
JANANUDI.COM NETWORK ಬೆಂಗಳೂರು,ಮೇ.27: ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ತೊಂದರೆಗೀಡಾಗಿರುವ ಅರ್ಹ ಆಟೋ-ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ತಲಾ ಮೂರು ಸಾವಿರ ರೂಪಾಯಿಯಷ್ಟು ಆರ್ಥಿಕ ಸಹಾಯ ನೀಡಲು ಸರ್ಕಾರ ನಿರ್ಧರಿಸಿತ್ತು, ಅದರಂತೆ ಸಾರಿಗೆ ಇಲಾಖೆಯಿಂದ ಪರಿಹಾರ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.”ಆಟೋ-ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆಗಳನ್ನು ಒದಗಿಸಿ ಈ ಪರಿಹಾರ ಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು’ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವ ಲಕ್ಷ್ಮಣ […]

JANANUDI.COM NETWORK ನವದೆಹಲಿ,ಮೇ. 27: ಯೋಗ ಬಾಬಾ ರಾಮ್ ದೇವ್ ಗುರುವಿನ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ ಹತ್ತಿದೆ, ಅದರಲ್ಲಿ ಅವರು ತನ್ನನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸವಾಲು ಹಾಕಿ. ನನ್ನನ್ನು ಅವರಪ್ಪನನ್ನು ಬಂದಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ರಾಮ್ ದೇವ್ ತಮ್ಮ ವಿವಾದಾತ್ಮಕ ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಈ ವಿಡಿಯೋ ವೈರಲ್ ಆಗಿದೆ. ‘ಖೈರ್, ಬಂಧನ್ ತೋ ಉನ್ಕಾ ಬಾಪ್ ಭೀ ನಹಿ ಕರ್ ಸಕ್ತಾ ಹೈ, […]

ವರದಿ : ಮಝರ್, ಕುಂದಾಪುರ ಕುಂದಾಪುರ : ಉಡುಪಿಯಲ್ಲಿ ಜೆ ಎಮ್ ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದಜಾರ್ಜ್ ಡಿ. ಅಲ್ಮೇಡಾ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (26.05.2021) ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಮೂಲತಃ ಕುಂದಾಪುರ ಪಡುಕೋಣೆಯವರಾಗಿದ್ದ ಇವರು ತ್ರಾಸಿಯಲ್ಲಿ ನೆಲೆಸಿ 30 ವರ್ಷಗಳ ಕಾಲ ಕುವೈಟಿನ ದರ್ ಅಲ್ ಸಫಿ ಆಸ್ಪತ್ರೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ದುಡಿದಿದ್ದರು. ಈ ಸಂದರ್ಭದಲ್ಲಿ ನೂರಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಉದ್ಯೋಗ ನೀಡಿದ್ದರು. ಜಾರ್ಜ್ ಡಿ.ಅಲ್ಮೇಡಾ […]

JANANUDI.COM NETWORK ನವದೆಹಲಿ, 26: ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹಂಚಿಕೋಳ್ಳುವುದು ಪ್ರತಿಶ್ಠೆಯಾಗಿ ಮಾರ್ಪಟ್ಟಿದೆ ಎಂದು ಜನ ಅಂದು ಕೊಂಡಿದ್ದಾರೆ, ಆದರೆ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ, ಹಂಚಿಕೊಳ್ಳ ಬಾರದೆಂದು, ಭಾರತ ಸರ್ಕಾರ ಹೇಳುತ್ತದೆ. ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು, ಏಕೆಂದರೆ ನಾಗರಿಕರು ಸೈಬರ್ ದಾಳಿಕೋರರಿಗೆ ಬಲಿಯಾಗ ಬಹುದುದೆಂದು ಅಭಿಪ್ರಾಯ ಪಟ್ಟಿದೆ ಮತ್ತುತಮ್ಮ ಮಾಹಿತಿಯನ್ನು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಬಹುದೆಂದು ಹೇಳಿಕೊಂಡಿದೆ.“ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ […]

JANANUDI.COM NETWORK ಬೆಂಗಳೂರು,ಮೇ.26. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ವಾದಿ,ಕರ್ನಾಟಕ ನಾಡಿನ ಹೆಮ್ಮೆಯ ಪುತ್ರ, ನಾಡೋಜ ಡಾ. ಎಚ್. ಎಸ್. ದೊರೆಸ್ವಾಮಿ(104) ಅವರು ಇಂದು ಬುಧವಾರ ವಿಧಿವಶವಾದರು. ನಾಡೋಜ ಡಾ. ಎಚ್. ಎಸ್. ದೊರೆಸ್ವಾಮಿ ಸ್ವಲ್ಪ ಸಮಯದ ಹಿಂದೆ ಕೊರೊನಾ ಸೋಕಿತರಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಅವರು ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವಿಫಲವಾಗಿ, ನಿಧನ ಹೊಂದಿದರು. ದೊರೆಸ್ವಾಮಿ ನಿಧನಕ್ಕೆ ಹಲವು ರಾಜಕೀಯ, ಸಾಮಾಜಿಕ ಗಣ್ಯರು ಕಂಬನಿ ಮಿಡಿದಿದ್ದಾರೆ.

JANANUDI.COM NETWORK ಬೆಂಗಳೂರು: ನಿಮಗೆ ರಾಜ್ಯದ ಜನರಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ, ಅವೈಜ್ಞಾನಿಕ ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿಗೆ ಕಾಂಗ್ರೆಸ್ ಹೇಳಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ನಾಯಕರು ಲಸಿಕೆಯ ಕುರಿತಂತೆ ತಪ್ಪುಸಂದೇಶಗಳನ್ನು ಹರಡುತ್ತಿರುವ ಮಾಹಿತಿಗಳು ಬರುತ್ತಿವೆ. ಈ ನಡೆ ಅಪಾಯಕಾರಿಯಾಗಿದೆ. ಲಸಿಕೆ ಪ್ರಕರಣದಲ್ಲಿ ಬಿಜೆಪಿಯು ತನ್ನ ವೈಫಲ್ಯವನ್ನು ಜನರು ಪ್ರಶ್ನಿಸದಂತೆ ಮಾಡಲಾಗುತ್ತಿದೆ. […]

JANANUDI.COM NETWORK ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣ ಕಳೆದ ದಿನಗಳಲ್ಲಿ ಬಹಳ ಸದ್ದು ಮಾಡಿತ್ತು, ಇತರರು ತಪ್ಪಿದಸ್ತರಂತೆ ಕಾಣಿಸುವ ಯತ್ನನಡೆದು ಇದೀಗ ಯಾರು ಹಗರಣ ಬಯಲು ಮಾಡಲು ಹೊರಟಿದ್ದರೊ, ಅವರಲ್ಲೆ ಪಾತಕ ಕ್ರತ್ಯ ಇದೆಯೆಂದು ಪ್ರಕರಣ ತಿರುಗು ಬಾಣವಾಗಿ, ಬಿಜೆಪಿಯ ಶಾಸಕ ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಈ ಹಿಂದೆ ಬಾಬುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊರೊನಾ ಕಾರಣ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಕರೋನಾ ವೈರಸ್ನ ಎರಡನೇ ಅಲೆ ಎಲ್ಲೆಡೆ ಹರಡುತ್ತಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ. ಗ್ರಾಮೀಣ ಬಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಸೋಂಕಿತ ಮನೆಗಳಿಗೆ ಪೋಸ್ಟರ್ ಕಡ್ಡಾಯವಾಗಿ ಅಂಟಿಸಲಾಗುವುದು . ಕೋವಿಡ್ ಸೋಂಕಿತ ವ್ಯಕ್ತಿ ವಿನಾಕಾರಣ ಹೊರಗೆ ಓಡಾಡಿದರೆ ಸ್ಥಳದಲ್ಲಿಯೇ ಎಫ್.ಐ.ಆರ್ ದಾಖಲಿಸುವ ವಿಶೇಷ ಜವಾಬ್ದಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ , ಸೋಂಕಿತ ವ್ಯಕ್ತಿಯ ಭೇಟಿ ಸ್ಥಳದಲ್ಲಿ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಲಾಗುವುದು . […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ :- ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಆಗಿರುವುದು ಸಾವಲ್ಲ ಅದು ಸರ್ಕಾರವೇ ಮಾಡಿರುವ ಕೊಲೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಕಿಡಿಕಾರಿದರು. ಶ್ರೀನಿವಾಸಪುರ ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದ ನಾಯಕರ ಪ್ರಕಾರ 34 ಜನರು ಸತ್ತಿದ್ದಾರೆ. ಆದರೆ ಸರ್ಕಾರ ಮೂರೇ ಮಂದಿ ಮೃತಪಟ್ಟಿರುವುದು ಎಂದು ಆರೋಗ್ಯ ಸಚಿವರು ಸುಳ್ಳು ಹೇಳುತ್ತಾರೆ. ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ತನಿಖೆ ಮಾಡಿಸಿ ವರದಿ ತರಸಿಕೊಳ್ಳುತ್ತೆ ಎಂದರೆ ಸರ್ಕಾರದ ನಿರ್ಲಕ್ಷತೆ ಕಾಣುತ್ತಿದೆ ಎಂದರು.ಕೋರೊನ […]