ಕೃಷ್ಣಗಿರಿ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಳೆಯಪೇಟೈ ಪಟಾಕಿ ತಯಾರಿಕಾ ಘಟಕದ ಗೋದಾಮಿನಲ್ಲಿ ಹಠಾತ್ ಸ್ಫೋಟಗೊಂಡು ಸಂಭವಿಸಿದ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಪೋಟದ ತೀವ್ರತೆಗೆ ಸಮೀಪದ ಮನೆಗಳು ಮತ್ತು ಅಂಗಡಿಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಪೋಟ ನೆಡೆದ ಸುತ್ತಲಿನ ಜಾಗ ಚೆಲ್ಲಾಪಿಲ್ಲಿಯಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.ಸ್ಪೋಟಕ್ಕೆ ನಿಖರವಾದ ಕಾರಣ ಇನ್ನು ತಿಳಿಯಬೇಕಾಗಿದೆ.
ಭಾರತದ ದಂಪತಿಗಳು ಐಫೋನ್ ಖರಿದೀಸಲು ಅವರು ಹೆತ್ತ ಎಂಟು ತಿಂಗಳ ಹಸುಕೂಸನ್ನೆ ಮಾರಾಟ ಮಾಡಿದ ಘಟನೆ ಭಾರತದ ಪೂರ್ವ ರಾಜ್ಯವಾದ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ರೀಲ್ಗಳನ್ನು ತಯಾರಿಸಲು ದುಬಾರಿ ಐಫೋನ್ ಬೇಕಾಗಿದ್ದಕ್ಕೆ ಮಗುವನ್ನು ಮಾರಟಮಾಡಲಾಗಿದೆ ಈ ವಿಲಕ್ಷಣ ಘಟನೆ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯದ್ದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬ ಹೆಸರಿನ ಮಹಿಳೆಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಮಗುವಿನ ತಂದೆ ಜಯದೇವ್ ತಲೆಮರೆಸಿಕೊಂಡಿದ್ದಾನೆ. ಪನಿಹಟಿ ಗಾಂಧಿನಗರ […]
ಜಬಲ್ಪುರ್: ಮಧ್ಯ ಪ್ರದೇಶದ ಕತ್ನಿ ಎಂಬಲ್ಲಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಾವು ಲಂಚ ಸ್ವೀಕರಿಸುತ್ತಿದ್ದಾಗ ಆಗಮಿಸಿದ ಲೋಕಾಯುಕ್ತ ವಿಶೇಷ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನು ಕಂಡು ದಂಗಾಗಿ ಲಂಚವಾಗಿ ಸ್ವೀಕರಿಸಿದ ಆತ ರೂ. 5,000 ಹಣವನ್ನೇ ಜಗಿದು ನುಂಗಿಬಿಟ್ಟಿದ್ದಾನೆ. ಕಂದಾಯ ವಿಭಾಗದ ಅಧಿಕಾರಿ ಪಟ್ವಾರಿ ಗಜೇಂದ್ರ ಸಿಂಗ್ ಎಂಬವರು ಸೋಮವಾರ ತಮ್ಮ ಖಾಸಗಿ ಕಚೇರಿಯಲ್ಲಿ ರೂ. 5,000 ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಅಧಿಕಾರಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಲೋಕಾಯುಕ್ತದ ಬಳಿ ದೂರೂ […]
ಇಂಫಾಲ, ಜು.25: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಬಲ್ ಜಿಲ್ಲೆಯಿಂದ ಸೋಮವಾರ ಸಂಜೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂದಿಸಿದಂತಾಗಿದೆ ಎಂದು ತಿಳಿದು ಬಂದಿದೆ. ಮೇ 4 ರಂದು ಇಬ್ಬರು ಮೈತೆಯಿ ಬುಡಕಟ್ಟು ಮಹಿಳೆಯರ ವಿವಸ್ತ್ರ ಪ್ರಕರಣದಲ್ಲಿ ಭಾಗವಹಿಸಿದ 14 ಜನರನ್ನು ವೀಡಿಯೊ ಮುಖಾಂತರ ಪೊಲೀಸರು ಮೊದಲು ಗುರುತಿಸಿದ್ದರು. ಇಬ್ಬರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ […]
ಆಗ್ರಾ: ವರದಕ್ಷಿಣೆಯಾಗಿ ಕೊಡದಿದ್ದಕ್ಕೆ ಕಾರು ವರನೊಬ್ಬ ಕೇವಲ ಎರಡು ಗಂಟೆಯೊಳಗೆ ಮದುವೆಯಾದ ಎರಡೇ ಗಂಟೆಯಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿರುವ ಅಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇದೀಗ ಪೊಲೀಸರು ವರ ಮೊಹಮ್ಮದ್ ಆಸಿಫ್ ಸೇರಿದಂತೆ ಅರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ವಧುವಿನ ಸಹೋದರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣೆಕ್ಕೆ ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ […]
ಕುಂದಾಪುರ, ಜು.5: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 2023 ಮೇ ಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ.ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿದ್ದಾರೆ.ಇವರು ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು “ಇಂಟರ್ ಮಿಡಿಯಟ್” ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್‍ಶಿಪ್ ನ್ನು ಬೆಂಗಳೂರಿನ ‘ಮುರುಳಿ ಆ್ಯಂಡ್ ಸುಮಿತ್’ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು 432 ಅಂಕ ಪಡೆದು […]
ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್ ಹೈವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ. ಅಪಘಾತಕ್ಕೀಡಾದ ಬಸ್ಸು ಯಾವತ್‌ಮಾಲ್‌ನಿಂದ ಪುಣೆಗ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್‌ನಿಂದ 25 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಸ್‌ನಲ್ಲಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು. 6-8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬುಲ್ಧಾನ […]
ಸೂರತ್: ಮೇ 17 ರಂದು ಉದ್ಘಾಟನೆಗೊಂಡ ಸೇತುವೆಯನ್ನು 118 ಕೋಟಿ ರೂ. ವೆಚ್ಚದಿಂದ ಪುನರ್ ನಿರ್ಮಾಣ ಗೊಂಡಿದ್ದು, ಇದು ಸೂರತ್‌ನ ವರಿಯಾವ್ ಮತ್ತು ವೇದ್ ಗ್ರಾಮಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಪ್ರದೇಶದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಜನ ಸಂಪರ್ಕವನ್ನು ಪಡೆಯುವ ಸೇತುವೆಯಾಗಿದ್ದು, ಸೇತುವೆಯು ವ್ಯಾಪ್ತಿ1.5 ಕಿಮೀ ಯಾಗಿದ್ದು, ಇದು ನಾಲ್ಕು ಪಥಗಳನ್ನು ಹೊಂದಿದೆ.
(ಚಿತ್ರ ಎರವಲು) ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ಧಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ತಾ.06-06-2023ರಂದು ಮಂಗಳವಾರ ಸಂಜೆ 4.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು 3 ಸಂಘಟನೆಗಳು ಜಂಟಿ ಹೇಳಿಕೆಯೊಂದರಲ್ಲಿ […]