ಶ್ರೀನಿವಾಸಪುರ: ಸಾರ್ವಜನಿಕರು ಯೋಗ ಮತ್ತು ಪ್ರಾಣಾಯಮದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆದುಕೊಳ್ಳಬೇಕು ಎಂದು ಐಸಿರಿ ಹೀಲಿಂಗ್ ಸೆಂಟರ್‍ನ ಹೀಲರ್ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಸಿರಿ ಹೀಲಿಂಗ್ ಸೆಂಟರ್ ಸೆಂಟರ್ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗುವುದು ಎಂದು ಹೇಳಿದರು.ಆ.2 ರಿಂದ ಮೂರು ದಿನಗಳ ಕಾಲ ಬೆಳಿಗ್ಗೆ 11 ರಿಂದ 2 ಗಂಟೆ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಉಚಿತ […]
ಶ್ರೀನಿವಾಸಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಮಾಜ ಸೇವೆ ಹಾಗೂ ಮಾನವೀಯ ನಡೆಗೆ ಹೆಸರಾಗಿದೆ ಎಂದು ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಸಂಸ್ಥೆಗೆ ಸ್ವಯಂ ಪ್ರೇರಣೆಯಿಂದ ಸೇರಬೇಕು. ಶಿಸ್ತು ಹಾಗೂ ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.ಸಂಸ್ಥೆಯ ಸ್ಕಾರ್ಫ್ ಧರಿಸುವುದು ಸಮಾಜ ಮುಖಿ ಧೋರಣೆ ಪ್ರತೀಕ. ಶಿಸ್ತಿನ ನಡೆ ಹಾಗೂ ಸಮಾಜ […]
ಶ್ರೀನಿವಾಸಪುರ ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ರವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಸಾರ್ವಜನಿಕ ಸೇವೆಗಾಗಿ ಭಗವಂತ ಇನ್ನಷ್ಟು ಶಕ್ತಿ ಮತ್ತು ಆರೋಗ್ಯ ನೀಡಲಿ ಎಂದು ಜೆಡಿಎಸ್‍ನ ಯುವ ಮುಖಂಡ ಅಂಬೇಡ್ಕರ್ ಪಾಳ್ಯ ಸಿ. ರವಿ ತಿಳಿಸಿದರು.ಪಟ್ಟಣದ ಪ್ರವಾಸ ಮಂದಿರದಲ್ಲಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಏರ್ಪಡಿಸಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಸಿ.ರವಿ ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ […]
ಕೋಲಾರ:- ಹುಟ್ಟು ಹಬ್ಬದ ನೆಪದಲ್ಲಿ ಮೋಜು ಮಸ್ತಿ ಮಾಡದೆ ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರೆ ಆತ್ಮತೃಪ್ತಿ ದೊರೆಯುತ್ತದೆಯೆಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಎಸ್.ರಾಜೇಂದ್ರ ಅಭಿಪ್ರಾಯಪಟ್ಟರು.ನಗರ ಹೊರವಲಯದ ಅತಂರಗಂಗಾ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಅವರು ಬುದ್ದಿಮಾಂದ್ಯ ಮಕ್ಕಳಿಗೆ ಸಿಹಿ ಊಟ ನೀಡಿ, ಜತೆಗೆ ಪಿಸಿ ಬಡಾವಣೆಯ ಮುಸ್ಸಂಜೆ ಮನೆಯಲ್ಲಿ ವೃದ್ದರಿಂದ ಆಶೀರ್ವಾದ ಪಡೆದು ಅವರ 42 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ […]
ಉಡುಪಿ : ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ವೇದಿಕೆಯ ನೇತೃತ್ವದಲ್ಲಿ ಅಗಸ್ಟ್ 2ರಂದು ಉಡುಪಿಯಲ್ಲಿ ನಡೆಯುವ ಕಾಲ್ನಾಡಿಗೆ ಜಾತ ಹಾಗೂ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (ಇಫ್ಕಾ) ಇದರ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಲೂವೀಸ್ ಲೋಬೊ ಕಲ್ಮಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನಾ ಸಭೆ ಹಾಗೂ ಪ್ರತಿಭಟನಾ ಜಾತವು ಶೋಕಮಾತ ದೇವಾಲಯ ಉಡುಪಿ […]
ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಚಲ್ದಿಗಾನಹಳ್ಳಿಯಿಂದ ಶ್ರೀನಿವಾಸಪುರದ ತಾಲ್ಲೂಕು ಕಚೇರಿಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿತ್ತು.ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸರ್ಕಾರ ಮತ್ತು ಸಮಾಜ ದಲಿತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರತಿಭಾವಂತ ವಿದ್ಯಾರ್ಥಿ ರಾಕೇಶ್ ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಲಿತ ಸಮುದಾಯ ಪ್ರತಿಭಟನೆ ಹಾದಿ ಹಿಡಿಯದೆ ವಿಧಿಯಿಲ್ಲ ಎಂದು ಹೇಳಿದರು.ಯಾವುದೇ ಚಳವಳಿಯಲ್ಲಿ ಬರಹಗಾರರು ಹಾಗೂ ಕಲಾವಿದರು ಮುಂಚೂಣಿಯಲ್ಲಿರಬೇಕು. ಆದರೆ ಈಗ […]
ಬೆಂಗಳೂರು : ನ್ಯಾಯಾಲಯಗಳಲ್ಲಿ ವಿಕಲಚೇತನರಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನ್ಯಾಯದ ಸುಲಭಲಭ್ಯತೆಯನ್ನು ಖಾತರಿ ಪಡಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಪಣ್ಣ ಕರೆ ನೀಡಿದರು. ಅವರು ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ)’ ಸಂಸ್ಥೆ ರಾಮಯ್ಯ ಕಾನೂನು ಕಾಲೇಜಿನ ಸಹಕಾರದೊಂದಿಗೆ ಸ್ಥಾಪಿಸಿದ ‘ನೂತನ ಡಿಸೆಬಿಲಿಟಿ ಲಾ ಸೆಂಟರ್’ ಅನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ವಿಕಲಚೇತನ ಸ್ಥಿತಿಯಿಂದಾಗಿ ಅವಕಾಶ ವಂಚಿತರು ಮತ್ತು […]
ಕೋಲಾರ:- ನಗರದ ಹೊರವಲಯದ ಶ್ರೀ ದೇವರಾಜ್ ಅರಸು ಕಾಲೇಜ್ ಆಫ್ ನರ್ಸಿಂಗ್ ನೈತಿಕ ಸಮಿತಿ ಸಭೆಯು ಶುಕ್ರವಾರ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ನರ್ಸಿಂಗ್ ಕಾಲೇಜಿನ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಪದವಿ ವಿದ್ಯಾರ್ಥಿಗಳು ವಿವಿಧ ವಿಚಾರಗಳಲ್ಲಿ ಸಂಶೋಧನೆ ನಡೆಸಿದ್ದ 18 ಸಂಶೋಧನಾ ವರದಿಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು.ಎಲ್ಲಾ ಸಂಶೋಧನಾ ವರದಿಗಳು ನೈತಿಕ ಮೌಲ್ಯಗಳನ್ನು ಒಳಗೊಂಡಂತೆ, ಉತ್ತಮ ಗುಣಮಟ್ಟ ಹಾಗೂ ಸಾರ್ವಜನಿಕರಿಗೆ ಉಪಯೋಗಕಾರಿಯಾಗುವಂತದ್ದೆಂದು ಸಮಿತಿಯ ಸದಸ್ಯರುಗಳು ಅಭಿಪ್ರಾಯಪಟ್ಟರು.ಸಂಶೋಧನಾ ವರದಿಗಳನ್ನು ಮತ್ತಷ್ಟು ಉತ್ತಮಗೊಳಿಸುವ ವಿಚಾರದಲ್ಲಿ ಸಮಿತಿಯ ಸದಸ್ಯರು […]
ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪುರಷ ಕ್ರೀಡಾಪಟುಗಳಿಗಿಂತ, ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಇದ್ದು, ಅದರಂತೆ ವಿಶ್ವ ಕ್ರೀಡೆಗಳಲ್ಲಿ ದೇಶದ ಹೆಗ್ಗಲಿಕೆ ಕಾರಣರಾಗುತ್ತಿದ್ದಾರೆ ಎಂದು ದಾನಿ ಯಡಗಾನಪಲ್ಲಿ ವೈ.ಬಿ.ರವಿ ಹೇಳಿದರು.ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಹಮ್ಮಿಕೊಳ್ಳಲಾದ ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿನ ಮಹಿಳಾ ವಿಭಾಗದ ಕ್ರೀಡಾಕೂಟಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿನೀಯರು ಒಳ್ಳೇಯ ಚಾಕುಚಕೈತೆ ಇರುವಂತಹ ಪ್ರತಿಭೆ ಇರುವಂತಹ ವಿದ್ಯಾರ್ಥಿನೀಯರಿದ್ದು, ಅಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ , ಮಾರ್ಗದರ್ಶನವನ್ನು ನೀಡಿದಾಗ ತಾಲೂಕು, ಜಿಲ್ಲಾ, ರಾಜ್ಯ, […]