
ಚಂಡೀಗಢ (ಪಿಟಿಐ): ಪಂಜಾಬ್ ಬಿಜೆಪಿಯ ಹಿರಿಯ ನಾಯಕರಾದ ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು ಮತ್ತು ಗುರುಪ್ರೀತ್ ಕಂಗಾರ್ ಅವರು ಕಾಂಗ್ರೆಸ್‌ಗೆ ಮರಳಲು ನಿರ್ಧರಿಸಿದ್ದು, ಎಸ್‌ಎಡಿಯಿಂದ ಕೆಲವು ನಾಯಕರು ಸಹ ಅವರನ್ನು ಅನುಸರಿಸುವ ನಿರೀಕ್ಷೆಯಿದೆ. ಈ ನಾಯಕರು, ಪಂಜಾಬ್‌ನ ಕೆಲವು ಇತರರೊಂದಿಗೆ ಶುಕ್ರವಾರ ತಡರಾತ್ರಿ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ತಡರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. […]

25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಛೇರಿ, 4 – 5 ನವೆಂಬರ್ 2023 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದೆ, ನಗರದಲ್ಲಿ ಬೆಂದೂರ್‌ವೆಲ್, ಕುನಿಲ್ ಸಂಕೀರ್ಣದಲ್ಲಿ ಉದ್ಘಾಟನೆಯಾಗಿದೆ.ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅವರು ಮಾತೃ ಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಗೋವಾದ ಚೇತನಾಚಾರ್ಯ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಕುಲದಾಸ್ ಪ್ರಭು, ಖ್ಯಾತ ಹೃದ್ರೋಗ ತಜ್ಞ ಮತ್ತು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿ ಶಿಕ್ಷಣದ ಪ್ರವರ್ತಕ ಡಾ.ಕೆ.ಮೋಹನ್ ಪೈ […]

ಮುಂಬಯ್, ಸೆ.22: ಮಹಾನಗರ ಮುಂಬಯಿನ ಚಕಾಲಾದ ಹೋಲಿ ಫೆಮಿಲಿ ಚರ್ಚಿನಲ್ಲಿ ಕೊಂಕಣಿ ಲಿತುರ್ಜಿ ಕಮಿಟಿಯಿಂದ ಸೆ.17 ರಂದು ಭಾನುವಾರ ತೇನೆ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಅತಿಥಿ ಧರ್ಮಗುರು ವಂ|ಜೆರಾಲ್ಡ್ ಡೆಸಾ ಹಬ್ಬದ ಬಲಿದಾನವನ್ನು ಅರ್ಪಿಸಿ ಜನ್ಮದಿನ ಹಬ್ಬಗಳಲ್ಲಿ ಮೇರಿ ಮಾತೆಯ ಜನ್ಮ ದಿನ ಕೂಡ ಮಹತ್ವದ ಹಬ್ಬವಾಗಿದೆ. ಇಂದು ನಾವು ಕುಟುಂಬದ ಹಬ್ಬವನ್ನು, ನವ ಬೆಳೆಗಳು ದಯಪಾಲಿಸಿದಕ್ಕೆ ಕ್ರತ್ಜನಾತೆಯನ್ನು ಮೇರಿ ಮಾತೆಯ ಮೂಲಕ ದೇವರಿಗೆ ಅರ್ಪಿಸುತ್ತಿದ್ದೆವೆ. ಎಂದು ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ರೊಡ್ರಿಗಸ್ […]

ಕುಂದಾಪುರ, ಸೆ.21: ಬೆಂಗಳೂರಿನಿಂದ ತಾಯಿ ಮಗಳ ಜೋಡಿ ಮೂಲತಹ ಕುಂದಾಪುರವರಾದ ೫೫ ವರ್ಷ ಪ್ರಾಯದ ವಿಲ್ಮಾ ಕರ್ವಾಲೋ ಬೈಕ್ ಮೂಲಕ ವಿಶ್ವದ ಅತಿ ಎತ್ತರದ ಮೋಟಾರಬಲ್ ಪಾಸ್ ತಲುಪಿ ವಿಸೇಷವಾದ ಸಾಧನೆ ಮಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಪೊರೇಟ್ ತರಬೇತುದಾರರಾದ 2022 ಆಕೆಯ ಪ್ರಯಾಣದ ನಂತರ ಎರಡನೇ ಅತಿ ಎತ್ತರದ ಮೋಟಾರು ರಸ್ತೆ – ಖರ್ದುಂಗ್ಲಾ ಪಾಸ್ ಆಗಿದ್ದು, ಕಳೆದ ವರ್ಷದ ಸಾಧನೆಯನ್ನು ಮಾಡಿದ ನಂತರ ಅವಳು ಸ್ವಲ್ಪ ಹೆಚ್ಚು ದೃಢ ನಿಶ್ಚಯದಿಂದ ತಲುಪಬಹುದು […]

ಮಣಿಪುರದಲ್ಲಿ ಮೇ ತಿಂಗಳ ಆರಂಭದಿಂದ ತತ್ತರಿಸಿರುವ ಜನಾಂಗೀಯ ಕಲಹದಲ್ಲಿ 175 ಮಂದಿ ಸಾವನ್ನಪ್ಪಿದ್ದು, 1,108 ಮಂದಿ ಗಾಯಗೊಂಡಿದ್ದು, 32 ಮಂದಿ ನಾಪತ್ತೆಯಾಗಿದ್ದಾರೆ ಎಂದು IGP (ಕಾರ್ಯಾಚರಣೆ) I K Muivah ತಿಳಿಸಿದ್ದಾರೆಂದು ಪಿಟಿಐ ಮೂಲಗಳಿಂದ ತಿಳಿದು ಬಂದಿದೆ. ಈ ತನಕ ಒಟ್ಟಾರೆಯಾಗಿ, 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ (ಕಾರ್ಯಾಚರಣೆ) ಐ ಕೆ ಮುಯಿವಾ, “ಮಣಿಪುರದ ಈ ಸವಾಲಿನ ಸಮಯದಲ್ಲಿ, ಪೊಲೀಸರು, […]

ಆಂಧ್ರಪ್ರದೇಶ: ತಿರುಪತಿ ಯಾತ್ರೆ ಮುಗಿಸಿ ಹಿಂದಿರುಗುವ ವೇಳೆ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕದ ಐವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ. ಮಠಂಪಲ್ಲಿಯಲ್ಲಿ ನಡೆದಿದೆ. ಅಪಘಾತಕೊಳ್ಳಗಾದವರನ್ನು ಬೆಳಗಾವಿ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆಮಠಂಪಲ್ಲಿ ಗ್ರಾಮದ ಬಳಿ ತಮ್ಮ ಕ್ರೂಸರ್ ವಾಹನ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

(ಚಿತ್ರ ಸಾಂದರ್ಭಿಕ) ಆ. 18: ಇಂದು ಬೆಳ್ಳಂಬೆಳಗ್ಗೆ ಶಸ್ತ್ರಸಜ್ಜಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ. ಮಣಿಪುರ ಈಗಲೂ ಬೂದಿ ಮುಚ್ಚದ ಕೆಂಡದಂತಿದ್ದು, ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದೆಯೆಂದು ವಾರ್ತಾ ಸಂಸ್ಥೆಗಳು ವರದಿ ಮಾಡಿವೆ ಮಣಿಪುರದ ಉಖ್ರುಲ್ ಜಿಲ್ಲೆಯ ತೊವೈ ಕುಕಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯ ನಂತರ ಗ್ರಾಮಸ್ಥರು ಮೂರು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು ಜಮ್‌ಖೋಗಿನ್ ಹಕಿಪ್ (26), ತಂಗ್‌ಖೋಕೈ ಹಕಿಪ್ (35) […]

ಚೆನೈ; ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ವೆಂಬ ಪ್ರಕರಣಾಕ್ಕಾಗಿ ನ್ಯಾಯಲಯ ಈ ಶಿಕ್ಷೆಯನ್ನು ಅವರಿಗೆ ವಿಧಿಸಿದೆ. ಕಾರ್ಮಿಕರು ಇಎಸ್‌ಐ ಹಣ ಪಾವತಿಸಿಲ್ಲವೆಂದು ತಮಿಳ್ನಾಡು ರಾಜ್ಯ ವಿಮಾ ನಿಗಮಕ್ಕೆ ದೂರು.ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಚೆನ್ನೈ ಎಗ್ಟೋರ್ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕಾರ್ಮಿಕರಿಗೆ ನೀಡಬೇಕಾದ ಮೊತ್ತವನ್ನು ನೀಡುವುದಾಗಿ ಜಯಪ್ರದಾ ತಿಳಿಸಿದ್ದರೂ, ಕಾರ್ಮಿಕ […]

ನವದೆಹಲಿ:ಆ.೮: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯದ ಕುರಿತು ನೋಟಿಸ್ ನೀಡಿದರು. ಕಾಂಗ್ರೆಸ್ ಮಾತ್ರವಲ್ಲದೆ ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ. ಸಭಾಪತಿ ಓಂಬಿರ್ಲಾ ಅವಿಶ್ವಾಸ ನಿರ್ಣಯ ನೋಟಿಸ್ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಮೌನ ತಾಳಿರುವ […]