ಶ್ರೀನಿವಾಸಪುರ 2 : ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ದಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಈ ಸಂಘಕ್ಕೆ ಸಂಬಂದಿಸಿದಂತೆ ನಿರ್ದೇಶಕರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಗಾಯತ್ರಿ ಮಾಹಿತಿ ನೀಡಿದರು.ತೂಪಲ್ಲಿ ಗ್ರಾಮದ ಟಿ.ವಿ.ರಾಮರೆಡ್ಡಿ, ಟಿ.ವಿ.ಮಧುಸೂದನರೆಡ್ಡಿ, ಸಾವಿತ್ರಮ್ಮ, ಶ್ರೀನಿವಾಸರೆಡ್ಡಿ, ಗಂಗುಲಪ್ಪ, ಮದ್ದಮ್ಮ, ಟಿ.ಎ.ನಾಗರತ್ನಮ್ಮ, ಎಂ.ಕುರಪ್ಪಲ್ಲಿಯ ನರಸಿಂಹನಾಯ್ಡು, ಎಂ.ಕೆ.ವೆಂಕಟರಮಣನಾಯ್ಡು, ತಮ್ಮಿರೆಡ್ಡಿಗಾರಿಪಲ್ಲಿಯ ಮುನಿರತ್ನಮ್ಮ, ಶಂಕರಪ್ಪ, ಟಿ.ಎ.ನಾಗರತ್ನಮ್ಮ , ನರಸಿಂಹಪ್ಪ , ಶ್ರೀನಿವಾಸ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. […]
ಶ್ರೀನಿವಾಸಪುರ: ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಸರ್ವಕಾಲಿಕ ಮಾನವೀಯ ಮೌಲ್ಯವಾಗಿ ಮುಂದುವರಿದಿದೆ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸಾ ವಾತಾವರಣ ಮಾನವ ಕುಲಕ್ಕೆ ಬೆದರಿಕೆ ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಪಾಲನೆಗೆ […]
ಮಂಗಳೂರು, ಸೆಪ್ಟೆಂಬರ್ 27, 2023 – ಮಂಗಳೂರಿನ ಓಶಿಯನ್ ಪರ್ಲ್, ಪೆಸಿಫಿಕ್ 4, ರಿಯಲ್ ಎಸ್ಟೇಟ್ ಉದ್ಯಮವು ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ತರಲು ಭರವಸೆ ನೀಡುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ಚಾಪ್ಟರ್ ಆಯೋಜಿಸಿದ್ದ ಕ್ರೆಡೈ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯು) ಉದ್ಘಾಟನೆ ಮತ್ತು ಸ್ಥಾಪನೆಯು ಅದ್ದೂರಿಯಾಗಿ ನಡೆಯಿತು, ಪ್ರಮುಖ ವ್ಯಕ್ತಿಗಳು ಮತ್ತು ಉತ್ಸಾಹಿಗಳು ಭಾಗವಹಿಸಿದ್ದರು.ಕಾರ್ಯಕ್ರಮವು 7:00 ಗಂಟೆಗೆ ಪ್ರಾರಂಭವಾಯಿತು. ಮತ್ತು ಗೌರವಾನ್ವಿತ ಮುಖ್ಯ ಅತಿಥಿಗಳಾದ […]
ಶ್ರೀನಿವಾಸಪುರದಲ್ಲಿ ಶುಕ್ರವಾರ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರ್ ಶಿರಿನ್ ತಾಜ್ ಅವರನ್ನು ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ಸನ್ಮಾನಿಸಿದರು. ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ರವಿಚಂದ್ರಾಚಾರಿ, ರಾಮಚಂದ್ರಾಚಾರಿ ಇದ್ದರು.
ಶ್ರೀನಿವಾಸಪುರ: ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ನೀಡಿದ್ದ ರಾಜ್ಯ ಬಂದ್‍ಗೆ ತಾಲ್ಲೂಕಿನಲ್ಲಿ ಸ್ಪಂದನೆ ಕಂಡುಬರಲಿಲ್ಲ.ತಾಲ್ಲೂಕಿನಾದ್ಯಂತ ಸರ್ಕಾರಿ ಕಚೇರಿ, ಬ್ಯಾಂಕ್, ಶಾಲಾ ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಎಸ್‍ಆರ್‍ಟಿಸಿ ಬಸ್ ಹಾಗೂ ಆಟೋ ಸೇವೆ ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟು ತೆರೆದಿತ್ತು. ಮಾರುಕಟ್ಟೆಗಳಲ್ಲಿ ಜನಸಂದಣಿ ಎಂದಿನಂತೆಯೇ ಇತ್ತು. ಖಾಸಗಿ ಬಸ್ ಮಾಲೀಕರ ಸಂಘ ಬಂದ್‍ಗೆ ಬೆಂಬಳ ಸೂಚಿಸಿದ್ದರಿಂದ ಖಾಸಗಿ ಬಸ್‍ಗಳ ಓಡಾಟ ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.ಕರ್ನಾಟಕ ರಾಜ್ಯ ಜನಸ್ಪಂದನ […]
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಉದ್ಘಾಟಿಸಿದರು.ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಜತೆಗೆ ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಹೇಳಿದರು.ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ […]
ಶ್ರೀನಿವಾಸಪುರ: ಪೌರಕಾರ್ಮಿಕರು ನಿಜವಾದ ಕ್ಷೇಮ ಪಾಲಕರು. ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆ ಮೂಲಕ ನಾಗರಿಕರ ಪ್ರೀತಿ ಹಾಗೂ ಗೌರಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.ಪಟ್ಟಣದ ನಾಗರಿಕರಿಗೆ ನೀರು ಹಂಚಿಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದರದ ಮೂಲಕ ನಾಗರಿಕರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರ ಬಗ್ಗೆ ಲಘುವಾಗಿ ಮಾತನಾಡಬಾರದು. […]
ಕೋಲಾರ:- ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಂಬ್ರಹಳ್ಳಿ ಗ್ರಾಮದ ಸ.ನಂ.173ರ 6 ಎಕರೆ 19 ಗುಂಟೆ ಸುಮಾರು 15 ಕೋಟಿ ಮೌಲ್ಯದ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದ ಕಂದಾಯ ನಿರೀಕ್ಷಕ ಎಂ.ಕೆ.ಶ್ರೀಪತಿ ಹಾಗೂ ಪ್ರಥಮ ದರ್ಜೆ ಗುಮಾಸ್ತ ಪ್ರಸಾದ್‍ಕುಮಾರ್ ಅವರನ್ನು ಮಾಲೂರು ಶಾಸಕ ನಂಜೇಗೌಡರು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮೇಲೆ ಪ್ರಭಾವ ಬೀರಿ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿರುವುದನ್ನು ರದ್ದುಪಡಿಸಲು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸಚಿವ ಭೈರತಿ ಸುರೇಶ್‍ಅವರಿಗೆ ಮನವಿ ಮಾಡಿದರು.ನಗರದ ರಂಗಮಂದಿರದಲ್ಲಿ ನಡೆದ ಜನತಾದರ್ಶನದಲ್ಲಿ […]
ಕೋಲಾರ:- ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ್ದು ಜನತಾದರ್ಶನವಲ್ಲ ಅದು ಕಾಂಗ್ರೆಸ್ ದರ್ಶನ, ಕೇವಲ ಒಂದೂವರೆ ಗಂಟೆಯಲ್ಲಿ ಮುಗಿಸಿದ ಈ ಕಾರ್ಯಕ್ರಮದಲ್ಲಿ ಜನರ ಒಂದೇ ಒಂದು ಸಮಸ್ಯೆಗೂ ಪರಿಹಾರ ಸಿಗಲಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜನತಾದರ್ಶನ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ತಮ್ಮ ನಡುವೆ ನಡೆದ ಮಾತಿನ ಚಕಮಕಿಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.ಎಲ್ಲೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರು ಪ್ರಸ್ತಾಪಿಸಲಿಲ್ಲ ಆದರೆ […]