲಿರುವ ಸೇಂಟ್ ಜೋಸೆಪ್ ಶಾಲೆಯಲ್ಲಿ. ದಶಮಾನೋತ್ಸವ ಆಚರಣೆಯ ಮುನ್ನುಡಿಯಡಿಯಲ್ಲಿ ವಾರ್ಷಿಕ. ಶಾಲಾ ಪ್ರಶಸ್ತಿ ಪ್ರಧಾನ, ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ್ಕೆ ಕರ್ನಾಟಕದ ಅತಿ ಚಕ್ಕ ವಯಸ್ಸಿನಲ್ಲಿ ಸಿವಿಲ್ ನ್ಯಾಯದೀಶ ಪರೀಕ್ಷೆಯನ್ನು ಪೂರೈಸಿದ ಶ್ರೀಯುತ ನೀಲ್ ಜಾನ್ ಸಿಕ್ವೇರಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಸೇಂಟ್ ಜೋಸೆಫ್ಸ್. ಇಂಡಿಯನ್ ವಿದ್ಯಾಸಂಸ್ಥೆಗಳ. ಮುಖ್ಯಸ್ಥರಾದ ರೆವರೆಂಡ್ ಫಾ. ಜೋಸೆಫ್ ಡಿಸೋಜರವರು ವಯಿಸಿದ್ದರು. ಕಾರ್ಯಕ್ರಮವು ಸರ್ವಧರ್ಮ.ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಪ್ರಾರ್ಥನೆಯೂಂದಿಗೆ..ಆರಂಭಗೊಂಡಿತು. ಶಾಲೆಯು […]
ಕುಂದಾಪುರ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್-2024) ಯಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಸಿಂಚನಾ ಶೆಟ್ಟಿ 568 ಅಂಕಗಳೊಂದಿಗೆ 94.89 ಪರ್ಸಂಟೈಲ್,ನಿಶಾ 542 ಅಂಕಗಳೊಂದಿಗೆ, 93.47 ಪರ್ಸಂಟೈಲ್, ಸುಹಾನಿ ಎನ್ 443 ಅಂಕಗಳೊಂದಿಗೆ 87.13 ಪರ್ಸಂಟೈಲ್, ಅಲಿಫಾ 425 ಅಂಕಗಳೊಂದಿಗೆ 85.73 ಪರ್ಸಂಟೈಲ್ ಗಳಿಸಿರುತ್ತಾರೆ. ನೀಟ್ ಪರೀಕ್ಷಾ ಸಾಧಕಿಯರಾದ ಸಿಂಚನಾ ಶೆಟ್ಟಿ, ನಿಶಾ, ಸುಹಾನಿ ಎನ್ ಹಾಗೂ ಅಲಿಫಾ ಅವರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ […]