ಶ್ರೀನಿವಾಸಪುರ 1 : ನಮ್ಮ ದೇಶದಲ್ಲಿ ಬಡುಕುಟುಂಬಗಳ ಏಳಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರದರ್ಶಿಸುತ್ತಿದೆ. ದೇಶದಲ್ಲಿ ಎಲ್ಲರೂ ಸಹ ನನ್ನ ಕುಟುಂಬವೇ ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.ರಾಯಲ್ಪಾಡಿನ ಗ್ರಾಮಪಂಚಾಯತಿ ಆವರಣದ ಮುಂಭಾಗ ಮಂಗಳವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ನರೇಂದ್ರ ಮೋದಿರವರು ಒಂದು ದಿನವೂ ಸಹ ರಜಾ ಹಾಕಿಲ್ಲ. ದೇಶವನ್ನು ಪ್ರಪಂಚದಲ್ಲಿಯೇ […]

Read More

ಶ್ರೀನಿವಾಸಪುರ: ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಬಿ.ಮಹಮದ್ ಗೊರವನಕೊಳ್ಳ ಹೇಳಿದರು.ಪಟ್ಟಣದ ವೃದ್ಧಾಶ್ರಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವೃದ್ಧಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ವೃದ್ಧರನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.ತಂದೆ ತಾಯಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸುತ್ತಾರೆ. ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಮಕ್ಕಳ ಪಾಲನೆ ಮಾಡುತ್ತಾರೆ. ಅವರ ಉತ್ತಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ. ಆದರೆ ಮಕ್ಕಳು ಮುದಿ ತಂದೆ ತಾಯಿಯನ್ನು […]

Read More

ಮುಂಬೈ : ರಾಜ್ಯದ ಸಾವಿರಾರು ಜನರು ಉದ್ಯೋಗ ಅರಸಿ ಮುಂಬೈಗೆ ಬಂದು ನೆಲೆನಿಂತಿದ್ದಾರೆ. ಮುಂಬೈನಲ್ಲಿ ಕನ್ನಡ ಪತ್ರಿಕೆಗಳು ಸಾಕಷ್ಟು ಪ್ರಸಾರ ಹೊಂದಿವೆ. ಇಲ್ಲೇ ಹಲವು ಪತ್ರಿಕೆಗಳು ಹುಟ್ಟಿ ಬೆಳೆದು ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೂ ದೊಡ್ಡ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪ್ರಂಶಸೆ ವ್ಯಕ್ತಪಡಿಸಿದರು. ಮುಂಬೈನ ಸ್ವರ್ಗೀಯ ರಾಧಾ ಭೋಜನಶೆಟ್ಟಿ ಸುರತ್ಕಲ್ ವೇದಿಕೆಯಲ್ಲಿ ಶನಿವಾರ ನಡೆದ ಕರ್ನಾಟಕ ಮಹಾರಾಷ್ಟ್ರ ಪತ್ರಕರ್ತರ ಸಮ್ಮಿಲನ […]

Read More

ಶ್ರೀನಿವಾಸಪುರ: ತಾಲ್ಲೂಕಿನ ವಿಷ್ಣು ದೇವಾಲಯಗಳಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ತಾಲ್ಲೂಕಿನ ರೋಣೂರು ಗ್ರಾಮದ ಪುರಾತನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಹೊರಗಡೆ ವಿಶೇಷವಾಗಿ ನಿರ್ಮಿಸಲಾಗಿದ್ದ ವೈಕುಂಠ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿದ ಭಕ್ತಾದಿಗಳು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು.ದರ್ಶನ ಪಡೆದ ಎಲ್ಲರಿಗೂ ಉಚಿತ ಲಾಡು ವಿತರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಿಂದ ದೇವರ ದರ್ಶನ ಪಡೆದವರಿಗೆ ಊಟದ ವ್ಯವಸ್ಥೆ […]

Read More

ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ, ವಿವಿಧ ವಿಭಾಗಗಳ ಪ್ರಗತಿ ಪರಿಶೀಲಿಸಿದರು. ಕಚೇರಿ ಅವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.ಜಿಲ್ಲಾಧಿಕಾರಿ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಚುನಾವಣಾ ಫಾರಂ ಪ್ರೊಸೆಸಿಂಗ್ ಮತ್ತು ಫ್ರೂಟ್ಸ್ ಎಫ್‍ಐಡಿ ಪ್ರಗತಿ ಪರಿಶೀಲನೆ ನಡೆಸಿದರು.ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಎಫ್‍ಐಡಿ ನೋಂದಣಿ ಕಾರ್ಯ ಚುರುಕುಗೊಳಿಸಬೇಕು. ಕಂದಾಯ ಇಲಾಖೆ ಸಿಬ್ಬಂದಿ, ಕೃಷಿ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯ […]

Read More

ಶ್ರೀನಿವಾಸಪುರ: ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕುರಿತು ನಿರ್ಲಕ್ಷ್ಯ ವಹಿಸಬಾರದು ಎಂದು ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪಿ.ರಾಮತೀರ್ಥ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಸ್ಕಾಂ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವಿದ್ಯುತ್ ಸುರಕ್ಷತೆ ಕುರಿತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ […]

Read More

ಶ್ರೀನಿವಾಸಪುರ 1 : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅಮೂಲ್ಯವಾದದು . ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು, ಇದರಿಂದ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಇನ್ಸಪೆಕ್ಟರ್ ಎಂ.ಬಿ.ಗೊರವನಕೊಳ್ಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೆಟ್ಟಹವ್ಯಾಸಗಳಿಗೆ ಮಾರುಹೋಗುತ್ತಿರುವವರು ಎಚ್ಚರಿಕೆಯಿಂದ ಇರುಬೇಕು . ದುಶ್ಚಟಗಳಿಂದ ಆರೋಗ್ಯವು ಕೆಡುವುದಲ್ಲದೇ ಆರೋಗ್ಯವಂತ ಜೀವನವನ್ನೇ ಹಾಳು ಮಾಡಿಕೊಂಡತ್ತೆ. ದುಶ್ಚಟಗಳಿಗೆ ಬಲಿಯಾಗಿ […]

Read More

ಕೋಲಾರ,ಡಿ.19:ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಒಂದು ವಾರದ ಟೈಲರಿಂಗ್ ಮೂಲ ತರಬೇತಿ ಶಿಬಿರ ನಗರದ ಎ.ಟಿ.ಡಿ.ಸಿ ಕೇಂದ್ರದಲ್ಲಿ ಚಾಲನೆಗೊಂಡಿತು.ವಿಶ್ವಕರ್ಮ ಯೋಜನೆಯಡಿ ನೊಂದಾಯಿಸಲ್ಪಟ್ಟವರ ಪೈಕಿ ಮೊದಲ ಬಾರಿಗೆ 30 ಮಂದಿ ಅರ್ಹ ಅಭ್ಯರ್ಥಿಗಳಿಗೆ ಒಂದು ವಾರ ಕಾಲದಲ್ಲಿ ದಿನಕ್ಕೆ 8 ತಾಸು ತರಬೇತಿ ಇದಾಗಿದ್ದು, ಇದರಲ್ಲಿ ಬಟ್ಟೆ ಹೊಲೆಯುವ ಹೊಸ ವಿಧಾನ-ವಿನ್ಯಾಸ, ಉಪಕರಣಗಳ ಬಳಕೆ, ಡಿಜಿಟಲ್ ಆರ್ಥಿಕ ವ್ಯವಹಾರ, ಬ್ಯಾಂಕಿಂಗ್, ಸಾಮಾಜಿಕ ಜಾಲ, ಇತ್ಯಾದಿ ಕುರಿತು ವಿವಿಧ ಹಂತದ ತರಬೇತಿ ಇದಾಗಿರುತ್ತದೆ.ದಿನಕ್ಕೆ 500 ರೂನಂತೆ ಶಿಷ್ಯ ವೇತನದೊಂದಿಗೆ […]

Read More

ಶ್ರೀನಿವಾಸಪುರ: ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹಮದ್ ಷರೀಫ್ ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಆರೋಗ್ಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಬಿಆರ್‍ಸಿ ಸಂಯೋಜಕಿ ಕೆ.ಸಿ.ವಸಂತ ಮಾತನಾಡಿ, ಅಕ್ಷರ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು. ಮಕ್ಕಳು ಅಕ್ಷರ ಕಲಿಯಬೇಕಾದರೆ ಅವರು ಆರೋಗ್ಯವಂತರಾಗಿರಬೇಕು. ಅನಾರೋಗ್ಯ ಅಕ್ಷರ […]

Read More
1 73 74 75 76 77 338