
JANANUDI.COM NETWORK ಬೆಂಗಳೂರು:ಮೇ.13. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಲಸಿಕೆ ನೀಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿ ರಾಜ್ಯ ಸರ್ಕಾರ ಲಸಿಕೆ ಕೊರತೆ ಎಂದು ಹೇಳಿ ಜನರು ಲಸಿಕಾ ಕೇಂದ್ರಗಳಿಗೆ ಬಂದು ವಾಪಸ್ ಹೋಗುವಂತೆ ಸತಾಯಿಸುತ್ತದೆ. ಇದೆಂಥ ಲಸಿಕಾ ಅಭಿಯಾನ ಎಂದು ಹೈಕೋರ್ಟ್ ಕರ್ನಾಟಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನರಿದ್ದಾರೆ, ಆದರೂ ಇನ್ನೂ ಒಂದು ಪರ್ಸೆಂಟ್ ಜನರಿಗೆ ಲಸಿಕೆ ನೀಡಲಾಗಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿಯಲ್ಲಿ […]

JANANUDI.COM NETWORK ಬೆಂಗಳೂರು:ಮೆ.13; ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚೀಟ್ ಸಿಕ್ಕಿದೆ ಆಕ್ಸಿಜನ್ ದುರಂತದ ೨೪ ಜನರ ಸಾವಿನ ಪ್ರಕರಣಕ್ಕೆ ಸಂಬಂದಿಸಿದ್ದಂತೆ ತನಿಖೆ ನಡೆಸಲು ಹೈಕೋರ್ಟ್ ಸದಸ್ಯರ ಸಮಿತಿ ನೇಮಿಸಿತ್ತು. ಚಾಮರಾಜ ನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆಂದು ಎಂಬ ಆರೋಪ ಹೊರಿಸಿತ್ತು.ಪ್ರಕರಣ ಸಂಬಂಧ ಪಟ್ಟಂತ್ತೆ ಇದೀಗ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆಗೆ […]

JANANUDI.COM NETWORK ಭಾರತವು ಕೋವಿಡ್ -19 ರ ಎರಡನೇ ಅಲೆಯಲ್ಲಿ ಸಾವು ನೋವಿನ ಸಂಕಷ್ಟದಲ್ಲಿರುವಾಗ ಆನೇಕ ರೀತಿಯ ಹ್ರದಯ ವಿದ್ರಾವಕ ದುಃಖದ ಘಟನೆಗಳು ನಡೆಯುತ್ತಾ ಇವೆ. ಇದೀಗ ಪಂಜಾಬಿನ ಗ್ರೇಟರ್ ನೋಯ್ಡಾದ ಪಶ್ಚಿಮದ ಜಲಾಲ್‌ಪುರ ಗ್ರಾಮದಲ್ಲಿ ಕೊರೊನಾ ರೋಗ ತಾಂಡವ ಆಡುತ್ತಿದೆ. ಈ ಮಾರಣಾಂತಿಕ ಕಾಯಿಲೆಯಿಂದ ನೋಯ್ಡಾ ಗ್ರಾಮಗಳಲ್ಲಿ 14 ದಿನಗಳಲ್ಲಿ 18 ಸಾವುಗಳು ಸಂಭವಿಸಿವೆ. ಅದರಲೊಂದು ಹ್ರದಯ ತಲ್ಲಣ ಗೊಳ್ಳುವ ಘಟನೆ ನಡೆದಿದೆ. ನೋಯ್ಡಾದಲ್ಲಿ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳನ್ನು ಒಬ್ಬರ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ ಸೌಲಭ್ಯ ಸಿಗದೆ ತೊಂದರೆಯಾಗಿರುವುದನ್ನು ನಿವಾರಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಜೊತೆಗೆ ರಾಜಕಾರಣಿಗಳ ಸಹಾಯ ಪಡೆದು ಹೊರ ಜಿಲ್ಲೆಗಳಿಂದ ಜಿಲ್ಲಾಸ್ಪತ್ರೆಗೆ ಬರುತ್ತಿರುವವರಿಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಕೊರೊನಾ […]

JANANUDI.COM NET WORK ಬೆಂಗಳೂರು,ಮೇ. 12: ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಹಿನ್ನೆಲೆಯಲ್ಲಿ 18 ವರ್ಷದಿಂದ 44ರ ವಯಸ್ಸಿನವರಿಗೆ ಮೇ ೧೪ ರಿಂದ ಕೊರೊನಾ ಲಸಿಕೆ ನೀಡುವುದನ್ನು ಸ್ಥಗಿತ ಸ್ಥಗಿತಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.ಇಂದು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.ಮಹಾರಾಷ್ಟ್ರ ಮಾದರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡುವ ಉದ್ದೇಶದಿಂದ ಪ್ರಸ್ತುತ ಮೊದಲ ಲಸಿಕೆ ಪಡೆದವರಿಗೆ 2ನೇ ಡೋಸ್ […]

JANANUDI.COM NETWORK ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಸಲ್ಲಿಕೆ ಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ “ರಾಜ್ಯದಲ್ಲಿ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಸಂಯಮದಿಂದ ವರ್ತಿಸಬೇಕು” ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಹಾಗೇ ಮುಂದುವರೆದು “ಜನರು ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು” ತಿಳಿಸಿದೆಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಸಲ್ಲಿಕೆ ಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಧೀಶ ಎ.ಎಸ್.ಓಕ ಹಾಗೂ ನ್ಯಾಯಧೀಶ.ಅರವಿಂದ ಕುಮಾರ್ ಅವರಿದ್ದ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಯಗೊಂಡ ಕೆಲವು ನಾಗರಿಕರು, ಸಾಮೂಹಿಕವಾಗಿ ರಸ್ತೆ ಮಧ್ಯ ಭಾಗದಲ್ಲಿ ಅನ್ನದಿಂದ ಮಾಡಿದ ದೊಡ್ಡದಾದ ತಣಿವು ಮುದ್ದೆ ಇಟ್ಟು, ಅನ್ನದ ಕಟ್ಟೆಯೊಳಗೆ ಮಜ್ಜಿಗೆ ಸುರಿದು, ಅರಶಿನ, ಕುಂಕುಮ ಇಟ್ಟು, ತೆಂಗಿನ ಕಾಯಿ ಒಡೆದು ಸಾಮೂಹಿಕ ಪೂಜೆ ಸಲ್ಲಿಸಿದ ಬಳಿಕ ಕುರಿಯನ್ನು ಬಲಿ ಕೊಡಲಾಯಿತು.ಪೂಜೆ ಹಾಗೂ ಕುರಿ ಬಲಿಯನಂತರ ರಕ್ತ ಮಿಶ್ರಿತ ತಣಿವು ಮುದ್ದೆಯ ಅನ್ನವನ್ನು ನೆರೆದಿದ್ದ ಜನರಿಗೆ ಹಂಚಿ, ಕೊರೊನಾ ಶಾಂತಿಗಾಗಿ ಮನೆಗಳ ಮೇಲೆ ಹಾಕುವಂತೆ ಸೂಚಿಸಲಾಯಿತು.

JANANUDI.COM NETWORK ಬೆಂಗಳೂರು ಮೇ.12; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಚಂಡ ಮಾರುತ ಬೀಸುವುದರಲಿದ್ದು ಅದಕ್ಕೆ ವಯನ್ಮಾರ್ ತೌಕ್ತೆ ಎಂದು ಹೆಸರಿಟ್ಟಿದ್ದು, ಇದು ಮೇ 14 ರಂದು ರೂಪುಗೊಳ್ಳಲಿದ್ದು ಮೇ 16 ರ ವೇಳೆಗೆ ಬಿರುಸಾಗಿ, ಗಂಟೆಗೆ 40-50 ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಂದರ್ಭವಿದ್ದು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ದೇಶದ ಕರ್ನಾಟಕ,ಕೇರಳ,ತಮಿಳ್ನಾಡು ಪ್ರದೇಶದಲ್ಲಿ ಮಳೆಯಾಗಲಿದೆ.ರಾಜ್ಯದಲ್ಲಿ . ಕರಾವಳಿ, ಮಲೆನಾಡು ಹಾಗೂ ದಕ್ಷಿಣ […]

JANANUDI.COM NETWORK ಜೆರುಸಲೆಮ್(12-05-2021): ಮದ್ಯ ಪ್ರಾಚ್ಯದಲ್ಲಿ ಮತ್ತೆ ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ದೇಶಗಳೊಡನೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಗಾಜಾ ಪಟ್ಟಿಯಲ್ಲಿ ನಡೆದ ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಪ್ಯಾಲೇಸ್ತೀನ್ ನ 32 ಜನ ಹತರಾದರೆಂದು ಹಮಾಸ್ ಆರೋಪಿಸಿದೆ. ಅದಕ್ಕೆ ಪ್ರತಿಯಾಗಿ ಪ್ಯಾಲೇಸ್ತೀನ್ ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 30 ವರ್ಷದ ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಕೇರಳದ ಇಡುಕ್ಕಿ ಜಿಲ್ಲೆಯವರಾದ ಸೌಮ್ಯಾ ಸಂತೋಷ್ ಎಂದು ತಿಳಿದು ಬಂದಿದೆ. ಇಅವಳು ದಕ್ಷಿಣ […]