ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಪುರಸಭೆ ಮುಖ್ಯಾಧಿಕಾರಿ ಕೊಳೆತು ನಾರುತ್ತಿರುವ ಮಾವಿನ ಮಂಡಿ ಪ್ರದೇಶದ ಸ್ವಚ್ಛತೆಗೆ ಅಗತ್ಯ ಗಮನ ನೀಡಬೇಕು . ಅಲ್ಲಿ ಉಂಟಾಗಿರುವ ಅನಾರೋಗ್ಯ ಪರಿಸರವನ್ನು ಸರಿಪಡಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಸೂಚಿಸಿದರು . ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ಕಾರ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ , ತಾಲ್ಲೂಕಿನ ಕಾರ್ಮಿಕರಿಗೆ ದಿನಸಿ ಹಾಗೂ ಸುರಕ್ಷಾ ಕಿಟ್ ವಿತರಿಸಿ ಮಾತನಾಡಿ , ಕೋವಿಡ್ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದಲ್ಲಿ ಜು.10 ರಿಂದ ಮರುಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್ ಪದಾರ್ಥಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿ, ಈ ವಿಷಯದಲ್ಲಿ ವರ್ತಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್ ಮಾತನಾಡಿ, ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟದಿಂದ ಜನ, ಜಾನುವಾರು ತೊಂದರೆ ಅನುಭವಿಸುವಂತಾಗಿದೆ. ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೇವಿಸಿದ ಜಾನುವಾರುಗಳು ಸಾವನ್ನಪ್ಪುತ್ತಿವೆ. […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಜೂ.28: ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ಸಹ್ಯಾದ್ರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ನಾಜಿಯಾ ಅಂಜುಂ ರವರು ಬಿಸಿಎ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 8ನೇ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಹಾಗೂ ಬಿ.ಎಸ್‍ಸಿ ಭೌತ ರಸಾಯನಶಾಸ್ತ್ರ ವಿಷಯದಲ್ಲಿ ರೂಹಿ ಸುಲ್ತಾನ, ಅಕ್ಷಯ ಇಎಸ್ ಮತ್ತು ಮೈನ ಹೆಚ್.ಎ ಎಂಬ ಈ ಮೂರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಪದವಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, […]
JANANUDI.COM NETWORK ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕುಂದಾಪುರ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ , ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಇವರನ್ನು ಆಯ್ಕೆ ಮಾಡಿದ್ದಾರೆ. ಇವರು ಶಿಕ್ಷಕರಾಗಿ, ಉಪನ್ಯಾಸಕರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ವಿದ್ಯಾಸಂಸ್ಥೆಯ ಸಂಚಾಲರು, ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳು ಆಗಿರುವ ವಂ.ಫಾ.ಸ್ಟ್ಯಾನಿ ತಾವ್ರೋ ಹೂ ಗುಚ್ಛ ನೀಡಿ ಪ್ರಾಂಶುಪಾಲ ಹುದ್ದೆಯನ್ನು ಹಸ್ತಾಂತರಿಸಿದರು. ಜತೆಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ […]
JANANUDI.COM NETWORK ಕುಂದಾಪುರ: ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ಹೆಸರಾಂತ ವೈದ್ಯರಾದ ಡಾ. ಚಂದ್ರಶೇಖರರವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‍ನ ಮುಖಂಡರಾದ ಲ. ಚಂದ್ರಶೇಖರ ಕಲ್ಪತರು ಅವರು ವೈದ್ಯರನ್ನು ಸನ್ಮಾನಿಸುತ್ತಾ ಈ ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮನ್ನು ತಾವು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಶ್ಲಾಘಿಸಿ ವೈದ್ಯರನ್ನು ಅಭಿನಂದಿಸಿದರು.ಸನ್ಮಾನ ಸ್ವೀಕರಿಸಿದ ಡಾ. ಚಂದ್ರಶೇಖರರವರು ಮಾತನಾಡುತ್ತಾ ಈ ವೃತ್ತಿ ಅತೀ ಶ್ರೇಷ್ಠವಾದುದು ಈ ಮಾರಣ ಕೋವಿಡ್ ಸಂದರ್ಭದಲ್ಲೂ ಕೇವಲ ವೈದ್ಯರ ಸೇವೆ ಮಾತ್ರ […]
ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಮಾನ್ಯ ಗೋಪಾಲ್ ಭಂಡಾರಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಬೆಲ್ಮನ್ ಗ್ರಾಮೀಣ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆಯಿತು. ಸುಮಾರು 20ಕ್ಕೂ ಮೇಲ್ಪಟ್ಟ ಕಾರ್ಯಕರ್ತರು ಮತ್ತು ಹಿತೈಷಿಗಳು ಹಾಜರಿದ್ದರು. ಎಲ್ಲರೂ ಗೋಪಾಲ್ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ನಮನ ಸಲ್ಲಿಸಿದರು. ಅನಿತಾ ಡಿಸೋಜ ಸ್ವಾಗತ ಕೋರಿದರು. ಅಧ್ಯಕ್ಷರು ಫ್ಲೋರಾ ಮೆಂಡೋನ್ಸಾ ನುಡಿ ನಮನ ಸಲ್ಲಿಸಿದರು. ಜಗಧೀಶ್ ಕುಡ್ವ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ರಾಯಲ್ಪಾಡು : ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾನು ಕಳೆದ 31 ವರ್ಷಗಳ ಕಾಲ ನಿರ್ವಹಿಸಿದ್ದೇನೆ. ನನಗೆ ಕೆಲಸ ಸಮಯದಲ್ಲಿ ಸಹಕರಿಸಿದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಹಾಗು ಸಹುದ್ಯೋಗಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೃಷ್ಣಮೂರ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ರಾಯಲ್ಪಾಡಿನ ಪೋಸ್ಟ್ ಆಫೀಸ್‍ನ ಕೃಷ್ಣಮೂರ್ತಿಯವರು ಎಬಿಪಿಎಂ ಆಗಿ 31ವರ್ಷ ಕಾರ್ಯನಿರ್ವಹಿಸಿರುವ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಲಾಖೆವತಿಯಿಂದ ಹಾಗು ಗ್ರಾಮದ ಮುಖಂಡರು ಸನ್ಮಾನಿಸಿದರು.ಅಧೀಕ್ಷಕರಾದ ಅವದೇಶ್‍ಸಿಂಗ್,ಮೆಲ್ವರಿಸಿಗಳಾದ ರಘುನಾಥ್,ಕೃಷ್ಣಪ್ಪ ಹಾಗು ಪೋಸ್ಟ್‍ಮಾಸ್ಟರ್ ಎಂ.ಕರುಣಾಕರ ಹಾಗು […]
ಹೋಲಿ ರೋಸರಿ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ಅತಿವಂದನೀಯ ಸ್ಟ್ಯಾನಿ ತಾವ್ರೋ ಮಾತನಾಡಿ, ಕೊರೋನ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ಕೆಥೊಲಿಕ್ ಸಭಾದ ಸೇವೆ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ವಿಜಯ ಡಿಸೋಜ, ಕೆಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಬರ್ನಾರ್ಡ್ ಡಿಕೋಸ್ಟಾ, ಪದಾಧಿಕಾರಿಗಳಾದ ಡಾ. ಸೋನಿ ಡಿಕೋಸ್ಟಾ, ವಿನ್ಸೆಂಟ್ ಡಿಸೋಜ, ಶೈಲಾ ಅಲ್ಮೇಡಾ, ಪ್ರೇಮಾ ಡಿಕುನ್ಹಾ, ಮಾರ್ಕ್ ಡಿಸೋಜಾ, ಉಲ್ಲಾಸ್ ಕ್ರಾಸ್ತಾ, ಲೋನಾ ಡಿಸೋಜ, ವಿನೋದ್ ಕ್ರಾಸ್ಟೋ ಮತ್ತು ಪಾಲನಾ ಮಂಡಳಿಯ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್ ಸೋಂಕಿನ ಆತಂಕದಲ್ಲೂ ನ್ಯಾಯ ವಿಲೇವಾರಿ ವಿಳಂಬವಾಗದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಕರೆ ನೀಡಿದರು.ಶುಕ್ರವಾರ ನಗರದ ಜಿಲ್ಲಾ ಕಾರಗೃಹದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರಾಗೃಹ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಚಾರಣಾಧೀನ ಖೈದಿಗಳಿಗಾಗಿ ಹಮ್ಮಿಕೊಂಡಿದ್ದ ಕೋವಿಡ್ ಮಾರ್ಗಸೂಚಿಗಳಡಿ ಪಾಲಿಸಬೇಕಾದ ನಿಯಮಗಳ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು […]