
JANANUDI.COM NETWORK ಕರ್ನಾಟಕ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಒಟ್ಟಾರೆ ಶೇಕಡಾ 71 .81 ಫಲಿತಾಂಶ ಈ ಬಾರಿ ಬಂದಿದೆ. ಈ ಬಾರಿ ಚಿಕ್ಕ ಬಳ್ಳಾಪುರ ಪ್ರಥಮ ಸ್ಥಾನ ಗಳಿಸಿದ್ದು ಉಡುಪಿ 7 ನೇ ಸ್ಥಾನಕ್ಕೆ ತೃಪ್ತಿ ಪಡ ಬೇಕಾಗಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದೆ, 625 ಕ್ಕೆ 625 ಅಂಕ ಪಡೆದು 6 ಮಂದಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.. ಸೋಮವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ, ಪ್ರಾಥಮಿಕ ಹಾಗೂ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್ಐಸಿ ಪಾತ್ರ ಹಿರಿದು. ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪಾಲಸಿ ಪಡೆಯುವುದರ ಮೂಲಕ, ಅವರ ಭವಿಷ್ಯಕ್ಕೆ ಆಧಾರ ಕಲ್ಪಿಸಬೇಕು ಎಂದು ಎಲ್ಐಸಿ ಶಾಖಾ ವ್ಯವಸ್ಥಾಪಕ ಸತೀಶ್ ಹೇಳಿದರು. ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸದ್ದ ಎಲ್ಐಸಿ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 500 ಮಂದಿಗೆ ಪರಿಹಾರ ನೀಡಲಾಗಿದೆ. ಜನರಲ್ಲಿ ಭವಿಷ್ಯಕ್ಕಾಗಿ ಉಳಿತಾಯ […]
ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ಣು:ರೋಟರಿ ಕ್ಲಬ್ ಬೆಳ್ಮಣ್ ಒಂದಲ್ಲ ಒಂದು ವಿಶೇಷ ಸಾರ್ವಜನಿಕ ಕಾರ್ಯಕ್ರಮದಿಂದ ಕ್ಲಬ್ ಗುರುತಿಸಿಕೊಂಡಿದ್ದು, ಸಾರ್ವಜನಿಕ ರಂಗಮಂದಿರ, ಬಾಲವನ, ಸುಮಾರು ಲಕ್ಷದಲ್ಲಿ ಸುಸಜ್ಜಿತ ಪಾರ್ಕಿಂಗ್, ಸುಮಾರು ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ರುದ್ರಭೂಮಿ, ರಸ್ತೆ ವಿಭಜಕದ ಅಳವಡಿಕೆ ಮುಂತಾದ ಶಾಶ್ವತ ಯೋಜನೆಯೊಂದಿಗೆ ಮನೆಮಾತಾಗಿದೆ. 2020- 21 ಸಾಲಿನ ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋಟರಿಸುಭಾಷ್ ಕುಮಾರ್ ರವರ ನೇತೃತ್ವದಲ್ಲಿ ಕೃಷಿ ಕ್ರಾಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಸುಮಾರು ಎಕರೆಗಟ್ಟಲೆ 20 ವರ್ಷಕ್ಕೂ ಮಿಕ್ಕಿ ಹಡಿಲು ಬಿದ್ದಭೂಮಿಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೃಷಿಭೂಮಿಯನ್ನು ಪುನಶ್ಚೇತನಗೊಳಿಸಿ ಈಗಲೇ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದಾರೆ.ಇದರಿಂದ ಬಂದಂತಹ ಲಾಭಾಂಶವನ್ನು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸಲು ಚಿಂತನೆ ಮಾಡಿದ್ದಾರೆ.ಇವರಿಗೆ ಇರುವ ಕೃಷಿಯ ಆಸಕ್ತಿಯನ್ನು ಕಂಡು ಪರಿಸರದ ಜನರು ಕೂಡ ಕೈ ಜೋಡಿಸಿದ್ದಾರೆ.ರೋಟರಿ ಅಧ್ಯಕ್ಷರಾದ ಸುಭಾಷ್ ಕುಮಾರ್ ಅವರೇಸ್ವತಃ ಹಾರೆಯ ಹಿಡಿದು ಕೃಷಿಯಲ್ಲಿ ತನ್ನನ್ನು ಮತ್ತು ಕಾರ್ಯದರ್ಶಿಯಾದ¤ತಹ ರೋ.ರವಿರಾಜ್ ಶೆಟ್ಟಿ ಇವರು ಮತ್ತು ಸರ್ವ ಸದಸ್ಯರನ್ನು ತೊಡಗಿಸಿಕೊಂಡು ಕೃಷಿಯ ಕ್ರಾಂತಿ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ: ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ 3 ವರ್ಷ ಸೇವೆಸಲ್ಲಿಸಿ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಡಾ.ಎಚ್.ಕೆ.ಶಿವಕುಮಾರ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಂಟಿನಿರ್ದೇಶಕರಾದ ಅವರಿಗೆ ಸಸಿ ನೀಡುವ ಮೂಲಕ ರೈತಸಂಘದಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಶಿವಕುಮಾರ್ ಅವರು ಜಿಲ್ಲೆಯಲ್ಲಿ ರೈತರ ಪರವಾಗಿ ಕಳೆದ 3 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿಯಾಗಿ ನೂತನ ಜಂಟಿನಿರ್ದೇಶಕರು ಕೆಲಸ ಮಾಡಬೇಕೆಂದು ಮನವಿ […]

JANANUDI.COM NETWORK ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯುಡಿಯುರಪ್ಪನ (78) ಇವರಿಗೆ ಕೊವೀಡ್ 19 ಇರುವುದು ಭಾನುವಾರದಂದು ಧ್ರಡ ಪಟ್ಟಿದೆ. ಈ ಬಗ್ಗೆ ಯೂಡಿಯುರಪ್ಪ ಅವರ ಸಾಮಾಜಿಕ ಖಾತೆಗಳಲ್ಲಿ ಪ್ರಕಟವಾಗಿದೆ.ಯುಡಿಯುರಪ್ಪಗೆ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲಾ, ಆದರೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿರುವುದರಿಂದ ಡಾಕ್ಟರಗಳ ಸಲಹೆಯೆಂತೆ, ಆಸ್ಪತ್ರೆಗೆ ದಾಖಾಲಾಗುವುದಾಗಿ ಹೇಳಿದ್ದಾರೆ.ಯುಡಿಯುರಪ್ಪನವರು ಹಳೆ ವಿಮಾನ ನಿಲ್ದಾಣ ರಸ್ತೆಯ (ಎಚ್ ಎ ಎಲ್)ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಯುಡಿಯುರಪ್ಪನವರ ಕಾಲು ಚಾಲಕನಿಗೆ ಮತ್ತು ಅಡಿಗೆ ಸಿಬ್ಬಂದಿಯೊಬ್ಬರಿಗೆ 15 ದಿನಗಳಹಿಂದೆ ಕೋವಿಡ್ 19 ಧ್ರಡ ಪಟ್ಟಿತ್ತು. […]

JANANUDI.COM NETWORK ಯಾರದೋ ತಪ್ಪು ಯಾರಿಗೋ ಶಿಕ್ಷೆ ಬೆಂಗಳೂರು: ಇತ್ತೀಚೆಗೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಿಸಲು ಕಪಾಲಿ ಟಾಕೀಸನ್ನು ಕೆಡವಲಾಗಿತ್ತು, ಕಾರಣ ಆ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ಕಟ್ಟಡ ಕಟ್ಟಲಿಕ್ಕಾಗಿ. ಆದರಂತೆ ಆಳ ಪಾಯಕ್ಕಾಗಿ 80 ಅಡಿ ಆಳದಲ್ಲಿ ಗುಂಡಿ ತೆಗೆಯಲಾಗಿತ್ತು. ಪರಿಣಾಮ ಪಕ್ಕದಲ್ಲಿ ಇದ್ದ ಕಟ್ಟಡಗಳಿಗೆ ಹಾನಿಯಾಗಿತ್ತು. ಕಟ್ಟಡ ಪಕ್ಕ ಆಳವಾದ ಗುಂಡಿ ತೆಗೆದ ಕಾರಣ ಕಟ್ಟಡಗಳು ಬಿರುಕು ಬಿಟ್ಟಿದ್ದವು. ಸಂಜೆ ವೇಳೆಗೆ ಪಕ್ಕದಲ್ಲಿದ್ದ ಎರಡು ಕಟ್ಟಡಗಳು ನೋಡ ನೋಡುತ್ತಿದ್ದಂತೆ ನೆಲಸಮವಾಗಿವೆ. ಈ ದೃಶ್ಯ […]

JANANUDI.COM NETWORK . ಬೆಂಗಳೂರು: ಅಪಾರ್ಟ್ಮೆಂಟ್ನ ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕದ ನ್ಯೂ ಟೌನ್ನ ನಾಲ್ಕನೆ ಹಂತದಲ್ಲಿ ನಡೆದಿದೆ. ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅವರು ಶುಕ್ರವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಯಿತು ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಅಪಘಾತದಲ್ಲಿ ಮೃತಪಟ್ಟ ಎಎಸ್ಐ ಮಂಜುನಾಥ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಹೊರ ವಲಯದ ಶಿವಪುರ ಗ್ರಾಮದ ಸಮೀಪ ವರ್ತುಲ ರಸ್ತೆಯಲ್ಲಿ ಬುಧವಾರ ರಾತ್ರಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ಮಂಜುನಾಥ್ (53) ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಆಸ್ಪತ್ರೆ ಸಿಬ್ಬಂದಿ […]

JANANUDI.COM NETWORK ಕುಂದಾಪುರ,ಜು.22: 2019-20 ರ ಸಾಲಿನ ಪಿ.ಯು.ಸಿ.ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4 ನೇ ರ್ಯಾಂಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ, ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ವಿಧ್ಯಾರ್ಥಿ, ಕುಂದಾಪುರದ ಶಿವಾನಂದ್ ಪೈ ಮತ್ತು ಶಿಲ್ಪಾ ಪೈ ಇವರ ಪುತ್ರಿ ಸ್ವಾತಿ ಪೈ ಅವಳನ್ನು ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಠಾನ್ ಸಂಸ್ಥೆಯ ಪರವಾಗಿ ಪದಾಧಿಕಾರಿಗಳು ಅವಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂಧಿಸಿ ಅವಳ ಮುಂದಿನ ಭವಿಸ್ಯವು ಉಜ್ವಲವಾಗಲೆಂದು ಹಾರೈಸಿದರು. […]