
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ ಜಿಲ್ಲೆಯ ಹೈನೋದ್ಯಮ ಉಳಿಸಲು ಸಹಕಾರ ನೀಡಿ ಪ್ರತಿ ರಾಸಿಗೂ ಕಾಲುಬಾಯಿಜ್ವರ ಲಸಿಕೆ ಹಾಕಿಸಿ-ಡಾ.ಶ್ರೀನಿವಾಸಗೌಡ ಕೋಲಾರ:- ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಿಸಿ ಜಿಲ್ಲೆಯ ಹೈನೋದ್ಯಮ ಉಳಿಸಿ ಎಂದು ತಾಲ್ಲೂಕಿನ ಸುಗಟೂರು ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಶ್ರೀನಿವಾಸಗೌಡ ಕರೆ ನೀಡಿದರು. ಭಾನುವಾರ ತಾಲ್ಲೂಕಿನ ಚಿಟ್ನಹಳ್ಳಿಯಲ್ಲಿ 16ನೇ ಸುತ್ತಿನ ಕೇಂದ್ರ ಪುರಸ್ಕøತ ಕಾಲು ಬಾಯಿಜ್ವರದ ವಿರುದ್ದದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕಾಲು ಬಾಯಿ ಜ್ವರ ರಾಸುಗಳಿಗೆ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಸಾಲ ಎಂದೂ ಆಸ್ತಿಯಾಗದು-ಮರುಪಾವತಿಸಿ ಗೌರವ ಉಳಿಸಿಕೊಳ್ಳಿ :ಆಸ್ತಿಜಪ್ತಿ ಖಚಿತ-ಪ್ರಭಾವಕ್ಕೆ ಒಳಗಾಗಲ್ಲ-ಬ್ಯಾಲಹಳ್ಳಿಗೋವಿಂದಗೌಡ ಕೋಲಾರ:- ಸಾಲ ಎಂದಿಗೂ ಆಸ್ತಿಯಾಗದು, ಮೊದಲು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಆಸ್ತಿಗಳ ಜಪ್ತಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದ್ದು, ಶಿಫಾರಸ್ಸು,ಪ್ರಭಾವಗಳಿಗೆ ಒಳಗಾಗದೇ ಹರಾಜು ಹಾಕಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು. ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಸಾಲ ಬಾಕಿ ಉಳಿಸಿಕೊಂಡಿರುವವರ ನಿವಾಸಗಳಿಗೆ ಅಂತಿಮ ನೋಟೀಸ್ ಅಂಟಿಸಿ ಅವರು ಮಾತನಾಡಿ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ಮೂಲ ಸೌಕರ್ಯಕ್ಕೆ ಆಧ್ಯತೆ:ಎರಡು ಹಾಗೂ ಮೂರನೇ ವಾರ್ಡ್ನಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಶ್ರೀನಿವಾಸಪುರದ ಎರಡು ಹಾಗೂ ಮೂರನೇ ವಾರ್ಡ್ನಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸಪುರ: ಪಟ್ಟಣದ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಕುಡಿಯುವ ನೀರು ಪೂರೈಕೆ, ರಸ್ತೆಗಳ ನಿರ್ಮಾಣ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಹೇಳಿದರು. ಪಟ್ಟಣದ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ ಉದ್ಘಾಟಿಸಿದರು. ಶ್ರೀನಿವಾಸಪುರ: ರೈತರು ಕಡಿಮೆ ನೀರು ಬಳಸಿ ಅಧಿಕ ಉತ್ಪಾದನೆ ಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ ಹೇಳಿದರು. ಪಟ್ಟಣದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ ತೋಟಗಾರಿಕೆ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀ ಕ್ಷೇತ್ರ ಧವರ್iಸ್ಥಳ ಗ್ರಾಮಾಭಿವೃದ್ಧಿಯೋಜನೆಯ“ ಜನಮಂಗಲ” ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗ ವೀಲ್ಚೇರ್ ವಿತರಣೆ- ಚಂದ್ರಶೇಖರ್ಜೆ, ಜಿಲ್ಲಾ ನಿರ್ದೇಶಕರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಶ್ರೀನಿವಾಸಪುರತಾಲೂಕಿನರಾಯಲ್ಪಾಡುವಲಯದಲ್ಲಿ ವಿಶೇಷ ಚೇತನರಿಗೆ ವೀಲ್ಚೇರ್, ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ ವಿತರಣಾಕಾರ್ಯಕ್ರಮವನ್ನುಉದ್ಗಾಟನೆ ಮಾಡಿದಜಿಲ್ಲಾ ನಿರ್ದೇಶಕರಾದಚಂದ್ರಶೇಖರ್ಜೆರವರು ಸಲಕರಣಿಗಳನ್ನು ವಿತರಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯುಎಲ್ಲಾ ರಂಗಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈ ವರ್ಷ ಬಾಹುಬಲಿಯ ಮಹಾಮಸ್ತಾಭಿಷೇಕದ ಸವಿನೆನಪಿಗಾಗಿ ಆರಂಭಿಸಿದ ಕಾರ್ಯಕ್ರಮವೇ “ಜನಮಂಗಲ” ಎಂಬ ಕಾರ್ಯಕ್ರಮವನ್ನು ಹೊಸದಾಗಿ ರೂಪಿಸಿದೆ. ವಿಶೇಷ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರಲ್ಲಿ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ನೂತನ ಕಚೇರಿಯನ್ನು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಉದ್ಘಾಟಿಸಿದರು. ಶ್ರೀನಿವಾಸಪುರ: ಹಂತ ಹಂತವಾಗಿ ಎಲ್ಲ ಗ್ರಾಮಗಳನ್ನೂ ಪೋಡಿ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಇ.ಗೋಪಾಲಯ್ಯ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಲ್ಲೂಕು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ: ಟೊಮ್ಯಾಟೊ ಬೆಳೆಯಲ್ಲಿ ಊಜಿ ಹಾವಳಿಗೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳು ಕೋಲಾರ : ಕೋಲಾರ ಜಿಲ್ಲೆಯ ಹಲವು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಮೇರಿಕನ್ ಪಿನ್ವರ್ಮ್ (ಟುಟಾ ಅಬ್ಸಲೂಟ- ರೈತರ ಭಾಷೆಯಲ್ಲಿ ಊಜಿ) ಎಂಬ ಕೀಟದ ಹಾವಳಿ ಹೆಚ್ಚಾಗಿದ್ದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಹಲವು ನಿರ್ವಹಣೆ ಕ್ರಮ ಕೈಗೊಂಡರೂ ಇದರ ಉಲ್ಬಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಮಾರುಕಟ್ಟೆಗೆ ಸಾಗಿಸಲು ಭಯಭೀತರಾಗಿದ್ದು ಕಡಿಮೆ ಆದಾಯಕ್ಕೆ ಒಗ್ಗಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಐಸಿಎಆರ್- ಕೃಷಿ ವಿಜ್ಞ್ಞಾನ ಕೇಂದ್ರದ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು. ಶ್ರೀನಿವಾಸಪುರ: ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ, ಮನೆ ಹಾಗೂ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸತತ ಪ್ರಯತ್ನದ ನಡುವೆಯೂ ಕೆಲವು ಕಡೆ ಅಂತರ್ಜಲದ ಕೊರತೆಯಿಂದಾಗಿ ಕುಡಿಯುವ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ: ಸರ್ಕಾರಿ ಜಮೀನನ್ನು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ನೀಡಿದಕ್ಕೆ ವಿರೋಧ, ಜಮೀನನ್ನು ವಾಪಸು ಪಡೆದು ರೈತ್ರರ ಅನುಕೂಲಕ್ಕಾಗಿ ಬಳಸಬೆಕೆಂದು ರೈತರ ವತ್ತಾಯ ಕೋಲಾರ, ಅ-17, ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಸೇರಿದ ಸರ್ಕಾರಿ ಜಮೀನನ್ನು ಖಾಸಗಿ ಮಾಲೀಕತ್ವದ ಜಾಲಪ್ಪ ಆಸ್ಪತ್ರೆಯ ಸ್ಥಾಪನೆಗೆ ನೀಡಿರುವ ಕಸಬಾ ಹೋಬಳಿ ನಡುಪಳ್ಳಿ ಸರ್ವೇ ನಂ.115ರಲ್ಲಿ 10 ಎಕರೆ ಜಮೀನನ್ನು ಕೂಡಲೇ ವಾಪಸ್ಸು ಪಡೆದು ರೈತರಿಗೆ, ಅನುಕೂಲವಾಗುವ ಪ್ರಯೋಗಿಕ ಬೆಳೆಗಳಿಗೆ ಅಥವಾ ಸರ್ಕಾರಿ ಕಟ್ಟಡಗಳಿಗೆ ಉಪಯೋಗಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಇಲಾಖೆ […]