ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಂಚಬೆಲೆ ಶ್ರೀನಿವಾಸ್, ಹೊಸಕೋಟೆ ಜಗನ್ನಾಥ್ ಮತ್ತಿತರರು ಭೇಟಿ ಮಾಡಿ, ಸಂಕ್ರಾಂತಿ ಶುಭಾಷಯ ತಿಳಿಸಿ, ಅಥ್ಲೇಟಿಕ್ಸ್ ಅಸೋಸಿಯೇಷನ್ ಚಟುವಟಿಕೆಗಳ ಕುರಿತು ಗಮನ ಸೆಳೆದರು.
ಬೆಳಗಾವಿ, ಜ.೨೧; ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕ ತಿರುಗಿಸುವ ಮೂಲಕ ಇಂದು ಅನಾವರಣಗೊಳಿಸಿದರು. ಪುತ್ಥಳಿ ಅನಾವರಣಗೊಳಿಸಿ ಸಭೆ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಗೌರವ ತಂದಿದೆ’ ಎಂದು […]
ಕೋಲಾರ:- ಜಗತ್ತಿನಲ್ಲಿಯೇ ಸ್ವಾಭಿಮಾನ, ಆತ್ಮಗೌರವ ಹಾಗೂ ಗೌರವಯುತ ಬದುಕಿಗಾಗಿ ಜರುಗಿದ ಏಕೈಕ ಸಮರ ಕೊರೆಂಗಾವ್ ಯುದ್ಧವಾಗಿದೆ ಎಂದು ಬೆಂಗಳೂರು ವಿವಿ ಉಪನ್ಯಾಸಕ ಡಾ.ಸುರೇಶ್ಗೌತಮ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಭಾರತೀಯ ಬಹುಜನ ಸೇವಾ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಭೀಮಾಕೊರೆಂಗಾವ್ ವಿಜಯೋತ್ಸವ ಹಾಗೂ ಸಾವಿತ್ರಿ ಬಾಪುಲೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.ಅಂಬೇಡ್ಕರ್ ಅವರು ವಿದೇಶಿ ಗ್ರಂಥಾಲಯದಲ್ಲಿ ಅಧ್ಯಯನಶೀಲರಾಗಿದ್ದ ಸಂದರ್ಭದಲ್ಲಿ ಕೊರೆಂಗಾವ್ ಯುದ್ಧದ ಇತಿಹಾಸ ಅವರ ಕಣ್ಣಿಗೆ ಬಿದ್ದು, ಆನಂತರ ಅವರು ಪುಣೆ ಸಮೀಪ ಇರುವ ಕೊರೆಂಗಾವ್ ಸ್ಮಾರಕ ಹುಡುಕಿ […]
ಬೆಂದೂರು;ಸೇಂಟ್ ಸೆಬಾಸ್ಟಿಯನ್ ಚರ್ಚ್ ತನ್ನ ಪ್ಯಾರಿಷ್ ದಿನವನ್ನು ಜನವರಿ 19 ರಂದು ಸೇಂಟ್ ಸೆಬಾಸ್ಟಿಯನ್ ಅವರ ಹಬ್ಬದೊಂದಿಗೆ ಆಚರಿಸಿತು. PPC ಸದಸ್ಯರು, ಪ್ರಾಯೋಜಕರು ಮತ್ತು ಫಲಾನುಭವಿಗಳಿಗೆ ಮೇಣದಬತ್ತಿಗಳನ್ನು ವಿತರಿಸುವುದರೊಂದಿಗೆ ಆಚರಣೆಯು ಪ್ರಾರಂಭವಾಯಿತು, ಇದು ಪ್ಯಾರಿಷ್ ಸಮುದಾಯಕ್ಕೆ ಅವರ ಕೊಡುಗೆಗಳು ಮತ್ತು ಬೆಂಬಲವನ್ನು ಸಂಕೇತಿಸುತ್ತದೆ. ದೇರೆಬೈಲ್ ಚರ್ಚಿನ ಧರ್ಮಗುರು ಜೋಸೆಫ್ ಮಾರ್ಟಿಸ್ ಹಬ್ಬದ ಬಲಿದಾನದ ಆರ್ಚಕರಾಗಿದ್ದರು. ಅವರ ಜೊತೆಯಲ್ಲಿ,ಸೆಬಾಸ್ಟಿಯನ್ ಚರ್ಚಿನ ಧರ್ಮಗುರು ವಂ। ವಾಲ್ಟರ್ ಡಿಸೋಜಾ. ಇವರೊಂದಿಗೆ ಸಹಾಯಕ ಧರ್ಮಗುರುಗಳಾದ ವಂ। ಲಾರೆನ್ಸ್ ಕುಟಿನ್ಹಾ, ವಂ।ವಿವೇಕ್ ಪಿಂಟೋ, ವಂ। […]
ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜ.17ರಂದು ಮಂಗಳೂರಿನ ಉಳ್ಳಾಲ ಬಳಿಯ ಕೋಟೆಕಾರು ಬ್ಯಾಂಕ್ ನ ಚಿನ್ನಾಭರಣ, ನಗದು ಹಣವನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಬ್ಯಾಂಕ್ ದರೋಡೆ ಬಳಿಕ ಆರೋಪಿಗಳು ತಮಿಳುನಾಡಿನ ತಿರುವನ್ವೇಲಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಗೋಣಿಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಮಾಡಲಾಗಿದೆ ಎಂದು […]
ಶ್ರೀನಿವಾಸಪುರ : ಮಾನವನಲ್ಲಿ ಎಷ್ಟೇ ಕೆಟ್ಟಚಟಗಳು ಇದ್ದರೂ ಸಹ ಮಾಡುತ್ತಿರುವ ಕೆಟ್ಟ ಕೆಲಸಗಳನ್ನ ಬಿಟ್ಟು, ಜೀವನದಲ್ಲಿ ಬದಲಾವಣೆ ಯಾದರೆ ಸಮಾಜದಲ್ಲಿ ಗೌರವವನ್ನ ಪಡೆದುಕೊಳ್ಳಬಹುದು ಹಾಗು ಮನುಷ್ಯರೆಲ್ಲರೂ ಪರಿಪೂರ್ಣರಲ್ಲ , ಪ್ರತಿಯೊಬ್ಬರು ತಮ್ಮನ್ನು ತಿದ್ದುಕೊಂಡು ನಡೆಯುವ ಅವಶ್ಯಕತೆ ಎಂಬ ಸಂದೇಶವು ತಾವು ರಚನೆ ವಚನಗಳಲ್ಲಿ ಹೇಳಿದ್ದಾರೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ರಾಷ್ಟೀಯ ಹಬ್ಬಗಳ ಸಮಿತಿಯಿಂದ ಯೋಗಿ ವೇಮನ್ನ 613 ನೇ ಜಯಂತಿ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಯೋಗಿ ವೇಮನ್ನನವರು ಕೆಟ್ಟಹವ್ಯಾಸಗಳಿಂದ […]
ಶ್ರೀನಿವಾಸಪುರ : ಪದಾಧಿಕಾರಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಾ ಸಮುದಾಯಕ್ಕೆ ಅನ್ಯಾಯವಾದಗ ಪದಾಧಿಕಾರಿಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಜಿಲ್ಲಾ ಸಂಚಾಲಕ ಬಿ.ಎಂ.ರಮೇಶ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಜಿಲ್ಲಾ ಸಮಿತಿಯಿಂದ ತಾಲೂಕು ಪದಾಧಿಕಾರಿಗಳ ಅಯ್ಕೆ ಸಭೆಯಲ್ಲಿ ಮಾತನಾಡಿದರು.ತಾಲೂಕು ಸಂಚಾಲಕ ಮಟ್ಕನ್ನಸಂದ್ರ ಎಂ.ವಿ.ನಾರಾಯಣಸ್ವಾಮಿ ಸಂಘಟನೆಯ ಹಿರಿಯ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಮುದಾಯ ವರ್ಗಕ್ಕೆ ಅನ್ಯಾಯವಾದಗ ನ್ಯಾಯ ಒದಗಿಸಲು ಬೇಕಾದ ಹೋರಾಟ […]
ದಿನಾಂಕ 19 -01- 2025 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ಕಲ್ಯಾಣಪುರ ಚರ್ಚ್ ನಾ ವಂದನೀಯ ಡಾ ಜೇನ್ಸಿಲ್ ಆಳ್ವಾ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸಬ್ಬಾಸ್ಟಿಯಾನರ ಪ್ರತಿಮೆಯಾನು ಮೆರವಣಿಗೆಯಲ್ಲಿ ತಂದು ಆಶೀರ್ವಚನವನ್ನು ನೀಡಲಾಯಿತು.ತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ವಂದನೀಯ ಡಾ ಜೇನ್ಸಿಲ್ ಆಳ್ವಾ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ […]
ಮಂಗಳೂರು; ಎಸ್.ಸಿ.ಎಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎಸ್.ಸಿ.ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ನ 31ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಮತ್ತು 22ನೇ ಬ್ಯಾಚ್ ಜಿಎನ್ಎಂ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ತಾರೀಕು 17.01.2025 ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಅಶೋಕನಗರದಲ್ಲಿರುವ ಕೆ.ಎ.ಎಂ.ಸಿ. ಕಟ್ಟಡದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಡಾ.ಪದ್ಮಪ್ರಿಯಾ ಎಸ್, ಪ್ರಾಂಶುಪಾಲರು, ಡಾ.ಎಂ.ವಿ ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್, ಮಂಗಳೂರು ಇವರು ಜ್ಯೋತಿ ಬೆಳಗಿಸುವ […]