
ಕೋಲಾರ:- ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕøತಿ, ಸಂಸ್ಕಾರ ಕಲಿಸಿದರೆ ಮಾತ್ರ ಅವರ ಬದುಕು ಉಜ್ವಲವಾಗುತ್ತದೆ, ಧ್ಯಾನದಿಂದ ಏಕಾಗ್ರತೆ ವೃದ್ದಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹೋಳೂರಿನ ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಆಧುನಿಕ ಯುಗದಲ್ಲಿ ಆಧುನಿಕ ಪಿಡುಗುಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ, ಮಾದಕ ವಸ್ತುಗಳ ಚಟದ ಜತೆಗೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಮಕ್ಕಳ ಜೀವನಕ್ಕೆ […]

ಕೋಲಾರ: ಸರಕಾರಿ ಶಾಲೆ ಮಕ್ಕಳು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಾಧಕರಾಗಿ ಹೊರ ಹೊಮ್ಮಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ನಗರದ ಟಮಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದಿಂದ ಆಯೋಜಿಸಲಾಗಿದ್ದ ಸಾವಿತ್ರಿ ಬಾಫುಲೆ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕಿಯರನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳು ಸಿಗುತ್ತಿವೆ, ಸಾವಿತ್ರಿ ಬಾಪುಲೆ ರೀತಿಯಲ್ಲಿಯೇ ಜ್ಞಾನವಂತ ಶಿಕ್ಷಕ ವರ್ಗ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಬದುಕಿನ […]

ಚಿತ್ರದುರ್ಗ, ಜನವರಿ 6, 2025: ಶಿವಮೊಗ್ಗ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಜನವರಿ 4 ರಂದು ಸ್ಮರಣೀಯ ದಿನವಾಗಿದ್ದು, ಹೊಳಲ್ಕೆರೆಯಲ್ಲಿ ದೈವಿಕ ಕರುಣೆಗೆ ಮೀಸಲಾದ ನೂತನ ಚರ್ಚ್‌ಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ.ಆಶೀರ್ವದಿಸಿದರು. ಕಾರ್ಯಕ್ರಮವು 25 ಧರ್ಮಗುರುಗಳು, 230 ಕ್ಯಾಥೋಲಿಕರು ಮತ್ತು ಇತರ ಅತಿಥಿಗಳ ಹಾಜರಾತಿಯೊಂದಿಗೆ ಬೆಳಿಗ್ಗೆ 10:30 ಕ್ಕೆ ಪ್ರಾರಂಭವಾಯಿತು. ದಾನಿಗಳ ಕುಟುಂಬದವರು ಉಪಸ್ಥಿತರಿದ್ದರು. ಫಾ. ರಿಚರ್ಡ್ ಕ್ವಾಡ್ರೋಸ್ SVD ರಿಬ್ಬನ್ ಕತ್ತರಿಸಿ, ಸುಂದರವಾದ ಹೊಸ ಚರ್ಚ್ ಅನ್ನು ಅನಾವರಣಗೊಳಿಸಿದರು. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ. […]

ಮಂಗಳೂರು; ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದವರು. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನ್ಮ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ ಈಗ ಆರೋಗ್ಯವಾಗಿದ್ದಾರೆ. ಈ ಮಕ್ಕಳು ಕ್ರಮವಾಗಿ […]

ಕುಂದಾಪುರ (ಜ.03): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆಗೆ ಮಾತ್ರವೇ ಸೀಮಿತವಾಗಿರದೇ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕು. ಅಂತಹ ಪ್ರಯತ್ನವನ್ನು ಈ ಸಂಸ್ಥೆ ಉತ್ತಮ ಶಿಕ್ಷಕರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ಚಿಕಾಗೊ ಯು.ಎಸ್.ಎ ನ, ಜೆ.ಪಿ.ಮೊರ್ಗಾನ್ ಚೇಸ್ ಅಂಡ್ ಕಂಪೆನಿ ಇದರ ಉಪಾಧ್ಯಕ್ಷರಾದ ಭಾಸ್ಕರ್ ಎಚ್. ಮಾರುತಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ […]

ಮಂಗಳೂರು, ಜನವರಿ 06: ; ಖ್ಯಾತ ಕನ್ನಡ ಸಾಹಿತಿ ಡಾ. ನಾ. ಡಿಸೋಜಾ ಅವರು ಇಂದು ಸಂಜೆ 7.50ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋ ಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತೀವ್ರ ನಷ್ಟವಾಗಿದೆ. ಅವರು ನಿನ್ನೆ ಸಂಜೆ 7.50ಕ್ಕೆ ಅನಾರೋಗ್ಯ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ […]

ಶ್ರೀನಿವಾಸಪುರ : ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಯಲು ಈ ಕಾರ್ಯಕ್ರಮವು ಅನುಕೂಲವಾಗಲಿದ್ದು ಪೋಷಕರು ತಮ್ಮ ಮಕ್ಕಳನ್ನ ಸಹಕರಿಸುವಂತೆ ಎಪಿಜಿ ಅಬ್ದಲ್ ಕಲಾಂ ಟ್ರಸ್ಟ್‍ನ ಉಪಾಧ್ಯಕ್ಷ ಇಲಿಯಾಸ್ ಪಾಷ ಕರೆ ನೀಡಿದರು.ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು , ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶನಿವಾರ ಮೆಟ್ರಿಕ್ ಮೇಳವನ್ನು ಶಾಲಾವತಿಯಿಂದ ಆಯೋಜನೆ ಮಾಡಲಾಗಿತ್ತು.ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್ ಮಾತನಾಡಿ ಈ ಶಾಲೆಯ ಮಕ್ಕಳಿಗೆ ಎಪಿಜಿ ಅಬ್ದಲ್ ಕಲಾಂ ಟ್ರಸ್ಟ್‍ನವರು ಶೈಕ್ಷಣಿಕವಾಗಿ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ದಾನಿಗಳು […]

ಶ್ರೀನಿವಾಸಪುರ: ಕುವೆಂಪು ತಮ್ಮ ಸಾಹಿತ್ಯದ ಮೂಲಕ ಸಮಾನತೆ, ಸಹಬಾಳ್ವೆ, ಜೀವನ ಪ್ರೀತಿಯ ಸಂದೇಶ ನೀಡಿ ವಿಶ್ವಮಾನವರಾದರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಶ್ರೀನಿವಾಸಪುರ ಇಲ್ಲಿ, ಕನ್ನಡ ಸಾಹಿತ್ಯ ಪರಿಷತ್ತ, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಈ ಮೂರರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕಿನ ಅಧ್ಯಕ್ಷರೂ ಆದ ಎಂ. ಬೈರೇಗೌಡ ಅವರು […]

ವಿಶ್ವ ಕುಂದಾಪುರ ಹತ್ತಾರು ನೂರಾರು ಜನರು ಭಾಗವಹಿಸಿದ ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿರಬಹುದು, ಅಥವಾ ಸಾವಿರಾರು ಜನರು ಪಾಲ್ಗೊಂಡ ಬಹಿರಂಗ ಸಭೆಗಳೇ ಇರಬಹುದು; ಆಗಾಗ ಕೆಲವು ಮುಖಂಡರು ವೇದಿಕೆಗಳಲ್ಲೇ; ಇನ್ನೂ ಕೆಲವೊಮ್ಮೆ ತೀವ್ರ ಹೋರಾಟಗಳ ನಡುವೆಯೂ ಔಷಧಿ ಸೇವಿಸುವುದನ್ನು ನಾವು ಕಾಣುತ್ತೇವೆ. ಅನಿವಾರ್ಯವಾಗಿ ಬಿಸ್ಕತ್‍ನಂಥ ಆಹಾರ ತಿನ್ನುವುದನ್ನು ನೋಡುತ್ತೇವೆ. ಆದರೆ, ಉಸಿರಾಡುವ ಕಿಟ್, ಅಂದರೆ ಆಮ್ಲಜನಕದ ಸಿಲಿಂಡರ್ ಹೊತ್ತುಕೊಂಡೇ ಈ ರೀತಿ ಸಭೆ-ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ನೋಡಿದ್ದೀರಾ? ಹೌದು, ಅಂಥ ದೃಶ್ಯವನ್ನು ಇತ್ತೀಚೆಗೆ ಬೆಂಗಳೂರಿನಲ್ಲೂ ಕೋಲಾರದಲ್ಲೂ ಕಾಣಬಹುದಾಗಿತ್ತು.ಜೀವಪರ ಚಳವಳಿಯ ನೇತಾರ, […]