
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಮುಸ್ಲಿಮರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಿಸಿದರು. ಆಚರಣೆ ಸಂದರ್ಭದಲ್ಲಿ ಪರಸ್ಪರ ಅಪ್ಪಿ ರಂಜಾನ್ ಶುಭಾಶಯ ತಿಳಿಸಿದರು.ಪ್ರಾರ್ಥನೆ ಮುಗಿದ ಬಳಿಕ ಪಟ್ಟಣದ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ವತಿಯಿಂದ ಮುಸ್ಲಿಮರಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ, ಮುಸ್ಲಿಮರು ಪರಸ್ಪರ ಶುಭ ಹಾರೈಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂಮರು ವಾಸವಾಗಿರುವ ಗೌನಿಪಲ್ಲಿ, ಅಡ್ಡಗಲ್, ಮುದಿಮಡಗು, ಯಚ್ಚನಹಳ್ಳಿ ಮತ್ತಿತರ ಕೆಲವು ಗ್ರಾಮಗಳಲ್ಲಿ ರಂಜಾನ್ ಆಚರಿಸಲಾಯಿತು. ಅಲ್ಲಿ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿ ಪ್ರಾರ್ಥನೆ ಮಾಡಲಾಯಿತು.

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ : ದಿನ ನಿತ್ಯ ಮಾಲೂರು ಮತ್ತು ಬಂಗಾರಪೇಟೆ ರೈಲು ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಹೊರಡುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ಮಾಲೂರು ಹಾಗೂ ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಹಮ್ಮಿಕೊಂಡಿದ್ದ , ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು , ಮಾಲೂರಿನ ರೈಲು ನಿಲ್ದಾಣದಲ್ಲಿ ಕಬ್ಬಿಣದ ಮೇಲೇತುವೆಯನ್ನು ಅತಿ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ನಡೆ ಮತ್ತು ನುಡಿಯಿಂದ ಡಾ. ಪುನೀತ್ ರಾಜಕುಮಾರ್ ರವರು ಹೆಸರು ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿ ನೆಲೆಸಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಕೆಎಸ್. ಗಣೇಶ್ ಅಭಿಪ್ರಾಯಪಟ್ಟರು. ಕೋಲಾರ : ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮದಲ್ಲಿ ರಾಶಿರಾಪು ಅಭಿಮಾನಿಗಳ ಸಂಘ ಹಾಗೂ ಜಾಗೃತಿ ಸೇವಾ ಸಮಿತಿ ಇವರ ಸಹಯೋಗದೊಂದಿಗೆ ಕರ್ನಾಟಕ ರತ್ನ, ಪವರ್ ಸ್ಟಾರ್, ಯೂತ್ ಐಕಾನ್ ಡಾ. ಪುನೀತ್ ರಾಜಕುಮಾರ್ ರವರ 6ನೇ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ಏ. 28 ಲಕ್ಷ್ಮೀಪುರದ ನೂರಾನಿ ಮಸೀದಿಯಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ ಇಪ್ತಿಯಾರ್ ಕೂಟ ಆಯೋಜಿಸಿ ಹಿಂದು-ಮುಸ್ಲಿಂ ಬಾಂಧವರು ಸಹಭಾಗಿಯಾಗಿ ಆಚರಿಸುವ ಮೂಲಕ ಸೌಹಾರ್ದತೆ ಮೆರದಿದ್ದಾರೆ.ತಾಲೂಕಿನ ಲಕ್ಷ್ಮೀಪುರ ನೂರಾನಿ ಮಸೀದಿಯಲ್ಲಿ ನಡೆದ ಪವಿತ್ರ ರಂಜಾನ್ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರಿಗೆ ವಿಶೇಷ ಉಪವಾಸ ಹಾಗೂ ಮಸೀದಿಯಲ್ಲಿ ಇಪ್ತಿಯಾರ್ ಮಾಡಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆಯಿಂದ ಇದ್ದೀವಿ ಎಂಬ ಮನೋಭಾವ ಶಿವಾರೆಡ್ಡಿ ತೋರಿಸಿ ಮಾತನಾಡಿದ ಅವರು ಇಸ್ಲಾಂನ 5 ತತ್ವಗಳಲ್ಲಿ ರಂಜಾನ್ ಹಬ್ಬ ಎನ್ನುವುದು […]

JANANUDI.COM NETWORK ನವದೆಹಲಿ: ಕೋವಿಡ್ 4ನೇ ಅಲೆ ಆತಂಕದ ನಡುವೆ ಕೋವಿಡ್ ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಸಮಯದ ಅಂತರವನ್ನು 9 ತಿಂಗಳಿಂದ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ ಇದೇ 29ರಂದು ಸಭೆ ನಡೆಸಲಿರುವ ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ಸಲಹಾ ಸಮಿತಿಯು(ಎನ್‌ಟಿಎಜಿಐ) ಈ ಬಗ್ಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಐಸಿಎಂಆರ್ ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿನ ಅಧ್ಯಯನಗಳು, ಲಸಿಕೆ […]

JANANUDI.COM NETWORK ಬೆಂಗಳೂರು,ಏ.28- ಸೋಮವಾರದಿಂದ ಜನ ಮನೆಯಿಂದ ಹೊರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟಲು ತಯಾರಾಗಿರಬೇಕು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಡ್ಡಾಯ ಮಾಸ್ಕ್ ಜಾರಿಗೊಳಿಸಿದ್ದು, ಮಾಸ್ಕ್ ಹಾಕದಿದ್ದರೆ ಸೋಮವಾರದಿಂದ ದಂಡ ಹಾಕಲುಸರಕಾರ ನಿರ್ಧರಿಸಿದೆ ಇಷ್ಟು ದಿನ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿ ದಂಡಕ್ಕೆ ವಿನಾಯ್ತಿ ನೀಡಿದ ಸರ್ಕಾರ ಸೋಮವಾರದಿಂದ ದಂಡ ವಸೂಲಿಗೆ ಸೂಚನೆ ನೀಡಿದೆ. ಕೊರೊನಾ 4ನೇ ಅಲೆ ನಿಯಂತ್ರಣಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಮಾರ್ಷಲ್‍ಗಳಿಗೆ ಬಿಬಿಎಂಪಿ ಅಕಾರಿಗಳು […]

JANANUDI.COM NETWORK ಕುಂದಾಪುರ, ಮಾ. 25: “ಜೀವನದಲ್ಲಿ ಸಾಧಕರ ಆಗಬೇಕಾದರೆ ಪ್ರತಿ ಸಂದರ್ಭದಲ್ಲಿ ಜ್ಞಾನವನ್ನು ವೃದ್ಧಿಸುವ ಮನೋಭಾವನೆ ಇರಬೇಕು. ಸಾಧನೆಗೆ ಮಿತಿ ಇಲ್ಲ.ಜೀವನದಲ್ಲಿ ಗಳಿಸಿದ ಸಂಪತ್ತಿನ ಕೆಲವೊಂದು ಭಾಗ ಸಮಾಜದ ಅಗತ್ಯಕ್ಕೆ ನೀಡುವುದು ಪ್ರತಿವೊಬ್ಬರ ಕರ್ತವ್ಯ” ಎಂದು ನೇತನ್ ಕರ್ವಾಲೋ ಖ್ಯಾತ ಸಂವಹನ ಸಲಹೆಗಾರರು ಹೇಳಿದರು.ಇಲ್ಲಿನ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಭಾನುವಾರ 24 ರಂದು ನಡೆದ ಕಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಪ್ರತಿಭಾ ಪುರಸ್ಕಾರ ಮತ್ತು” ಸಾಧನ್ ಚರಿತ್ರಾ”ಪುಸ್ತಕದ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಥೋಲಿಕ್ ಸಭಾ […]

JANANUDI.COM NETWORK ಕೊರೊನಾ ನಾಲ್ಕನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ಸರ್ಕಾರ ಕಡ್ಡಾಯಗೊಳಿಸಿದ್ದು, ಜನನಿಬಿಡ ಹಾಗೂ ಒಳಾಂಗಣ ಸಭೆಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಕೋವಿಡ್ ಟಾಸ್ಕ್ ಫೋರ್ಸ್ ಪರಿಶೀಲನಾ ಸಭೆ ನಡೆಸಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಮಾರ್ಗಸೂಚಿ ಹೊರಡಿಸಲು ಸರಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯಲ್ಲಿ ನೀಡಲಿರುವ ನಿರ್ದೇಶನ ಬಳಿಕ ಮತ್ತೊಂದು ಸುತ್ತಿನ […]

JANANUDI.COM NETWORK ಶಿರಸಿ: ಶಿರಸಿಯಲ್ಲಿ ಮಹಿಳೆಯೊಬ್ಬಳು ಸಾಹಸದಿಂದ ಏಕಾಂಗಿಯಾಗಿ 60 ಅಡಿ ಬಾವಿ ತೋಡಿ ಸುದ್ದಿ ಮಾಡಿದ್ದಾಳೆ. ಜೀವನಕ್ಕೆ ಆಸರೆಗಾಗಿ ತಾನೇ ನೆಟ್ಟಿದ್ದ ತೆಂಗು, ಅಡಕೆ, ಬಾಳೆ, ಗಿಡಗಳು ನೀರಿನ ಕೊರತೆಯಿಂದ ಒಣಗುತ್ತಿರುವುದನ್ನು ನೋಡಲಾರದೆ ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ಗೌರಿ ಚಂದ್ರಶೇಖರ ನಾಯ್ಕ ಏಕಾಂಗಿಯಾಗಿ 8 ಅಡಿ ಅಗಲ, 60 ಅಡಿ ಆಳದ ಬಾವಿ ತೋಡಿ ದಿಟ್ಟ ಸಾಹಸ ಮೆರೆದಿದ್ದಾರೆ.ಎರಡು ತಿಂಗಳಿಂದ ಮನೆಯ ಹಿಂಬದಿಯ ತೋಟದಲ್ಲಿ ಬಾವಿ ತೋಡುವ […]