ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಹೊಸಕೋಟೆಯಿಂದ ಬಂಗಾರಪೇಟೆ ಮಾರ್ಗವಾಗಿ ವಿ.ಕೋಟೆ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ, ಅವರಿವರ ಮೇಲೆ ನೆಪ ಹೇಳುವುದನ್ನು ಬಿಟ್ಟು ಕೂಡಲೇ ಕಾಮಗಾರಿ ಮುಗಿಸಿ ಎಂದು ಕೆಜಿಎಫ್ ಶಾಸಕಿ ರೂಪಶಶಿಧರ್ ತಾಕೀತು ಮಾಡಿದರು.ಮಂಗಳವಾರ ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿಯಲ್ಲಿ ಕರೆಯಲಾಗಿದ್ದ ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ದ ಕಿಡಿಕಾರಿ, ವಿಳಂಬ ಮಾಡಿದರೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಪರೀಕ್ಷೆ ಕುರಿತು ಭಯ ಬೇಡ, ಮಾಸ್ಕ್,ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಪಾಲಿಸಿ ಆತ್ಮಸ್ಥೈರ್ಯದಿಂದ ಅಭ್ಯಾಸ ಮುಂದುವರೆಸಿ, ನಿಮ್ಮ ಸುರಕ್ಷತೆಗೆ ನಿಮ್ಮ ಪೋಷಕರು,ಶಿಕ್ಷಕರು ಮಾತ್ರವಲ್ಲ ಇಡೀ ಸರ್ಕಾರವೇ ಇದೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ಕುಮಾರ್ ಮಕ್ಕಳಿಗೆ ಧೈರ್ಯ ತುಂಬಿದರು.ಮುಳಬಾಗಿಲಿಗೆ ಭೇಟಿ ನೀಡಿದ ನಂತರ ಕೋಲಾರ ತಾಲ್ಲೂಕಿನ ಹುತ್ತೂರು ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳನ್ನು ಕೇಳಿದ ಮೊದಲ ಪ್ರಶ್ನೆ ನಿಮಗೆ ಪರೀಕ್ಷೆ ಬೇಕೋ,ಬೇಡವೋ’ ಎಂದು. […]
JANANUDI.COM NETWORK ಬೆಂಗಳೂರು, ಮಾ. 25 ಕೊರೊನಾ ನಿಯಂತ್ರಣಕ್ಕಾಗಿ ಸೋಂಕುಪೀಡಿತರ ಕೈಗೆ ಮುದ್ರೆಸರಕಾರವು ಎಲ್ಲ ಹಬ್ಬಗಳ ಸಾರ್ವಜನಿಕ ಆಚರಣೆಯ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬರುವವರು ಹೊಸ ಆದೇಶದಂತೆ ಮುಂಬರುವ ಯುಗಾದಿ, ಆಲ್ಟಿ ಪಿಸಿಆರ್ ನೆಗೆಟಿವ್ ವರದಿ ತರುವುದು., ಹೋಳಿ, ಶಬ್-ಎ- ಬರಾತ್, ಗುಡ್ ಫೈಡೇ ಸಹಿತ ಹಲವು ಹಬ್ಬಗಳನ್ನು ಸಾರ್ವಜನಿಕ ಸ್ಥಳ ಮೈದಾನ,ಪಾರ್ಕ್,ಮಾರುಕಟ್ಟೆಗಳಲ್ಲಿ ಕಡ್ಡಾಯವಾಗಿ ಆಚರಿಸಬಾರದೆಂದು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ […]
JANANUDI.COM NETWORK ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2020 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್ ಗಳು ದೊರಕಿವೆ.ವಾಣಿಜ್ಯ ಪದವಿಯಲ್ಲಿ ಯಡ್ತೆರೆಯ ಕುದ್ರಿಸಾಲ್, ವಿಠಲ ಮತ್ತು ಕಾವೇರಿಯವರ ಪುತ್ರಿ ಮಧುಶ್ರೀಗೆ ಎಂಟನೇ ರ್ಯಾಂಕ್,ಕಲಾ ಪದವಿಯಲ್ಲಿ ಬಿಜೂರಿನ ಕಂಚಿಕಾನ್ ಶ್ರೀಧರ ಭಟ್ ಮತ್ತು ಕಾತ್ಯಾಯಿನಿ ಭಟ್ಯವರ ಪುತ್ರಿ ಕೀರ್ತಿಗೆ ನಾಲ್ಕನೇ ರ್ಯಾಂಕ್,ವಿಜ್ಞಾನ ಪದವಿಯಲ್ಲಿ ಕುಂದಾಪುರದ ಕುಂಭಾಶಿಯ ಮನೋಹರ್ ಪ್ರಭು ಮತ್ತು ಮಲ್ಲಿಕಾ ಪ್ರಭು ಅವರ ಪುತ್ರಿ ಮೇಘನಾ ಪ್ರಭು ಅವರಿಗೆ ನಾಲ್ಕನೇ ರ್ಯಾಂಕ್, […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪುರಸಭೆ ಆಯವ್ಯಯದಲ್ಲಿ ಪಟ್ಟಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಆಯ ವ್ಯಯವನ್ನು ಸಿದ್ಧಪಡಿಸಬೇಕು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 2021 – 22ನೇ ಸಾಲಿನ ಆಯವ್ಯಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಎಲ್ಲ ವಾರ್ಡ್ಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಅಗತ್ಯ ಇರುವಲ್ಲಿ ರಸ್ತೆ, ಚರಂಡಿ ನಿರ್ಮಿಸಬೇಕು. ಬೀದಿ ದೀಪದ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಸೋಮವಾರ, ಕುಡಿಯುವ ನೀರು ಸಮಸ್ಯೆ ನಿವಾರಣೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗವಾದಿ ರವಿಕುಮಾರ್ ಚರ್ಚಿಸಿದರು.
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದ ವರದ ಬಾಲಾಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗರಾಜ ಶರ್ಮ (71) ಸೊಮವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ದೇವಾಲಯದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು, ಕೆಲವು ದಿನಗಳಿಂದ ಅನಾರೋಗ್ಯ ಪೀಡತರಾಗಿದ್ದರು.ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.ಸೋಮವಾರ ಅಂತ್ಯ ಸಂಸ್ಕಾರ ನಡೆಸಲಾಯಿತು.
OBITUARY Mrs. Nelli D’ Souza (81) passed away Sunday March 21- 2021 (Sister of Sr. Asha A.C. Kundapur convent) W/O Jhon dsouza M/O Frederick / janaki, Ashok / Mable, Shalet / theodore Her funeral will be at 3.30 p.m. on Monday at St. Maria Goretti Church Hirgan. Funeral cortege leaves residence Padubettu Compound, Kukkundoor 22 […]
JANANUDI.COM NETWORK ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ, ಇವರ ಆಶ್ರಯದಲ್ಲಿ, ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ, ಕುಂದಾಪುರದ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಲ್ಕಾ ಜೋಬಿ 52-56ಕೆಜಿ ವಿಭಾಗದಲ್ಲಿ ಪ್ರಥಮ ಹಾಗೂ ಪ್ರತೀಕ್ಷಾ 40-44ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಂದೂರಿನ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ […]