
ಸಂತ ಲೋರೆನ್ಸ್ ಬಸಿಲಿಕ, ಅತ್ತೂರು – ಕಾರ್ಕಳ ಇದರ ವಾರ್ಷಿಕ 2025 ರ ಮಹತ್ಸೋವವು ಜನವರಿ 26 ರಂದು ಆರಂಭವಾಗುತ್ತದೆ. ಇದು ಜನವರಿ 30 ರ ವರೆಗೆ ನಡೆಯುತ್ತದೆ. ಈ ವಿವರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಐಸಾಜ್ ಲೋಬೊ, ಸಂತ ಲೋರೆನ್ಸ್ ಬಸಿಲಿಕ, ಅತ್ತೂರು ಇದರ ರೆಕ್ಟರ್ ಅ।ವಂ।ಆಲ್ಬನ್ ಡಿಸೋಜಾ ಮತ್ತು ಧರ್ಮಕೇಂದ್ರದ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರದ ಪ್ರತಿಗಳನ್ನು ಲಗತ್ತಿಸಲಾಗಿದೆ.

ಕುಂದಾಪುರ(ಜ.1):ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ, ನಿಹೊನ್ಸಿಕಿ ಕರಾಟೆ ಆಂಡ್ ಸ್ಪೋರ್ಟ್ಸ ಫೆಡರೇಶನ್ ನ ವತಿಯಿಂದ ಕರಾಟೆಯಲ್ಲಿ ಕೊಡಮಾಡುವ 2024 ನೇ ಸಾಲಿನ ʼದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು

ಶ್ರೀನಿವಾಸಪುರ : ಬೆಂಗಳೂರಿನ ಸ್ಪೂರ್ತಿ ಕಲಾ ಟ್ರಸ್ಟ್ ವತಿಯಿಂದ ಉದಯಭಾನು ಕಲಾ ಸಂಘದ ಸಭಾಂಗಣದಲ್ಲಿ ಭಾನುವಾರ ಸ್ಪೂರ್ತಿ ಕುಮಾರ ಸೇವ ರತ್ನ ಪ್ರಶಸ್ತಿಯನ್ನ ಪಡೆದ ಶ್ರೀನಿವಾಸಪುರ ತಾಲೂಕಿನ ಆರ್.ಶಿವಕುಮಾರ್ ಗೌಡ , ಕೆ.ಎಲ್.ಕಾರ್ತಿಕ್ ಪಡೆದಿದ್ದು ತಾಲೂಕಿನ ಹೆಗ್ಗಳಿಕೆ ಕಾರಣರಾಗಿದ್ದಾರೆ. ಈ ಸಮಯದಲ್ಲಿ ಸಂಘದ ಸಂಸ್ಥಾಕ ಅಧ್ಯಕ್ಷೆ ಡಿ.ವನಜ, ಮುಖಂಡರಾದ ಎಂ.ಸಿ.ರಾಮಲಿಂಗಯ್ಯ, ಆರ್.ಬಾಲಾಜಿಸಿಂಗ್ ಇದ್ದರು.

ಕುಂದಾಪುರ (ಡಿ.31): ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ(ರಿ.) ಉಪ್ಪುಂದ ಇದರ ವತಿಯಿಂದ ಬ್ರಹ್ಮಾವರದಲ್ಲಿ ಡಿ.22 ರಂದು ನಡೆದ ಶ್ರೀ ಸಿದ್ಧಿವಿನಾಯಕ ಟ್ರೋಫಿ 2024 ರ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ಎರಡನೇ ತರಗತಿ ವಿದ್ಯಾರ್ಥಿ ಶ್ರೀನಿತ್ ಶೇಟ್ 7ರ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿ 6 ರೌಂಡ್ಸ್ ಗಳಲ್ಲಿ5 ಪಾಯಿಂಟ್ಸ್ ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗು ಎಲ್ಲಾ […]

ಕೋಲಾರ:- ನಗರದ 14 ಕೇಂದ್ರಗಳಲ್ಲಿ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಿ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪರೀಕ್ಷಾ ಮುಖ್ಯ ಮೇಲ್ವಿಚಾರಕರೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.ಪರೀಕ್ಷೆಗೆ ಮುನ್ನಾದಿನ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಹಿತಿ ನೀಡಿ, ಪರೀಕ್ಷೆಗೆ ಒಟ್ಟು 5718 ಮಂದಿ ಕುಳಿತಿದ್ದು, ಎಲ್ಲಾ 14 ಕೇಂದ್ರಗಳು […]

ಡಿಸೆಂಬರ್ 29,2024 ರಂದು ಶಿವಮೊಗ್ಗ ಧರ್ಮಕ್ಷೇತ್ರದ ಇತಿಹಾಸದಲ್ಲಿ ಚಿರಸ್ಥಾಯಿಯಾದ ದಿನವಾಗಿದೆ. ವಿಶ್ವಗುರು ಫ್ರಾನ್ಸಿಸ್ ಕರೆನೀಡಿದ “ಜ್ಯೂಬಿಲಿ -2025”ರ ಉದ್ಘಾಟನೆಯು ಪ್ರಾರಂಭಿಕವಿಧಿಗಳು ಸಿಎಸ್‍ಐ ಚರ್ಚಿನ ಆವರಣದಲ್ಲಿ ನೆರವೇರಿದವು. ಮಹೋತ್ಸವದ ಪ್ರಾರಂಭದಲ್ಲಿ, ವಂ. ಸಂತೋಷ್ ಅಲ್ಮೇಡಾರವರು “ದಯೆಯ ಜಪಸರ”ವನ್ನು ಮುನ್ನಡೆಸಿದರು. ನಂತರ ಜ್ಯೂಬಿಲಿ ವರ್ಷ-2025ರ ಉದ್ಘಾಟನಾ ವಿಧಿಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊರವರು ನೆರವೇರಿಸಿದರು. ಪವಿತ್ರ ಗ್ರಂಥದ ವಾಚನದ ನಂತರ ಜ್ಯೂಬಿಲಿ ವರ್ಷದ “ಶಿಲುಬೆಯ” ಕುರಿತು ವಂ.ಸಂತೋಷ್ ಪಿರೇರಾರವರು ಸಂಕ್ಷಿಪ್ತವಾಗಿ ವಿವರಿಸಿದರು. ಪವಿತ್ರ ಶಿಲುಬೆಯನ್ನು ನಂತರ ಸುಂದರವಾಗಿ […]

ಬೀಜಾಡಿ; ದಿನಾಂಕ :- 28/12/2024 ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ರವರು ಹುತಾತ್ಮರಾದ ಯೋಧ ಶ್ರೀ ಅನೂಪ್ ಪೂಜಾರಿ ಬೀಜಾಡಿ ಯವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸ್ವಾಂತ್ವನ ತಿಳಿಸಿ ಧೈರ್ಯ ತುಂಬಿದರು.ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಬೇಟಿ ಮಾಡಿ ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು ಹಾಗೂ ಪರಿಹಾರ ಸಿಗುವಂತೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು , ಬಿ ಹಿರಿಯಣ್ಣ ಕೆ ಎಫ್ […]

ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಅಗಿದೆ. ಇದರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT […]

ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ತುಂಬಿದ್ದ ಕ್ಯಾಂಟರ್ ಹಾಗೂ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ಲಾರಿಗಳು ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ ತುಂಬಿ ಕೊಂಡು ಹೋಗುತ್ತಿದ್ದ ಕ್ಯಾಂಟರ್ ಗೆ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ನಡುರಸ್ತೆಯಲ್ಲೇ ಲಾರಿಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಎರಡೂ ಲಾರಿಯ ಚಾಲಕರು ಹಾಗೂ ಕ್ಲೀನರ್ ಗಳು ಬಚಾವ್ ಆಗಿದ್ದು, ಗಾಯಗಳಾಗಿವೆ. ಆದರೆ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ […]