ವಿಶ್ವದ ಅತ್ಯಂತ ದುಬಾರಿ ಶರ್ಟ್‌ನ್ನು ಧರಿಸುವ (ಹೊಂದಿರುವ) ವ್ಯಕ್ತಿ, ಭಾರಾತೀವನಾಗಿದ್ದಾನೆ. ಆ ಶರ್ಟ್ ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರಾದಾಗಿದೆ. ಈ ಶರ್ಟ್ ಸಿದ್ದ ಪಡಿಸುವಾಗ ಇದರ ಬೆಲೆ ಬರೋಬ್ಬರಿ 98,35,099 ರೂ. ಅಂತೆ. ಪಂಕಜ್ ಪರಾಖ್ ಬಳಿ ಇರುವ ಗೋಲ್ಡನ್ (golden) ಶರ್ಟ್ 4.10 ಕೆಜಿ ತೂಕವಿದ್ದು, ಈಗ ಬರೋಬ್ಬರಿ 1.30 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ. ಇದಲ್ಲದೇ ಪಂಕಜ್ ಪರಾಖ್ ಬಳಿ ಚಿನ್ನದ ಗಡಿಯಾರ, ಹಲವಾರು […]

Read More

ಉತ್ತರಪ್ರದೇಶದಲ್ಲಿ ವಿವಾಹಕ್ಕೆ ಸಂಬಂಧಿಸಿದ ಬಹುದೊಡ್ಡ ಹಗರಣವೊಂದು ಬೆಳಕಿಗೆ ಬಂದಿದ್ದು, ನೂರಾರು ವಧುಗಳು ವರರಿಲ್ಲದೆ ವಿವಾಹವಾಗಿದ್ದಾರೆ. ‘ಸಿಎಂ ಗ್ರೂಪ್‌ ಮ್ಯಾರೇಜ್‌ ಸ್ಕೀಂ’ ಯೋಜನೆಯಡಿ ಕೋಟ್ಯಾಂತರ ರೂ. ಹಗರಣ ನಡೆದಿರುವ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ಬಲಿಯಾ ಪ್ರದೇಶದಲ್ಲಿ ಸುಮಾರು 568 ವಧುಗಳು ಹಣಕ್ಕಾಗಿ ವರರಿಲ್ಲದೆ ವಿವಾಹವಾಗಿದ್ದಾರೆ. ವಿವಾಹ ಸಮಾರಂಭವು ಜನವರಿ 25ರಂದು ನಡೆದಿದೆ ಮತ್ತು ವಧುವಿನಂತೆ ನಟಿಸಿದ ಯುವತಿಯರು ತಮ್ಮ ಭಾವಿ ಪತಿಗಳಿಲ್ಲದೆ ಏಕಾಂಗಿಯಾಗಿ ಮದುವೆಯ ವಿಧಿಗಳನ್ನು ನೆರವೇರಿಸಿದ್ದಾರೆ. ಈ ಕುರಿತ ಅಚ್ಚರಿಯ ವಿಡಿಯೋಗಳು ಕೂಡ ವೈರಲ್‌ ಆಗಿದೆ. […]

Read More

ಕುಂದಾಪುರ: ಜ.31: ಐಡಿಯಲ್ ಪ್ಲೇ ಅಭಾಕಸ್ ಕಂಪನಿ ಯಿಂದ ನಡೆದ 19 ನೇ ರಾಷ್ಟ್ರ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಕಾಂಪಿಟಿಷನ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಇದೆ 28 ನೇ ತಾರೀಕು ನಡೆಯಿತು. ದೇಶದ ವಿವಿಧ ಭಾಗಗಳಿಂದ ಸುಮಾರು 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿಕ್ಕನಸಾಲು ರಸ್ತೆ, ಕೋಸ್ತಾ ಕಾಂಪ್ಲೆಕ್ಸನಲ್ಲಿ ತರಭೇತಿ ನೀಡುವ ಅಭಾಕಾಸ್ ಕುಂದಾಪುರ ವಿಭಾಗ ಸಂಸ್ಥೆಯಿಂದ ಸ್ಪರ್ದಿಸಿದ್ದ 59 ವಿದ್ಯಾರ್ಥಿಗಳಲ್ಲಿ,ನಾಲ್ವರು ವಿದ್ಯಾರ್ಥಿಗಳು ಚಾಂಪಿಯನ್: ಓಟ್ಟು 59 ಪದಕಗಳು ಬುಟ್ಟಿಗೆ ಹಾಕಿಕೊಂಡಿದ್ದಾರೆ ಪದಕಗಳ ವಿವರ 4 ಚಾಂಪಿಯನ್12 […]

Read More

ಕುಂದಾಪುರ, ಜ.25:ತಾರೀಕು 21 ಜನವರಿಯಲ್ಲಿ ನಡೆದ ಮುಂಬಯಿಯ ಅಂದೇರಿಯಲ್ಲಿ ಎಷಿಯಾ ಕಪ್ 7 ನೇ ಎಷಿಯನ್ ಶೀಟೊ ಆರ್ ವೈ ಯು ಕರಾಟೆ –ಡಿ ಒ ಆಸೋಶೀಯೆಶನ್ ಇವರು ನೆಡೆಸಲ್ಪಟ್ಟ ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 9 ವರ್ಷದ ವಯೋಮಿತಿಯ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡ ಇವನಿಗೆ ಚಿನ್ನದ ಪದಕ ದೊರಕಿದೆ.ಈತ ಕುಂದಾಪುರದ ವಿಲ್ಸನ್ ಮತ್ತು ಜ್ಯೋತಿ ಡಿಆಲ್ಮೇಡ ಇವರ ಪುತ್ರನಾಗಿದ್ದು, ಇತನಿಗೆ ಕೆ ಡಿ ಎಫ್ ಸಂಸ್ಥೆಯ […]

Read More

ವಡೋದರ: ಮೋಜು ಮಸ್ತಿಯಿಂದ ಕೂಡಿದ ಶಾಲಾ ವಿದ್ಯಾರ್ಥಿಗಳ ಪ್ರವಾಸ ದುರಂತ ಅಂತ್ಯಕಂಡಿದೆ. ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬೋಟು ಭೀಕರ ದುರಂತಕ್ಕೀಡಾಗಿದೆ. ಖಾಸಗಿ ಶಾಲೆಯ 27 ವಿದ್ಯಾರ್ಥಿಗಳಿದ್ದ ಬೋಟ್ ಗುಜರಾತ್‌ನ ವಡೋದರದ ಹರ್ನಿಯಲ್ಲಿ ಮುಳುಗಡೆಯಾಗಿದೆ. ಈ ಪೈಕಿ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇದರ ಜೊತೆಗೆ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಇತ್ತ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕೆಲ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಬೋಟ್‌ನಲ್ಲಿ ತೆರಳುತ್ತಿದ್ದ 27 ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ನೀಡದೇ ಇರುವುದು ಸಾವಿನ ಸಂಖ್ಯೆ ಹೆಚ್ಚಿಸಿದೆ ಎಂದು ತಿಳಿದು […]

Read More

ಪಣಜಿ:ಜ.17: ಜನವರಿ 16 ರಂದು ಗೋವಾ ಪಣಜಿಯ ಸರ್ಕಾರಿ ಕನ್ನಡ ರಾಮದಾಸ್ ಪ್ರಾಥಮಿಕ ಶಾಲೆಯಲ್ಲಿ ನೈತಿಕತೆಯನ್ನು ವಿವರಿಸುವ ಇಂಗ್ಲಿಷ್ ಕಥಾ ಶಿಬಿರವನ್ನು ನಡೆಸಲಾಯಿತು, ಇದನ್ನು ಸಾಹಿತಿ ಧರ್ಮಗುರು ವಂ|ಪ್ರತಾಪ್ ನಾಯ್ಕ್SJ ನಡೆಸಿಕೊಟ್ಟರು. ಅವರು ಪಠ್ಯ ಪುಸ್ತಕದಿಂದ ಪಾಠವನ್ನು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಬೆಳಸಬೇಕು ಎಂದರು. ಗೋವಾ ಪಣಜಿಯ ಸರ್ಕಾರಿ ಕನ್ನಡ ರಾಮದಾಸ್ ಪ್ರಾಥಮಿಕ ಶಾಲೆಯು ಕನ್ನಡ ಮಾಧ್ಯಮವಾಗಿರುವುದರಿಂದ ವಿದ್ಯಾರ್ಥಿಗಳು ಇಂಗ್ಲಿಷ್‌ಗೆ ಒಡ್ಡಿಕೊಳ್ಳುವುದು ಬಹಳ ಕಡಿಮೆ. ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಅಥವಾ ಓದಲು ಸಾಧ್ಯವಾಗದಿದ್ದರೂ, ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರತಿ […]

Read More

ಬೆಂಗಳೂರು: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬುಧವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಅಖಿಲ ಭಾರತ ಸ್ವಚ್ಛ ಸರ್ವೇಕ್ಷಣಾ 2023 ವರದಿಯಲ್ಲಿ ಬೆಂಗಳೂರು 125 ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ಸ್ಪರ್ಧೆಯಲ್ಲಿ 446 ನಗರಗಳು ಭಾಗವಹಿಸಿದ್ದವು. 2022 ರ ಸ್ವಚ್ಛ ಸರ್ವೇಕ್ಷಣ್ ಶ್ರೇಯಾಂಕದಲ್ಲಿ, ನಗರವು 43 ನೇ ಸ್ಥಾನದಲ್ಲಿದೆ, 2021 ರಲ್ಲಿ 28 ನೇ ಮತ್ತು 2020 ರಲ್ಲಿ 37 ನೇ ಸ್ಥಾನದಲ್ಲಿದೆ. ಸ್ವಚ್ಛ ಸರ್ವೇಕ್ಷಣ್ 2023 ರ ವರದಿಯ […]

Read More

ಇಂಫಾಲ : ಮಣಿಪುರದಲ್ಲಿ ಮತ್ತೊಮ್ಮೆ ಹಿಂಸೆಚಾರ ಭುಗಿಲೆದ್ದಿದ್ದು, ಜನರು ಭಯಭೀತಗೊಂಡಿದ್ದಾರೆ. ಬಿಷ್ಟುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್‌ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದವರನ್ನು ಓಯಿನಮ್‌ ರೊಮೆನ್‌ ಮೈತೆ (45), ಅಹಾಂತೇಮ್‌ ದಾರಾ ಮೈತೆ (56), ತೌಡಮ್‌ ಇಬೊಮ್ಮಾ ಮೈತೆ (53) ಮತ್ತು ತೌದಮ್‌ ಆನಂದ್‌ಮೈತೆ (27) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೂ ಮೊದಲು ಮಾರ್ಟರ್‌ […]

Read More

ಬೆಂಗಳೂರು: ಹೆತ್ತ ತಾಯಿಯೆ ನಾಲ್ಕು ವರ್ಷದ ಮಗನನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಭಯಾನಕ ಕೃತ್ಯಕ್ಕೆ ಕಾರಣವಾದ ಸ್ಟಾರ್ಟ್‌ ಅಪ್‌ ಫೌಂಡರ್ ಮತ್ತು ಸಿಇಒ ಸೂಚನಾ ಸೇಠ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಕಂಡೋಲಿಮಾ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನ ಹತ್ಯೆ ಮಾಡಿದ್ದಾರೆ. ಬಳಿಕ ಬಾಡಿಗೆ ಕಾರಿನಲ್ಲಿ ಮಗನ ಶವ ಇಟ್ಟುಕೊಂಡು ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳೆ […]

Read More
1 6 7 8 9 10 34