
ಶ್ರೀನಿವಾಸಪುರ : ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ ಹೆಸರಘಟ್ಟ, ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ರವರ ನುರಿತ ವಿಜ್ಞಾನಿಗಳಿಂದ ರೈತರಿಗೆ ಮಾವು ಬೆಳೆಯ ಬಗ್ಗೆ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ, ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮಂಡಳಿ ಕೃಷಿ ಇಲಾಖೆ ರವರ ಸಹಯೋಗದೊಂದಿಗೆ ಮಾವು ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರವನ್ನು ಪಟ್ಟಣದ ಶ್ರೀ ಮಾರುತಿ ಸಭಾ ಭಾವನದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಹಿರಿಯ ವಿಜ್ಞಾನಿ ಕಮಲ ರವರು ಭಾರತ ದೇಶದಲ್ಲಿ […]

ಶ್ರೀನಿವಾಸಪುರ 1 : ರಾಷ್ಟ್ರೀಯ ಹಬ್ಬವನ್ನು ಎಲ್ಲಾ ಕಛೇರಿಗಳಲ್ಲಿ ಖಂಡಿತವಾಗಿ ಆಚರಣೆ ಮಾಡಬೇಕು. ಕಛೇರಿಗಳಲ್ಲಿ ಮಾಡಿದ ನಂತರ ಪುನಃ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ಸಭೆಗೆ ಎಲ್ಲಾ ಅಧಿಕಾರಿಗಳು ಹಾಜಗಾರಬೇಕು ಎಂದು ಅಧಿಕಾರಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಜನವರಿ 26ರ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡಸಲು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದ ಎಲ್ಲಾ ಶಾಲಾಕಾಲೇಜುಗಳ ವಿದ್ಯಾರ್ಥಿಗಳು […]

ಶ್ರೀನಿವಾಸಪುರ 2 : ಭಕ್ತಿ, ಭಕ್ತ ಹಾಗೂ ವಾಸ್ತವದಲ್ಲಿನ ನಡವಳಿಕೆ ಕುರಿತು ತಿಳಿಸಿದ್ದಾರೆ. ಅಂತಹ ಮಹನೀಯರ ಸಾಧನೆ ನಮಗೆ ಸ್ಪೂರ್ತಿಯಾಗಬೇಕಿದ್ದು, ಹಿಂದುಳಿದ ಸಮಾಜ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ಪಟ್ಟಣದ ನೌಕರರ ಭವನದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.ತಾಲೂಕಿಗೆ ಸಂಬಂದಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ 3 ಸಾವಿರ ಎಕರೆಗಳಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸೃಷ್ಟಿ ಮಾಡಿ ನಿರುದ್ಯೋಗ […]

ಶ್ರೀನಿವಾಸಪುರ 1 : ಕಳೆದ ಸಾಲಿನಲ್ಲಿ ವಿವಿಧ ಹೆಚ್ಚು ರೋಗಗಳಿಂದ ಮಾವು ಫಸಲು ಸರಿಯಾಗಿ ಬಾರದೆ ಔಷಧಿಯನ್ನು ಸಿಂಪಡಣೆ ಮಾಡಿದರೂ ಸಹ ರೋಗವನ್ನು ತಡೆಗಟ್ಟಲು ಸಾಧ್ಯವಾಗದೆ ಹಾಗೂ ಮಾರುಕಟ್ಟೆಯಲ್ಲಿ ಇರುವಂತಹ ಒಳ್ಳೆಯ ಫಸಲಿಗೆ ನಿಗಧಿತ ಬೆಲೆ ಇಲ್ಲದೆ ಮಾವು ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಶಂಕರಮಠದ ಬಳಿಯ ಕರ್ನಾಟಕ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಸೋಮವಾರ ಜಿಲ್ಲೆಯ ಮಾವು ಬೆಳಗಾರ ಮಂಡಲಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ […]

ಶ್ರೀನಿವಾಸಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್‍ಸಿ, ಎಸ್‍ಟಿ ಶಿಕ್ಷಕರ ಸಂಘ ರಾಜ್ಯಶಾಖೆ ಮತ್ತು ಕೋಲಾರ ಜಿಲ್ಲಾ ಶಾಖೆ ವತಿಯಿಂದ ಇತ್ತೀಚಿಗೆ ವಯೋನಿವೃತ್ತಿ ಹೊಂದಿರುವ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಹರಳಕುಂಟೆ ಮುಖ್ಯ ಶಿಕ್ಷಕ ಮೋಹನ್‍ಕುಮಾರ್ ಗುಪ್ತರವರನ್ನ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಟಿ.ನಾಗರಾಜ್, ಜಿಲ್ಲಾಧ್ಯಕ್ಷ ಎನ್.ಮುನಿಯಪ್ಪ, ತಾಲೂಕು ಅಧ್ಯಕ್ಷ ಸಾಂಬಮೂರ್ತಿ, ಎನ್‍ಪಿಎಸ್ ಜಿಲ್ಲಾಧ್ಯಕ್ಷ ಅಪ್ಪೂರ್ […]

ಶ್ರೀನಿವಾಸಪುರ: ಸಂಕ್ರಾಂತಿ ಸಮೃದ್ಧಿಯ ಸಂಕೇತ. ಕಾಳು ಕಣಜ ಸೇರುವ ಕಾಲ. ಸಂಕ್ರಾಂತಿ ರೈತರಿಗೆ ದೊಡ್ಡ ಹಬ್ಬ. ಅದು ಕೃಷಿ ಉತ್ಪನ್ನ ಕೈಗೆ ಬರಲು ಕಾರಣವಾದ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಳ್ಳಿ ಸೊಗಡು ಬಿಟ್ಟುಕೊಡಬಾರದು. ಅರ್ಥಪೂರ್ಣ ಸಾಂಪ್ರದಾಯಿಕ ಆಚರಣೆಗಳಿಗೆ ಬೆನ್ನುತೋರಿಸಬಾರದು ಎಂದು ಹೇಳಿದರು.ಹಿಂದೆ ಸಂಕ್ರಾಂತಿ ಗ್ರಾಮೀಣ ಪ್ರದೇಶದಲ್ಲಿ ಸರಳ ಆಚರಣೆಯಾಗಿತ್ತು. ಜನರು ತಮ್ಮ ದಿನ […]

ಶ್ರೀನಿವಾಸಪುರದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರುಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ ಮತ್ತಿತರರು ರಾಗಿ ರಾಶಿಗೆ ಪೂಜೆ ನೆರವೇರಿಸಿದರು.

ಶ್ರೀನಿವಾಸಪುರ 2 : ಕಾಲೇಜು ಕಾರಿಡಾರ್ ಎಂದಿನಂತೆ ವಿದ್ಯಾರ್ಥಿಗಳ ಹರಟೆ ಸೀಮಿತವಾಗದೆ, ಅದರ ತುಂಬೆಲ್ಲಾ ಬಾಯಲ್ಲಿ ನೀರೂರಿಸುವ ತಿಂಡಿ ತಿನುಸುಗಳೇ , ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಅವಿಸ್ಮರಣೀಯಾಗಿರುವುದು ಎಂದು ಗ್ರಾಮದ ಸಿ.ಎಸ್.ವೆಂಕಟ್ ಅಭಿಪ್ರಾಯಪಟ್ಟರು.ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಂದ ನಡೆದ ಹಳ್ಳಿ ಸೊಬಗು ಕಾರ್ಯಕ್ರಮದಡಿಯಲ್ಲಿ ಕಾಲೇಜು ಸಂತೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಅಧುನಿಕ ಕಾಲದಲ್ಲಿ ಸಾಮಾಜಿಕ ಜಲಾತಾಣದಲ್ಲಿ ಹೆಚ್ಚಾಗಿ ಕಾಲ ಕಳೆಯುವ ವಿದ್ಯಾರ್ಥಿಗಳಲ್ಲಿ ಮಕ್ಕಳ ಸಂತೆ ಸಹಬಾಳ್ವೆ , ಸಹಜೀವನದ […]

ಶ್ರೀನಿವಾಸಪುರ : ಆರೋಪಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಿ ನಿಜವಾದ ಸಂಚೊಕೋರರನ್ನು ಬಹಿರಂಗ ಪಡಿಸಬೇಕು ಎಂದು ಸಮತ ಸೈನಿಕಧಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಸರ್ಕಾರಕ್ಕೆ ಒತ್ತಾಯ ಮಾಡಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಶನಿವಾರ ವಿವಿಧ ಧರ್ಮಗುರುಗಳ ಆರ್ಶೀಚನದೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೌನ್ಸಿಲರ್ ದಿ|| ಎಂ.ಶ್ರೀನಿವಾಸನ್ ರವರ ಶ್ರದ್ಧಾಂಜಲಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಹತ್ಯೆಯ ಸಂಚುಕೋರರನ್ನು ಮರೆಮಾಚಲು ಬಂಧನಕ್ಕೂಳಗಾದ ಆರೋಪಿಗಳ ಬಾಯಿಂದಲೇ ಶ್ರೀನಿವಾಸನ್ ವಿರುದ್ಧ ಸೇಡು ತೀರಿಸಿಕೊಂಡರೆಂಬಂತೆ ಸುಳ್ಳು ಹೇಳಿಕೆಗಳು ಹೊರಬಂದವು . ದಿ|| […]