
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಾಧ್ಯಮ ಪತ್ರಿಕೆಗಳ ಸಂಪಾದಕರ ಸಭೆ ಕೋಲಾರ.ಜು,15: ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಾಧ್ಯಮ ಪತ್ರಿಕೆಗಳ ಸಂಪಾದಕರ ಸಂಘದಿಂದ ದಿನಾಂಕ 18-7-2019 ರಂದು ಗುರುವಾರ ಬೆಳಗ್ಗೆ 10-00 ಗಂಟೆಗೆ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಭೆಯನ್ನು ಕರೆಯಲಾಗಿದೆ. ಜಿಲ್ಲಾ ಪತ್ರಿಕೆಗಳ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಜಿಲ್ಲಾ ಸಂಪಾದಕರ ಸಂಘ ಸ್ಥಾಪನೆ ಬಹುಮುಖ್ಯವಾಗಿದ್ದು, ಇದರ ಆಗುಹೋಗುಗಳ ಬಗ್ಗೆ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ರೈತರ ಸುಲಿಗೆಯನ್ನು ತಪ್ಪಿಸಲು ಕ್ರಮ ಡಿಸಿಸಿ ಬ್ಯಾಂಕ್ನಿಂದ `ಗೃಹಲಕ್ಷ್ಮಿ ಬೆಳೆಸಾಲ ಯೋಜನೆ’-ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ:- ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ಸುಲಿಗೆ ಮಾಡುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’ಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚನೆ ನೀಡಿದರು. ಶನಿವಾರ ಜಿಲ್ಲಾ ಸಹಕಾರಿ ಯೂನಿಯನ್ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ- ಬಾಲಕಿಯರೇ ಮೇಲುಗೈ 2836 ಮಂದಿ ಪೈಕಿ 1303 ಪಾಸ್-ಶೇ.45.94 ರಷ್ಟು ಫಲಿತಾಂಶ ಕೋಲಾರ:- ಜೂನ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 2836 ಮಂದಿ ಪೈಕಿ 1303 ಮಂದಿ ತೇರ್ಗಡೆಯಾಗುವ ಮೂಲಕ ಶೇ.45.94 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ. ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿರುವ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಜ್ಞಾನದಿಂದ ಮಾತ್ರ ಸಾಧ್ಯ- ಡಾ.ಆರ್.ಶ್ರೀನಿವಾಸ್ ಕೋಲಾರ: ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಜ್ಞಾನದಿಂದ ಮಾತ್ರ ಸಾಧ್ಯವೇ ಹೊರತು ಅಂಕಗಳಿಂದಲ್ಲ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಆರ್.ಶ್ರೀನಿವಾಸ್ ಅವರು ತಿಳಿಸಿದರು. ನಗರ ಹೊರವಲಯದ ಹೊನ್ನೇನಹಳ್ಳಿಯಲ್ಲಿನ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಶುಕ್ರವಾರ ಸಿ.ಬೈರೆಗೌಡ ತಾಂತ್ರಿಕ ವಿದ್ಯಾಲಯದ ಈಸ್ಟ್ ಪಾಯಿಂಟ್ ತಾಂತ್ರಿಕ ವಿದ್ಯಾಲಯದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದ ಅಂತಿಮ ವರ್ಷದ ಸಿವಿಲ್ ವಿಭಾಗದ […]

ಲೇಖನ: ಚಂದ್ರಶೇಖರ ಶೆಟ್ಟಿ ಸರಕಾರಿ ಆಸ್ತಿ ಮಾರಾಟ ಮಾಡುವುದು ದೇಶೋದ್ದಾರವೇ? : ಕಾಂಗ್ರೆಸ್ ಐ.ಟಿ ಸೆಲ್ ಈ ಬಾರಿಯ ಕೇಂದ್ರ ಬಜೆಟ್ 27ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಗಾತ್ರ ಹೊಂದಿರುವುದರ ಜೊತೆಗೆ 7ಲಕ್ಷ ಕೋಟಿ ವಿತ್ತೀಯ ಕೊರತೆ ಹೊಂದಿದೆಯೆಂದು ವಿತ್ತಖಾತೆ ಹೇಳಿಕೊಂಡಿದೆ. ಮೋದಿ ಸರಕಾರದ ಹಿಂದಿನ ಅವಧಿಯಲ್ಲಿ ವಿತ್ತೀಯ ಕೊರತೆ ನೀಗಿಸಲು 3ಲಕ್ಷ ಕೋಟಿ ರೂ. ಮೌಲ್ಯದ ಸರಕಾರಿ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಮತ್ತು ಈ ಬಾರಿಯ ವಿತ್ತೀಯ ಕೊರತೆ ನೀಗಿಸಲು ಕೂಡ ಸರಕಾರಿ ಆಸ್ತಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ , ಖಜಾಂಚಿಯಾಗಿ ವಿಜಯ್,ರಾಜ್ಯಪರಿಷತ್ಗೆ ಡಿ.ಸುರೇಶ್ಬಾಬು ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ಡಿ.ಸುರೇಶ್ಬಾಬು ಆಯ್ಕೆಯಾದರು. ತೀವ್ರ ಕುತೂಹಲ ಕೆರಳಿಸಿದ್ದ ನೌಕರರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ 34 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಅವರ ಪ್ರತಿಸ್ವರ್ಧಿ ಕೆ.ಎನ್.ಮಂಜುನಾಥ್ ಅವರಿಗೆ 30 ಮತಗಳು ಬಂದವು. ಉಳಿದಂತೆ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಬಣದಿಂದ ಖಜಾಂಚಿಯಾಗಲು ಕಣಕ್ಕಿಳಿದಿದ್ದ ಕೆ.ವಿಜಯ್ ಮತ್ತು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು -ಡಾ.ಎಸ್.ಜಿ.ನಾರಾಯಣಸ್ವಾಮಿ ಕೋಲಾರ: ದೇಶದಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಎಸ್ಎನ್ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಸ್.ಜಿ. ನಾರಾಯಣಸ್ವಾಮಿ ಅವರು ತಿಳಿಸಿದರು. ನಗರದ ಪ್ರವಾಸಿ ಮಂದಿರÀದ ಮುಂಭಾಗ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವ ಜನಸಂಖ್ಯಾ ದಿನಾಚರಣೆಯನ್ನು 1987 ರಲ್ಲಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ರಾಜ್ಯದ ಮಾನ ಮರ್ಯಾದೆ ಕಳೆಯುತ್ತಿರುವ 13 ಶಾಸಕರುಗಳ ಪ್ರತಿಕೃತಿ ದಹನ ಕೋಲಾರ : ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯಿಸಿ ಇಂದು ರೈತ ನಾಯಕ ಪ್ರೊ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಕೋಲಾರ ನಗರ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದ ವೃತ್ತದಲ್ಲಿ ರಾಜೀನಾಮೆ ಕೊಟ್ಟ 13 ಶಾಸಕರ ಪ್ರತಿಕೃತಿ ದಹನ ಮಾಡಿ ಹೋರಾಟ ಮಾಡಲಾಯಿತು. ಅಲ್ಲಿಂದ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಅಂತರ್ಜಲ ವೃದ್ಧಿಸಲು ನಿರ್ಮಿಸಲಾಗಿರುವ ಚೆಕ್ ಡ್ಯಾಮನ್ನು ತಂಡ ವೀಕ್ಷಿಸಿತು. ಶ್ರೀನಿವಾಸಪುರ: ತಾಲ್ಲೂಕಿಗೆ ಭೇಟಿ ನೀಡಿದ್ದ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಋತ್ವಿಕ್ ಪಾಂಡೆ ನೇತೃತ್ವದ ತಂಡ, ಸರ್ಕಾರ ಅಂತರ್ಜಲ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿತು. ತಾಲ್ಲೂಕಿನ ನಂಬಿಹಳ್ಳಿ. ಜೆ.ತಿಮ್ಮಸಂದ್ರ, ಕಲ್ಲೂರು, ಕಠಾರಿ ಮುದ್ದಲಹಳ್ಳಿ, ಚಿರುವನಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ್ದ ತಂಡದ ಸದಸ್ಯರು ಮಳೆ ನೀರು ಸಂಗ್ರಹಿಸಲು ನಿರ್ಮಿಸಲಾಗಿರುವ ಚೆಕ್ಡ್ಯಾಂ, ತಡೆಗೋಡೆ, ಹಿಪ್ಪುನೇರಳೆ ತೊಟಕ್ಕೆ ಅಳವಡಿಸಲಾಗಿರುವ ಹನಿ ನೀರಾವರಿಯನ್ನು […]