
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : – ಕನ್ನಡ ಬಳಕೆ ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ ಖಾಸಗಿ ಕ್ಷೇತ್ರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು . ಭಾರತ ಸೇವಾದಳ ಜಿಲ್ಲಾ ಘಟಕ , ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ೬೬ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು . ಕನ್ನಡ ಯುವರತ್ನ ಪುನೀತ್ ರಾಜ್‌ಕುಮಾರ್ ನಿಧನದಿಂದ […]

JANANUDI.COM NETWORK ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನೇತ್ರದಾನದ ಮೂಲಕ ನಾಲ್ವರಿಗೆ ದ್ರಷ್ಟಿ ಭಾಗ್ಯ ದೊರಕಿತು. ಇದು ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ಚಿಕ್ಸಿತ್ಸಾ ವಿಧಾನವಾಗಿದೆ, ಆ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಣ್ಣುಗಳು ಈ ಪ್ರಪಂಚವನ್ನು ಇನ್ನೂ ನೋಡಲು ಸಾಧ್ಯವಾಗಿದೆ.ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಪುನೀತ್ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯರ ತಂಡ ತಿಳಿಸಿದೆ. ಕಾರ್ನಿಯಾದ ಮೇಲಿನ ಮತ್ತು […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ , ತಮ್ಮ ನಟನೆ , ಸಜ್ಜನಿಕೆ , ಹೃದಯವಂತಿಕೆಯ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದಿದ್ದ ಪವರ್ ಸ್ಟಾರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು . ನ […]

JANANUDI.COM NETWORK ದಿನಾಂಕ 31-10-2021 ಆದಿತ್ಯವಾರ ಬೆಳಿಗ್ಗೆ 9-30ಕ್ಕೆ ಸರಿಯಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಜರುಗಲಿದೆ ಎಂದುಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ತಿಳಿಸಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ,ಪದಾಧಿಕಾರಿಗಳು ,ಜನಪ್ರತಿನಿಧಿಗಳು, ಕಾರ್ಯಕರ್ತರು ಬಾಗವಹಿಸಬೇಕಾಗಿ ವಿನಂತಿಸಿ ಕೊಂಡಿದೆ (ಕಾರ್ಯಕ್ರಮ ಕ್ಲಪ್ತ ಸಮಯದಲ್ಲಿ ಜರುಗಲಿದೆ )

JANANUDI.COM NETWORK ಕ್ರೈಸ್ತ ಸಮುದಾಯದ ಚರ್ಚ್, ಸೇವಾ ಸಂಸ್ಥೆಗಳ ಸಮೀಕ್ಷೆ ಮತ್ತು ನಿರಂತರ ದಾಳಿ. ಸುಳ್ಳು ಕೇಸುಗಳನ್ನು ದಾಖಲಿಸಿ ಕ್ರೈಸ್ತ ಮುಖಂಡರುಗಳ ಬಂಧನ ,ಇತ್ಯಾದಿ ಕೃತ್ಯವನ್ನು ಖಂಡಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ದಕ ಜಿಲ್ಲೆಯ ಪ್ರೆಸ್ ಕ್ಲಬ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು ಮುಖಂಡರಾದ ಆಲ್ಫೊನ್ಸೋ ಫ್ರಾಂಕೊ,ಅಡ್ವಕೇಟ್ ಮಜೀದ್,ಅಕ್ರಮ್ ಹಸನ್,ಅಬೂಬಕ್ಕರ್ ಕುಳಾಯಿ ಮತ್ತುವಿಕ್ಟರ್ ಮಾರ್ಟಿಸ್* ಮೊದಲಾದವರುಮಾತನಾಡಿದರು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ರಾಜ್ಯದ ಶಕ್ತಿಸೌಧ ಹಾಗೂ ಜವರ ದೇವಾಲಯದಂತಿರುವ ವಿಧಾನಸೌಧ ಪಕ್ಕದ ಶಾಸಕರ ಭವನದಲ್ಲೇ ಲಂಚ ಪಡೆದು ಸಿಕ್ಕಿಹಾಕಿಕೊಂಡು ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿರುವ ಕಳಂಕಿತ ಮಾಜಿ ಶಾಸಕ ಸಂಪಂಗಿ ಅವರಿಗೆ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು . ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಕುರಗಲ್ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಪತ್ರಕರ್ತರು ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಬಾರದು , ಅವರು ನಿಮ್ಮ ಸಂಘ ಬರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿ ತಮ್ಮ ವೃತ್ತಿಯ ಗೌರವ ಘನತೆಯನ್ನು ಕಾಪಾಡಿ ಕೊಳ್ಳುವಂತಾಗ ಬೇಕೆಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.ಮಾಲೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ೨ ನೇ ಕೋಲಾರ ಜಿಲ್ಲಾ ಪತ್ರಕರ್ತರ ಸಮ್ಮೇಳನ ಹಾಗೂ ಸರ್ವ ಸದಸ್ಯರ ಸಭೆ ಮತ್ತು ಮಾಲೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಭವನವನ್ನು ಉದ್ಘಾಟಿಸಿ […]

JANANUDI.COM NETWORK ಸರಕಾರ ತನ್ನ ಕನಿಷ್ಠ ಜವಾಬ್ದಾರಿಗಳನ್ನು ಒಂದು ಐತಿಹಾಸಿಕ ಸಾಧನೆ ಎನ್ನುವುದು ಸರಿಯಲ್ಲ. ಯಾವುದೇ ಯಶಸ್ಸು ಮೈಮರೆವಿಗೆ ಕಾರಣವಾಗಬಹುದು. ನಮ್ಮ ದೇಶದ ಜನಸಂಖ್ಯೆ ಮಕ್ಕಳನ್ನು ಸೇರಿಸಿದರೆ 136 ಕೋಟಿಗಿಂತ ಹೆಚ್ಚು. ಸರಕಾರ ತನ್ನ ಬೆನ್ನು ತಟ್ಟಿಕೊಳ್ಳುವ ವೇಗ ಮುಂದುವರೆದರೆ ಇನ್ನೂ ಉಳಿದ 172 ಕೋಟಿ ಲಸಿಕೆ ಹಾಕಿಸಿಕೊxಳ್ಳಲು ಇನ್ನು 479 ದಿನಗಳು ಬೇಕಾಗಬಹುದು. ಕೋವಿಡ್ ಹರಡುವಿಕೆಯ ವೇಗ ಮತ್ತು ಅದು ಉಂಟು ಮಾಡಬಹುದಾದ ಅನಾಹುತ ಗಣನೆಗೆ ತೆಗೆದುಕೊಂಡರೆ ಲಸಿಕೆ ಅಭಿಯಾನದಲ್ಲಿ ಭಾರತ ಹಿಂದುಳಿದಿರುವುದು ವಿಷಾದವಾಗಿದೆ ಎಂದು […]

JANANUDI.COM NETWORK ಕುಂದಾಪುರ: ದೇಶದಲ್ಲಿ ಪ್ರಸ್ತುತ ಅತ್ಯಂತ ಜನಪರವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ರಾಜಕೀಯದ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇತ್ತೀಚೆಗೆ ಮಾಡಿರುವ ಟೀಕೆಗಳು ಅತ್ಯಂತ ಕೀಳುಮಟ್ಟದ್ದಾಗಿವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಕುರಿತು ಆಧಾರರಹಿತವಾಗಿ ಅವಾಚ್ಯ ಶಬ್ದ ಬಳಸಿ […]