
JANANUDI.COM NETWORK ಉಡುಪಿ: ಜಿಲ್ಲೆಯ ಕಾಪು ತಾಲೂಕಿನಲ್ಲಿ ಮೂವರು ಕಳ್ಳ ಫಕೀರರು ಬಂದು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.ಫಕೀರರ ವೇಷ ಧರಿಸಿ ಬಂದ ಮೂವರು ಕಳ್ಳ ಫಕೀರರು, ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಟಪಾಡಿಯ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು, ಸುತ್ತಮುತ್ತಲ ಮನೆಗಳಿಗೆ ಭೇಟಿ ನೀಡಿ ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಫಕೀರ ವೇಷಧಾರಿಗಳು ಮನೆಯ […]

JANANUDI.COM NETWORK ಹಾಸನ: ಪೂಜೆಯ ನೆಪದಲ್ಲಿ ಪೂಜಾರಿಯೊಬ್ಬ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆಅ ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದಲ್ಲಿ ನಡೆದಿದೆ.ವರದಿಯ ಪ್ರಕಾರ, ಡಿಸೆಂಬರ್ 7ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. 47 ವರ್ಷದ ಪಾರ್ವತಿ ಅವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದ ಹಿನ್ನೆಲೆಯಲ್ಲಿ ಗ್ರಾಮದ ಪಿರಿಯಾಪಟ್ಟಣದ ದೇವರ ಪೂಜಾರಿ ಮಧು ಎಂಬವರ ಬಳಿಗೆ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಬೆಂಗಳೂರು ರೌಂಡ್ ಟೇಬಲ್ ಸಂಸ್ಥೆಯ ವಿಭಾಗೀಯ ಅಧ್ಯಕ್ಷ ಸಂದೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಬೆಂಗಳೂರು ಸೆಂಟ್ರಲ್ ರೌಂಡ್ ಟೇಬಲ್ ಹಾಗೂ ಬೆಂಗಳೂರು ಸೆಂಟ್ರಲ್ ಲೇಡೀಸ್ ಕ್ಲಬ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಸ್ಥರ ಕೋರಿಕೆಯಂತೆ ರೂ.15 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ. ಪೋಷಕರು ತಮ್ಮ […]

JANANUDI.COM NETWORK ಕುಂದಾಪುರ : ಜೀವನ ನಿರ್ವಹಣೆಗಾಗಿ ಕೋಳಿ ಮಾಂಸವನ್ನು ವಿತರಣೆ ಮಾಡ್ತಿದ್ದ ಮೂಡುಗೋಪಾಡಿಯ ಜುನೈದ್ (21) ಎಂಬ ಯುವಕನನ್ನು ನಿಶ್ಠುರವಾಗಿ ಥಳಿಸಿದ ಘಟನೆ ಕುಂದಾಪುರ ಸಮೀಪದ ಕೊಡಿಯಲ್ಲಿ ನಡೆದಿದೆ.ಇವರು ಪ್ರತಿದಿನದಂತೆ ಬುಧವಾರ ಮದ್ಯಾಹ್ನ 1.30 ರ ಸುಮಾರಿಗೆ ಮಹಿಂದ್ರಾ ಜೀಟೊ ವಾಹನದಲ್ಲಿ ಕೋಳಿ ಮಾಂಸ ವಿತರಿಸುತ್ತಾ ಕುಂದಾಪುರ ಚರ್ಚ್ ರಸ್ತೆಯಿಂದ ಕೋಡಿ ಕಡೆ ಹೋಗುತ್ತಿರುವಾಗ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಜುನೈದ್‍ನ ವಾಹನವು ಯಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತು ಬಿಟ್ಟಿತು. ಅದನ್ನು ದೂಡಿ ವಾಹನ ಚಾಲೂ […]

JANANUDI.COM NETWORK ಮದ್ರಾಸ್: ಎಂಐ-17ವಿ5 ಸೇನಾ ಹೆಲಿಕಾಪ್ಟರ್ ಪತನವಾಗಿ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮತ್ತು ಪತ್ನಿ ಸಮೇತ 13 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆಂದು ಅಧಿಕೃತವಾಗಿ ಸೇನೆ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪುತ್ಥಳಿಗೆ ಮುಖಂಡ ಗುಂಜೂರು ಆರ್.ಶ್ರೀನಿವಾಸರೆಡ್ಡಿ ಮಾಲಾರ್ಪಣೆ ಮಾಡಿದರು.

JANANUDI.COM NETWORK ಕುಂದಾಪುರ: ಸಮಾಜದ ಸಂಘಟನೆಗಳು ಕಾರ್ಯಕ್ರಮ ಸಂಘಟಿಸಿದಾಗ ಸಮಾಜ ಬಾಂಧವ ಸಹಕಾರ ಅಗತ್ಯ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಸಮಾಜ ಬಾಂಧವರು ಆಗಮಿಸಿದಾಗ ಸಂಘಟಿಕರಿಗೆ ಕಾರ್ಯಕ್ರಮ ಆಯೋಜನೆ ಮಾಡಲು ಹುಮ್ಮಸ್ಸು ಹೆಚ್ಚುತ್ತೇದೆ. ಎಳೆಯ ಪ್ರಾಯದಲ್ಲೇ ತಮ್ಮ ಮಕ್ಕಳ ಪ್ರತಿಭೆಯನ್ನು ಪೋಷಕರು ಗುರುತಿಸಿದಾಗ ಆತ ಮುಂದೆ ಸಮಾಜದ ಆಸ್ತಿಯಾಗುತ್ತಾನೆ ಎಂದು ಉಡುಪಿ ಜಿಲ್ಲಾ ಸೋಮಕ್ಷತೀಯ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಹೇಳಿದರು.ಅವರು ಭಾನುವಾರ ಕುಂದಾಪುರ ವ್ಯಾಸರಾಜ ಕಲ್ಯಾಣಪದಲ್ಲಿ ನಡೆದ ಕೋಟೇಶ್ವರ ಗಾಣಿಗ ಯುವ […]

JANANUDI.COM NETWORK ಕುಂದಾಪುರ, ಡಿ.6: ಬಹಳ ವರ್ಷಗಳಿಂದ ಕುಂದಾಪುರದಲ್ಲಿ ಗಿಫ್ಟ್ ಸೆಂಟರ್ ಎಂಬ ಅಂಗಡಿಯನಿಟ್ಟುಕೊಂಡು ಗಿಫ್ಟ್ ವಸ್ತುಗಳ ಮಾರಾಟದಲ್ಲಿ ಉತ್ತಮ ಹೆಸರು ಗಳಿಸಿದ್ದ ಮೆಲ್ವಿನ್ ಕೊರೆಯ (66) ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ 6-12 ರಂದು ನಿಧನರಾದರು. ಅವರ ಯವೌನ ಪ್ರಾಯದಲ್ಲಿ ಉತ್ತಮ ಕಬಡಿ ಪಟುವಾಗಿ ಕುಂದಾಪುರದಲ್ಲಿ ಹೆಸರು ಗಳಿಸಿದರು.್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರವು ಕುಂದಾಪುರದಲ್ಲಿ ನಡೆಯಲಿದೆಯೆಂದು ಕುಟುಂಬದವರು ತಿಳಿಸಿದ್ದಾರೆ.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ಡಿ. 4 : ವಿಶ್ವ ಉದಯ ಆದಾಗಿನಿಂದಲೂ ಅದರೊಟ್ಟಿಗೆ ಗಣಿತವೂ ಸಾಗಿಬಂದಿದೆ ಪ್ರತಿಯೊಂದಕ್ಕೂ ಗಣಿತ ಲೆಕ್ಕಾಚಾರ ಬೇಕೇಬೇಕು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಗಣಿತಕ್ಕೆ ಹೆಚ್ಚು ಒಲವು ನೀಡಿ, ಸಂತಸದಿಂದ ಕಲಿಯಲು ಶಿಕ್ಷಕರು ನೆರವಾಗುವ ಅಗತ್ಯವಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರುನಗರದ ಸ್ಕೌಟ್ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ […]